Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮುಟ್ಟಿನಲ್ಲಿ ರಕ್ತಸ್ರಾವ ತುಂಬಾ ಕಡಿಮೆಯಾಗಿದೆಯೇ? ಯಾವಾಗ ವೈದ್ಯರನ್ನು ಕಾಣಬೇಕು?
ಮಹಿಳೆಯರಿಗೆ ತಿಂಗಳ ಮುಟ್ಟು ಸರಿಯಾಗುತ್ತಿದ್ದರೆ ಮನಸ್ಸಿಗೆ ಸಮಧಾನವಾಗುವುದು. ಅದೇ ತಿಂಗಳ ಮುಟ್ಟಿನಲ್ಲಿ ವ್ಯತ್ಯಾಸ ಉಂಟಾದಾಗ ಅಂದರೆ ಅತಿಯಾದ ರಕ್ತಸ್ರಾವ ಅಥವಾ ಅತಿ ಕಡಿಮೆ ರಕ್ತಸ್ರಾವ ಉಂಟಾದಾಗ ಏನಾದರೂ ಆರೋಗ್ಯ ಸಮಸ್ಯೆವಿರಬಹುದೇ ಎಂಬ ಸಂಶಯ ಮೂಡುವುದು. ಸಾಮಾನ್ಯವಾಗಿ 3-4 ದಿನಗಳವರೆಗೆ ರಕ್ತಸ್ರಾವ ಉಂಟಾಗುವುದು.
ಆದರೆ ಕೆಲವರಿಗೆ ಇತ್ತೀಚೆಗೆ ತುಂಬಾನೇ ಕಡಿಮೆ ರಕ್ತಸ್ರಾವ ಉಂಟಾಗುತ್ತಿದೆ, ಇದರಿಂದ ಏನಾದರೂ ಸಮಸ್ಯೆಯಾಗುವುದೇ ಎಂಬ ಆತಂಕ ಕಾಡುವುದು. ಮೆನೋಪಾಸ್ ಹಂತದಲ್ಲಿ ರಕ್ತಸ್ರಾವ ಕಡಿಮೆಯಾಗುವುದು ಸಹಜ, ಆದರೆ 30 ವರ್ಷದೊಳಗೆ ಈ ರೀತಿಯಾದಾಗ ಇದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಮೇಲೆ ಪ್ರಭಾವ ಬೀರುವುದೇ ಎಂಬ ಆತಂಕ ಉಂಟಾಗುವುದು ಸಹಜ.
ರಕ್ತಸ್ರಾವ ಕಡಿಮೆಯಾಗಲು ಕಾರಣವೇನು, ಇದು ಏನಾದರೂ ಆರೋಗ್ಯ ಸಮಸ್ಯೆಯ ಲಕ್ಷಣವೇ, ಇದನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ರಕ್ತಸ್ರಾವ ಕಡಿಮೆಯಾಗಲು ಕಾರಣಗಳು
1. ವಯಸ್ಸು: ಕೆಲವರಿಗೆ ಹದಿಹರೆಯದ ಪ್ರಾಯದಿಂದ 30 ವರ್ಷದವರೆಗೆ ಸಹಜ ರಕ್ತಸ್ರಾವವಿದ್ದು ನಂತರ ರಕ್ತಸ್ರಾವ ಕಡಿಮೆಯಾಗುವುದು. 30 ಅಥವಾ ವರ್ಷ ಕಳೆದ ರಕ್ತಸ್ರಾವ ಕಡಿಮೆಯಾದರೆ ಮೆನೋಪಾಸ್ ಹಂತ ತಲುಪಿರಬಹುದು. ಕೆಲವರಿಗೆ 30 ವರ್ಷಕ್ಕೆ ಮೆನೋಪಾಸ್ ಉಂಟಾಗುವುದು.
2. ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು: ಕೆಲವೊಮ್ಮೆ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾದಾಗ ದೇಹವು ಸರಿಯಾಗಿ ಅಂಡಾಣುಗಳನ್ನು ಉತ್ಪತ್ತಿ ಮಾಡುವುದಿಲ್ಲ, ಅಂಡಾಣಗಳ ಉತ್ಪತ್ತಿ ಕಡಿಮೆಯಾದಾಗ ಕೂಡ ರಕ್ತಸ್ರಾವ ಕಡಿಮೆಯಾಗುವುದು. ಚಿಕ್ಕ ಪ್ರಾಯದಲ್ಲಿ ಈ ರೀತಿಯಾದರೆ ಗರ್ಭಧಾರಣೆಗೆ ತೊಂದರೆಯಾಗುವುದು.
3. ದೇಹದ ತೂಕ
ತುಂಬಾ ತೆಳ್ಳಗಿರುವುದು ಅಥವಾ ಇದ್ದಕ್ಕಿದ್ದಂತೆ ತುಂಬಾನೇ ಮೈ ತೂಕ ಕಡಿಮೆಯಾದರೆ, ದೇಹದಲ್ಲಿ ಕೊಬ್ಬಿನಂಶ ತುಂಬಾನೇ ಕಡಿಮೆಯಾದರೆ ರಕ್ತಸ್ರಾವ ಕಡಿಮೆಯಾಗುವುದು.
ಮಾನಸಿಕ ಒತ್ತಡ: ಅತ್ಯಧಿಕ ಮಾನಸಿಕ ಒತ್ತಡ ಕೂಡ ಮುಟ್ಟಿನ ಮೇಲೆ ಪ್ರಭಾವ ಬೀರುವುದು.ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡರೆ ಮುಟ್ಟಿನ ಚಕ್ರ ಸರಿಯಾಗುವುದು.
4. ಈ ವೈದ್ಯಕೀಯ ಸಮಸ್ಯೆಯಿದ್ದಾಗ
* ಥೈರಾಯ್ಡ್ ಸಮಸ್ಯೆ
* ಪಿಸಿಒಡಿ
* ಅವಧಿಪೂರ್ವ ಮೆನೋಪಾಸ್
* ಕುಷಿಂಗ್ಸ್ ಸಿಂಡ್ರೋಮ್
ಮುಟ್ಟಿನಲ್ಲಿ ಕಡಿಮೆ ರಕ್ತಸ್ರಾವ ಎಂದರೇನು?
ಮುಟ್ಟಾದಾಗ ಪ್ಯಾಡ್‌ನಲ್ಲಿ ಸ್ವಲ್ಪವೇ ರಕ್ತಸ್ರಾವವಾಗಿದ್ದರೆ ಅಥವಾ ಮೊದಲ ಅಥವಾ ಎರಡನೇ ದಿನ ಸ್ವಲ್ಪ- ಸ್ವಲ್ಪ ರಕ್ತಸ್ರಾವವಾಗಿ ಮತ್ತೆ ರಕ್ತಸ್ರಾವವಾಗದೇ ಇದ್ದರೆ ಅಥವಾ ಸ್ಪಾಟ್‌ನಂತೆ ರಕ್ತಸ್ರಾವವಾದರೆ ಮುಟ್ಟಿನಲ್ಲಿ ಕಡಿಮೆ ರಕ್ತಸ್ರಾವ ಎಂದು ಕರೆಯಲಾಗುವುದು.
ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವರಲ್ಲಿಯೂ ಈ ರೀತಿ ಕಂಡು ಬರುವುದು
ಗರ್ಭನಿರೋಧಕ ಮಾತ್ರೆ, ಗರ್ಭನಿರೋಧಕ ಇಂಜೆಕ್ಷನ್ ತೆಗೆದುಕೊಂಡವರಿಗೆ ಮುಟ್ಟಿನ ಮಧ್ಯದಲ್ಲಿ ಸ್ಪಾಟ್ ರೀತಿ ಕಂಡು ಬರುವುದು. ಗರ್ಭನಿರೋಧಕ ಮಾತ್ರೆ ತೆಗೆದುಕೊಂಡಾಗ ಈ ರೀತಿ ಕಂಡು ಬಂದರೆ , ಭವಿಷ್ಯದಲ್ಲಿ ಮಗು ಮಾಡಿಕೊಳ್ಳುವ ಪ್ಲ್ಯಾನ್ ಇದ್ದರೆ ನೀವು ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ.
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
* ನಿಮಗೆ 40 ವರ್ಷ ದಾಟಿದ್ದರೆ ಮುಟ್ಟಿನಲ್ಲಿ ರಕ್ತಸ್ರಾವ ಕಡಿಮೆಯಾದರೆ ಆತಂಕ ಪಡಬೇಕಾಗಿಲ್ಲ. ಅದು ಮೆನೋಪಾಸ್ ಲಕ್ಷಣಗಳಿರಬಹುದು.
* ನಿಮಗಿನ್ನು ಚಿಕ್ಕ ಪ್ರಾಯವಾಗಿದ್ದು ಮಕ್ಕಳಾಗದಿದ್ದರೆ ಮುಟ್ಟಿನಲ್ಲಿ ಸ್ಪಾಟ್ ಅಥವಾ ಅತಿ ಕಡಿಮೆ ರಕ್ತಸ್ರಾವ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಇದರಿಂದ ಅಂಡಾಣುಗಳ ಉತ್ಪತ್ತಿ ಸರಿಯಾಗಿಬ ಆಗದೆ ಗರ್ಭಧಾರಣೆಗೆ ತೊಂದರೆಯಾಗುವುದು. ಆದ್ದರಿಂದ ನೀವು ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಅವರಿಂದ ಸೂಕ್ತ ಸಲಹೆ ಸೂಚನೆ ಪಡೆಯಿರಿ.
* ಅತ್ಯಧಿಕ ಮಾನಸಿಕ ಒತ್ತಡ ಅನುಭವಿಸುತ್ತಿದ್ದು ಮುಟ್ಟಿನಲ್ಲಿ ರಕ್ತಸ್ರಾವ ಕಡಿಮೆ ಕಂಡು ಬಂದರೆ ನೀವು ಮಾನಸಿಕ ಆತಂಕ ಹೊರ ಹಾಕುವ ಪ್ರಯತ್ನ ಮಾಡಿ, ಮಾನಸಿಕ ಒತ್ತಡ ಕಡಿಮೆಯಾದರೆ ಮುಟ್ಟಿನ ಚಕ್ರ ಕೂಡ ಸರಿಯಾಗುವುದು.
* ಹಾರ್ಮೋನ್‌ಗಳ ಬದಲಾವಣೆ ಅಂದರೆ ಥೈರಾಯ್ಡ್, ಪಿಸಿಒಡಿ ಮುಂತಾದ ಸಮಸ್ಯೆವಿದ್ದರೆ ಸೂಕ್ತ ಚಿಕಿತ್ಸೆ ಪಡೆಯಿರಿ. ಹಾರ್ಮೋನ್‌ಗಳು ಸಮತೋಲನದಲ್ಲಿದ್ದರೆ ಮುಟ್ಟಿನ ಚಕ್ರ ಸರಿಹೋಗುವುದು.
ತುಂಬಾ ತಿಂಗಳಿನಿಂದ ರಕ್ತಸ್ರಾವ ಕಡಿಮೆಯಾಗಿದ್ದು , ಅನಿಯಮಿತ ಮುಟ್ಟಿನ ಚಕ್ರ ಉಂಟಾಗಿದ್ದರೆ ನೀವು ನಿಮ್ಮ ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
