ಕವಾಸಕಿ ಕಾಯಿಲೆ ಬಗ್ಗೆ ಕೇಳಿದ್ದೀರಾ? ಮುನಾವರ್ ಫರುಕಿ ಪುತ್ರನಿಗಿತ್ತು ಇದು..!

ಜಗತ್ತಿನಲ್ಲಿ ನಾವು ನೀವು ಕೇಳಿರದೆ ಅದೆಷ್ಟು ಕಾಯಿಲೆಗಳಿವೆ ಅಂದ್ರೆ ಕೆಲವೊಮ್ಮೆ ನಿಮಗೆ ಅವುಗಳ ಹೆಸರು ಕೇಳಿಯೇ ಅಚ್ಚರಿಯಾಗುತ್ತೆ. ಈಗಲು ಕೂಡ ಇಂತಹದೊಂದು ಕಾಯಿಲೆ ಹೆಸರು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ನಿಮಗೆ ಸ್ಟ್ಯಾಂಟ್ ಅಪ್ ಕಮಿಡಿಯನ್ ಮುನಾವರ್ ಫರುಕಿ ಪುತ್ರನಿಗೆ ವಿಚಿತ್ರ ಕಾಯಿಲೆ ಇರುವುದು ಪತ್ತೆಯಾಗಿದೆ.

ಈ ಕಾಯಿಲೆ ಹೆಸರು ಕವಾಸಕಿ. ಕವಾಸಕಿ ಹೆಸರಾಂತ ಬೈಕ್ ಮಾರಾಟಗಾರ ಕಂಪನಿ ಎಂಬುದು ನಿಮಗೆ ತಿಳಿದಿರಬಹುದು. ಐಷಾರಾಮಿ ಬೈಕ್‌ಗಳು, ಈ ಕಂಪನಿಯ ಜೀವಾಳವಾಗಿದೆ. ಆದ್ರೆ ಈಗ ಕವಾಸಕಿ ಹೆಸರಿನ ಕಾಯಿಲೆ ಈಗ ಮುನಾವರ್ ಫರುಕಿ ಪುತ್ರನಿಗೆ ಬಂದಿತ್ತು ಎಂದು ವರದಿಯಾಗಿದೆ. ಪುತ್ರನಿಗೆ ಒಂದೂವರೆ ವರ್ಷವಿದ್ದಾಗ ಈ ಅಪರೂಪದ ಕಾಯಿಲೆ ಇರುವುದು ಪತ್ತೆಯಾಗತ್ತು ಎಂದು ಫರುಕಿ ಹೇಳಿಕೊಂಡಿದ್ದಾರೆ.

What is Kawasaki Disease Munawar Faruqui s Son Was Diagnosed

ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ, ಮುನಾವರ್ ತನ್ನ ಮಗನ ಚಿಕಿತ್ಸೆಗಾಗಿ 75,000 ರೂ.ಗಳ ಅಗತ್ಯ ಬಿದ್ದಿತ್ತು ಎಂದು ನೆನಪಿಸಿಕೊಂಡರು. ಆದರೆ ಆ ವೇಳೆ ಅವರ ಜೇಬಿನಲ್ಲಿ ಕೇವಲ 800 ರೂಪಾಯಿ ಇತ್ತಂತೆ. ಆದರೂ ಕಷ್ಟಪಟ್ಟು ಪುತ್ರನಿಗೆ ಚಿಕಿತ್ಸೆ ಕೊಡಿಸಿದ್ದರಂತೆ.

ಕವಾಸಕಿ ಕಾಯಿಲೆ ಎಂದರೇನು?

ಕವಾಸಕಿ ಕಾಯಿಲೆ ಅಥವಾ ಕವಾಸಕಿ ಸಿಂಡ್ರೋಮ್ ಅಪರೂಪದ ವ್ಯಾಸ್ಕುಲೈಟಿಸ್ ಅಥವಾ ರಕ್ತನಾಳದ ಉರಿಯೂತವಾಗಿದೆ. ರಕ್ತನಾಳಗಳಲ್ಲಿನ ಊತವು ಅವುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಇಡೀ ದೇಹಕ್ಕೆ ಹರಡಲು ಮುಂದಾಗುತ್ತದೆ. ಹಾಗೆ ರಕ್ತನಾಳಗಳು ಕಿರಿದಾಗಿ ಅವು ಸಿಡಿಯುವ ಅಪಾಯ ಹೆಚ್ಚಿಸುತ್ತದೆ. ಇದರಿಂದ ಪ್ರಮುಖ ಅಂಗಗಳಿಗೆ ರಕ್ತದ ಹರಿವು ಉಂಟಾಗದೆ ಏರುಪೇರಾಗುತ್ತದೆ. ಹಾಗೆ ನೋವು, ಸಿಡಿತ ಉಂಟಾಗುತ್ತದೆ.

ಕವಾಸಕಿ ರೋಗವು 6 ತಿಂಗಳಿಂದ 5 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಸಂಭವಿಸುತ್ತದೆ ಮತ್ತು ಅವರ ಎಲ್ಲಾ ಅಪಧಮನಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾದಾಗ ನಮ್ಮ ಹೃದಯದ ಮೇಲೆ ದೊಡ್ಡ ಪ್ರಭಾವ ಉಂಟು ಮಾಡುತ್ತದೆ. ಇದರಿಂದ ಹೃದಯನಾಳ ಹಾನಿಯೂ ಸಂಭವಿಸಲಿದೆ.

ಈ ಕಾಯಿಲೆ ಬರಲು ಕಾರಣವೇನು?

ಹೆಚ್ಚಿನ ಪ್ರಕರಣಗಳು ಚಳಿಗಾಲದಲ್ಲಿ ವರದಿಯಾಗುತ್ತದೆ. ಬದಲಾಗುತ್ತಿರುವ ಹವಾಮಾನ, ಸೋಂಕು, ವೈರಸ್, ಅನುವಂಶೀಯ ಸಮಸ್ಯೆಗಳು ಕೂಡ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಹಾಗೆ ಆಹಾರ ಕ್ರಮದಿಂದಾಗಿಯೂ ಕವಾಸಕಿ ಡಿಸಾರ್ಡರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತೆ.

ಕವಾಸಕಿ ಕಾಯಿಲೆಯ ಲಕ್ಷಣಗಳು

5 ದಿನಗಳಿಗಿಂತ ಹೆಚ್ಚು ದಿನ ತೀವ್ರ ಜ್ವರ, ಮಕ್ಕಳಲ್ಲಿ ಕಿರಿಕಿರಿ, ಮೂತ್ರ ಕೆಂಪು ಬಣ್ಣಕ್ಕೆ ತಿರುಗಿರುವುದು, ನಾಲಿಗೆಯಲ್ಲಿ ಕೆಂಪು ಗುಳ್ಳೆ ಅಥವಾ ಸೀಳು, ಕೈ ಮತ್ತು ಕಾಲುಗಳಲ್ಲಿ ಊತ ಮತ್ತು ಕೆಂಪು, ಚರ್ಮದ ಸಿಪ್ಪೆಸುಲಿಯುವುದು, ಅಲರ್ಜಿಂತಹ ರಚನೆ ಮೂಡಿರುವುದು, ಹೊಟ್ಟೆ ನೋವು. ಕವಾಸಕಿ ರೋಗವು ಹೆಚ್ಚಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರಲ್ಲಿ ಕಂಡುಬರುತ್ತದೆ.

ಕವಾಸಕಿ ಕಾಯಿಲೆಗೆ ಚಿಕಿತ್ಸೆ ಏನು?

ಮಕ್ಕಳು ನಾಲ್ಕರಿಂದ ಆರು ವಾರಗಳವರೆಗೆ ಕವಾಸಕಿ ರೋಗದ ಲಕ್ಷಣಗಳನ್ನು ಹೊಂದಿರಬಹುದು. ಅವರು ಎಂಟು ವಾರಗಳವರೆಗೆ ಆಯಾಸ ಮತ್ತು ಕಿರಿಕಿರಿಯನ್ನು ಅನುಭವಿಸಬಹುದು. ಒಮ್ಮೆ ಈ ರೋಗ ಕಾಣಿಸಿಕೊಂಡರೆ ಮತ್ತೆ ಹಿಂದಿರುಗುವ ಸಾಧ್ಯತೆ ಶೇ.4ರಷ್ಟಿದೆ. ಇದು ಅಪಧಮನಿಗಳಿಗೆ ದೀರ್ಘಕಾಲದ ಹಾನಿ ಮತ್ತು ಪ್ರೌಢಾವಸ್ಥೆಯಲ್ಲಿ ಅಪಧಮನಿಕಾಠಿಣ್ಯದಂತಹ ಸಂಭವನೀಯ ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸುಮಾರಾಗಿ ಈ ಕಾಯಿಲೆಯಲ್ಲಿ ಸೂಕ್ತ ಔಷಧಿಗಳಿಂದ ಚಿಕಿತ್ಸೆ ನೀಡಲಾಗುತ್ತದೆ. ಅಪರೂಪದ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯತೆ ಬೀಳಬಹುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What is Kawasaki Disease? Munawar Faruqui's Son Was Diagnosed

You may know that Kawasaki is a renowned bike sales company. Luxury bikes are the lifeblood of this company. But now it has been reported that the Kawasaki disease has now come to Munawar Farooqui's son.
Story first published: Monday, December 9, 2024, 11:22 [IST]
X
Desktop Bottom Promotion