Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಬಿಳಿ ಮತ್ತು ಕಂದು ಬಣ್ಣದ ಮೊಟ್ಟೆಯಲ್ಲಿರುವ ವ್ಯತ್ಯಾಸವೇನು.? ಯಾವುದು ಉತ್ತಮ?
ನೀವು ಮಾರುಕಟ್ಟೆಯಲ್ಲಿ ಇಲ್ಲವೆ ಸೂಪರ್ ಮಾರ್ಕೆಟ್‌ಗಳಲ್ಲಿ ಎರಡು ರೀತಿಯ ಮೊಟ್ಟೆಗಳನ್ನು ನೋಡಿರುತ್ತೀರಿ. ಒಂದು ಬಿಳಿ ಬಣ್ಣದಲ್ಲಿದ್ದರೆ ಮತ್ತೊಂದು ಸ್ವಲ್ಪ ಕಂದು ಬಣ್ಣದ ಮೊಟ್ಟೆಯಾಗಿರುತ್ತದೆ. ಹಾಗಾದ್ರೆ ಈ ರೀತಿ ಎರಡು ಬಣ್ಣದ ಮೊಟ್ಟೆಗೆ ಕಾರಣವೇನು ಎಂದು ನೀವು ಎಂದಾದರು ಯೋಚಿಸಿದ್ದೀರಾ.?
ಇದರ ಜೊತೆ ಕೆಲವರು ಬಿಳಿ ಬಣ್ಣದ ಮೊಟ್ಟೆಗಿಂತಲೂ ಕಂದು ಬಣ್ಣದ ಮೊಟ್ಟೆ ಬಹಳ ಆರೋಗ್ಯಕಾರಿ ಅಂಶ ಹೊಂದಿದೆ ಎಂದು ನಂಬಿರುತ್ತಾರೆ. ಅಲ್ಲದೆ ಕೆಲವು ಕಡೆ ಈ ಬಿಳಿ ಬಣ್ಣದ ಮೊಟ್ಟೆ ಹಾಗೂ ಕಂದು ಬಣ್ಣದ ಮೊಟ್ಟೆಯ ನಡುವಿನ ದರದಲ್ಲೂ ವ್ಯತ್ಯಾಸಗಳಿರುವುದನ್ನು ನಾವು ನೋಡಬಹುದು.

ಹಾಗಾದರೆ ಈ ಮೊಟ್ಟೆಗಳಲ್ಲಿ ಉತ್ತಮ ಮೊಟ್ಟೆ ಯಾವುದು? ಎರಡು ಮೊಟ್ಟೆಗಳ ನಡುವಿನ ವ್ಯತ್ಯಾಸವೇನು? ಯಾವುದರಲ್ಲಿ ಹೆಚ್ಚು ಪ್ರೋಟೀನ್ ಅಂಶವಿದೆ ಎಂಬ ಕುರಿತ ಎಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರ ನೀಡಲಿದ್ದೇವೆ.
ಬಿಳಿ ಮತ್ತು ಕಂದು ಬಣ್ಣದ ಮೊಟ್ಟೆಗಳು ಸಾಮಾನ್ಯವಾಗಿ ಆಯಾ ತಳಿಯ ಕೋಳಿ ಇಡುವ ಮೊಟ್ಟೆಗಳ ಬಣ್ಣವಾಗಿದೆ. ಅಂದರೆ ಬಿಳಿ ಜಾತಿಯ ಕೋಳಿಗಳು ಬಿಳಿ ಮೊಟ್ಟೆಯನ್ನು ಕಂದು ಬಣ್ಣದ ಪುಕ್ಕಗಳ ಹೊಂದಿರುವ ಕೋಳಿಗಳು ಕಂದು ಬಣ್ಣದ ಮೊಟ್ಟೆ ಇಡುತ್ತವೆ. ಇದರಲ್ಲಿ ವಿಶೇಷ ವಿಜ್ಞಾನವೇನು ಇಲ್ಲ.
ಆದರೆ ಬಿಳಿ ಮತ್ತು ಕಂದು ಮೊಟ್ಟೆಗಳ ನಡುವಿನ ವ್ಯತ್ಯಾಸವು ಅವುಗಳ ಗುಣಮಟ್ಟ, ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯದ ಬಗ್ಗೆ ತಪ್ಪು ಕಲ್ಪನೆಗಳಿವೆ. ಕೆಲವರು ಕಂದು ಬಣ್ಣದ ಮೊಟ್ಟೆ ತುಂಬಾನೆ ಪ್ರೋಟೀನ್ ಹೊಂದಿದೆ ಎಂದು ನಂಬುತ್ತಾರೆ. ಆದರೆ ಈ ಮೊಟ್ಟೆಯ ಚಿಪ್ಪಿನ ಬಣ್ಣವು ಅದರ ಪೌಷ್ಟಿಕಾಂಶದ ವಿಷಯ ಅಥವಾ ಪರಿಮಳವನ್ನು ನಿರ್ದೇಶಿಸುವುದಿಲ್ಲ. ಬದಲಿಗೆ, ಅದನ್ನು ಇಡುವ ಕೋಳಿಯ ತಳಿಯಿಂದ ನಿರ್ಧರಿಸಲಾಗುತ್ತದೆ.
ಪೌಷ್ಟಿಕಾಂಶದ ವಿಚಾರದಲ್ಲಿ ಬಿಳಿ ಮತ್ತು ಕಂದು ಮೊಟ್ಟೆಗಳ ನಡುವೆ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ. ಎರಡೂ ವಿಧಗಳು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಂತೆ ಒಂದೇ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಮೊಟ್ಟೆಯ ಚಿಪ್ಪಿನ ಬಣ್ಣವು ಕೇವಲ ಮೊಟ್ಟೆ ಇಡುವ ಪ್ರಕ್ರಿಯೆಯಲ್ಲಿ ಶೆಲ್‌ನಲ್ಲಿ ಸಂಗ್ರಹವಾಗುವ ವರ್ಣದ್ರವ್ಯಗಳ ಪರಿಣಾಮವಾಗಿದೆ ಮತ್ತು ಮೊಟ್ಟೆಯ ಪೌಷ್ಟಿಕಾಂಶದ ಅಂಶದ ಮೇಲೆ ಪರಿಣಾಮ ಬೀರುವುದಿಲ್ಲ.
ಬೆಲೆಗೆ ಸಂಬಂಧಿಸಿದಂತೆ ಕಂದು ಮೊಟ್ಟೆಗಳನ್ನು ಇಡುವ ತಳಿಗಳ ದೊಡ್ಡ ಗಾತ್ರದಂತಹ ಅಂಶಗಳಿಂದಾಗಿ ಕೆಲವು ಪ್ರದೇಶಗಳಲ್ಲಿ ಬಿಳಿ ಮೊಟ್ಟೆಗಳಿಗಿಂತ ಕಂದು ಮೊಟ್ಟೆಗಳು ಸ್ವಲ್ಪ ಹೆಚ್ಚು ದುಬಾರಿಯಾಗಿದೆ, ಇದಕ್ಕೆ ಬೇರೆ ಯಾವ ಅರ್ಥವೂ ಇಲ್ಲ. ಕೆಲವರು ಕಂದು ಮೊಟ್ಟೆ ದುಬಾರಿಯಾಗಿರುವುದರಿಂದ ಅದು ಅರೋಗ್ಯಕ್ಕೆ ಬಿಳಿ ಮೊಟ್ಟೆಗಿಂತ ಉತ್ತಮ ಎಂದು ಭಾವಿಸುತ್ತಾರೆ. ಆದರೆ ಆ ಬೆಲೆ ಅದರ ಗಾತ್ರದ ಮೇಲೆ ನಿರ್ಧರಿತವಾಗಿದೆ.
ಕೊಲೆಸ್ಟ್ರಾಲ್ ಅಂಶಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ಮೊಟ್ಟೆಯ ಚಿಪ್ಪಿನ ಬಣ್ಣವು ಅದರ ಕೊಲೆಸ್ಟ್ರಾಲ್ ಅಂಶವನ್ನು ನಿರ್ಧರಿಸುವುದಿಲ್ಲ. ಮೊಟ್ಟೆಗಳಲ್ಲಿನ ಕೊಲೆಸ್ಟ್ರಾಲ್ ಪ್ರಾಥಮಿಕವಾಗಿ ಹಳದಿ ಲೋಳೆಯಲ್ಲಿ ಕಂಡುಬರುತ್ತದೆ. ಬಿಳಿ ಮತ್ತು ಕಂದು ಬಣ್ಣದ ಮೊಟ್ಟೆಗಳಲ್ಲಿ ಸಮನಾದ ಹಳದಿ ಅಂಶ ಕಂಡುಬರುತ್ತದೆ. ಹೀಗಾಗಿ ಎರಡರಲ್ಲೂ ಒಂದೇ ರೀತಿಯಾದ ಕೊಲೆಸ್ಟ್ರಾಲ್ ಅಂಶ ಕಂಡುಬರುತ್ತದೆ. ಇನ್ನು ಹಲವರು ಈ ಮೊಟ್ಟೆಯಲ್ಲಿರುವ ಹಳದಿ ಅಂಶವನ್ನು ಸೇವಿಸುವುದಿಲ್ಲ. ಏಕೆಂದರೆ ಇದರಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿರುತ್ತದೆ ಎಂದು. ಇದು ಉತ್ತಮ ಅಭ್ಯಾಸವೆ ಈ ಹಳದಿ ಅಂಶದಿಂದ ದೂರವಿದ್ದಷ್ಟು ಉತ್ತಮ.
ರುಚಿಯಲ್ಲೂ ಎರಡೂ ಒಂದೇ
ಇನ್ನು ಬಿಳಿ ಮತ್ತು ಕಂದು ಬಣ್ಣದ ಮೊಟ್ಟೆಗಳ ರುಚಿಯ ವಿಚಾರಕ್ಕೆ ಸಂಬಂಧಿಸಿದಂತೆ ಅವುಗಳ ರುಚಿ ಬದಲಾಗುವುದಿಲ್ಲ. ಎರಡೂ ಒಂದೇ ರೀತಿಯ ರುಚಿ ಹೊಂದಿವೆ. ಆದರೆ ಕೆಲವರು ಕಂದು ಬಣ್ಣದ ಮೊಟ್ಟೆ ಬಿಳಿ ಮೊಟ್ಟೆಗಿಂತಲು ಹೆಚ್ಚು ದಪ್ಪವಾಗಿ, ರುಚಿಯಲ್ಲಿಯೂ ಬದಲಾವಣೆ ಇದೆ ಎನ್ನುತ್ತಾರೆ. ಆದರೆ ಈ ರುಚಿ ಆ ಕೋಳಿಗಳ ಆರೋಗ್ಯದ ಸ್ಥಿತಿ, ಆಹಾರ ಕ್ರಮದ ಮೇಲೆ ನಿರ್ಧರಿತವಾಗಿರುತ್ತದೆ. ಬಹುಪಾಲು ಎಲ್ಲಾ ಮೊಟ್ಟೆಯ ರುಚಿಯು ಒಂದೇ ರೀತಿ ಇರಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









