Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬುಬೊನಿಕ್ ಪ್ಲೇಗ್ ಕುರಿತು ಇರಲಿ ಎಚ್ಚರ..! ಏನಿದು ಕಾಯಿಲೆ..! ಅದರ ಲಕ್ಷಣವೇನು..?
'ಬುಬೊನಿಕ್ ಪ್ಲೇಗ್' ಎಂಬ ಅಪರೂಪದ ಪ್ರಕರಣ ಮತ್ತೆ ಸುದ್ದಿಯಾಗುತ್ತಿದೆ. ಚೀನಾದಲ್ಲಿ ಭಾರೀ ಆತಂಕ ಹುಟ್ಟಿಸಿದ್ದ ಈ ಕಾಯಿಲೆ ಈಗ ಅಮೆರಿಕದಲ್ಲಿ ಪತ್ತೆಯಾಗಿದೆ. ಅಮೆರಿಕದ ಒರೆಗಾನ್ ರಾಜ್ಯದ ಅಧಿಕಾರಿಗಳು, ಅಪರೂಪದ ಮಾನವ ಪ್ರಕರಣವಾದ 'ಬುಬೊನಿಕ್ ಪ್ಲೇಗ್' ಹೊಂದಿರುವ ರೋಗಿಯನ್ನು ಪತ್ತೆ ಮಾಡಿದ್ದು, ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಹಾಗಾದರೆ ಏನಿದು ಬುಬೊನಿಕ್ ಪ್ಲೇಗ್? ಹೇಗೆ ಹರಡುತ್ತದೆ? ಈ ಕಾಯಿಲೆಯ ಲಕ್ಷಣಗೇಳೇನು ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.
ಬುಬೊನಿಕ್ ಪ್ಲೇಗ್ ಎಂದರೇನು?
ಬುಬೊನಿಕ್ ಪ್ಲೇಗ್ ಎಂಬುದು ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ನಿರ್ದಿಷ್ಟ ರೀತಿಯ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ, ಯೆರ್ಸಿನಿಯಾ ಪೆಸ್ಟಿಸ್. ದಂಶಕ ಸ್ವಭಾವವನ್ನು ಹೊಂದಿರುವ ಪ್ರಾಣಿಗಳಿಂದ ಇದು ಸಾಮಾನ್ಯವಾಗಿ ಮಾನವ ದೇಹದಲ್ಲಿ ಹರಡುತ್ತದೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಸಸ್ತನಿಗಳ ದೇಹದಲ್ಲಿ ಪ್ಲೇಗ್ ಇರುತ್ತದೆ ಮತ್ತು ಈ ಪ್ರಾಣಿಗಳು ಮನುಷ್ಯರೊಂದಿಗೆ ಸಂಪರ್ಕಕ್ಕೆ ಬಂದಾಗ, ಸೋಂಕು ಸುಲಭವಾಗಿ ಅವುಗಳಿಗೆ ಹರಡುತ್ತದೆ.

ಬುಬೊನಿಕ್ ಪ್ಲೇಗ್‌ನ ಲಕ್ಷಣಗಳು ಯಾವುವು?
- ಜ್ವರ
- ವಾಕರಿಕೆ ಭಾವನೆ
- ಅಸ್ವಸ್ಥತೆ
- ತಲೆನೋವು
- ತಣ್ಣನೆಯ ಭಾವನೆ
- ಸ್ನಾಯು ನೋವು
- ಸುಸ್ತು
ದುಗ್ಧರಸಗಳಲ್ಲಿ ಊತ, ಕುತ್ತಿಗೆ ಭಾಗದಲ್ಲಿ, ಮೊಣಕೈ ಭಾಗದಲ್ಲಿ, ತೊಡೆಸಂದುಗಳಲ್ಲಿ ಊತ ಕಂಡು ಬರುವುದು. ಬಬೂನಿಕ್ ಪ್ಲೇಗ್ ಬ್ಯಾಕ್ಟಿರಿಯಾಗಳಿಂದ ಬರುವಂಥ ರೋಗವಾಗಿದ್ದು ಇದು ಕೀಟಗಳ ಮೂಲಕ ಹರಡುವುದು ಹಾಗೂ ಪ್ಲೇಗ್ ಇರುವ ಪ್ರಾಣಿಗಳ ಸಂಪರ್ಕದಿಂದ ಅಥವಾ ಅವುಗಳನ್ನು ತಿನ್ನುವುದರಿಂದ ಹರಡುವುದು.
ಪ್ಲೇಗ್‌ನಲ್ಲಿ ಎಷ್ಟು ವಿಧಗಳಿವೆ?
ಬುಬೊನಿಕ್ ಪ್ಲೇಗ್: ಇದು ಸಾಮಾನ್ಯವಾಗಿ ಸೋಂಕಿತ ಕೀಟಗಳು ಹರಡುವುದರಿಂದ ಇಲ್ಲವೆ ಕಡಿತದಿಂದ ಉಂಟಾಗುತ್ತದೆ ಮತ್ತು ಪ್ಲೇಗ್ನ ಆರಂಭಿಕ ರೂಪವಾಗಿದೆ.
ಸೆಪ್ಟಿಸೆಮಿಕ್ ಪ್ಲೇಗ್: ಇದು ಸೋಂಕಿತ ಒಣಗು ಕಡಿತದಿಂದ ಅಥವಾ ಸೋಂಕಿತ ಪ್ರಾಣಿಯನ್ನು ಸ್ಪರ್ಶಿಸುವ ಮೂಲಕವೂ ಉಂಟಾಗುತ್ತದೆ.
ನ್ಯುಮೋನಿಕ್ ಪ್ಲೇಗ್: ಇದು ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯಿಂದ ಗಾಳಿಯಲ್ಲಿ ಬಿಡುಗಡೆಯಾಗುವ ಹನಿಗಳನ್ನು ಉಸಿರಾಡುವ ಮೂಲಕ ಹರಡುತ್ತದೆ.
14ನೇ ಶತಮಾನದಲ್ಲಿ ಪ್ಲೇಗ್ ಯುರೋಪಿನಾದ್ಯಂತ ವಿನಾಶವನ್ನು ಉಂಟುಮಾಡಿತು. ಈ ಕಾಯಿಲೆಯಿಂದ 50 ದಶಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೀಗ ಅಮೆರಿಕ ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವ ಬುಬೊನಿಯಾ ಪ್ಲೇಗ್ ಬೆಕ್ಕಿನ ಮೂಲಕ ಹರಡಿರಬಹುದು ಎಂದು ಶಂಕಿಸಲಾಗಿದೆ. ಈ ಮೊದಲು 2018-19ರಲ್ಲಿ ಚೀನಾದ ಮಂಗೋಲಿಯಾ ಪ್ರಾಂತ್ಯದಲ್ಲಿ ಬುಬೊನಿಕ್ ಪ್ಲೇಗ್ ಕಂಡುಬಂದಿತ್ತು. ಅತ್ಯಂತ ವೇಗವಾಗಿ ಹರಡಿದ್ದಲ್ಲದೆ ಕೋವಿಡ್ ಕಾಲದಲ್ಲಿ ಹರಡಿದ್ದ ಕಾರಣ ಲಕ್ಷ ಲಕ್ಷ ಮಂದಿಯ ಸಾವಿಗೆ ಕಾರಣವಾಗಿತ್ತು.
ಬಬೊನಿಕ್ ಪ್ಲೇಗ್ ತಡೆಗಟ್ಟುವುದು ಹೇಗೆ ?
ಇದುವರೆಗೆ ಸೂಕ್ತವಾದ ಲಸಿಕೆ ಈ ರೋಗಕ್ಕೆ ಕಂಡು ಹಿಡಿದಿಲ್ಲ. ಪ್ಲೇಗ್ ರೋಗ ತಡೆಗಟ್ಟಲು ಹಾಗೂ ಇದರ ಅಪಾಯ ತಗ್ಗಿಸಲು ಮಾರ್ಗಗಳಿವೆ, ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಪ್ಲೇಗ್ ರೋಗ ಹರಡದಂತೆ ತಡೆಗಟ್ಟಬಹುದಾಗಿದೆ. ಪ್ಲೇಗ್ ಬಾರದಂತೆ ತಡೆಗಟ್ಟಲು ಮಾಡಬೇಕಾಗಿರುವುದು
ಇಲಿ, ಹೆಗ್ಗಣ ಇವುಗಳು ಸೇರದಂತೆ ನಿಮ್ಮ ಮನೆ, ಆಫೀಸ್‌ನಲ್ಲಿ ಎಚ್ಚರಿಕೆವಹಿಸಬೇಕು.
ಸಾಕು ಪ್ರಾಣಿಗಳ ಮೇಲೆ ಒಣಗು, ಜಿಗಟ, ನೊಣ, ಕೀಟಗಳು ಕೂರದಂತೆ ಅವುಗಳನ್ನು ಸ್ವಚ್ಛವಾಗಿಡಬೇಕು
ಕಾಯಿಲೆ ಬಿದ್ದ ಪ್ರಾಣಿಗಳ ಆರೈಕೆ ಮಾಡುವಾಗ ಗ್ಲೌಸ್ ಧರಿಸಬೇಕು, ನಿಮ್ಮ ತ್ವಚೆಗೆ ಅವುಗಳ ಗಾಯ ಅಥವಾ ಆ ಪ್ರಾಣಿಗಳ ಶರೀರದ ರಕ್ತ ಅಥವಾ ದ್ರವ ತಾಗದಂತೆ ಎಚ್ಚರಿಕೆವಹಿಸಬೇಕು.
ಕೀಟಗಳು ಕಚ್ಚದಂತೆ ತುಂಬು ತೋಳಿನ ಬಟ್ಟೆ ಧರಿಸಿ ಹಾಗೂ ಮನೆಗೆ ಕೇಟಗಳು, ನೊಣಗಳು ಬಾರದಂತೆ ಸ್ಪ್ರೇ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
