ಅಗತ್ಯಕ್ಕಿಂತ ಹೆಚ್ಚು ಪ್ರೋಟೀನ್ ಸೇವಿಸಿದ್ರೆ ಏನಾಗುತ್ತೆ..!? ಏನೆಲ್ಲಾ ಸಮಸ್ಯೆಯಾಗುತ್ತೆ ಗೊತ್ತಾ?

ನಮ್ಮ ದೈನಂದಿನ ಜೀವನಕ್ಕೆ ಹಾಗೂ ನಮ್ಮ ದೇಹಕ್ಕೆ ಪ್ರೋಟೀನ್ ಎಷ್ಟು ಅಗತ್ಯ ಅಂಶ ಎಂಬುದು ನಮಗೆಲ್ಲಾ ತಿಳಿದಿದೆ. ಫೋಷಕಾಂಶಯುಕ್ತ ಆಹಾರ ಸೇವನೆಯೇ ನಮ್ಮ ಮುಖ್ಯ ಉದ್ದೇಶವಾಗಿರಬೇಕು. ಪ್ರೋಟೀನ್ ಕೊರತೆಯಿಂದ ನಮ್ಮ ದೇಹದಲ್ಲಿ ಎಷ್ಟೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬುದು ನಮಗೆ ತಿಳಿದಿದೆ. ಹೀಗಾಗಿ ನಮ್ಮ ದೇಹ ಸರಿಯಾಗಿ ಕೆಲಸ ಮಾಡಬೇಕಾದರೆ ಪ್ರೋಟೀನ್ ಅಗತ್ಯವಾಗಿ ಬೇಕಾಗುತ್ತದೆ.

ಆದ್ರೆ ನೀವು ಅಗತ್ಯಕ್ಕಿಂತ ಹೆಚ್ಚಿನ ಪ್ರೋಟೀನ್ ಸೇವಿಸಿದರೆ ಏನಾಗುತ್ತದೆ ಎಂಬುದು ಗೊತ್ತಾ? ಮಾನವ ದೇಹಕ್ಕೆ ದಿನಕ್ಕೆ ಎಷ್ಟು ಪ್ರೋಟೀನ್ ಬೇಕು? ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ ಸಾಧಾರಣ 0.8 ಗ್ರಾಂ ಪ್ರೋಟೀನ್ ಅಥವಾ ಪ್ರತಿ ಪೌಂಡ್‌ಗೆ 0.36 ಗ್ರಾಂನಷ್ಟು ಪ್ರೋಟೀನ್ ದೇಹಕ್ಕೆ ಬೇಕಾಗುತ್ತದೆ. ಅಂದರೆ ನಮ್ಮ ದೇಹ ತೂಕಕ್ಕೆ ಅಗತ್ಯವಾಗಿ ಪ್ರೋಟೀನ್ ಸೇವಿಸಬೇಕಾಗುತ್ತದೆ.

What Happens If You Eat More Protein Than You Need

ಆದರೆ ಒಬ್ಬ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚಿನ ಪ್ರೋಟೀನ್ ಸೇವಿಸಿದರೆ ಏನಾಗುತ್ತದೆ. ದೇಹದಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ ಎಂಬುದು ನಿಮಗೆ ಗೊತ್ತಾ? ಅಷ್ಟಕ್ಕೂ ಅಗತ್ಯಕ್ಕಿಂತ ಹೆಚ್ಚಿನ ಪ್ರೋಟೀನ್ ದೇಹಕ್ಕೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ನೋಡಿ.

ಕಿಡ್ನಿ ಕಾರ್ಯದ ಮೇಲೆ ಒತ್ತಡ

ಅಗತ್ಯಕ್ಕಿಂರ ಹೆಚ್ಚಾಗಿ ಪ್ರೋಟೀನ್ ಸೇವಿಸಿದಾಗ ನಮ್ಮ ದೇಹದಲ್ಲಿ ಅದರಲ್ಲೂ ಮುಖ್ಯವಾಗಿ ಚಯಾಪಚಯ ಕ್ರಿಯೆಗೆ ಸಂಬಂಧಿಸಿದಂತೆ ಕಿಡ್ನಿಯ ಮೇಲೆ ವಿಪರೀತ ಒತ್ತಡ ಉಂಟಾಗುತ್ತದೆ. ಸಾರಜನಕವನ್ನ ಹೊರಹಾಕಲು ಕಿಡ್ನಿ ಅಗತ್ಯಕ್ಕಿಂತ ಹೆಚ್ಚು ಸಮಯ ಹಾಗೂ ಶ್ರಮ ಹಾಕಬೇಕಾಗುತ್ತದೆ. ಅದರಲ್ಲೂ ಮಾಂಸದಿಂದ ಸಿಗುವ ಹೆಚ್ಚುವರಿ ಪ್ರೋಟೀನ್‌ ಕಿಡ್ನಿಯ ಕೆಲಸವನ್ನು ಮತ್ತಷ್ಟು ಹೆಚ್ಚಿಸುವ ಜೊತೆಗೆ ಒತ್ತಡಕ್ಕೆ ತಳ್ಳಯತ್ತದೆ. ಇದು ಮೂತ್ರಪಿಂಡದ ಹಾನಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ನಿರ್ಜಲೀಕರಣ

ಹೆಚ್ಚಿನ ಪ್ರೋಟೀನ್ ಸೇವನೆಯು ಹೆಚ್ಚುವರಿ ಸಾರಜನಕ ಮತ್ತು ಯೂರಿಯಾವನ್ನು ಹೊರಹಾಕಲು ದೇಹದ ನೀರಿನ ಅಗತ್ಯವನ್ನು ಹೆಚ್ಚಿಸುತ್ತದೆ. ಆದರೆ ಪ್ರೋಟೀನ್ ಹೆಚ್ಚು ಸವಿದ ಬಳಿಕ ಹೆಚ್ಚು ನೀರು ಕುಡಿಯದೆ ಇದ್ದರೆ ನಿರ್ಜಲೀಕರಣಕ್ಕೆ ಕಾರಣವಾಗಲಿದೆ. ಇದು ತಲೆನೋವು, ಬಾಯಾರಿಕೆ, ಬೆವರುವುದು, ಕಿಬ್ಬೊಟ್ಟೆ ನೋವಿನ ಸಮಸ್ಯೆಗೆ ಕಾರಣವಾಗಲಿದೆ.

ಜೀರ್ಣಕ್ರಿಯೆ ಸಮಸ್ಯೆಗಳು

ಹೆಚ್ಚು ಪ್ರೋಟೀನ್ ಸೇವಿಸುವುದು, ಅದ್ರಲ್ಲೂ ಮಾಂಸ ಸೇವನೆಯಿಂದ ಫೈಬರ್ ಕೊರತೆ ಉಂಟಾಗಬಹುದು ಇದು ಮಲಬದ್ಧತೆಯಂತಹ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ. ಮಾಂಸದಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಆದ್ರೆ ಫೈಬರ್ ಅಂಶ ಕಡಿಮೆಯಾಗಿರುತ್ತೆ. ಆಹಾರ ಸರಿಯಾಗಿ ಜೀರ್ಣವಾಗಬೇಕಾದರೆ ಅಗತ್ಯದಷ್ಟು ಫೈಬರ್ ಅಂಶ ಬೇಕಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಬಹುದು

ಪ್ರೋಟೀನ್‌ಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸುವುದು ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಲು ಹಾಗೂ ಕೊಲೆಸ್ಟ್ರಾಲ್ ಹೆಚ್ಚಾಗಬಹುದು. ಇದು ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ.

ಮೂಳೆ ಸಮಸ್ಯೆಗಳು

ಹೆಚ್ಚುವರಿ ಪ್ರೋಟೀನ್ ಸೇವನೆಯು ಮೂತ್ರದ ಮೂಲಕ ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗಬಹುದು, ಇದರಿಂದಾಗಿ ನಿಮ್ಮ ಮೂಳೆಗಳ ಬಲಗೊಳ್ಳುವಿಕೆಗೆ ಸಮಸ್ಯೆಯಾಗಬಹುದು. ಇದು ಕ್ಯಾನ್ಸಿಯಂ ಕಾರಣದಿಂದ ಉಂಟಾಗುವ ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚಿಸಲಿದೆ.

ತೂಕ ಹೆಚ್ಚಳ

ದೇಹಕ್ಕೆ ಅಧಿಕ ಪ್ರೋಟೀನ್ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅವಶ್ಯಕತೆಗೆ ತಕ್ಕ ಪ್ರೋಟೀನ್‌ಗಿಂತಲೂ ಅಧಿಕ ಪ್ರೋಟೀನ್‌ ನಮ್ಮ ದೇಹದಲ್ಲಿ ಕೊಬ್ಬು ಶೇಖರಣೆಗೆ ಕಾರಣವಾಗಬಹುದು. ಹಾಗೆ ತೂಕ ಹೆಚ್ಚಳಕ್ಕೂ ಇದು ಕಾರಣವಾಗುವ ಅಂಶವಾಗಲಿದೆ.

ಯಕೃತ್ತಿಗೆ ಒತ್ತಡ

ಮೂತ್ರಪಿಂಡಗಳಂತೆಯೇ, ಯಕೃತ್ತು ಅತಿಯಾದ ಪ್ರೋಟೀನ್ ಅನ್ನು ಪ್ರಕ್ರಿಯೆಗೊಳಿಸಿದಾಗ ಗಟ್ಟಿಯಾಗಿ ಕೆಲಸ ಮಾಡುತ್ತದೆ. ಇದು ಯಕೃತ್ತಿನ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು, ಅತಿಯಾದ ಪ್ರೋಟೀನ್ ಸೇವನೆಯು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಕಾರಣವಾಗಬಹುದು ಅಥವಾ ಯಕೃತ್ತಿನ ಕಾರ್ಯವನ್ನು ಹಾಳಮಾಡಬಹುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What Happens If You Eat More Protein Than You Need?

Do you know what happens when you eat more protein than you need? How much protein does the human body need per day? The body needs an average of 0.8 grams of protein per kilogram of body weight, or 0.36 grams of protein per pound.
Story first published: Wednesday, September 4, 2024, 12:14 [IST]
X
Desktop Bottom Promotion