Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆನ್ನಿನ ಕೆಳಭಾಗದಲ್ಲಿ ಈ ಡಿಂಪಲ್ ಇದ್ದರೆ ಏನರ್ಥ..! ನಿಮಗೂ ಆಗಿದ್ಯಾ?
ನಮ್ಮ ದೇಹ ನಾವು ಹುಟ್ಟಿದಾಗಿನಿಂದ ಹೇಗಿದ್ದೇವೋ ಹಾಗೆಯೇ ಇರುವುದಿಲ್ಲ. ನಾವು ಬೆಳವಣಿಗೆಯಾದಂತೆ ನಮ್ಮ ದೇಹದಲ್ಲೂ ಹಲವು ರೀತಿಯ ಬೆಳವಣಿಗೆ ಬದಲಾವಣೆ ನೋಡಬಹುದು. ಕೆಲವೊಮ್ಮೆ ನಮ್ಮ ದೇಹದ ಬದಲಾವನೆಗಳು ನಮ್ಮ ಅನಾರೋಗ್ಯಕ್ಕೆ ಕಾರಣವಾಗುವುದು ಕೂಡ ಇದೆ. ಹಾಗೆ ಕೆಲವೊಂದು ಬದಲಾವಣೆಯನ್ನು ನಾವು ನಿರ್ಲಕ್ಷಿಸಿ ಅಪಾಯ ತಂದುಕೊಳ್ಳುವುದು ನೋಡ ನಾವು ನೋಡಬಹುದು.
ನಾವು ಬೆಳವಣಿಗೆ ಹೊಂದಿದಂತೆಲ್ಲಾ ನಮ್ಮ ಹೊಟ್ಟೆಯ ಭಾಗ ಉಬ್ಬುವುದು ಕುತ್ತಿಗೆ ಬಾಗುವುದು ನಡೆಯುತ್ತದೆ. ಇದು ಸಹಜ ಪ್ರಕ್ರಿಯೆ ಹೌದು. ಆದ್ರೆ ಕೆಲವೊಂದು ಲಕ್ಷಣಗಳು ಅಪಾಯದ ಮುನ್ಸೂಚನೆ ಆಗಿರಲಿದೆ. ಹೀಗೆ ನಿಮ್ಮ ಬೆನ್ನ ಹಿಂದೆ ಏನು ನಡೆಯುತ್ತಿದೆ ಎಂಬುದನ್ನು ನೀವು ಪತ್ತೆ ಮಾಡಲು ಆಗುವುದಿಲ್ಲ ಎಂಬ ಮಾತಿದೆ. ಇದು ಆರೋಗ್ಯಕ್ಕೂ ಅನ್ವಯವಾಗುತ್ತೆ.

ನಿಮ್ಮ ಬೆನ್ನ ಹಿಂದೆ ಅಂದರೆ ಬೆನ್ನಿನ ಕೆಳಭಾಗದಲ್ಲಿ ಎರಡು ಕುಳಿಗಳು ಅಂದ್ರೆ ಡಿಂಪಲ್ ರೀತಿಯು ರಚನೆ ಆಗಿರುವುದನ್ನು ಗಮನಿಸಿದ್ದೀರಾ? ಕೆಲವರಿಗೆ ಈ ರೀತಿಯ ಕುಳಿಗಳಿರುತ್ತೆ. ಮತ್ತೆ ಕೆಲವರಿಗೆ ಈ ರೀತಿ ಯಾವುದೇ ಕುಳಿಗಳು ಇರುವುದಿಲ್ಲ. ಹಾಗಾದ್ರೆ ಈ ಕುಳಿಗಳು ನೀಡುವ ಸೂಚನೆ ಏನು? ಇದು ಅನಾರೋಗ್ಯದ ಲಕ್ಷಣವೇ? ಇದರಿಂದ ಆಗುವ ಹಾನಿ ಏನು ಎಂಬುದನ್ನು ನಾವಿಂದು ತಿಳಿಯೋಣ.
ಬೆನ್ನ ಹಿಂದೆ ಇರುವ ಈ ಎರಡು ಕುಳಿಗಳನ್ನು ವೀನಸ್ ಹೋಲ್ ಅಥವಾ ಬ್ಯಾಕ್ ಡಿಂಪಲ್ ಎಂದು ಕರೆಯಲಾಗುತ್ತದೆ. ಕೆಳ ಬೆನ್ನಿನಲ್ಲಿ ಇದು ಕಂಡುಬರುತ್ತದೆ. ಸ್ಪೈನಲ್ ಕಾರ್ಡ್ ಬುಡದಲ್ಲಿ ಎರಡು ಕಡೆಗಳಲ್ಲಿ ಈ ಕುಳಿಗಳು ಉಂಟಾಗುವುದು ನೋಡಬಹುದು. ಆದ್ರೆ ಇದು ಅಧಿಕ ತೂಕದ ಸೂಚಕವೇ? ಇಲ್ಲ ಕಡಿಮೆ ತೂಕ ಹೊಂದಿದ್ದಾರಾ? ಎಂಬ ಅನುಮಾನಕ್ಕೆ ಕಾರಣವಾಗುತ್ತದೆ. ಹಾಗಾದ್ರೆ ಇದರ ಹಿಂದಿರುವ ಕಾರಣವೇನು ನೋಡಿ.
ಆದ್ರೆ ಕೆಳ ಬೆನ್ನಿನ ಈ ಕುಳಿಗಳು ಸಾಮಾನ್ಯ ಸೌಂದರ್ಯ ವರ್ಧಕಗಳಷ್ಟೇ ಎಂದು ಹೇಳಲಾಗಿದೆ. ಏಕೆಂದರೆ ಈ ಕುಳಿಗಳು ಯಾವುದೇ ಅನಾರೋಗ್ಯ ಸೂಚಕಗಳಲ್ಲವಂತೆ. ಆರೋಗ್ಯವಂತರಲ್ಲಿಯೂ ಕೂಡ ಇಂತಹ ವೀನಸ್ ಹೋಲ್ ನೋಡಬಹುದಂತೆ. ಮಹಿಳೆಯರಲ್ಲಿ ಇದನ್ನು ಸೌಂದರ್ಯ ಸೂಚಕವಾಗಿ ನಾವು ಪರಿಗಣಿಸಬಹುದು ಅಷ್ಟನ್ನು ಹೊರತುಪಡಿಸಿ ಇದರಿಂದ ಯಾವ ಉಪಯೋಗವು ಇಲ್ಲ ಹಾನಿಯೂ ಇಲ್ಲ ಎಂಬುದು ತಜ್ಞರ ಮಾತಾಗಿದೆ.
ಆದರೆ ಇದು ಸ್ಯಾಕ್ರಮ್ ಬೆನ್ನುಮೂಳೆಯ ತಳದಲ್ಲಿ ನೆಲೆಗೊಂಡಿರುವ ತ್ರಿಕೋನ ಮೂಳೆಯ ರಚನೆಯಿಂದ ಉಂಟಾಗುತ್ತದೆ. ಸೊಂಟದ ಸ್ಯಾಕ್ರಮ್ ಮತ್ತು ಇಲಿಯಾಕ್ ಮೂಳೆಗಳು ಸಂಧಿಸುವ ಸ್ಥಳದಲ್ಲಿ ಡಿಂಪಲ್‌ಗಳು ನೆಲೆಗೊಂಡಿವೆ. ಇಲ್ಲಿ ಸಣ್ಣ ಪ್ರಮಾಣದ ಖಾಲಿ ಜಾಗ ಅಸ್ಥರಜ್ಜು ಕಾರಣದಿಂದ ಉಂಟಾಗುತ್ತದೆ. ಇದು ಈ ಕುಳಿಗಳ ರಚನೆಗೆ ಕಾರಣವಾಗುತ್ತದೆ. ಈ ಕುಳಿಗಳ ರಚನೆಗೆ ನಿರ್ದಿಷ್ಟ ವಯಸ್ಸು, ಕಾರಣಗಳಿಲ್ಲ ಎಂದು ಸಹ ತಿಳಿದುಬಂದಿದೆ. ಮಕ್ಕಳಲ್ಲಿ ಈ ರೀತಿ ಕಂಡುಬಂದರೆ ನಾವು ಅವರಲ್ಲಿ ಕೊಬ್ಬಿನ ಅಂಶ ಶೇಖರಣೆ ಕಡಿಮೆ ಇದೆ ಎಂಬ ನಿರ್ಧಾರಕ್ಕೆ ಬರಬಹುದು, ಆದ್ರೆ ಇದು ಆರೋಗ್ಯ ಸೂಚಕ ಅಥವಾ ಅನಾರೋಗ್ಯ ಸೂಚಕ ಯಾವುದೂ ಅಲ್ಲ ಎಂದು ತಜ್ಞರು ಹೇಳಿದ್ದಾರೆ.
ಆದ್ರೆ ಕೆಲವರು ಈ ಕುಳಿಗಳು ಆಗುವುದು ದೊಡ್ಡ ಅನಾರೋಗ್ಯ ಎಂಬಂತೆ ಬಿಂಬಿಸುತ್ತಾರೆ. ತೂಕ ಹೆಚ್ಚಳವಾಗಿ ಬೆನ್ನಿನ ಮೂಳೆ ಮೇಲೆ ಒತ್ತಡ ಬಿದ್ದಾಗ ಈ ರೀತಿಯ ರಚನೆ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಸಹ ಇದೆ. ಅಲ್ಲದೆ ಇದು ಬೆನ್ನಿನ ಅನಾರೋಗ್ಯ ಸೂಚಕ ಆಗಿದೆ. ಇದರಿಂದ ದೇಹಕ್ಕೆ ಹಾನಿಯಾಗುತ್ತದೆ ಎಂಬ ತಪ್ಪು ಮಾಹಿತಿಯನ್ನು ಕೂಡ ಕೆಲವರು ಹಂಚಿಕೊಳ್ಳುವುದು ನಾವು ನೋಡಬಹುದು. ಆದ್ರೆ ಇದರಿಂದ ಯಾವ ಹಾನಿಯೂ ಇಲ್ಲ ಎಂಬುದು ತಿಳಿದುಬರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications