Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಮದ್ಯ ಸೇವನೆ ನಿಲ್ಲಿಸಿದಾಗ ದೇಹದಲ್ಲಿ ಯಾವ ಬದಲಾವಣೆಯಾಗುತ್ತೆ..? ಇಲ್ಲಿದೆ ಮಾಹಿತಿ
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ಎಂಬುದು ಚಿಕ್ಕ ಮಕ್ಕಳಿಗೂ ತಿಳಿದಿರುವ ವಿಚಾರವಾಗಿದೆ. ಏಕೆಂದರೆ ಮದ್ಯಪಾನವು ಹೆಚ್ಚಾಗಿ ಹೃದಯ, ಲಿವರ್, ಸೇರಿ ಮೆದುಳಿಗೂ ಸಂಬಂಧಿಸಿದಂತೆ ಹಾನಿ ಉಂಟು ಮಾಡುವ ಒಂದು ಕೆಟ್ಟ ವಿಚಾರವಾಗಿ. ಆದರೆ ಮದ್ಯಪಾನಕ್ಕೆ ದಾಸರಾಗಿರುವ ಮಂದಿ ನಿತ್ಯವೂ ಮದ್ಯ ಸೇವಿಸುತ್ತಾರೆ. ಆದ್ರೆ ಕೆಲವರು ಇದಕ್ಕೆ ದಾಸರಾಗಿರುತ್ತಾರೆ. ಹೇಗೆಂದರೆ ಮದ್ಯದ ಅಮಲಿನಲ್ಲೇ ಅವರು ಇರಲು ಮುಂದಾಗುತ್ತಾರೆ. ಮದ್ಯ ಸೇವಿಸದಿದ್ದರೆ ಅವರಿಗೆ ಬದುಕಲು ಸಾಧ್ಯವಾಗದ ಸ್ಥಿತಿಗೆ ತಲುಪುತ್ತಾರೆ.
ಹೀಗಾಗಿ ಅವರನ್ನು ಮದ್ಯವ್ಯರ್ಜನ ಅಥವಾ ಮದ್ಯ ಕುಡಿಯುವುದನ್ನು ಬಿಡಿಸಲು ಮುಂದಾಗುವುದನ್ನು ನೋಡಬಹುದು. ಆದ್ರೆ ಮದ್ಯ ಸೇವನೆ ಮಾಡುವುದನ್ನು ಬಿಟ್ಟರೂ ಕೂಡ ಜೀವಕ್ಕೆ ಅಪಾಯವಾಗುವುದನ್ನು ನಾವು ನೋಡಿದ್ದೇವೆ. ಮದ್ಯ ಸೇವನೆ ಬಿಟ್ಟ ಮಂದಿ ಅನಾರೋಗ್ಯಕ್ಕೆ ಒಳಗಾಗುವುದು ಹಲವು ರೀತಿಯ ಅನಾರೋಗ್ಯ ಸಮಸ್ಯೆಗೆ ಒಳಗಾಗುವುದನ್ನು ನೋಡಿದ್ದೇವೆ.

ಹಾಗಾದ್ರೆ ಮದ್ಯ ಸೇವನೆ ಬಿಟ್ಟ ಬಳಿಕ ದೇಹಕ್ಕೆ ಏನಾಗುತ್ತದೆ? ಮದ್ಯ ಸೇವನೆ ಬಿಟ್ಟ ತಕ್ಷಣ ಮೆದುಳಿನಲ್ಲಿ ಯಾವ ರಾಸಾಯನಿಕ ಪ್ರಕ್ರಿಯೆ ಉಂಟಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮದ್ಯಪಾನ ಮಾಡುವುದನ್ನು ಬಿಟ್ಟ ತಕ್ಷಣ ಹೃದಯದ ಆರೋಗ್ಯ ಎಂದಿನಂತಾಗುತ್ತದೆ. ಹೃದಯದ ಮೇಲಿನ ಒತ್ತಡ ನಿಧಾನವಾಗಿ ಕಡಿಮೆಯಾಗುತ್ತದೆ. ಇದು ಒಂದು ಬಗೆಯ ಸಮಾಧಾನ ನೀಡಿದರೂ ಹಲವು ರೀತಿಯ ಸಮಸ್ಯೆಗೂ ಇದು ಕಾರಣವಾಗುತ್ತದೆ. ಮೆದುಳಿನಲ್ಲಿ ಕೆಮಿಕಲ್ ರಿಯಾಕ್ಷನ್‌ಗೆ ಕಾರಣವಾಗುತ್ತದೆ.
ಅಂದರೆ ನಿತ್ಯ ನೀವು ಮದ್ಯ ಸೇವಿಸಿದಾಗ ಮೆದುಳಿನಲ್ಲಿ ಈ ಮದ್ಯ ರಾಸಾಯಾನಿಕ ಕ್ರಿಯೆಗೆ ಒಳಗಾಗುತ್ತದೆ. ಹೀಗಾಗಿ ನಿಮಗೆ ಮತ್ತಷ್ಟು ಶಕ್ತಿ ಬಂದ ಅನುಭವವಾಗುತ್ತದೆ, ಆದರೆ ಮದ್ಯ ಸೇವನೆ ತಕ್ಷಣ ನಿಲ್ಲಿಸಿದಾಗ ಮೆದುಳಿಗೆ ನಿತ್ಯವೂ ಪೂರೈಕೆಯಾಗುತ್ತಿದ್ದ ಅಂಶ ಥಟ್ ಎಂದು ನಿಂತಾಗ ನಿಮ್ಮ ದೈನಂದಿನ ಕಾರ್ಯಕ್ಕೆ ಅಡಚಣೆಯಾಗಬಹುದು. ಮೆದುಳಿಗೂ ಗೊಂದಲ ಉಂಟಾಗಬಹುದು.
ದೇಹದಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ
ಆಲ್ಕೋಹಾಲ್ ಮೆದುಳಿನಲ್ಲಿರುವ ನರಪ್ರೇಕ್ಷಕಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾವು ಈ ಮೊದಲೇ ಹೇಳಿದ್ದೇವೆ. ನಿಧಾನವಾಗಿ ಹಂತ ಹಂತವಾಗಿ ಮದ್ಯಪಾನ ಬಿಟ್ಟಾಗ ಮಾನಸಿಕ ಕ್ರಿಯೆಗಳ ಸಾಮಾನ್ಯರಂತಾಗುತ್ತದೆ. ಒಮ್ಮೆ ನೀವು ಕುಡಿಯುವುದನ್ನು ನಿಲ್ಲಿಸಿದರೆ, ನಿಮ್ಮ ಮೆದುಳಿನ ರಸಾಯನಶಾಸ್ತ್ರವು ಸ್ಥಿರಗೊಳ್ಳಲು ಪ್ರಾರಂಭಿಸುತ್ತದೆ, ಇದು ನಿಮ್ಮ ಮಾನಸಿಕ ಕ್ರಿಯೆಯಲ್ಲಿ ಸಮತೋಲನಕ್ಕೆ ಕಾರಣವಾಗುತ್ತದೆ.
ಉತ್ತಮ ನಿದ್ರೆಗೆ ಇದು ಕಾರಣ
ಮದ್ಯಪಾನವು ನಿತ್ಯ ನಿಮ್ಮ ನಿದ್ರಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಮದ್ಯ ಸೇವನೆ ನಿಲ್ಲಿಸಿದಾಗ ಮೆದುಳಿನಲ್ಲಿರುವ ನಿದ್ರಾ ಕಾರಕಗಳು ನಿಮ್ಮ ನಿದ್ರೆಗೆ ಸಹಕಾರಿಯಾಗುವ ಅಂಶವನ್ನು ಎಚ್ಚರಿಸುತ್ತವೆ. ಇದರಿಂದ ಉತ್ತಮ ನಿದ್ರೆ ಪಡೆಯಬಹುದು. ಕೆಲವೊಮ್ಮೆ ಮದ್ಯ ಸೇವನೆಯಿಂದ ನಿಮಗೆ ಒಳ್ಳೆಯ ನಿದ್ರೆಯ ಬರಬಹುದು, ಆದರೆ ಒಳಗಿನ ಹಾನಿ ಅರಿವಾಗುವುದಿಲ್ಲ.
ತೂಕ ಇಳಿಸಲು ಸಹಕಾರಿ
ಹೆಚ್ಚು ಮದ್ಯಪಾನ ಮಾಡುವವರು ಹೆಚ್ಚಿನ ತೂಕ ಹೊಂದಿರುತ್ತಾರೆ. ಒಂದು ವೇಳೆ ನೀವು ಮದ್ಯ ಸೇವನೆ ನಿಲ್ಲಿಸಿದಾಗ ತೂಕ ಇಳಿಸಲು ಸಹಕಾರಿಯಾಗಲಿದೆ. ಇನ್ನೊಂದು ಕಡೆ ನೀವು ಅತೀ ಹೆಚ್ಚು ಮದ್ಯ ಸೇವನೆ ಮಾಡುವುದು ಅಥವಾ ಮದ್ಯಕ್ಕೆ ದಾಸರಾಗಿದ್ದರೆ ತೂಕ ಇಳಿಕೆಯಾಗಿ ಸಣಕಲು ದೇಹ ರಚನೆಗೂ ಇದು ಕಾರಣವಾಗಲಿದೆ.
ಬೇಗ ವಯಸ್ಸಾಗುವುದಿಲ್ಲ
ಮದ್ಯಪಾನ ಮಾಡುವವರ ಚರ್ಮ ಬಹುಬೇಗ ಸುಕ್ಕು ಗಟ್ಟುವುದು ನೋಡಬಹುದು. ಆದರೆ ಒಮ್ಮೆ ನೀವು ಮದ್ಯ ಸೇವನೆ ನಿಲ್ಲಿಸಿದರೆ ವಯಸ್ಸಾದಂತೆ ಕಾಣಿಸುವುದಿಲ್ಲ. ಚರ್ಮದ ಆರೋಗ್ಯಕ್ಕೂ ಇದು ಬಹಳ ಉತ್ತಮ. ಹೀಗಾಗಿ ಮದ್ಯ ಸೇವನೆಯನ್ನ ಹಂತ ಹಂತವಾಗಿ ಕಡಿಮೆ ಮಾಡುವುದು ಹಾಗೂ ಒಮ್ಮೆ ಸಂಪೂರ್ಣ ಕಡಿವಾಣ ಹಾಕುವುದು ಒಳಿತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
