ಮಾನಸಿಕ ಆರೋಗ್ಯ ಸಮಸ್ಯೆ ಉಂಟಾಗಲು ಕಾರಣವೇನು? ಈ ಕುರಿತು ಜಾಗೃತಿ ಏಕೆ ಮೂಡಿಸಬೇಕು?

ಆಧುನಿಕ ಜೀವನ ಶೈಲಿಯು ಹಲವು ರೀತಿಯ ಸಮಸ್ಯೆ ತಂದಿಡುತ್ತಿದೆ. ಮಾನಸಿಕವಾಗಿ ಕೂಡ ಜನರನ್ನು ಮತ್ತಷ್ಟು ಸಮಸ್ಯೆಗೆ ದೂಡುತ್ತಿದೆ. ಅದರಲ್ಲೂ ಈ ಒತ್ತಡ, ಬಿಡುವಿಲ್ಲದ ಕೆಲಸ, ಕೌಟುಂಬಿಕ ಸಮಸ್ಯೆಗಳು ಒಂದಲ್ಲಾ ಒಂದು ಸಮಯದಲ್ಲಿ ಮಾನಸಿಕ ಸಮಸ್ಯೆಗೆ ಕಾರಣವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ.

ಖಿನ್ನತೆ, ಆತಂಕ ಮತ್ತು ಬೈಪೋಲಾರ್ ಡಿಸಾರ್ಡರ್‌ನಂತಹ ಮಾನಸಿಕ ಕಾಯಿಲೆಗಳು ವಿಶ್ವದಲ್ಲಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತವೆ, ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜು 4 ರಲ್ಲಿ ಒಬ್ಬರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದಿದೆ.

What Causes Mental Health Problems

ಕೆಲವರ ಮಾನಸಿಕ ಸಮಸ್ಯೆಗಳು ನಮ್ಮ ಗಮನಕ್ಕೆ ಬರಬಹುದು ಹಾಗೂ ಅವರು ಚಿಕಿತ್ಸೆಗೂ ಒಳಗಾಗಬಹುದು. ಆದರೆ ಕೆಲವರು ಮೌನವಾಗಿ ಈ ಸಮಸ್ಯೆ ಎದುರಿಸುತ್ತಾರೆ. ಚಿಕಿತ್ಸೆ ಪಡೆಯುವ ವೇಳೆಗೆ ಅದು ಮಿತಿಯನ್ನು ದಾಟಿರುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಆದರೆ ಈ ಮಾನಸಿಕ ಸಮಸ್ಯೆ ಹೊಂದಿರುವ ಲಕ್ಷಣವೇನು? ಅವರನ್ನು ಗುರುತಿಸುವುದು ಹೇಗೆ?

ಹೌದು ಈ ರೀತಿಯ ಪ್ರಶ್ನೆಯೇ ಇಂದು ಕಾಡುತ್ತಿರುವ ಅತೀ ದೊಡ್ಡ ಸವಾಲು. ಏಕೆಂದರೆ ಯಾರು ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ ಎಂಬುದನ್ನು ಪತ್ತೆ ಮಾಡುವುದು ಬಹಳ ಕಷ್ಟ. ಏಕೆಂದರೆ ಅವರು ನಮ್ಮ ನಡುವೆಯೇ ಇದ್ದರೂ ಕೂಡ ಅವರಲ್ಲಿನ ಸಮಸ್ಯೆಯನ್ನು ಪತ್ತೆ ಮಾಡುವುದು ಬಹಳ ಕಷ್ಟವಾಗಿರುತ್ತದೆ. ಅವರು ತಮ್ಮ ಸಮಸ್ಯೆಯೊಂದಿಗೆ ಜೀವಿಸುವ ಸಾಧ್ಯತೆ ಹಿನ್ನೆಲೆ ನಮಗೆ ಅವರ ಸಮಸ್ಯೆ ಪತ್ತೆ ಕಷ್ಟವಾಗತ್ತದೆ.

ಆದರೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾತ್ರ ಮಾಡುವುದು ಈ ಕಾಲಘಟ್ಟಕ್ಕೆ ಅತ್ಯಂತ ಅವಶ್ಯಕತವಾಗಿ ಬೇಕಾಗಿದೆ. ಮಾನಸಿಕ ಆರೊಗ್ಯ ಸಮಸ್ಯೆ ಕುರಿತಂತೆ ಜನರಲ್ಲಿ ಹಾಗೂ ಈ ಸಮಸ್ಯೆಗೆ ಒಳಗಾದವರಲ್ಲಿಯೂ ಜಾಗೃತಿ ಮೂಡಿಸಬೇಕಿದೆ. ಮಾನಸಿಕ ಸಮಸ್ಯೆ ಎಂಬುದು ಸಂಪೂರ್ಣವಾಗಿ ಗುಣ ಪಡಿಸಬಹುದಾದ ಮನಸ್ಸಿಗೆ ಸಂಬಂಧಿಸಿದ ಕಾಯಿಲೆ ಎಂಬುದನ್ನು ಅರ್ಥ ಮಾಡಿಸಬೇಕಾದ ಅನಿವಾರ್ಯತೆ ಬಹಳಷ್ಟಿದೆ.

ಈಗಲೂ ಜನರು ಮಾನಸಿಕ ಸಮಸ್ಯೆ ಹೊಂದಿರುವ ವ್ಯಕ್ತಿಯನ್ನು ನೋಡುವ ದೃಷ್ಟಿಕೋನಗಳು ಬದಲಾಗಬೇಕಿದೆ. ಅಂದರೆ ಆತನನ್ನು ಹುಚ್ಚನಂತೆ ಪರಿಗಣಿಸುವುದು, ಹಿಯಾಳಿಸುವುದು, ಮೂಢನಂಬಿಕೆಯಂತಹ ಗೊಂದಲಗಳಿಂದ ಜನರನ್ನು ಹೊರತರಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಹಾಗಾದ್ರೆ ಈ ರೀತಿಯ ಜಾಗೃತಿ ಮೂಡಿಸುವುದರಿಂದಾಗಿ ಯಾವೆಲ್ಲಾ ಬದಲಾವಣೆ ಸಾಧ್ಯವಾಗಲಿದೆ?

ಆರಂಭದಲ್ಲೇ ಸಮಸ್ಯೆಗಳ ಪತ್ತೆ

ಮಾನಸಿಕ ಆರೋಗ್ಯ ಸಮಸ್ಯೆಯ ಕುರಿತು ಜಾಗೃತಿ ಮೂಡಿಸುವುರಿಂದ ಆರಂಭದಲ್ಲಿಯೇ ಈ ಸಮಸ್ಯೆಗೆ ಒಳಗಾದವರನ್ನು ಪತ್ತೆ ಮಾಡಬಹುದು. ಈ ಕಾಯಿಲೆ ಸಂಪೂರ್ಣ ಗುಣಪಡಿಸಬಹುದು ಎಂದು ತಿಳಿದಾಗ ಜನರು ಈ ಕುರಿತ ಅನಿಸಿಕೆ ಬದಲಾಯಿಸಿಕೊಳ್ಳುತ್ತಾರೆ, ಇದರಿಂದ ಆರೋಗ್ಯ ಕೇಂದ್ರಗಳತ್ತ ಜನ ಆಗಮಿಸಬಹುದು. ಹೀಗಾಗಿ ಆರಂಭದಲ್ಲೇ ಅವರ ಸಮಸ್ಯೆ ಬಗೆಹರಿಸಬಹುದು.

ಯಾತನೆ ಕಡಿಮೆ ಮಾಡಬಹುದು

ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಕುರಿತಂತೆ ಜಾಗೃತಿ ಉಂಟಾದರೆ ಯಾರಲ್ಲಾದರು ಈ ಸಮಸ್ಯೆ ಕಂಡುಬಂದಾಗ ಅವರನ್ನು ಹಿಯಾಳಿಸುವುದು, ಕಡೆಗಣಿಸುವುದು, ಇಲ್ಲವೆ ಬೇರೆ ರೀತಿಯಲ್ಲಿ ನೋಡುವುದನ್ನು ನಿಲ್ಲಿಸುತ್ತಾರೆ. ಇದು ಸಮಸ್ಯೆ ಹೊಂದಿರುವಾತನಲ್ಲಿ ಒಂದಿಷ್ಟು ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ.

ಈ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವೇನು?

ಜೆನೆಟಿಕ್ಸ್ ಮತ್ತು ಕುಟುಂಬ

ಮಾನಸಿಕ ಅಸ್ವಸ್ಥತೆಯಲ್ಲಿ ಆನುವಂಶಿಕ ಪ್ರವೃತ್ತಿಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಕುಟುಂಬದಲ್ಲಿ ಯಾರಾದರೂ ಬೈಪೋಲಾರ್ ಡಿಸಾರ್ಡರ್ ಅಥವಾ ಸ್ಕಿಜೋಫ್ರೇನಿಯಾದಂತಹ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿದ್ದರೆ ಅವರ ಮಕ್ಕಳಲ್ಲಿ ಕಾಣಿಸಿಕೊಳ್ಳುವುದು ಅಥವಾ ಸಂಬಂಧಿಯಲ್ಲಿ ಬರುವ ಸಾಧ್ಯತೆ ಹೆಚ್ಚು.

ಮೆದುಳಿನಲ್ಲಿ ರಾಸಾಯನಿಕ ಅಸಮತೋಲನ

ವ್ಯಕ್ತಿಯ ನಡುವಳಿಕೆ ಮತ್ತು ಭಾವನೆಗಳನ್ನು ನಿಯಂತ್ರಿಸಲು ಮೆದುಳು ನರಪ್ರೇಕ್ಷಕಗಳು ಎಂಬ ರಾಸಾಯನಿಕಗಳ ಸೂಕ್ಷ್ಮ ಸಮತೋಲನವನ್ನು ಅವಲಂಬಿಸಿದೆ. ಸಿರೊಟೋನಿನ್, ಡೋಪಮೈನ್ ಮತ್ತು ನೊರ್‌ಪೈನ್ಫ್ರಿನ್‌ನಂತಹ ಈ ರಾಸಾಯನಿಕಗಳಲ್ಲಿನ ಅಡಚಣೆಗಳು ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ಒತ್ತಡ ಮತ್ತು ಆತಂಕ

ಮಾನವನ ಸಾಮಾನ್ಯ ಮಾನಸಿಕ ಸಮಸ್ಯೆಗಳ ಕಾರಕಗಳೆಂದರೆ ಅದು ಒತ್ತಡ, ಆತಂಕಗಳು ಆತ ನಿರಂತರವಾಗಿ ಈ ಎರಡು ಸಮಸ್ಯೆಗಳಿಗೆ ಎದುರಾದರೆ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What Causes Mental Health Problems? Why Need To Create Awareness About This?

It is very difficult to detect who is suffering from mental problems. Because even if they are among us, it is very difficult to detect the problem in them.
X
Desktop Bottom Promotion