Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಮಕ್ಕಳಲ್ಲಿ ಹೃದಯಾಘಾತದ ಲಕ್ಷಣಗಳೇನು..? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ..!
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎಂಬ ಭಯಾನಕತೆ ಎಲ್ಲೆಡೆ ಹಬ್ಬಿದೆ. ಇಡೀ ವಿಶ್ವದಲ್ಲಿ ಕ್ಯಾನ್ಸರ್ ಹೊರತುಪಡಿಸಿದರೆ ಹೃದಯಾಘಾತದಿಂದಲೇ ಅತೀ ಹೆಚ್ಚು ಸಾವು ಸಂಭವಿಸುತ್ತಿದೆ. ಅದರಲ್ಲೂ ಭಾರತ ಹಾಗೂ ಅಮೆರಿಕದಲ್ಲಿ ಈ ಪ್ರಮಾಣ ಏರುತ್ತಲೇ ಇದೆ. ಆರೋಗ್ಯವಂತರು ಸಹ ಇತ್ತೀಚಿಗೆ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ನಿಜಕ್ಕೂ ಆತಂಕಕ್ಕೆ ತಳ್ಳಿದೆ.
ಮೊದಲೆಲ್ಲ ಹೃದಯಾಘಾತವು ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಹಾಗೂ ಮಧ್ಯ ವಯಸ್ಸು ಮೀರಿರುವವರಲ್ಲಿ ಕಂಡುಬರುತ್ತಿತ್ತು. ಆದರೆ ಇತ್ತೀಚಿಗೆ ಮಕ್ಕಳು ಸಹ ಹೃದಯಾಘಾತದಂತಹ ದಿಢೀರ್ ಸಾವಿಗೆ ಶರಣಾಗುತ್ತಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.
ಆರೋಗ್ಯವಂತ ಮಕ್ಕಳ ಹಾಗೂ ಯುವ ಸಮುದಾಯದಲ್ಲೂ ಹೃದಯಾಘಾತ ಪ್ರಕರಣ ಹೆಚ್ಚಾಗಿದೆ. ಅದರಲ್ಲೂ ಕೋವಿಡ್ ಬಳಿಕ ಈ ಪ್ರಮಾಣದಲ್ಲಿ ಏರಿಕೆಯಾಗಿರುವುದು ಚಿಂತೆಗೀಡು ಮಾಡಿದೆ.

5 ವರ್ಷದ ಮಗುವಿಗೂ ಹೃದಯಾಘಾತ
ಕಳೆದ ಭಾನುವಾರ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯ ಹತೈಖೇಡಾದಲ್ಲಿ 5 ವರ್ಷದ ಮಗುವೊಂದು ಹೃದಯಾಘಾತದಿಂದ ಮೃತಪಟ್ಟ ವರದಿಯಾಗಿತ್ತು. ಈ ಸುದ್ದಿ ವೈದ್ಯರಿಗೂ ಶಾಕ್ ನೀಡಿತ್ತು. ಮೊಬೈಲ್‌ನಲ್ಲಿ ಕಾರ್ಟೂನ್ ನೋಡುತ್ತಾ ಮಲಗಿದ್ದ ಮಗು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿತ್ತು ತಕ್ಷಣ ಮಗುವಿನ ತಾಯಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದೌಡಾಯಿಸಿದ್ದರು. ಆದ್ರೆ ಅಷ್ಟರಲ್ಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು. 5 ವರ್ಷದ ಮಗು ಹೃದಯಾಘಾತದಿಂದಾಗಿ ಮೃತಪಟ್ಟಿದ ಎಂದು ವೈದ್ಯರು ತಿಳಿಸಿದರು.
ಈ ಘಟನೆ ಪೋಷಕರು ಮಾತ್ರವಲ್ಲ ವೈದ್ಯರಿಗೂ ಶಾಕ್ ನೀಡಿತ್ತು. ಚಳಿಗಾಲದ ತಿಂಗಳುಗಳಲ್ಲಿ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಚಳಿಯ ವಾತಾವರಣವು ವಯಸ್ಸಾದ ಜನರನ್ನು, ಕೊಮೊರ್ಬಿಡಿಟಿ ಹೊಂದಿರುವ ಜನರನ್ನು ಹೆಚ್ಚು ದುರ್ಬಲಗೊಳಿಸುತ್ತದೆ ಎಂದು ಆರೋಗ್ಯ ಕೇಂದ್ರದ ಪ್ರಭಾರಿ ಧ್ರುವೇಂದ್ರ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಮಗುವಿನ ದೇಹ ಮರಣೋತ್ತರ ಪರೀಕ್ಷೆಗಾಗಿ ನೀಡಲು ಕುಟುಂಬಸ್ಥರಿಗೆ ಮನವಿ ಮಾಡಲಾಗಿತ್ತು. ಆದರೆ ಕುಟುಂಬ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಆ ಮಗುವಿನ ಸಾವಿಗೆ ನಿಖರ ಕಾರಣ ಯಾವುದೆಂದು ಪತ್ತೆ ಮಾಡುವುದು ಅಸಾಧ್ಯವಾಯಿತು.
ಮಕ್ಕಳಲ್ಲಿ ಹೃದಯಾಘಾತದ ಲಕ್ಷಣಗಳೇನು?
ಮಕ್ಕಳಲ್ಲಿ ಹೃದಯಾಘಾತದಂತಹ ಸಮಸ್ಯೆ ಎದುರಾಗುವ ಮುನ್ನ ಕೆಲವು ಲಕ್ಷಣಗಳ ತೋರ್ಪಡಿಸಬಹುದು. ಇಲ್ಲವೆ ಅವರಲ್ಲಿ ಕೆಲವು ಅಗೋಚರ ಲಕ್ಷಗಳೂ ಇರಬಹುದು.
- ಹಠಾತ್ ಪ್ರಜ್ಞಹೀನ ಸ್ಥಿತಿಗೆ ತಲುಪುವುದು
- ಆಯಾಸ
- ಉಸಿರಾಡಲು ಕಷ್ಟಪಡುವುದು
- ಹೃದಯ ಬಡಿತದಲ್ಲಿ ಏರುಪೇರು
- ಏಕಾಏಕಿ ಬೆವರುವುದು
- ಅನಿಯಮಿತ ಉಸಿರಾಟ
ಮಕ್ಕಳಲ್ಲಿ ಹೃದಯಾಘಾತ ತಡೆಗಟ್ಟುವಿಕೆಯ 5 ಸಲಹೆಗಳು
- ಚಲನಶೀಲತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ದೈಹಿಕ ಚಟುವಟಿಕೆ ಮಾಡುವುದು. ಆರೋಗ್ಯಕರ ಚಯಾಪಚಯ ಕ್ರಿಯೆ ಇರುವಂತೆ ನೋಡಿಕೊಳ್ಳುವುದು.
- ಪ್ರೋಟೀನ್‌ಯುಕ್ತ ಆಹಾರ ನೀಡುವುದು. ಅವರ ಆರೋಗ್ಯದಲ್ಲಿ ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ಖನಿಜಗಳ ಸರಿಯಾದ ಪ್ರಮಾಣ ನೀಡುವುದು.
- ನಿಮ್ಮ ದೇಹವನ್ನು ಯಾವಾಗಲೂ ಹೈಡ್ರೀಕರಿಸಿದಂತೆ ನೋಡಿಕೊಳ್ಳುವುದು. ಇದರರ್ಥ ಸಾಕಷ್ಟು ನೀರು ಕುಡಿಯುವುದು. ಇದು ಎಲ್ಲಾ ಹಾನಿಕಾರಕ ಟಾಕ್ಸಿನ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡ, ಯಕೃತ್ತು ಇತ್ಯಾದಿಗಳ ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತದೆ.
- ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗುವುದು. ಅಂದರೆ ಹೆಚ್ಚು ಹೊತ್ತು ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಬಳಸದಂತೆ ಜೀವನ ಕ್ರಮ ನಡೆಸುವುದು.
- ಕರಿದ ತಿಂಡಿಗಳ ಪದೇ ಪದೇ ಸೇವಿಸುವುದನ್ನು ತಡೆಯುವುದು. ಇದರಲ್ಲಿ ಅನಗತ್ಯವಾದ ಎಣ್ಣೆ ಅಂಶ ದೇಹದೊಳಗೆ ಸೇರುವುದರಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ ಈ ಅಭ್ಯಾಸ ಕಡಿಮೆ ಮಾಡುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications