Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸ್ತನದಲ್ಲಿ ಗಡ್ಡೆ: ಯಾವುದು ಕ್ಯಾನ್ಸರ್ ಗಡ್ಡೆ, ಯಾವುದಲ್ಲ?
ಮಹಿಳೆಯರನ್ನು ಅತಿ ಹೆಚ್ಚಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಸ್ತನ ಕ್ಯಾನ್ಸರ್. 2020ರಲ್ಲಿ 6,85,000 ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಸ್ತನ ಕ್ಯಾನ್ಸರ್ ಕುರಿತು ಪ್ರತಿಯೊಬ್ಬ ಮಹಿಳೆ ವಯಸ್ಸು 30 ದಾಟುತ್ತಿದ್ದಂತೆ ಎಚ್ಚರವಹಿಸಬೇಕಾಗಿದೆ. ಕೆಲವರು ಆರಂಭದಲ್ಲಿ ಸ್ತನ ಕ್ಯಾನ್ಸರ್ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ.
ಈ ಕಾರಣದಿಂದಾಗಿ ಪರಿಸ್ಥಿತಿ ಗಂಭೀರವಾಗುವುದು, ಇನ್ನು ಕೆಲವರು ಸ್ತನದಲ್ಲಿ ಕೆಲವು ಬದಲಾವಣೆ ಕಂಡು ಬಂದರೆ ಸ್ತನ ಕ್ಯಾನ್ಸರ್ ಎಂದು ಭಯ ಪಡುತ್ತಾರೆ. ಯಾವುದು ಸ್ತನ ಕ್ಯಾನ್ಸರ್ ಲಕ್ಷಣಗಳು, ಯಾವುದಲ್ಲ ಎಂದು ತಿಳಿಯೋಣ ಬನ್ನಿ:

ಕ್ಯಾನ್ಸರ್ ಆರಂಭಿಕ ಲಕ್ಷಣಗಳು
* ಸ್ತನದಲ್ಲಿ ಅಥವಾ ಕಂಕುಳ ಸ್ವಲ್ಪ ಕೆಳಭಾಗದಲ್ಲಿ ಗಡ್ಡೆಗಳು ಕಂಡು ಬರುವುದು.
* ಸ್ತನದಲ್ಲಿ ಊತ ಕಂಡು ಬರುವುದು
* ಸ್ತನಗಳಲ್ಲಿ ತುಂಬಾ ತುರಿಕೆ ಕಂಡು ಬರುವುದು
* ಸ್ತನ ತೊಟ್ಟುಗಳಲ್ಲಿ ನೋವು, ಸ್ತನಗಳ ತೊಟ್ಟಿನ ಬಣ್ಣ ಬದಲಾಗುವುದು.
* ಸ್ತನದ ತೊಟ್ಟುಗಳಿಂದ ರಕ್ತದಂತೆ ನೀರು ಬರುವುದು
* ಸ್ತನಗಳಲ್ಲಿ ನೋವು ಕಂಡು ಬರುವುದು
ಯಾವುದು ಸಹಜ?
ಸ್ತನಗಳು ಒಬ್ಬ ಮಹಿಳೆಗೆ ಇರುವಂತೆ ಮತ್ತೊಬ್ಬರಿಗೆ ಇರುವುದಿಲ್ಲ, ತುಂಬಾ ಮಹಿಳೆಯರಿಗೆ ತಮ್ಮ ಎರಡು ಸ್ತನದ ಗಾತ್ರ ಒಂದೇ ರೀತಿಯಿಲ್ಲ ಎಂಬ ಆತಂಕವಿರುತ್ತದೆ. ಇನ್ನು ಕೆಲವರು ನನ್ನ ಸ್ತನಗಳಲ್ಲಿ ನೋವಿದೆ ಸ್ತನ ಕ್ಯಾನ್ಸರ್ ಇರಬಹುದೇ ಎಂದು ಆತಂಕ ಪಡುತ್ತಾರೆ. ಮುಟ್ಟಿನ ಸಮಯದಲ್ಲಿ, ಅಂಡೊತ್ಪತ್ತಿ ಸಮಯದಲ್ಲಿ ಸ್ತನಗಳಲ್ಲಿ ನೋವು ಕಂಡು ಬರುವುದು ಸಹಜ. ಅಲ್ಲದೆ ವಯಸ್ಸಾಗುತ್ತಿದಂತೆ ಸ್ತನಗಳಲ್ಲಿಯೂ ಬದಲಾವಣೆ ಕಂಡು ಬರುವುದು.
ಸ್ತನಗಳಲ್ಲಿ ಗಡ್ಡೆಯಿದ್ದರೆ ಅದು ಕ್ಯಾನ್ಸರ್ ಆಗಿರಬಹುದೇ?
ಸ್ತನಗಳಲ್ಲಿಗಡ್ಡೆಯಿದೆ ಎಂದ ತಕ್ಷಣ ಅದು ಕ್ಯಾನ್ಸರ್ ಎಂದು ಆತಂಕ ಪಡಬೇಕಾಗಿಲ್ಲ. ಇತರ ಮೆಡಿಕಲ್ ಸಮಸ್ಯೆಯಿದ್ದರೆ ಕೂಡ ಗಡ್ಡೆ ಬರುವುದು, ಆದ್ದರಿಂದ ನೀವು ಸ್ತನಗಳಲ್ಲಿ ಗಡ್ಡೆ ರೀತಿ ಗೋಚರಿಸಿದೆ ಎಂದ ತಕ್ಷಣ ಅದು ಸ್ತನ ಕ್ಯಾನ್ಸರ್ ಎಂದು ಭಯ ಪಡಬೇಕಾದ ಅಗ್ಯತವಿಲ್ಲ.
ಈ ರೀತಿಯ ಸಮಸ್ಯೆ ಉಂಟಾಗಲೂ ಸ್ತನಗಳಲ್ಲಿ ವ್ಯತ್ಯಾಸ ಕಂಡು ಬರುವುದು
ಫೈಬ್ರೋಸಿಸ್ಟಿಕ್ ಸ್ತನ ಕಾಯಿಲೆ (Fibrocystic breast disease)
ಈ ರೀತಿಯ ಸಮಸ್ಯೆ ಉಂಟಾದಾಗಲೂ ಸ್ತನಗಳಲ್ಲಿ ಗಡ್ಡೆ ಉಂಟಾಗುವುದು. ಇದರಿಂದ ತುಂಬಾ ನೋವು ಹಾಗೂ ಕಿರಿಕಿರಿ ಉಂಟಾಗುವುದು.
ಮಾಸ್ಟಿಟಿಸ್
ಇದು ಸ್ತನದ ನರಗಳಿಗೆ ಸೋಂಕು ತಗುಲಿದಾಗ ಉಂಟಾಗುವುದು. ಈ ರೀತಿ ಸ್ತನಪಾನ ಉಣಿಸುವ ತಾಯಂದಿರಲ್ಲಿ ಹೆಚ್ಚಾಗಿ ಕಂಡು ಬರುವುದು. ಈ ರೀತಿಯಾದಾಗ ಸ್ತನಗಳು ಕೆಂಪಾಗುವುದು, ಊತ, ನೋವು ಈ ರೀತಿ ಉಂಟಾಗುವುದು.
3. ಸ್ತನಗಳಲ್ಲಿ ಗಡ್ಡೆ ಉಂಟಾಗುವುದು
ಕೆಲವರಿಗೆ ಸ್ತನಗಳಲ್ಲಿ ಗಡ್ಡೆ ಉಂಟಾಗುವುದು, ಆದರೆ ಕ್ಯಾನ್ಸರ್ ಗಡ್ಡೆಯಾಗಿರುವುದಿಲ್ಲ. ಗಡ್ಡೆಯಾದಾಗ ನೀವು ವೈದ್ಯರ ಬಳಿ ತೋರಿಸಿ ಆ ಗಡ್ಡೆ ಏಕೆ ಬಂದಿದೆ ಎಂದು ತಿಳಿದುಕೊಂಡು, ಇದಕ್ಕೆ ಚಿಕಿತ್ಸೆ ಪಡೆಯಿರಿ.
4. ಬ್ರೆಸ್ಟ್ ನಾವು (ಊತ) ಉಂಟಾಗುವುದು
ಈ ಸಮಸ್ಯೆ ಎದೆಹಾಲುಣಿವ ತಾಯಂದಿರಲ್ಲಿ ಕಂಡು ಬರುವುದು. ಇದರಿಂದ ಸ್ತನಗಳಲ್ಲಿ ಊತ ಕಂಡು ಬರುವುದು, ಈ ಸಮಯದಲ್ಲಿ ವಿಪರೀತ ನೋವು, ಜ್ವರ ಎಲ್ಲವೂ ಕಂಡು ಬರುವುದು.
5. ಗ್ಯಾಲಕ್ಟೋರಿಯಾ
ಸ್ತನಗಳಲ್ಲಿ ಹಾಲು ಉತ್ಪತ್ತಿಯಾಗುವುದು. ಆದರೆ ಅವರು ಗರ್ಭಿಣಿಯಾಗಿರುವುದಿಲ್ಲ, ಚಿಕ್ಕ ಮಗುವಿರುವುದಿಲ್ಲ, ಹಾರ್ಮೋನ್‌ಗಳ ಅಸಮತೋಲನದಿಂದಾಗಿ ಈ ರೀತಿ ಉಂಟಾಗುವುದು. ಥೈರಾಯ್ಡ್ ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ ಈ ರೀತಿ ಉಂಟಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
