ಹಣ್ಣುಗಳನ್ನು ಬೆಳಗ್ಗೆ ತಿಂದರೆ ಒಳ್ಳೆಯದು ಏಕೆ? ಖಾಲಿ ಹೊಟ್ಟೆಯಲ್ಲಿ ತಿನ್ನಬಹುದೇ?

ಎಲ್ಲಾ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು, ಒಂದೊಂದು ಹಣ್ಣಿನಲ್ಲಿ ಒಂದೊಂದು ಬಗೆಯ ವಿಶೇಷ ಗುಣಗಳಿರುತ್ತದೆ. ಸಾಮಾನ್ಯವಾಗಿ ಹಣ್ಣುಗಳನ್ನು ಊಟವಾದ ಬಳಿಕ ಕತ್ತರಿಸಿ ಕೊಡುತ್ತಾರೆ. ಆದರೆ ಕೆಲವೊಂದು ಹಣ್ಣುಗಳನ್ನು ಹೊಟ್ಟೆ ತುಂಬಿದ ಮೇಲೆ ತಿನ್ನುವುದಕ್ಕಿಂತ ಆ ಹಣ್ಣುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ತುಂಬಾನೇ ಒಳ್ಳೆಯದು, ಹಾಗಾಗಿ ಈ ಹಣ್ಣುಗಳನ್ನು ನೀವು ಖಾಲಿ ಹೊಟ್ಟೆಯಲ್ಲಿ ತಿಂದರೆ ತುಂಬಾನೇ ಒಳ್ಳೆಯದು:

eating fruits in empty stomach

ಕಲ್ಲಂಗಡಿ ಹಣ್ಣು
ಬೇಸಿಗೆಯಲ್ಲಿ ಹೆಚ್ಚಾಗಿ ದೊರೆಯುವ ಕಲ್ಲಂಗಡಿ ಹಣ್ಣು ದೇಹದಲ್ಲಿ ನೀರಿನಂಶ ಕಾಪಾಡುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನು ತುಂಬಉವುದು. ಇದರಲ್ಲಿ ನೀರಿನಂಶ ಹೆಚ್ಚಾಗಿದೆ ಹಾಗೂ ವಿಟಮಿನ್ ಸಿ ಅಧಿಕವಾಗಿದೆ. ಇದನ್ನು ಬೆಳಗ್ಗೆ ತಿನ್ನುವುದರಿಂದ ದಿನವಿಡೀ ಲವಲವಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡುವ ಚೈತನ್ಯ ತುಂಬುವುದು.
ನೀವು ಒಂದು ಕಪ್‌ ಕಲ್ಲಂಗಡಿ ಹಣ್ಣು ತಿಂದರೆ ಅದರಲ್ಲಿ ಇಷ್ಟೆಲ್ಲಾ ಪೋಷಕಾಂಶಗಳಿವೆ
ಕ್ಯಾಲೋರಿ:46
ಕಾರ್ಬ್ಸ್
0.6 ಗ್ರಾಂ ನಾರಿನಂಶ
ಪ್ರೊಟೀನ್
ವಿಟಮಿನ್ ಎ, ವಿಟಮಿನ್ ಸಿ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ

ಪಪ್ಪಾಯಿ
ಪಪ್ಪಾಯಿ ಹಣ್ಣನ್ನು ನೀವು ಯಾವುದೇ ಸಮಯದಲ್ಲಿ ತಿನ್ನಬಹುದು, ಆದರೆ ಖಾಲಿ ಹೊಟ್ಟೆಯಲ್ಲಿ ತಿಂದರೆ ತುಂಬಾನೇ ಒಳ್ಳೆಯದು, ಇದು ಜೀರ್ಣಕ್ರೊಯೆಗೆ ಒಳ್ಳೆಯದು, ದೇಹದಲ್ಲಿ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ. ಜಂತು ಹುಳು ನಾಶ ಮಾಡುತ್ತದೆ, ಮಲಬದ್ಧತೆ ಸಮಸ್ಯೆ ಇರುವವರಿಗೆ ಈ ಹಣ್ಣು ತುಂಬಾನೇ ಒಳ್ಳೆಯದು.

ಅನಾನಸ್
ಈ ಹಣ್ಣನ್ನು ನೀವು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು, ಪೈನಾಪಲ್ ಅನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ಇದರಲ್ಲಿರುವ antioxidant ಅಧಿಕವಿರಲಿದೆ.

ಬಾಳೆಹಣ್ಣು
ಬಾಳೆಹಣ್ಣು ಬೆಳಗ್ಗೆ ತಿನ್ನುವುದರಿಂದ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿಯಾಗಿದೆ.

ಈ ಹಣ್ಣುಗಳನ್ನು ಮಾತ್ರ ಬೆಳಗ್ಗೆ ಸೇವಿಸಿದರೆ ಸಾಕಾಗುವುದೇ?
ಈ ಹಣ್ಣುಗಳನ್ನು ಮಾತ್ರ ಬೆಳಗ್ಗೆ ಸೇವಿಸಿದರೆ ಸಾಲದು, ನೀವು ಸಿಟ್ರಸ್ ಹಣ್ಣುಗಳನ್ನು ಮಾತ್ರ ತಿಂದರೆ ಅಸಿಡಿಟಿ ಸಮಸ್ಯೆ ಬರಬಹುದು, ಹಾಗಾಗಿ ಈ ಹಣ್ಣುಗಳನ್ನು ಲಘು ಆಹಾರದ ಜೊತೆ ಸೇವನೆ ಮಾಡಿದರೆ ತುಂಬಾನೇ ಒಳ್ಳೆಯದು.

ನೀವು ದ್ರಾಕ್ಷಿ, ಕಲ್ಲಂಗಡಿ ಈ ಹಣ್ಣುಗಳನ್ನು ಸೇವಿಸುವಾಗ ಇದರ ಜೊತೆಗೆ ಓಟ್ಸ್‌ ಅಥವಾ ಹೆಚ್ಚು ನಾರಿನಂಶವಿರುವ ಆಹಾರ ಕೂಡ ಸೇವಿಸುವುದು ಒಳ್ಳೆಯದು.
ನೀವು ಬಾಳೆಹಣ್ಣು ಸೇವಿಸಿದಾಗ ಅದರ ಜೊತೆಗೆ ಸ್ವಲ್ಪ ಸ್ಯಾಂಡ್‌ವಿಷ್‌ ಕೂಡ ಸೇವಿಸಿದರೆ ಒಳ್ಳೆಯದು.
ಇನ್ನು ಹಣ್ಣುಗಳನ್ನು ಸೇವಿಸಿದಾಗ ಅದರ ಜೊತೆ ಸ್ವಲ್ಪ ಉಪ್ಪಿಟ್ಟು ಅಥವಾ ಸ್ಯಾಂಡ್‌ವಿಚ್,ಕಿಚಡಿ ಈ ಬಗೆಯ ಆಹಾರ ಸೇವಿಸಿದರೆ ತುಂಬಾನೇ ಒಳ್ಳೆಯದು.

ಇತರ ಸಮಯದಲ್ಲಿ ಹಣ್ಣುಗಳನ್ನು ಹೇಗೆ ಸೇವಿಸಬೇಕು?
ಹಣ್ಣುಗಳನ್ನು ರಾತ್ರಿ ಸೇವನೆ ಮಾಡುವುದಕ್ಕಿಂತ ಹಗಲು ಹೊತ್ತಿನಲ್ಲಿ ಸೇವನೆ ಮಾಡಿದರೆ ತುಂಬಾನೇ ಒಳ್ಳೆಯದು, ಕೆಲವೊಂದು ಹಣ್ಣುಗಳನ್ನು ರಾತ್ರಿ ಸೇವನೆ ಮಾಡುವುದರಿಂದ ಶೀತ ಉಂಟಾಗಬಹುದು.

ಆಹಾರ ತಿಂದ ತಕ್ಷಣ ಹಣ್ಣುಗಳ ಸೇವನೆ ಒಳ್ಳೆಯದೇ?
ತುಂಬಾ ಜನ ಆಹಾರ ತಿಂದ ತಕ್ಷಣ ಹಣ್ಣುಗಳ ಸೇವನೆ ಮಾಡುತ್ತದೆ, ಹಣ್ಣುಗಳ ಗುಣಗಳನ್ನು ನಮ್ಮ ದೇಹ ಸಂಪೂರ್ಣವಾಗಿ ಹೀರಿಕೊಳ್ಳಲು ಆಹಾರ ತಿನ್ನುವ ಮೊದಲಿಗೆ ಅಥವಾ ಆಹಾರ ಸೇವಿಸಿದ ಅರ್ಧ ಗಂಟೆಯ ಬಳಿಕ ಸೇವನೆ ಮಾಡಿದರೆ ಒಳ್ಳೆಯದು.

ಬೆಳೆಯುವ ಮಕ್ಕಳಿಗೆ ದಿನದಲ್ಲಿ 5 ಬಗೆಯ ಹಣ್ಣು ತಿನ್ನಿಸಿ
ಸ್ವಲ್ಪ-ಸ್ವಲ್ಪವಾದರೂ ದಿನದಲ್ಲಿ 5 ಬಗೆಯ ಹಣ್ಣು ಅವರ ದೇಹವನ್ನು ಸೇರಿದರೆ ತುಂಬಾನೇ ಒಳ್ಳೆಯದು.

ದುಬಾರಿ ಹಣ್ಣುಗಳ ಬದಲಿಗೆ ನಿಮ್ಮ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳ ಸೇವನೆ ಮಾಡಿ, ಸೀಸನಲ್ ಹಣ್ಣುಗಳನ್ನು ಮಿಸ್‌ ಮಾಡದಿರಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What Are The Foods Should Eat In Empty Stomach An It's Benefits

Eating fruits in empty stomach: Pros And Cons read on..
Story first published: Friday, March 21, 2025, 8:43 [IST]
X
Desktop Bottom Promotion