Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ತಾಮ್ರದ ಉಂಗುರ ಧರಿಸಿದರೆ ಈ ಅದ್ಭುತ ಪ್ರಯೋಜನ ಸಿಗಲಿದೆ
ತುಂಬಾ ಜನ ಕೈಗೆ ತಾಮ್ರದ ಉಂಗುರ ಧರಿಸುತ್ತಾರೆ. ಕೆಲವರು ಜ್ಯೋತಿಷ್ಯ ಪರಿಹಾರಕ್ಕಾಗಿ ತಾಮ್ರದ ಉಂಗುರ ಧರಿಸಿದರೆ ಇನ್ನು ಕೆಲವರು ಇದನ್ನು ಧರಿಸುವುದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಕ್ಕಾಗಿ ಧರಿಸುತ್ತಾರೆ. ನೀವು ತಾಮ್ರದ ಬೆರಳಿ ಜ್ಯೋತಿಷ್ಯ ಪರಿಹಾರ ಹಾಗೂ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯ ಬಯಸುವುದಾದರೆ ಇಲ್ಲಿದೆ ನೋಡಿ ಹೆಚ್ಚಿನ ವಿವರ:

ತಾಮ್ರದ ರಿಂಗ್‌ನ ಪ್ರಯೋಜನದ ಬಗ್ಗೆ ವೈದಿಕ ಶಾಸ್ತ್ರದಲ್ಲಿ ಏನು ಹೇಳಲಾಗಿದೆ:
* ತುಂಬಾ ಮುಂಗೂಪ ಇರುವವರು ಈ ತಾಮ್ರದ ರಿಂಗ್ ಧರಿಸಿದರೆ ಮುಂಗೋಪ ನಿಯಂತ್ರಣಕ್ಕೆ ಬರುತ್ತದೆ ಎಂದು ವೈದಿಕ ಶಾಸ್ತ್ರದಲ್ಲಿ ಹೇಳಲಾಗಿದೆ.
* ನಮ್ಮ ಕುಂಡಲಿಯಲ್ಲಿ ಸೂರ್ಯ ಮತ್ತು ಮಂಗಳ ಗ್ರಹ ಅನುಕೂಲಕರವಾದ ಸ್ಥಾನದಲ್ಲಿರದಿದ್ದರೆ ಈ ತಾಮ್ರದ ಉಂಗುರ ಧರಿಸುವುದರಿಂದ ಅದರ ಕೆಟ್ಟ ಪ್ರಭಾವವನ್ನು ತಗ್ಗಿಸಬಹುದು.
* ಇದು ವ್ಯಕ್ತಿಯಲ್ಲಿ ಕೆಟ್ಟ ಚಿಂತೆಗಳನ್ನು ಹೋಗಲಾಡಿಸಿ, ಧನಾತ್ಮಕ ಭಾವನೆ ಮೂಡುವಂತೆ ಮಾಡುವುದು ಎಂದು ಹೇಳಲಾಗುವುದು.
* ತಾಮ್ರದ ರಿಂಗ್ ಧರಿಸುವುದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಒಳ್ಳೆಯದು.
ಜ್ಯೋತಿಷ್ಯ ಪ್ರಕಾರ ಯಾವ ಬೆರಳಿಗೆ ತಾಮ್ರದ ರಿಂಗ್ ಬಳಸಬೇಕು?
ತಾಮ್ರದ ರಿಂಗ್ ಅನ್ನು ಉಂಗುರದ ಬೆರಳಿಗೆ ಧರಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ಪುರುಷರು ಬಲಗೈಯ ಉಂಗುರ ಬೆರಳಿನಲ್ಲಿ ಮಹಿಳೆಯರು ಎಡಗೈಯ ಉಂಗುರ ಬೆರಳಿನಲ್ಲಿ ಧರಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
ತಾಮ್ರದ ಉಂಗುರ ದೊರೆಯುವುದರಿಂದ ಆರೋಗ್ಯಕರ ಪ್ರಯೋಜನಗಳು
* ರಕ್ತವನ್ನು ಶುದ್ಧೀಕರಿಸುವುದು: ತಾಮ್ರ ಲೋಹವು ನಮ್ಮ ಮಾನಸಿಕ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ, ನಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ತಾಮ್ರದ ಲೋಹವನ್ನು ರಿಂಗ್ ಆಗಿ ಧರಿಸುವುದರಿಂದ ರಕ್ತ ಶುದ್ಧೀಕರಿಸುತ್ತದೆ, ಅಲ್ಲದೆ ದೇಹದಲ್ಲಿ ರಕ್ತ ಸಂಚಾರಕ್ಕೆ ತುಂಬಾನೇ ಒಳ್ಳೆಯದು. ಇದು ದೇಹವನ್ನು ಕಾಯಿಲೆ ಬೀಳುವುದರಿಂದ ರಕ್ಷಿಸಲು ಸಹಕಾರಿಯಾಗಿದೆ. ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ತಾಮ್ರದ ಉಂಗುರ ಧರಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ. ದೇಹದಲ್ಲಿ ರಕ್ತದೊತ್ತಡ ಸಮತೋಲನದಲ್ಲಿಡಲು ತಾಮ್ರದ ಉಂಗುರ ಸಹಕಾರಿಯಾಗಿದೆ. ಇದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಹೃದಯ ಸಂಬಂಧಿ ಸಮಸ್ಯೆ ತಡೆಗಟ್ಟಲು ಇದು ಸಹಕಾರಿಯಾಗಿದೆ.
ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಮೈಕೈ ನೋವು, ಸಂಧಿ ನೋವು ಈ ಬಗೆಯ ಸಮಸ್ಯೆ ಇರುವವರು ತಾಮ್ರದ ಉಂಗುರ ಅಥವಾ ಕಡಗ ಧರಿಸುವುದರಿಂದ ಒಳ್ಳೆಯ ಪ್ರಯೋಜನ ಪಡೆಯಬಹುದು. ಇದು ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೈಕೈ ನೋವು, ಸಂಧಿ ನೋವು ಕಡಿಮೆಯಾಗುತ್ತದೆ.
ಸೌಂದರ್ಯ ವೃದ್ಧಿಸುತ್ತದೆ
ತಾಮ್ರದ ರಿಂಗ್ ಅಥವಾ ಆಭರಣ ಧರಿಸಿದರೆ ತ್ವಚೆಗೆ ತುಂಬಾನೇ ಒಳ್ಳೆಯದು. ಇದು ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ. ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಿಸುವುದರಿಂದ ಯೌವನ ಕಳೆ ಕಾಪಾಡಲು ಸಹಕಾರಿ. ತಾಮ್ರದ ರಿಂಗ್ ತ್ವಚೆ ಸಂಬಂಧಿ ಸಮಸ್ಯೆ ತಡೆಗಟ್ಟಲು ಸಹಕಾರಿ. ದೇಹದಲ್ಲಿ ಕೈ ಬೆರಳು, ಕಾಲು, ಕೈಗಳಲ್ಲಿ ಊತ ಕಡಿಮೆ ಮಾಡಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
