Latest Updates
-
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಅಳುವುದು ದೇಹಕ್ಕೆ-ಮನಸ್ಸಿಗೆ ಸಹಕಾರಿ..! ಅಳುವಿನ ಪ್ರಯೋಜನವೇನು ಗೊತ್ತಾ?
ನಗು ಮತ್ತು ಅಳು ನಮ್ಮ ಜೀವನದ ನಿತ್ಯ ಸಂಗಾತಿಗಳು ಖುಷಿಯಾದರೆ ನಗು ಬರುವುದು ದುಖಃದಲ್ಲಿ ಅಳುವುದು ಸಾಮಾನ್ಯ. ನಗು ಮನಸ್ಸನ್ನು ಹಗುರಾಗಿಸಿದರೆ ಅಳು ಮನದ ದುಖಃ ಹೊರಹಾಕುತ್ತದೆ. ನಮಗೆ ಬೇಸರವಾದಾಗ, ದುಖಃವಾದಾಗ, ನೋವಾದಾಗ ಅಳುವುದು ಸಾಮಾನ್ಯ. ಆದ್ರೆ ಎಲ್ಲರು ಮನಬಿಚ್ಚಿ ಅಳು ಹೊರಹಾಕಲಾಗದ ಸ್ಥಿತಿಯೂ ಇರುತ್ತೆ.
ಅಂದ್ರೆ ಕೆಲವರು ಅಳುವುದು ಸೋಲಿನ ಸಂಕೇತ ಎಂದುಕೊಳ್ಳುತ್ತಾರೆ, ಸಂಕೋಚ ಪಡುತ್ತಾರೆ. ಅದ್ರಲ್ಲೂ ಪುರುಷರು ಅಳುವುದು ಕಡಿಮೆ. ಅವರು ಎಲ್ಲರ ಮುಂದೆ ಕಣ್ಣೀರು ಹಾಕಲು ಹಿಂಜರಿಯುತ್ತಾರೆ. ಪುರುಷರ ಕಣ್ಣಲ್ಲಿ ನೀರು ಬಂದರೆ ಆತ ಸದೃಢನಲ್ಲ ಎಂಬ ಭಾವನೆ ಸಮಾಜದ್ದು. ಆದರೆ ಮಹಿಳೆ ಯಾವಗ ಎಲ್ಲಿ ಬೇಕಾದರು ಕಣ್ಣೀರು ಹಾಕಿ ತನ್ನ ಬೇಸರ, ನೋವು ಹೊರಹಾಕುತ್ತಾಳೆ.

ಆದ್ರೆ ಕಣ್ಣೀರು ಹಾಕುವುದು ನಿಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದು ನಿಮಗೆ ತಿಳಿದಿದ್ಯಾ? ಹೌದು, ಅಳುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ದೇಹವು ಭಾವನೆಗಳಿಗೆ ಸ್ಪಂದಿಸುವಾಗ ಕಣ್ಣೀರಿನ ಗ್ರಂಥಿಯಿಂದ ಬರುವ ನೀರನ್ನು ಅಳುವುದು ಎಂದು ಕರೆಯುತ್ತೇವೆ. ಕಣ್ಣಲ್ಲಿ ನೀರು ಬರುವಂತೆ ಅಳುವುದರಿಂದ ನಿಮಗೆ ಹತ್ತಾರು ರೀತಿಯ ಆರೋಗ್ಯಕರ ಪ್ರಯೋಜನವಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಲಾಭವಿದೆ.
ಅಳುವುದು ವಿವಿಧ ಭಾವನೆಗಳಿಂದ ಪ್ರಚೋದಿಸಲ್ಪಟ್ಟ ಸಾಮಾನ್ಯ ಮಾನವ ಪ್ರತಿಕ್ರಿಯೆಯಾಗಿದೆ. ತಜ್ಞರ ಪ್ರಕಾರ, ಅಳುವುದು ನಿಮ್ಮ ಅತೃಪ್ತಿ ಅಥವಾ ನೋವನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ ಮತ್ತು ನಿಮ್ಮ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡಲಿದೆ.
ಜನರು ಏಕೆ ಅಳುತ್ತಾರೆ?
ಜನರು ವಿವಿಧ ಕಾರಣಗಳಿಗಾಗಿ ಅಳಬಹುದು, ಇದರಲ್ಲಿ ದೈಹಿಕ ಮತ್ತು ಮಾನಸಿಕ ನೋವು, ಯಾತನೆ ಮತ್ತು ಕೆಲವೊಮ್ಮೆ ಸಂತೋಷವೂ ಇದರಲ್ಲಿ ಸೇರಿದ್ದು ಅತೀಯಾದ ಸಂತೋಷಕ್ಕೆ ಕಣ್ಣಲ್ಲಿ ನೀರು ಬರುತ್ತದೆ. ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಮೂಲಕ ನಿಮ್ಮ ದೇಹವು ಒತ್ತಡವನ್ನು ನಿವಾರಿಸಲು ಮತ್ತು ಭಾವನಾತ್ಮಕ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದು ಮೌಖಿಕ ಸಂವಹನದ ಒಂದು ರೂಪವಾಗಿದ್ದು ಅದು ನಿಮ್ಮ ಬೆಂಬಲ, ಪರಾನುಭೂತಿ ಅಥವಾ ಸೌಕರ್ಯದ ಅಗತ್ಯವನ್ನು ಸೂಚಿಸುತ್ತದೆ ಮತ್ತು ಸಾಮಾಜಿಕ ಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಅಳುವುದರಿಂದ ಆಗುವ ಪ್ರಯೋಜನವೇನು?
ಮನಸ್ಸನ್ನು ಶಾಂತಗೊಳಿಸಿ ಹಿತ ನೀಡಲಿದೆ
ಅಳುವುದು ನಿಮ್ಮ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುವುದರಿಂದ ಕೆಲವು ಜನರಿಗೆ ಹಿತವಾದ ಪರಿಣಾಮವನ್ನು ಬೀರುತ್ತದೆ ಎಂದು ತಜ್ಞರು ನಂಬುತ್ತಾರೆ. ವಿಶ್ರಾಂತಿ, ಜೀರ್ಣಕ್ರಿಯೆ ಮತ್ತು ಚೇತರಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ಜವಾಬ್ದಾರಿ. ಕಣ್ಣೀರು ಸುರಿಸುವುದರಿಂದ ಎಂಡಾರ್ಫಿನ್ಗಳನ್ನು ಬಿಡುಗಡೆ ಮಾಡುತ್ತದೆ, ನಿಮ್ಮ ದೇಹದ ನೈಸರ್ಗಿಕ ನೋವು ನಿವಾರಕಗಳು ಶಾಂತತೆಯ ಭಾವವನ್ನು ಸೃಷ್ಟಿಸುತ್ತವೆ.
ನೋವನ್ನು ನಿವಾರಿಸುತ್ತದೆ
ಅಳುವ ನಂತರ ನಿಮ್ಮ ದೇಹದಿಂದ ಬಿಡುಗಡೆಯಾಗುವ ಎಂಡಾರ್ಫಿನ್ಗಳು ದೈಹಿಕ ಮತ್ತು ಭಾವನಾತ್ಮಕ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಳುವುದು ನೋವನ್ನು ನಿಭಾಯಿಸುತ್ತದೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಯಾರಾದರು ನೋವಿನಲ್ಲಿ ಅಳುತ್ತಿದ್ದರೆ ಅವರನ್ನು ತಡೆಯುವ ಯತ್ನ ಮಾಡಬಾರದು. ಅವರಿಗೆ ಅಳುವ ಸಮಯದಲ್ಲಿ ಒಂಟಿಯಾಗಿ ಬಿಡಬೇಕು ಎನ್ನುತ್ತಾರೆ.
ದೇಹ ಹಗುರಾಗುವಂತೆ ಮಾಡಲಿದೆ
ಹಲವರು ಈ ರೀತಿ ಹೇಳುತ್ತಾರೆ. ಒಮ್ಮೆ ಅತ್ತು ಹಗುರಾಗಬೇಕೆಂದು. ಹಗುರಾಗುವುದು ಎಂದರೆ ಮನದಲ್ಲಿರುವ ನೋವು ಹೊರಹಾಕಿದದಂತೆ. ವೈದ್ಯರು ಹೇಳುವಂತೆ ಹಲವು ಬಾರಿ ನೀವು ಅಳುವುದು ಮತ್ತು ಹೊರಹಾಕುವ ಭಾವನೆಗಳು ಎಂಡಾರ್ಫಿನ್ಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಹೆಚ್ಚು ಉತ್ತಮವಾಗಲು ಅನುವು ಮಾಡಿಕೊಡುತ್ತದೆ.
ಉತ್ತಮ ನಿದ್ರೆಗೆ ಸಹಕಾರಿ
ಮನದಲ್ಲಿ ಯೋಚನೆಗಳೂ, ನೋವು, ಯಾತನೆ ಇದ್ದಷ್ಟು ನಿದ್ರೆ ಕಡಿಮೆಯಾಗುತ್ತದೆ. ಯಾವಾಗಲು ಅದು ನಿಮ್ಮನ್ನ ಕಾಡಲು ಆರಂಭಿಸುತ್ತದೆ. ಆದ್ರೆ ಒಮ್ಮೆ ನೀವು ಅತ್ತುಬಿಟ್ಟರೆ ಅಳುವ ಭಾವನಾತ್ಮಕ ಬಿಡುಗಡೆಯು ಆತಂಕವನ್ನು ಕಡಿಮೆ ಮಾಡುತ್ತದೆ, ಇಲ್ಲದಿದ್ದರೆ ನಿಮಗೆ ರಾತ್ರಿಯಲ್ಲಿ ಮಲಗಲು ಕಷ್ಟವಾಗಬಹುದು.
ಒಬ್ಬ ವ್ಯಕ್ತಿ ಎಷ್ಟು ಅಳಬೇಕು?
ನೀವು ಎಷ್ಟು ಅಳಬೇಕು ಎಂಬುದಕ್ಕೆ ಯಾವುದೇ ಅಳತೆಯಿಲ್ಲದಿದ್ದರೂ, ನಿಮ್ಮ ಭಾವನಾತ್ಮಕ ಸಾಮರ್ಥ್ಯ, ಕಾರಣಗಳು, ನಿಭಾಯಿಸುವ ವಿಧಾನಗಳು ಮತ್ತು ಸಂದರ್ಭಗಳನ್ನು ಅವಲಂಬಿಸಿದೆ. ಅಮೇರಿಕನ್ ಮಹಿಳೆಯರು ಪ್ರತಿ ತಿಂಗಳು ಸರಾಸರಿ 3.5 ಬಾರಿ ಅಳುತ್ತಾರೆ ಮತ್ತು ಅಮೇರಿಕನ್ ಪುರುಷರು ಪ್ರತಿ ತಿಂಗಳು ಸುಮಾರು 1.9 ಬಾರಿ ಅಳುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
