Latest Updates
-
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ಬೂದು ಕುಂಬಳ ಜ್ಯೂಸ್‌ನಿಂದ ಆಗುವ ಲಾಭವೇನು ಗೊತ್ತಾ? ಸದ್ಗುರು ಸಲಹೆ ನೀಡಿದ್ದೇಕೆ?
ನಾವು ಯಾವ ಆಹಾರ ಸೇವಿಸುತ್ತೀವೋ ಆ ಆಹಾರ ಕ್ರಮಕ್ಕೆ ಅನುಗುಣವಾಗಿ ನಮ್ಮ ಆರೋಗ್ಯ ಸಮತೋಲನದಿಂದ ಕೂಡಿರುತ್ತದೆ. ನಾವು ಪೌಷ್ಟಿಕ, ವಿಟಮಿನ್ ಸೇರಿರುವ ಆಹಾರ ಸೇವನೆ ಮಾಡುವುದು ಆರೋಘ್ಯಕ್ಕೆ ಬಹಳ ಉತ್ತಮ ಎಂದು ತಿಳಿದಿದ್ದೇವೆ. ಇನ್ನು ಆಹಾರ ನಿಯಮಗಳ ಕುರಿತು ಕೂಡ ತಿಳಿದಿರುತ್ತೇವೆ. ಯಾವ ಸಮಯಕ್ಕೆ ಊಟ ಮಾಡಬೇಕು, ಯಾವ ಹೊತ್ತಿನಲ್ಲಿ ಎಷ್ಟು ಪ್ರಮಾಣದ ಆಹಾರ ಸೇವನೆ ಮಾಡಬೇಕು ಎಂಬುದೆಲ್ಲಾ ನಾವು ತಿಳಿದಿರುತ್ತೇವೆ.
ಹಾಗೆ ಆಹಾರದ ವಿಚಾರದಕ್ಕೆ ಬಂದರೆ ಬೂದು ಕುಂಬಳ ಕಾಯಿಯ ಜ್ಯೂಸ್ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ. ಸದ್ಗುರುಗಳು ಕೂಡ ಉತ್ತಮ ಆರೋಗ್ಯದ ಆಯ್ಕೆಯಾಗಿ ಈ ಬೂದು ಕುಂಬಳದ ಜ್ಯೂಸ್ ಕುಡಿಯಲು ಸಲಹೆ ನೀಡುತ್ತಾರೆ. ಆಧ್ಯಾತ್ಮಿಕ ಗುರುಗಳಾಗಿರುವ ಅವರು ತಮ್ಮ ಭಕ್ತರಿಗೆ ಸಲಹೆ ಸೂಚನೆಗಳ ನೀಡುವ ಕಾರ್ಯ ಮಾಡುತ್ತಾರೆ, ಅವರು ಈ ಜ್ಯೂಸ್ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಸಲಹೆ ನೀಡಿದ್ದಾರೆ.

ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬೂದು ಕುಂಬಳದ ಜ್ಯೂಸ್‌ನಿಂದಾಗುವ ಪ್ರಯೋಜನಗಳ ಕುರಿತು ಮಾತನಾಡಿದರು. ಹಾಗೆ ಈ ಬೂದು ಕುಂಬಳ ಹಿಂದೂ ಸಂಪ್ರದಾಯಗಳಲ್ಲಿ ಶತಮಾನದಿಂದ ಅಡಕವಾಗಿದೆ. ಹೆಚ್ಚಾಗಿ ಶುಭ ಕಾರ್ಯದ ಆರಂಭ, ಅಂತ್ಯ ಎಲ್ಲವೂ ಈ ಕುಂಬಳಕಾಯಿ ಮೂಲಕ ನಡೆಯುತ್ತದೆ. ಅಷ್ಟೊಂದು ಪ್ರಾಮುಖ್ಯತೆ ಇರುವ ಬೂದು ಕುಂಬಳ ಜ್ಯೂಸ್ ಆರೋಗ್ಯಕ್ಕೆ ಬಹಳ ಉತ್ತಮ ಎಂದು ಅವರು ಹೇಳಿದ್ದಾರೆ.
ಬೂದು ಕುಂಬಳ ಕಡಿಮೆ ಕ್ಯಾಲೋರಿ ಹೊಂದಿರುವ ಒಂದು ತರಕಾರಿ. ಹಾಗೆ ಇದರಲ್ಲಿ ಹೆಚ್ಚಿನ ನೀರಿನ ಅಂಶ ಇರುತ್ತದೆ. ಇದು ಹೆಚ್ಚಿನ ವಿಟಮಿನ್ ಸಿ ಹಾಗೂ ವಿಟಮಿನ್ ಬಿಯಿಂದ ಸಮೃದ್ಧಿಯಾಗಿದೆ. ಇದು ಜೀರ್ಣಕ್ರಿಗೆ ಸಹಕಾರಿಯಾಗಿದೆ. ಹಾಗೆ ತೂಕ ಇಳಿಸುವಲ್ಲಿಯೂ ಕೂಡ ಸಹಾಯ ಮಾಡಲಿದೆ. ಹಾಗಾದ್ರೆ ಈ ಬೂದು ಕುಂಬಳದ ಆರೋಗ್ಯಕರ ಲಾಭವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೂದು ಕುಂಬಳದ ಜ್ಯೂಸ್ ಸೇವನೆ ಮಾಡುವುದು ನರ ಕೋಶಗಳ ಶುದ್ಧಿಗೆ ಕಾರಣವಾಗಲಿದೆಯಂತೆ. ಅತೀ ಹೆಚ್ಚು ನೀರಿನ ಅಂಶ ಹೊಂದಿರುವುದರಿಂದಾಗಿ ಅದರಲ್ಲಿ ಕ್ಯಾಲ್ಸಿಯಂ, ಮೆಗ್ನಿಸಿಯಂ, ಪೊಟ್ಯಾಸಿಯಂ ಮತ್ತು ಸತುವಿನ ಅಂಶ ಸೇವಿ ವಿಟಮಿನ್ ಸಿ ಮತ್ತು ಬಿ ಹೊಂದಿರುತ್ತದೆ. ಇದು ನಮ್ಮ ಮಾನಸಿಕ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ.
ಬೂದು ಕುಂಬಳಕಾಯಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಬಗೆಹರಿಸಲಿದೆ. ಅದರಲ್ಲೂ ಬಾವು, ಪೈಲ್ಸ್, ಮಲಬದ್ಧತೆ ಸೇರಿ ಹಲವು ರೀತಿಯ ಸಮಸ್ಯೆಗಳನ್ನು ದೂರ ಮಾಡುವ ಗುಣಗಳನ್ನು ಹೊಂದಿದೆ. ಹಾಗೆ ಇದು ಕಡಿಮೆ ಕ್ಯಾಲೋರಿ ಹೊಂದಿರುವ ಕಾರಣ ತೂಕ ಹೆಚ್ಚಳವಾಗುವ ಯಾವುದೇ ಅಪಾಯವು ಇರುವುದಿಲ್ಲ.
ಬೂದು ಕುಂಬಳ ಜ್ಯೂಸ್ ಮಾಡುವುದು ಹೇಗೆ?
ಬೂದು ಕುಂಬಳವನ್ನು ಸಣ್ಣದಾಗಿ ಹೆಚ್ಚಿಕೊಂಡು ನಂತರ ಒಂದು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಜ್ಯೂಸ್ ಅನ್ನು ಜರಡಿ ಹಿಡಿದುಕೊಂಡು ಒಂದು ಗ್ಲಾಸ್‌ಗೆ ಹಾಕಿಕೊಳ್ಳಿ. ತದನಂತರ ಅದಕ್ಕೆ ಅರ್ಧ ನಿಂಬೆ, ರುಚಿಗೆ ತಕ್ಕಷ್ಟು ಉಪ್ಪು, ಪುದಿನ ಎಲೆಯನ್ನು ಹಾಕಿ ಸವಿಯಲು ನೀಡಿದರೆ ಆಯಿತು. ಇದನ್ನು ಬೆಳಗ್ಗೆ ತಿಂಡಿ ತಿಂದ ಬಳಿಕ ಕುಡಿಯುವುದು ಉತ್ತಮವಂತೆ. ಹಾಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಕೂಡ ಉತ್ತಮ ಅಭ್ಯಾಸ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications