Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹೀಗಾದಾಗ ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೂ ಗರ್ಭಧಾರಣೆಯ ಸಾಧ್ಯತೆ ಇದೆ!
ಬೇಡದ ಗರ್ಭಧಾರಣೆ ತಡಗಟ್ಟುವಲ್ಲಿ ಗರ್ಭನಿರೋಧಕ ಮಾತ್ರೆಗಳು ತುಂಬಾನೇ ಮಹತ್ವದ ಪಾತ್ರವಹಿಸುತ್ತದೆ. ಗರ್ಭಿಣಿಯಾದ ಮೇಲೆ ಗರ್ಭಪಾತ ಅಂತ ಕಷ್ಟಪಡುವ ಬದಲಿಗೆ ಗರ್ಭನಿರೋಧ ಮಾತ್ರೆಗಳನ್ನು ತೆಗೆದುಕೊಂಡು ಬೇಡದ ಗರ್ಭವನ್ನು ತಡೆಗಟ್ಟುವುದು ಸೂಕ್ತ ವಿಧಾನವಾಗಿದೆ. ಬೇಡದ ಗರ್ಭಧಾರಣೆ ತಡೆಗಟ್ಟಲು ಅನೇಕ ವಿಧಾನಗಳಿವೆ, ಅದರಲ್ಲೊಂದು ಗರ್ಭನಿರೋಧ ಮಾತ್ರೆಗಳನ್ನು ತೆಗೆದುಕೊಳ್ಳುವುದು.
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡರೂ ಕೆಲವೊಮ್ಮೆ ಗರ್ಭಧಾರಣೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ, ಕೆಲವೊಂದು ಸಂದರ್ಭದಲ್ಲಿ ಈ ಗರ್ಭನಿರೋಧಕಗಳು ಹೆಚ್ಚಿನ ಪರಿಣಾಮ ಬೀರುವುದಿಲ್ಲ, ಗರ್ಭನಿಂತು ಬಿಡುತ್ತದೆ. ಆದ್ದರಿಂದ ಗರ್ಭನಿರೋಧಕ ಮಾತ್ರೆ ಗರ್ಭಧಾರಣೆ ತಡೆಗಟ್ಟುವಲ್ಲಿ ಶೇ. 100ರಷ್ಟು ಪರಿಣಾಮಕಾರಿಯಲ್ಲ, ಶೇ. 9ರಷ್ಟು ಗರ್ಭಧಾರಣೆಯಾಗುವ ಸಾಧ್ಯತೆ ಇದೆ. ಯಾವಾಗ ಈ ಗರ್ಭನಿರೋಧಕ ಮಾತ್ರೆಗಳು ಫೈಲ್ಯೂರ್ ಆಗುತ್ತದೆ ಎಂದು ಹೇಳುವುದಾದರೆ...

ಕೆಲವು ತಪ್ಪುಗಳಿಂದ
ಗರ್ಭನಿರೋಧಕ ಮಾತ್ರೆಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಕೆಲವೊಂದು ಗರ್ಭನಿರೋಧಕ ಮಾತ್ರೆಗಳನ್ನು ಪ್ರತಿದಿನ ತೆಗೆದುಕೊಳ್ಳಬೇಕು. ಆದ್ರೆ ಮಾತ್ರ ಹಾರ್ಮೋನ್‌ಗಳನ್ನು ನಿಯಂತ್ರಿಸಿ ಗರ್ಭಧಾರಣೆಯಾಗುವುದನ್ನು ತಡೆಗಟ್ಟುತ್ತದೆ. ನೀವು ಮಾತ್ರೆ ತೆಗೆದುಕೊಳ್ಳಲು ಒಂದು ದಿನ ಮಿಸ್ ಮಾಡಿದ್ರೂ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಗರ್ಭನಿರೋಧಕ ಮಾತ್ರೆಗಳನ್ನು ನೀವು ಪ್ರತಿದಿನ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು.
ಮಾತ್ರೆಗಳನ್ನು ಸರಿಯಾಗಿ ಸ್ಟೋರ್ ಮಾಡಿ ಇಡದಿದ್ದರೆ
ಎಷ್ಟೋ ಜನರು ಗರ್ಭನಿರೋಧಕ ಮಾತ್ರೆಗಳನ್ನು ಸರಿಯಾದ ರೀತಿ ಸ್ಟೋರ್ ಮಾಡಿ ಇಡುವುದಿಲ್ಲ. ಗರ್ಭನಿರೋಧಕ ಮಾತ್ರೆಗಳನ್ನು ಒಣ ಜಾಗದಲ್ಲಿ, ರೂಂನ ಉಷ್ಣತೆಯಲ್ಲಿ ಇಡಬೇಕು. ತುಂಬಾ ಉಷ್ಣಾಂಶ ಅಥವಾ ಉಷ್ಣಾಂಶದಲ್ಲಿ ಆಗಾಗ ಬದಲಾವಣೆಯಾಗುತ್ತಿದ್ದರೆ ಮಾತ್ರೆಯ ಪರಿಣಾಮ ಕಡಿಮೆಯಾಗುವುದು. ಈ ಮಾತ್ರೆಗಳನ್ನು ನಿಮ್ಮ ಕಾರಿನಲ್ಲಿ ಇಡಬೇಡಿ.
ಇತರ ಔಷಧಗಳು
ಇತರ ಔಷಧಗಳು ಗರ್ಭನಿರೋಧಕ ಮಾತ್ರೆಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ.
* ಕೆಲವೊಂದು antibiotics
* ಏಡ್ಸ್ ಔಷಧಗಳು
* ಖಿನ್ನತೆಗೆ ಮಾತ್ರೆ
* ಕೆಲವೊಂದು ಹರ್ಬಲ್ ಔಷಧಗಳು
* ಮೈಗ್ರೇನ್ ಔಷಧ
ಆದ್ದರಿಂದ ಯಾವುದಾದರೂ ಔಷಧ ತೆಗೆದುಕೊಳ್ಳುತ್ತಿದ್ದರೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ವೈದ್ಯರ ಸಲಹೆ ಪಡೆಯಿರಿ.
ಗರ್ಭ ನಿರೋಧಕ ಮಾತ್ರೆ ತೆಗೆದುಕೊಂಡು 48 ಗಂಟೆ ಕಳೆದಿದ್ದರೆ ಗರ್ಭನಿಲ್ಲುವ ಸಾಧ್ಯತೆ ಇದೆ.
ಕೆಲವೊಂದು ಅನಾರೋಗ್ಯಕರ ಸಮಸ್ಯೆ
ಯಾವುದಾದರೂ ಸಮಸ್ಯೆಯಿದ್ದರೆ ಅಥವಾ ಏನಾದರೂ ಗಂಭೀರ ಸಮಸ್ಯೆಯಿದ್ದರೆ ಆವಾಗ ಈ ಗರ್ಭನಿರೋಧಕ ಮಾತ್ರೆಗಳು ಪರಿಣಾಮ ಬೀರುವುದಿಲ್ಲ. ಗರ್ಭನಿರೋಧಕ ಮಾತ್ರೆ ತೆಗೆದುಕೊಂಡು 2 ಗಂಟೆಯ ಒಳಗಡೆ ವಾಂತಿ ಮಾಡಿದ್ದರೆ ಆವಾಗ ಮಾತ್ರೆ ಪರಿಣಾಮ ಬೀರುವುದಿಲ್ಲ. ಮಾತ್ರೆ ತೆಗೆದುಕೊಂಡ ಮೇಲೆ ಬೇಧಿಯಾಗಿದ್ದರೆ ಆವಾಗ ಕೂಡ ಮಾತ್ರೆ ಪರಿಣಾಮ ಬೀರುವುದಿಲ್ಲ.
ಒಬೆಸಿಟಿ
ಅತ್ಯಧಿಕ ಮೈ ತೂಕ ಹೊಂದಿದ್ದರೆ ಗರ್ಭನಿರೋಧಕ ಮಾತ್ರೆಗಳು ಪರಿಣಾಮ ಬೀರದಿರುವ ಸಾಧ್ಯತೆ ಇದೆ. ಚಯಪಚಯ ಕ್ರಿಯೆ ಅತ್ಯಧಿಕವಿದ್ದರೆ ಅಥವಾ ಅತ್ಯಧಿಕ ಮೈ ತೂಕ ಹೊಂದಿದ್ದರೆ ಗರ್ಭನಿರೋಧಕ ಮಾತ್ರೆ ಹೇಗೆ ತೆಗೆದುಕೊಳ್ಳಬೇಕೆಂದು ವೈದ್ಯರಲ್ಲಿ ಸಲಹೆ ಪಡೆಯುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
