Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕೇರಳದಲ್ಲಿ ವೆಸ್ಟ್ ನೈಲ್ ವೈರಸ್ ಪತ್ತೆ..! ಸೊಳ್ಳೆಗಳಿಂದ ಹರಡುತ್ತಿದೆ ವಿದೇಶಿ ಕಾಯಿಲೆ
ಇತ್ತೀಚಿಗೆ ನಾವು ವೈರಲ್ ಸೋಂಕಿನಿಂದ ಹರಡುವ ರೋಗಗಳು ಹೆಚ್ಚಾಗಿರುವುದನ್ನು ನಾವು ನೋಡಬಹುದು. ಈಗ ಹೊಸದೊಂದು ಸೋಂಕು ಸೊಳ್ಳೆಯಿಂದ ಹರಡುತ್ತಿರುವುದು ನಾವು ನೋಡಬಹುದು. ಈಗ ಕೇರಳ ಸರ್ಕಾರ ಪಶ್ಚಿಮ ನೈಲ್ ಜ್ವರದ ಪ್ರಕರಣಗಳು ರಾಜ್ಯದ ಮೂರು ಜಿಲ್ಲೆಗಳಲ್ಲಿ ವರದಿಯಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿದೆ.
ತ್ರಿಶೂರ್, ಮಲಪ್ಪುರಂ ಮತ್ತು ಕೋಯಿಕ್ಕೋಡ್‌ನಲ್ಲಿ, ಒಬ್ಬ ವ್ಯಕ್ತಿ ವೈರಲ್ ಕಾಯಿಲೆಯಿಂದ ಸಾವನ್ನಪ್ಪಿದ್ದು, ಇತ್ತೀಚಿನ ದಿನಗಳಲ್ಲಿ ಆರು ಪ್ರಕರಣಗಳು ವರದಿಯಾಗಿವೆ. ಈ ವೈರಸ್ ಸೊಳ್ಳೆಯಿಂದ ಹರಡುತ್ತಿರುವುದು ಪತ್ತೆಯಾಗಿದ್ದು, ಸುರಕ್ಷಿತವಾಗರಲು ಸೂಚಿಸಲಾಗಿದೆ.

ಆರೋಗ್ಯ ಇಲಾಖೆಯ ಪ್ರಕಾರ, ವೆಸ್ಟ್ ನೈಲ್ ವೈರಸ್ ಮಾನವರಲ್ಲಿ ಮಾರಣಾಂತಿಕ ನರವೈಜ್ಞಾನಿಕ ಕಾಯಿಲೆಗೆ ಕಾರಣವಾಗಬಹುದು. ಈ ಸೋಂಕಿಗೆ ಒಳಗಾದವರಿಗೆ ರೋಗದ ಲಕ್ಷಣಗಳೇ ಕಾಣಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ಸುಮಾರು 80ರಷ್ಟು ಮಂದಿಗೆ ಈ ರೋಗದ ಲಕ್ಷಣಗಳೇ ಕಾಣಿಸುವುದಿಲ್ಲ ಎಂದು ತಿಳಿದುಬಂದಿದೆ.
ವೆಸ್ಟ್ ನೈಲ್ ವೈರಸ್ ಅಂದರೆ ಏನು?
ವೆಸ್ಟ್ ನೈಲ್ ವೈರಸ್ (WNV) ಸೊಳ್ಳೆಯಿಂದ ಹರಡುವ ಏಕ-ತಂತು ಆರ್‌ಎನ್‌ಎ ವೈರಸ್ ಆಗಿದೆ. ಇದು ಫ್ಲೇವಿವೈರಸ್ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಹಳದಿ ಜ್ವರವನ್ನು ಉಂಟುಮಾಡುವ ವೈರಸ್‌ಗಳಿಗೆ ಇದು ಸಂಬಂಧಿಸಿದೆ ಎಂದು ತಿಳಿದುಬಂದಿದೆ.
ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಈ ಸೋಮಕು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇವು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡಬಹುದು. ಇಲ್ಲವೆ ನೇರವಾಗಿ ಸೊಳ್ಳೆಗಳೇ ಕಚ್ಚುವುದರಿಂದಲೂ ಹರಡಬಹುದು.
ಇದು ರಕ್ತ ವರ್ಗಾವಣೆಯ ಮೂಲಕ, ಸೋಂಕಿತ ತಾಯಿಯಿಂದ ಅವಳ ಮಗುವಿಗೆ ಅಥವಾ ಪ್ರಯೋಗಾಲಯಗಳಲ್ಲಿ ವೈರಸ್‌ಗೆ ಒಡ್ಡಿಕೊಳ್ಳುವುದರ ಮೂಲಕ ಹರಡಬಹುದು. ಇದು ಸೋಂಕಿತ ಮನುಷ್ಯರು ಅಥವಾ ಪ್ರಾಣಿಗಳ ಸಂಪರ್ಕದಿಂದ ಹರಡುತ್ತದೆ ಎಂಬುದು ನಿಖರವಾಗಿ ತಿಳಿದಿಬಂದಿಲ್ಲ.
ಈ ಜ್ವರದ ಲಕ್ಷಣಗಳೇನು?
ಶೇ. 80ರಷ್ಟು ಸೋಂಕಿತರಿಗೆ ರೋಗವು ಲಕ್ಷಣರಹಿತವಾಗಿರುತ್ತದೆ. ಆದರೆ ಉಳಿದವರಲ್ಲಿ ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳನ್ನು ನೋಡಬಹುದು. ಈ ಜ್ವರಕ್ಕೆ ಒಳಗಾದ 150 ಮಂದಿಯಲ್ಲಿ ಒಬ್ಬರು ತೀವ್ರ ರೂಪದ ಸಮಸ್ಯೆಗೆ ಒಳಗಾಗುತ್ತಾರೆ. ತೀವ್ರ ಜ್ವರ, ಮೇಲೆ ಏಳಲು ಆಗದೇ ಇರುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಜ್ವರ ವಾರಗಳ ವರೆಗೆ ಕಾಡಿದರೆ ನರಮಂಡಲಕ್ಕೂ ಹಾನಿಯಾಗುವ ಸಂಭವವಿರುತ್ತದೆ.
ಈ ರೋಗವು ವಯಸ್ಸಿನ ಆಧಾರದ ಮೇಲೆ ಅದರ ಪರಿಣಾಮ ಅಳೆಯಬಹುದಾಗಿದೆ. ರೋಗವು ಎಷ್ಟು ಪರಿಣಾಮಕಾರಿ ಎನ್ನುವುದು ವ್ಯಕ್ತಿಯ ಆರೋಗ್ಯದ ಮೇಲೆ ಅಳೆಯಬಹುದ. ಒಬ್ಬ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೆ ಅಥವಾ ಮೊದಲೇ ಆತ ಜ್ವರ, ಶೀತದಂತಹ ಕಾಯಿಲೆಗೆ ಒಳಗಾಗಿದ್ದರೆ ಈ ಸೋಂಕು ಮತ್ತಷ್ಟು ಅಪಾಯಕರಿಯಾಗಬಹುದು.
ಈ ಜ್ವರಕ್ಕೆ ಚಿಕಿತ್ಸೆ ಏನು?
ಈ ಜ್ವರಕ್ಕೆ ಸದ್ಯದ ಮಟ್ಟಿಗೆ ಯಾವುದೇ ನಿರ್ಧಿಷ್ಟ ಚಿಕಿತ್ಸೆ ಇಲ್ಲ, ಸಾಮಾನ್ಯ ಜ್ವರಕ್ಕೆ ನೀಡುವ ಔಷಧಿಯನ್ನೇ ಇದಕ್ಕೂ ಬಳಸಲಾಗುತ್ತಿದೆ. ಆದರೆ ಈ ಕಾಯಿಲೆ ಬಂದ ಮೇಲೆ ಪರದಾಡುವ ಬದಲು ಎಚ್ಚರಿಕೆ ವಹಿಸುವುದು ಉತ್ತಮ ಎನ್ನಲಾಗಿದೆ.
ಸಾರ್ವಜನಿಕ ಆರೋಗ್ಯ ಇಲಾಖೆಗಳು ಲಾರ್ವಾ ಮೂಲ ಕಡಿತವನ್ನು ಖಚಿತಪಡಿಸಿಕೊಳ್ಳುವುದು, ವಿಶೇಷವಾಗಿ ಸೊಳ್ಳೆ ವಾಹಕಗಳ ಸಂತಾನೋತ್ಪತ್ತಿ ಸ್ಥಳಗಳ ನಾಶ ಮಾಡುವುದು ಸೇರಿ ಸೊಳ್ಳೆ ಕಡಿತದಿಂದ ಪಾರಾಗವುದು ಉತ್ತಮ.
ಇದನ್ನು ವೆಸ್ಟ್ ನೈಲ್ ವೈರಸ್ ಎಂದು ಏಕೆ ಕರೆಯುತ್ತಾರೆ?
1937 ರಲ್ಲಿ ಉಗಾಂಡಾದ ವೆಸ್ಟ್ ನೈಲ್ ಜಿಲ್ಲೆಯ ಮಹಿಳೆಯಲ್ಲಿ ಈ ವೈರಸ್ ಅನ್ನು ಮೊಟ್ಟ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು. ಬಳಿಕ 1953 ರಲ್ಲಿ ನೈಲ್ ಡೆಲ್ಟಾ ಪ್ರದೇಶದಲ್ಲಿ ಪಕ್ಷಿಗಳಲ್ಲಿ (ಕಾಗೆಗಳು ಮತ್ತು ಪಾರಿವಾಳಗಳು) ಈ ಸೋಂಕು ಪತ್ತೆಯಾಗಿತ್ತು.
ಬಳಿಕ 1999 ರಲ್ಲಿ, ಇಸ್ರೇಲ್ ಮತ್ತು ಟ್ಯುನೀಷಿಯಾದಲ್ಲಿ ಒಂದು ಡಬ್ಲ್ಯುಎಂವಿ ಸ್ಟ್ರೈನ್, ನ್ಯೂಯಾರ್ಕ್ ತಲುಪಿತು ಮತ್ತು ಅಮೆರಿಕದೊಳಗೆ ಇದು ಪ್ರವೇಶ ಪಡೆಯಿತು. ಈಗ ಭಾರತದಲ್ಲೂ ಕಾಣಿಸಿಕೊಂಡಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











