Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ದೇಶದಲ್ಲಿ ವೆಸ್ಟ್ ನೈಲ್ ವೈರಸ್ ಪ್ರಕರಣ ಹೆಚ್ಚಳ! ಡೆಂಘಿ ಜೊತೆಗೆ ಮತ್ತೊಂದು ಮಹಾಮಾರಿ!
ರಾಜ್ಯದಲ್ಲಿ ಡೆಂಘಿ ಜ್ವರದ ಹಾವಳಿ ಹೆಚ್ಚಾಗುತ್ತಿದೆ. ಅಲ್ಲದೆ ಸೊಳ್ಳೆಗಳಿಂದ ಹರಡುವ ವೈರಲ್ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಮಳೆಗಾಲದಲ್ಲಿ ಉಂಟಾಗುತ್ತಿದ್ದ ಅಪಾಯ ಮತ್ತಷ್ಟು ಹೆಚ್ಚಾಗಿದೆ. ಈಗ ವೆಸ್ಟ್ ನೈಲ್ ವೈರಸ್ ಸಹ ದೇಶದಲ್ಲಿ ಹರಡಲು ಆರಂಭಿಸಿದ್ದು, ಹೊಸ ತಲೆನೋವಿಗೆ ಕಾರಣವಾಗಿದೆ.
ಈ ವೈರಸ್ ಪ್ರಾಥಮಿಕವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುವ ವೈರಲ್ ಸೋಂಕು ಆದರೆ ಸೋಂಕಿತ ಸೊಳ್ಳೆಗಳ ಕಡಿತದ ಮೂಲಕ ಮನುಷ್ಯರಿಗೆ ಹರಡಬಹುದು. ಉಗಾಂಡಾದ ಪಶ್ಚಿಮ ನೈಲ್ ಪ್ರದೇಶದ ನಂತರ ಇದನ್ನು ಹೆಸರಿಸಲಾಗಿದೆ, ಅಲ್ಲಿ ಇದನ್ನು ಮೊದಲು 1937 ರಲ್ಲಿ ಈ ವೈರಸ್ ಅನ್ನು ಗುರುತಿಸಲಾಗಿದೆ.

ಆದರೆ ಈಗ ಭಾರತದಲ್ಲೂ ಈ ವೆಸ್ಟ್ ನೈಲ್ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಈ ಮೊದಲು ಕೇರಳದಲ್ಲಿ ಮೊದಲ ಬಾರಿಗೆ ಈ ವೆಸ್ಟ್ ನೈಲ್ ವೈರಲ್ ಪತ್ತೆಯಾಗಿತ್ತು. ಇದಾದ ಬಳಿಕ ದೇಶದ ಕೆಲವ ಭಾಗದಲ್ಲಿ ಈ ವೈರಸ್ ಪ್ರಕರಣಗಳು ವರದಿಯಾಗಿದೆ. ಈ ವೈರಸ್ ಸಹ ಸೊಳ್ಳೆಗಳಿಂದಲೇ ಹರಡುತ್ತದೆ.
ಇತ್ತೀಚಿಗೆ ಕೇರಳದ ತ್ರಿಶೂರ್, ಮಲಪ್ಪುರಂ ಮತ್ತು ಕೋಯಿಕ್ಕೋಡ್‌ನಲ್ಲಿ, ಒಬ್ಬ ವ್ಯಕ್ತಿ ವೈರಲ್ ಕಾಯಿಲೆಯಿಂದ ಸಾವನ್ನಪ್ಪಿದ್ದ. ಆರೋಗ್ಯ ಇಲಾಖೆಯ ಪ್ರಕಾರ, ವೆಸ್ಟ್ ನೈಲ್ ವೈರಸ್ ಮಾನವರಲ್ಲಿ ಮಾರಣಾಂತಿಕ ನರವೈಜ್ಞಾನಿಕ ಕಾಯಿಲೆಗೆ ಕಾರಣವಾಗಬಹುದು. ಈ ಸೋಂಕಿಗೆ ಒಳಗಾದವರಿಗೆ ರೋಗದ ಲಕ್ಷಣಗಳೇ ಕಾಣಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ಸುಮಾರು 80ರಷ್ಟು ಮಂದಿಗೆ ಈ ರೋಗದ ಲಕ್ಷಣಗಳೇ ಗೋಚರವಾಗುವುದಿಲ್ಲ ಎಂದು ತಿಳಿದುಬಂದಿದೆ.
ಈ ಸೋಂಕಿಗೆ ಒಳಗಾದ ಹೆಚ್ಚಿನ ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಸುಮಾರು ಶೇ.20 ರಷ್ಟು ಜ್ವರ, ತಲೆನೋವು, ದೇಹ ನೋವು, ಕೀಲು ನೋವು, ವಾಂತಿ, ಅತಿಸಾರ, ಅಥವಾ ದದ್ದುಗಳಂತಹ ಜ್ವರ ತರಹದ ಲಕ್ಷಣಗಳನ್ನು ಹೊಂದಿರಬಹುದು.
ವೆಸ್ಟ್ ನೈಲ್ ವೈರಸ್ ಎಂದು ಹೆಸರು ಏಕೆ ಬಂತು?
1937 ರಲ್ಲಿ ಉಗಾಂಡಾದ ವೆಸ್ಟ್ ನೈಲ್ ಜಿಲ್ಲೆಯ ಮಹಿಳೆಯಲ್ಲಿ ಈ ವೈರಸ್ ಅನ್ನು ಮೊಟ್ಟ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು. ಬಳಿಕ 1953 ರಲ್ಲಿ ನೈಲ್ ಡೆಲ್ಟಾ ಪ್ರದೇಶದಲ್ಲಿ ಪಕ್ಷಿಗಳಲ್ಲಿ ಈ ಸೋಂಕು ಪತ್ತೆಯಾಗಿತ್ತು.
ಬಳಿಕ 1999 ರಲ್ಲಿ, ಇಸ್ರೇಲ್ ಮತ್ತು ಟ್ಯುನೀಷಿಯಾದಲ್ಲಿ ಒಂದು ಡಬ್ಲ್ಯುಎಂವಿ ಸ್ಟ್ರೈನ್, ನ್ಯೂಯಾರ್ಕ್ ತಲುಪಿತು ಮತ್ತು ಅಮೆರಿಕದೊಳಗೆ ಇದು ಪ್ರವೇಶ ಪಡೆಯಿತು. ಈಗ ಭಾರತದಲ್ಲೂ ಕಾಣಿಸಿಕೊಂಡಿದೆ.
ವೆಸ್ಟ್ ನೈಲ್ ವೈರಲ್ ಹರಡುವುದು ತಡೆಯುವುದು ಹೇಗೆ?
ನಿಂತ ನೀರನ್ನು ಬಗೆಹರಿಸಿ
ಸೊಳ್ಳೆಗಳ ಉತ್ಪತ್ತಿ ಸ್ಥಳವಾದ ನಿಂತ ನೀರನ್ನು ನಿಮ್ಮ ಮನೆ, ಆಫೀಸ್ ಅಥವಾ ಯಾವುದೇ ಜಾಗದಲ್ಲಿ ನೋಡಿದರೂ ಅದನ್ನು ತೆಗೆಯಿಸಿ, ನೀರನ ಕೊಂಡ, ಪಾಟ್‌ಗಳು, ಟೈರ್, ಬಟ್ಟಲು, ಒಡೆದ ಬಾಟಲಿ ಸೇರಿ ಯಾವುದೇ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
ಸೊಳ್ಳೆ ನಾಶಕ/ ಪರದೆ ಬಳಸಿ
ಸೊಳ್ಳೆಗಳು ಕಚ್ಚುವುದರಿಂದ ತಪ್ಪಿಸಿಕೊಂಡರೆ ಈ ವೈರಸ್ ಹರಡದಂತೆ ತಡೆಯಬಹುದು. ಹೀಗಾಗಿ ಮನೆಯಲ್ಲಿ ಸೊಳ್ಳೆ ನಾಶಕಗಳು, ಸೊಳ್ಳೆ ಪರದೆ ಬಳಸಿ ಸೊಳ್ಳೆ ಕಚ್ಚುವುದರಿಂದ ಆದಷ್ಟು ದೂರವಿರಿ.
ಕಿಟಕಿ ಬಾಗಿಲು ಮುಚ್ಚಿ, ಮೈತುಂಬ ಬಟ್ಟೆ ಧರಿಸಿ
ಮನೆಯಲ್ಲಿ ಸಂಜೆಯಾಗುವಾಗಲೇ ಕಿಟಕಿ ಬಾಗಿಲು ಮುಚ್ಚಲು ಮುಂದಾಗಿ. ಅಲ್ಲದೆ ಮನೆಯೊಳಗೆ ಹಾಗೂ ಹೊರಗೆ ಇದ್ದಾಗ ಮೈ ತುಂಬ ಬಟ್ಟೆ ಧರಿಸುವುದನ್ನು ರೂಢಿಸಿಕೊಳ್ಳಿ.
ಮನೆಯಿಂದ ಹೊರಹೋಗುವಾಗ ಎಚ್ಚರಿಕೆ ವಹಿಸುವುದು
ಮನೆಯಿಂದ ಹೊರ ಹೋಗುವ ಅನಿವಾರ್ಯತೆ ಎದುರಾದರೆ ಮೈಗೆ ಸೊಳ್ಳೆ ಪ್ರತಿಬಂಧಕಗಳ ಬಳಸುವುದು. ಮೈ ತುಂಬ ಬಟ್ಟೆ ಧರಿಸುವುದು ಒಳಿತು. ಅಲ್ಲದೆ ಸಂಜೆಯ ವೇಳೆ ಮನೆಯಿಂದ ಹೊರ ಹೋಗದಿರುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











