Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಗೊತ್ತಿಲ್ಲದೆಯೇ ಮೂತ್ರ ಹೋಗುತ್ತಿದೆಯೇ? ಬ್ಲೇಡರ್ ಸಮಸ್ಯೆವಿರಬಹುದೇ?
ಎಂದಾದರೂ ನಿಮ್ಮ ಕಂಟ್ರೋಲ್ ಮೀರಿ ಸ್ವಲ್ಪ ಮೂತ್ರ ಚಡ್ಡಿಯಲ್ಲಿಯೇ ಹೋಗಿದೆಯೇ? ಈ ರೀತಿಯಾದಾಗ ಬೇರೆಯವರ ಜೊತೆ ಹೇಳಿಕೊಳ್ಳಲು ಹಿಂಜರಿಕೆಯಾಗುವುದು, ಪ್ಯಾಂಟ್‌ನಲ್ಲಿಯೇ ಮೂತ್ರ ಹೋಯ್ತು ಎಂದು ಹೇಳಿದರೆ ನಮ್ಮನ್ನು ವಿಚಿತ್ರವಾಗಿ ನೋಡಬಹುದು.
ಈ ಕಾರಣದಿಂದಾಗಿ ನಮ್ಮ ನಿಯಂತ್ರ ಮೀರಿ ಮೂತ್ರ ವಿಸರ್ಜೆನೆಯಾಗುತ್ತಿದೆ ಎಂದು ಹೇಳಲು ಹಿಂದೇಟು ಹಾಕುತ್ತೇವೆ.
ಆದರೆ ನೀವು ಅಂಜಿಕೆ ಬಿಟ್ಟು ಈ ವಿಷಯವನ್ನು ಮೊದಲು ವೈದ್ಯರ ಬಳಿ ಹೇಳ ಬೇಕಾಗಿದೆ, ಏಕೆಂದರೆ ಬ್ಲೇಡರ್ ಸಮಸ್ಯೆಯ ಲಕ್ಷಣವಿರಬಹುದು. ಬ್ಲೇಡರ್ ಸಮಸ್ಯೆಯಿದ್ದಾಗ, ಸೀನಿದಾಗ, ಕೆಮ್ಮಿದಾಗ ಅಷ್ಟೇ ಏಕೆ ಜೋರಾಗಿ ನಕ್ಕಾಗ ಕೂಡ ಸ್ವಲ್ಪ ಮೂತ್ರ ಹೋಗುವುದು.
ಈ ರೀತಿಯಾಗುತ್ತಿದ್ದರೆ ಕೆಲವೊಮ್ಮೆ ಕೆಲ ಸೋಂಕಿನಿಂದಾಗಿ ಉಂಟಾಗಿರಬಹುದು, ಇಲ್ಲದಿದ್ರೆ ಓವರ್ ಆ್ಯಕ್ಟಿವ್ ಬ್ಲೇಡರ್‌ನಿಂದಾಗಿ ಕೂಡ ಉಂಟಾಗಿರಬಹುದು.

ಸಂಕೋಚ ಬೇಡ
ಮೂತ್ರ ವಿಸರ್ಜನೆ ನಿಮ್ಮ ನಿಯಂತ್ರಣ ಮೀರಿ ಹೋದಾಗ ತುಂಬಾನೇ ಮುಜುಗರವಾಗುವುದು. ಚಡ್ಡಿಯಲ್ಲೇ ಮೂತ್ರ ಹೋಗುತ್ತಿದೆ ಎಂದು ಹೇಳಲು ಸಂಕೋಚವಾಗುವುದು, ಆದರೆ ವೈದ್ಯರ ಬಳಿ ಸಂಕೋಚ ಬೇಡ, ನೀವು ಹೇಳಿದರೆ ಮಾತ್ರ ಅವರಿಗೆ ನಿಮಗಿರುವ ಸಮಸ್ಯೆಯ ಅರಿವಾಗಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುವುದು.

ಈ ಕೆಳಗಿನ ಸಮಸ್ಯೆ ಇದ್ದಾಗ ಮೂತ್ರವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗಲ್ಲ
* ಅತ್ಯಧಿಕ ಮಾನಸಿಕ ಒತ್ತಡ
* ಮೂತ್ರ ಸೋಂಕು
* ಓವರ್ ಆ್ಯಕ್ಟಿವ್ ಬ್ಲೇಡರ್
*PBS (ಇದು ಕೂಡ ಬ್ಲೇಡರ್ ಸಮಸ್ಯೆಯಾಗಿದ್ದು ಇದನ್ನು ವೈದ್ಯಕೀಯ ಭಾಷೆಯಲ್ಲಿ Painful Bladder Syndrome ಎಂದು ಕರೆಯಲಾಗುವುದು)
* ಬ್ಲೇಡರ್‌ನಲ್ಲಿ ಕಾರಣವಿಲ್ಲದೆ ಉರಿಯೂತದ ಸಮಸ್ಯೆ
ವಯಸ್ಸಾಗುತ್ತಿದ್ದಂತೆ ಸಹಜ ಅಂತ ನಿರ್ಲಕ್ಷ್ಯ ಮಾಡಬೇಡಿ
ಕೆಲವರು ಈ ರೀತಿಯ ಸಮಸ್ಯೆಯಾಗುತ್ತಿದ್ದರೂ ವಯಸ್ಸಾಗುತ್ತಿರುವುದರಿಂದ ಈ ರೀತಿಯಾಗುತ್ತಿರಬಹುದು ಎಂದು ಭಾವಿಸಿ ಯಾರ ಬಳಿ ಹೇಳಿಕೊಳ್ಳುವುದಿಲ್ಲ. ಆದರೆ ಇದು ವಯಸ್ಸಾಗುತ್ತೊರುವುದರಿಂದ ಬರುವ ಸಮಸ್ಯೆಯಲ್ಲ ಬದಲಿಗೆ ಬ್ಲೇಡರ್, ಮೂತ್ರಸೋಂಕು ಈ ರೀತಿಯಿದ್ದಾಗ ಮಾತ್ರ ಈ ರೀತಿ ಉಂಟಾಗುವುದು.

ಬ್ಲೇಡರ್ ಸಮಸ್ಯೆಯ ಲಕ್ಷಣಗಳೇನು?
* ಇದ್ದಕ್ಕಿದ್ದಂತೆ ಮೂತ್ರವುಸರ್ಜನೆ ಹೋಗಬೇಕೆನಿಸುವುದು
* ಮೂತ್ರ ನಿಯಂತ್ರಣ ಮಾಡಲು ಸಾಧ್ಯವಾಗದೇ ಇರುವುಉದ
* ದಿನದಲ್ಲಿ 8 ಬಾರಿಗಿಂತಲೂ ಅಧಿಕ ಸಲ ಮೂತ್ರ ವಿಸರ್ಜನೆಗೆ ಹೋಗುವುದು
* ರಾತ್ರಿಯಲ್ಲಿ 2-3 ಬಾರಿ ಮೂತ್ರ ವಿಸರ್ಜನಗೆ ಹೋಗುವುದು.

ಈ ಕಾರಣಗಳಿಂದಲೂ ಓವರ್ ಆ್ಯಕ್ಟಿವ್ ಬ್ಲೇಡರ್ ಸಮಸ್ಯೆ ಕಂಡು ಬರಬಹುದು
* ಕೆಲವೊಂದು ಔಷಧಗಳು
* ಅತ್ಯಧಿಕ ಮದ್ಯಪಾನ ಅಥವಾ ಕಾಫಿ ಸೇವನೆ
* ನಡೆದಾಡಲು ಕಷ್ಟವಾದಾಗ
* ಮೂತ್ರ ವಿಸರ್ಜನೆಗೆ ಹೋದಾಗ ಸಂಪೂರ್ಣವಾಗಿ ಮೂತ್ರ ವಿಸರ್ಜನೆ ಮಾಡದೆ ಅರ್ಜೆಂಟ್-ಅರ್ಜೆಂಟ್ ಮಾಡಿ ಬರುವುದು.
ಓವರ್ ಆ್ಯಕ್ಟಿವ್ ಬ್ಲೇಡರ್‌ನಿಂದ ಉಂಟಾಗುವ ತೊಂದರೆಗಳೇನು?
* ಖಿನ್ನತೆ
* ಒತ್ತಡ
* ನಿದ್ದೆಗೆ ಭಂಗ ಉಂಟಾಗುವುದು
ನಿಮ್ಮ ನಿಯಂತ್ರವಿಲ್ಲದೆ ಮೂತ್ರ ಹೋಗುವುದಾದರೆ ಏನು ಮಾಡಬೇಕು?
* ಆಫೀಸ್‌ನಲ್ಲಿ ನಿಮ್ಮ ನಿಯಂತ್ರಣವಿಲ್ಲದೆ ಮೂತ್ರ ಹೋದರೆ ಅಪಹಾಸ್ಯಕ್ಕೆ ಗುರಿಯಾಗುತ್ತೀರಿ, ಅವರಿಗೆ ನಿಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಗೊತ್ತಿರುವುದಿಲ್ಲ, ಆದ್ದರಿಂದ ನಿಮ್ಮ ಬಟ್ಟೆ ಒದ್ದೆಯಾಗದಂತೆ ನೀವು ಎಚ್ಚರವಹಿಸಬೇಕು.

ಮೂತ್ರ ತುಂಬಾ ಬರುವವರೆಗೆ ಕಾಯಬೇಡಿ, ಆಗಾಗ ಮೂತ್ರ ವಿಸರ್ಜನೆ ಮಾಡಿ.
* ಒಂದು ವೇಳೆ ನಿಮ್ಮ ಬಟ್ಟೆ ಸ್ವಲ್ಪ ಒದ್ದೆಯಾದರೆ ನಿಮ್ಮ ಮುಖದಲ್ಲಿ ಗಾಬರಿ ಎದ್ದು ಕಾಣದಂತೆ ಎಚ್ಚರವಹಿಸಿ, ನೀವು ಗಾಬರಿಯಾದಾಗ ಎಲ್ಲರೂ ನಿಮ್ಮನ್ನು ಗಮನಿಸುತ್ತಾರೆ, ಇದರಿಂದ ನೀವು ಮುಜುಗರಕ್ಕೆ ಒಳಗಾಗುತ್ತೀರಿ, ಅದರ ಬದಲಿಗೆ ಕೂಡಲೇ ಅಲ್ಲಿಂದ ಟಾಯ್ಲೆಟ್ ಕಡೆ ಹೋಗಿ.
* ಇನ್ನು ನೀವು ಒಂದು ಸ್ಟೆಟರ್ ಅಥವಾ ಮಂಡಿಯವರೆಗೆ ಇರುವ ಓವರ್‌ಕೋಟ್ ನಿಮ್ಮ ಬಳಿ ಇಟ್ಟುಕೊಳ್ಳಿ, ಒಂದು ವೇಳೆ ನಿಮಗೆ ಗೊತ್ತಿಲ್ಲದೆಯೇ ಬಟ್ಟೆ ಒದ್ದೆಯಾದರೆ ಕೂಡಲೇ ಓವರ್ ಕೋಟ್ ಧರಿಸಿ, ನಂತರ ಟಾಯ್ಲೆಟ್‌ಗೆ ಹೋಗಿ ಯಾರಿಗೂ ಗೊತ್ತಾಗುವುದಿಲ್ಲ.
* ಜೋರಾಗಿ ನಗುವಾಗ, ಕೆಮ್ಮುವಾಗ, ಸೀನುವಾಗ ಮೂತ್ರ ಹೋಗುವುದರಿಂದ ಈ ಸಂದರ್ಭದಲ್ಲಿ ಎಚ್ಚರವಹಿಸಿ.
* ಬಟ್ಟೆಯಲ್ಲಿ ಮೂತ್ರವಾಗಿದ್ದರೆ ಟಾಯ್ಲೆಟ್‌ಗೆ ಹೋಗಿ ಬಟ್ಟೆಯ ಭಾಗವನ್ನು ನೀರಿಗೆ ಹಿಡಿದು, ನಂತರ ಹಿಂಡಿ, ಇಲ್ಲದಿದ್ದರೆ ಮೂತ್ರ ವಾಸನೆ ಬೀರುವುದು.



Click it and Unblock the Notifications