ಹವನ ಸಿಂಡ್ರೋಮ್‌ ಎಂದರೇನು? ಇದರ ಲಕ್ಷಣಗಳೇನು, ಇದು ಅಪಾಯಾರಿಯೇ?

ಈಗ ಹವನ ಸಿಂಡ್ರೋಮ್ ಎಂಬ ಕಾಯಿಲೆ ಬಗ್ಗೆ ತುಂಬಾ ಕೇಳಿ ಬರುತ್ತಿದೆ. ಇತ್ತೀಚೆಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಸಿಂಗಾಪುರ್‌ನಿಂದ ವಿಯಟ್ನಾಂಗೆ ಇರುವ ಟ್ರಿಪ್ ಹನೋಯಿನಲ್ಲಿ ಹವನ ಸಿಂಡ್ರೋಮ್ ಕಾರಣದಿಂದ ತಡವಾಯಿತು. ಮೂರು ತಾಸಿನ ಬಳಿಕ ಅವರು ಪ್ರಯಾಣಿಸಿರುವುದಾಗಿ ಅಸೋಸಿಯೇಟ್ ಪ್ರೆಸ್‌ ವರದಿ ಹೇಳಿದೆ.

ಏನಿದು ಹವನ ಸಿಂಡ್ರೋಮ್‌? ಇದು ಏಕೆ ಬರುತ್ತದೆ? ಇದು ಗಂಭೀರವಾದ ಕಾಯಿಲೆಯೇ? ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಹವನ ಸಿಂಡ್ರೋಮ್ ಎಂದರೇನು?

ಹವನ ಸಿಂಡ್ರೋಮ್ ಎಂದರೇನು?

ಈ ಹವನ ಸಿಂಡ್ರೋಮ್‌ ಮೊದಲಿಗೆ 20216ರಲ್ಲಿ ಯುಎಸ್‌ನ ಇಂಟೆಲಿಜೆನ್ಸಿ ಆಫೀಸರ್‌ಗಳಿಗೆ ಹಾಗೂ ರಾಯಭಾರಿ ಕಚೇರಿಯ ಸಿಬ್ಬಂದಿಗಳಲ್ಲಿ ಈ ಸಿಂಡ್ರೋಮ್ ಕಂಡು ಬಂದಿತ್ತು. ಜಗತ್ತಿನ ವಿವಿಧ ಭಾಗಗಳಲ್ಲಿರುವ ಅಮೆರಿಕ ರಾಯಬಾರಿ ಅಧಿಕಾರಿಗಳಲ್ಲಿ ಈ ರೀತಿಯ ಸಿಂಡ್ರೋಮ್ ಕಂಡು ಬಂದಿತ್ತು.

ಈ ಸಿಂಡ್ರೋಮ್‌ ಬರಲು ಕಾರಣವೇನು ಎಂದು ಅನೇಕ ಸಂಶೋಧನೆಗಳು ನಡೆಸಲಾಯಿತು. ಈ ರೀತಿಯ ಸಿಂಡ್ರೋಮ್‌ ಅತ್ಯಧಿಕ ಮಾನಸಿಕ ಒತ್ತಡ ಹಾಗೂ ಮೈಕ್ರೋವೇವ್‌ ಆಯುಧಗಳಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ನಿಖರ ಕಾರಣವೇನು ಎಂಬುವುದು ತಿಳಿದು ಬಂದಿಲ್ಲ. ತಲೆಗೆ ಪೆಟ್ಟಾದಾಗ ಉಂಟಾಗುವ ಲಕ್ಷಣಗಳು ಕಂಡು ಬರುವುದು. ಈ ರೀತಿಯ ಸಮಸ್ಯೆ ರಾಯಭಾರಿಗಳಲ್ಲಿ, ಇಂಟೆಲಿಜೆನ್ಸಿ ಆಫೀಸರ್‌ಗಳು, ಸೈನಿಕರಲ್ಲಿ ಹಾಗೂ ಅವರ ಕುಟುಂಬದವರಲ್ಲಿ ಕಂಡು ಬಂದಿತ್ತು.

ಇದುವರೆಗೆ 130 ಜನರಲ್ಲಿ ಹವನ ಸಿಂಡ್ರೋಮ್‌ ಕಂಡು ಬಂದಿತ್ತು. ಕೆಲವರು ಹವನ ಸಿಂಡ್ರೋಮ್‌ ಕಂಡು ಬಂದ ಮೇಲೆ ಹಲವು ದಿನಗಳವರೆಗೆ ಆರೋಗ್ಯ ಸಮಸ್ಯೆ ಕಂಡು ಬಂದಿರುವುದಾಗಿ ಅನೇಕರು ಹೇಳಿದ್ದರು.

ಹವನ ಸಿಂಡ್ರೋಮ್‌ನ ಲಕ್ಷಣಗಳೇನು?

ಹವನ ಸಿಂಡ್ರೋಮ್‌ನ ಲಕ್ಷಣಗಳೇನು?

2016ರಲ್ಲಿ ಈ ಸಮಸ್ಯೆ ಕಂಡು ಬಂದವರಲ್ಲಿ ರಾತ್ರಿ ಹೊತ್ತು ಕಿವಿ ಹೊಡೆದು ಹೋಗುವಷ್ಟು ಶಬ್ದ ಕೇಳಿ ಬಂದಂತೆ ಅನಿಸುವುದು, ಮುಖದಲ್ಲಿ ತುಂಬಾ ಗಾಬರಿ, ಒತ್ತಡ ಕಂಡು ಬರುವುದು. ಆ ಶಬ್ದ ಕೇಳುವುದು ನಿಂತ ಮೇಲೆ ನೋವು, ಸುಸ್ತು, ತಲೆಸುತ್ತು ಉಂಟಾಗುವುದು. ಇನ್ನು ಕೆಲವರು ಈ ಆರೋಗ್ಯ ಸಮಸ್ಯೆಯಿಂದಾಗಿ ಕೆಲಸ ಮಾಡಲು ತೊಂದರೆಯಾಗುವುದಾಗಿ ಹೇಳಿದ್ದರು.

ಹವನ ಸಿಂಡ್ರೋಮ್ ಬಂದವರಲ್ಲಿ ತುಂಬಾ ಸಮಯ ಈ ಸಮಸ್ಯೆಗಳು ಕಾಡಿದ್ದೆವು

ಹವನ ಸಿಂಡ್ರೋಮ್ ಬಂದವರಲ್ಲಿ ತುಂಬಾ ಸಮಯ ಈ ಸಮಸ್ಯೆಗಳು ಕಾಡಿದ್ದೆವು

* ಮೈಗ್ರೇನ್

* ದೂರದೃಷ್ಟಿದೋಷ

* ಮಳ್ಳೆಗಣ್ಣು

* ತಲೆಸುತ್ತು

* ಮೂಗಿನಲ್ಲಿ ರಕ್ತಸ್ರಾವ

ಒಟ್ಟಿನಲ್ಲಿ ಈ ಲಕ್ಷಣಗಳು ತಲೆಗೆ ಪೆಟ್ಟಾದವರಲ್ಲಿ ಕಂಡು ಬರುವುದು. ಹವನ ಸಿಂಡ್ರೋಮ್‌ ಇರುವವರಲ್ಲಿಯೂ ಈ ರೀತಿಯ ಲಕ್ಷಣಗಳು ಕಂಡು ಬಂದಿವೆ.

ಹವನ ಸಿಂಡ್ರೋಮ್ ಬರಲು ಕಾರಣವೇನು?

ಹವನ ಸಿಂಡ್ರೋಮ್ ಬರಲು ಕಾರಣವೇನು?

ತುಂಬಾ ರಾಸಾಯನಿಕಗಳಿಂದಾಗಿ ಈ ರೀತಿಯ ಸಿಂಡ್ರೋಮ್ ಉಂಟಾಗಬಹುದು, ಔಷಧಿ ಸೇವನೆಯಿಂದಲೂ ಬರಬಹುದು ಅಥವಾ ಆಕಸ್ಮಿಕವಾಗಿಯೂ ಉಂಟಾಗಬಹುದು. ಆದರೆ ಈ ಲಕ್ಷಣಗಳು ಕಂಡು ಬಂದವರ ಮನೆಯಲ್ಲಿ ಯಾವುದೇ ನಿರ್ಧಿಷ್ಟ ರಾಸಾಯನಿಕವಾಗಲಿ ಅಥವಾ ಇತರ ವಿಷ ಅಂಶಗಳಾಗಲಿ ಪತ್ತೆಯಾಗಿರಲಿಲ್ಲ.

ಹವನ ಸಿಂಡ್ರೋಮ್‌ ಬಹುಶಃ ಈ ಕಾರಣಗಳಿಂದ ಉಂಟಾಗುವುದು:

* ಅಲ್ಟ್ರಾಸೋನಿಕ್ ಅಥವಾ ಮೈಕ್ರೋವೇವ್‌ನಿಂದ ಉಂಟಾಗುವ ವಿಕಿರಣಗಳು

* ಬಯೋವೆಫನರಿಗಳು ಮನುಷ್ಯನ ಕಿವಿಯ ಒಳಗಡೆ ಮೈಕ್ರೋಬಬಲ್ಸ್‌(ಗುಳ್ಳೆಗಳು) ಉಂಟಾಗುವುದು, ಆ ಗುಳ್ಳೆಗಳು ರಕ್ತದ ಮೂಲಕ ಮೆದುಳು ತಲುಪುವುಉದ. ಇದರಿಂದ ಜೀವ ಕಣಗಳಿಗೆ ಹಾನಿಯುಂಟಾಗಿ ಕಿವಿ ಒಡೆದು ಹೋಗುವಷ್ಟು ಶಬ್ದ ಉಂಟಾಗುವುದು.

* ರೇಡಿಯೋ ವಿಕಿರಣಗಳು ತಲೆಗೆ ತಾಗಿದಾಗ ಇದರಿಂದ ಮೆದುಳಿನ ಕಾರ್ಯಕ್ಕೆ ಅಡಚಣೆ ಉಂಟಾಗುವುದು.

ಹವನ ಸಿಂಡ್ರೋಮ್ ಗಂಭೀರವಾದದ್ದೇ?

ಹವನ ಸಿಂಡ್ರೋಮ್‌ ಅಷ್ಟೊಂದು ಗಂಭೀರವಲ್ಲ, ಇದರಿಂದ ಸಾವು ಸಂಭವಿಸಲ್ಲ, ಜೊತೆಗೆ ಸಿಂಡ್ರೋಮ್‌ ಕಾಣಿಸಿಕೊಂಡವರು ಇನ್ನೂ ಜೀವನಂತವಾಗಿದ್ದಾರೆ.

English summary

What is Havana syndrome? Know Causes, Symptoms, Diagnosis and Treatment in Kannada

What is Havana syndrome? Know Causes, Symptoms, Diagnosis and Treatment in Kannada, read on....
X
Desktop Bottom Promotion