Latest Updates
-
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು!
ಕೋವಿಡ್ 19 ಪಾಸಿಟಿವ್ ಬಂದ್ರೆ ನೀವು ಮಾಡಬೇಕಾಗಿರುವುದು ಏನು?
ಕೊರೊನಾದಿಂದಾಗಿ ಮತ್ತೊಮ್ಮೆ ಲಾಕ್‌ಡೌನ್ ಮಾಡುವಂಥ ಪರಿಸ್ಥಿತಿ ಬಂದಾಗಿದೆ. ಇಡೀ ವಿಶ್ವದಲ್ಲೇ ಕೊರೊನಾವೈರಸ್ ಎರಡನೇ ಅಲೆಯ ಆರ್ಭಟ ಜೋರಾಗಿಯೇ ಇದೆ ಅದರಲ್ಲೂ ಭಾರತದಲ್ಲಿ ಇದರ ಆರ್ಭಟ ಎಲ್ಲೇ ಮೀರಿದೆ. ಕೊರೊನಾ ಸೋಂಕಿತರಿಂದ ಬೆಂಗಳೂರು ತುಂಬಿ ತುಳುಕುತ್ತಿದೆ. ಆಸ್ಪತ್ರೆಗೆ ಹೋದರೆ ಬೆಡ್ ಸಿಗುತ್ತಿಲ್ಲ, ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ. ಇವುಗಳಿಂದಾಗಿ ಸಾವಿನ ಸಂಖ್ಯೆ ಏರುತ್ತಿದೆ.
ಕೋವಿಡ್ ಪಾಸಿಟಿವ್ ಬಂದು ಸಣ್ಣ-ಪುಟ್ಟ ಲಕ್ಷಣಗಳಿದ್ದರೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ, ಗಂಭೀರ ಸಮಸ್ಯೆ ಇರುವವರಷ್ಟೇ ಆಸ್ಪತ್ರೆಗೆ ಹೋಗುತ್ತಿದ್ದಾರೆ.
ಕೊರೊನಾ ಪಾಸಿಟಿವ್ ಎಂದು ಬಂದ ತಕ್ಷಣ ಜನರು ಭಯ ಭೀತರಾಗುತ್ತಿದ್ದಾರೆ. ಆದರೆ ಕೋವಿಡ್ 19 ನಿಂದ ಚೇತರಿಸಿಕೊಂಡವರ ಸಂಖ್ಯೆ ಅಧಿಕವೇ ಇದೆ. ತಜ್ಞರು ಕೂಡ ಕೋವಿಡ್ 19 ಪಾಸಿಟಿವ್ ಎಂದು ಬಂದ ತಕ್ಷಣ ಏನು ಮಾಡಬೇಕು? ಯಾವ ಲಕ್ಷಣಗಳನ್ನು ಗಮನಿಸಬೇಕು? ಯಾವಾಗ ಆಸ್ಪತ್ರೆಗೆ ದಾಖಲಾಗಬೇಕು ಎಂಬುವುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನೀವು ಮಾಡಬೇಕಾಗಿರುವುದು ಏನು?
* ಕೊರೊನಾ ಪಾಸಿಟಿವ್ ಬಂದು ಮನೆಯಲ್ಲಿಯೇ ಇದ್ದೀರಾ?
* ಮನೆಯಲ್ಲಿಯೇ ನಿಮ್ಮ ಆರೈಕೆ ಮಾಡುವುದು ಹೇಗೆ?
* ಯಾವ ಲಕ್ಷಣಗಳು ಬಂದಾಗ ಆಸ್ಪತ್ರೆಗೆ ದಾಖಲಾಗಬೇಕು?

ಕೋವಿಡ್ 19 ಪಾಸಿಟಿವ್ ಬಂದ್ರೆ ಏನು ಮಾಡಬೇಕು?
* ನಿಮಗೆ ಚಿಕ್ಕ ಸಮಸ್ಯೆಯಿದ್ದರೆ ಮನೆಯಲ್ಲಿಯೇ ಹೋಂ ಕ್ವಾರಂಟೈನ್‌ನಲ್ಲಿರಿ.
* ಅಟ್ಯಾಚ್ಡ್ ಬಾತ್‌ರೂಂ ಇರುವ ರೂಂನಲ್ಲಿ ಐಸೋಲೇಟ್ ಆಗಿರಿ (ಅಂದ್ರೆ ಆ ರೂಮಿನಲ್ಲಿ ನೀವು ಮಾತ್ರ ಇರಬೇಕು, ಯಾರೂ ಬರಬಾರದು, ಸಂಪೂರ್ಣ ಗುಣಮುಖರಾಗುವವರೆಗೆ ರೂಮ್‌ನಿಂದ ಹೊರಗಡೆ ಹೋಗಬಾರದು) .
* ಸ್ವಲ್ಪ ಜ್ವರವಿದ್ದರೆ ಪ್ಯಾರಾಸಿಟಮೋಲ್ ಮಾತ್ರೆ ತೆಗೆದುಕೊಳ್ಳಿ.
* ದಿನದಲ್ಲಿ 10-15 ಬಾರಿ ನಿಮ್ಮ ಆಕ್ಸಿಜನ್ ಲೆವಲ್ (ಆಮ್ಲಜನಕ) ಪರೀಕ್ಷ ಮಾಡುತ್ತಾ ಇರಿ.
* ಆಕ್ಸಿಜನ್ ಪ್ರಮಾಣ 94-100ರ ಒಳಗೆ ಇದ್ದರೆ ಏನೂ ಚಿಂತಿಸಬೇಡಿ. ಒಂದು ವೇಳೆ 94ಕ್ಕಿಂತ ಕಡಿಮೆಯಿದ್ದರೆ ವೈದ್ಯರಿಗೆ ಕರೆ ಮಾಡಿ.
* ಸುಲಭವಾಗಿ ಜೀರ್ಣವಾಗುವ ದ್ರವ ರೂಪದ ಆಹಾರ ಸೇವಿಸಿ. ಅಲ್ಲದೆ 8-10 ಲೋಟ ಬಿಸಿ-ಬಿಸಿ ನೀರು ಸೇವಿಸಿ.

ಏನು ಮಾಡಬಾರದು?
* ವೈದ್ಯರ ಸಲಹೆ ಇಲ್ಲದೆ ಸ್ಟಿರಾಯ್ಡ್ ಅಥವಾ ರೆಮ್ಡಿಸಿವಿರ್ ತೆಗೆದುಕೊಳ್ಳಬೇಡಿ.
* ರೋಗ ಲಕ್ಷಣಗಳು ಅಧಿಕವಿದ್ದರೆ, ನಿಮ್ಮ ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾ ಇರಿ.
* ಜ್ವರ 5-7 ದಿನ ಇದ್ದರೆ, ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತಿದ್ದರೆ ಕೂಡಲೇ ಆಸ್ಪತ್ರೆಗೆ ಹೋಗಿ. ಎಲ್ಲಾ ಆಸ್ಪತ್ರೆಯಲ್ಲಿ ಅಲೆದಾಡುವ ಮುನ್ನ ಯಾವ ಆಸ್ಪತ್ರೆಯಲ್ಲಿ ಆಕ್ಸಿಜನ್ ಇದೆ ಎಂದು ಚೆಕ್ ಮಾಡಿ, ಆ ಆಸ್ಪತ್ರೆಗೆ ದಾಖಲಾಗಿ.
* ಆಕ್ಸಿಜನ್ ಸಿಲಿಂಡರ್‌ಗೆ ನೀವು ಗೌರ್ನಮೆಂಟ್ ಏಜೆನ್ಸಿ ಅವರನ್ನು ಸಂಪರ್ಕಿಸುವುದು ಒಳ್ಳೆಯದು. ಆಕ್ಸಿಜನ್ ಅನ್ನು ಬ್ಲ್ಯಾಕ್‌ನಲ್ಲಿ ಕೊಳ್ಳಬೇಡಿ, ಇದರಿಂದ ಸಮಯ ಹಾಗೂ ಹಣ ವ್ಯರ್ಥ. ಆಕ್ಸಿಜನ್ ರೋಗಿಗೆ ಸರಿಯಾದ ಸಮಯಕ್ಕೆ ಸಿಗುವ ವ್ಯವಸ್ಥೆ ಮಾಡಿ.
* ವೈದ್ಯರ ಸಲಹೆ ಪಡೆಯದೆ ಯಾವುದೇ ಔಷಧಿ ತೆಗೆದಕೊಳ್ಳಬೇಡಿ.
* ಗೂಗಲ್‌ನಲ್ಲಿ ಔಷಧಿ ಹುಡುಕಿ ತೆಗೆದುಕೊಳ್ಳಬೇಡಿ, ಸೋಷಿಯಲ್ ಮೀಡಿಯಾದಲ್ಲಿ ಕಾಣ ಸಿಗುವ ಔಷಧಿ ಟ್ರೈ ಮಾಡಬೇಡಿ.
* ಆರೋಗ್ಯ ಗಂಭೀರವಾಗುತ್ತಿದ್ದರೆ ಮನೆಯಲ್ಲಿ ಔಷಧಿ ತೆಗೆದುಕೊಳ್ಳಬೇಡಿ.
* 7 ದಿನವಾದರೂ ಜ್ವರ ಕಡಿಮೆಯಾಗದೆ ಇದ್ದರೆ, ಆಕ್ಸಿಜನ್ ಕಡಿಮೆಯಾದರೆ, ಬೇಧಿ, ಉಸಿರಾಟದ ತೊಂದರೆ, ಎದೆ ನೋವು ಈ ರೀತಿಯ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿ ಇರಬೇಡಿ, ಆಸ್ಪತ್ರೆಗೆ ದಾಖಲಾಗಿ.



Click it and Unblock the Notifications
