Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ಅವಧಿಗೆ ಮೊದಲೇ ಮುಟ್ಟಾಗಲು ಏನು ಮಾಡಬೇಕು? ಈ ನೈಸರ್ಗಿಕ ಟಿಪ್ಸ್ ನಿಮಗೆ ಸಹಾಯವಾದೀತು ನೋಡಿ
ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ ಇದು. ಪಿರಿಯಡ್ಸ್ ಸರಿಯಾದ ಸಮಯಕ್ಕೆ ಆದರೂ ಟೆನ್ಶನ್ ಆಗದಿದ್ದರೂ ಟೆನ್ಶನ್. ಕೆಲವೊಮ್ಮೆಯಂತೂ ಏನಾದರೂ ಸಮಾರಂಭ ಇರುವಾಗಲೇ ಪಿರಿಯಡ್ಸ್ ಸಂಭವಿಸುತ್ತೆ. ಆಗ ಆಗುವ ಕೆಟ್ಟ ಫೀಲಿಂಗ್ಸ್ ಹೇಳಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ.

ಹುಡುಗಿಯರೇ ಹಾಗಂತ ಚಿಂತೆ ಬೇಡ. ನೀವು ನಿಮ್ಮ ಮನೆಯ ವಿಶೇಷವಾದ ಸಂದರ್ಭದಲ್ಲಿ ಪಾಲ್ಗೊಳ್ಳಲು ಸಹಾಯಕವಾಗುವಂತೆ ಅವಧಿಗೂ ಮುನ್ನ ಆರೋಗ್ಯಕರ ರೀತಿಯಲ್ಲಿ ಪಿರಿಯಡ್ ಪಡೆಯುವುದು ಹೇಗೆ ಅನ್ನೋದನ್ನ ನಾವಿಲ್ಲಿ ತಿಳಿಸುತ್ತಿದ್ದೇವೆ.
ಕೆಲವೊಮ್ಮೆ ಮನೆಯಲ್ಲಿ ವಿಶೇಷ ಸಮಾರಂಭ ಇದ್ದರೆ, ಮದುವೆ ಮತ್ತಿತರ ಕಾರ್ಯಕ್ರಮ ಇದ್ದರೆ ಪಿರಿಯಡ್ಸ್ ಆ ತಿಂಗಳಿನಲ್ಲಿ ಸ್ವಲ್ಪ ತಡವಾಗಿ ಬರಲಿ ಅಥವಾ ಡೇಟ್ ಗಿಂತಲೂ ಮೊದಲೇ ಬರಲಿ ಅಂತ ಅನ್ನಿಸುವುದು ಸಹಜ. ಹಾಗಾಗಿ ಅವಧಿಗಿಂತಲೂ ಮುಂಚಿತವಾಗಿ ಪಿರಿಯಡ್ಸ್ ಬರಲು ಕೆಲವರು ಔಷಧವನ್ನು ಕೂಡ ತೆಗೆದುಕೊಳ್ಳುತ್ತಾರೆ.
ಆದರೆ ನೀವು ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು ಬೇಗನೆ ಮುಟ್ಟಾಗುವುದು...
1. ವ್ಯಾಯಾಮ:
ನಿಯಮಿತವಾಗಿ ವ್ಯಾಯಾಮ ಮಾಡಿದರೆ ಮುಟ್ಟಿನ ಚಕ್ರವೂ ಕೂಡ ವೇಗಗೊಳ್ಳುತ್ತದೆ. ದೇಹಕ್ಕೆ ಕೆಲಸ ಕೊಟ್ಟಾಗ ಸ್ನಾಯುಗಳು ತಮ್ಮ ಕೆಲಸವನ್ನು ತೀವ್ರಗೊಳಿಸಲು ಸಹಾಯಕವಾಗುತ್ತದೆ. ಹಾಗಂತ ಅತಿಯಾಗಿ ವ್ಯಾಯಾಮ ಮಾಡಿದರು ಕೂಡ ಅನಿಯಮಿತ ಅವಧಿಯ ಪಿರಿಯಡ್ಸ್ ಆಗುವ ಸಾಧ್ಯತೆ ಇದೆ ಹಾಗಾಗಿ ಸರಿಯಾದ ರೀತಿಯಲ್ಲಿ ಋತು ಚಕ್ರ ಆಗಬೇಕು ಅಂದ್ರೆ, ಹಾರ್ಮೋನ್ ಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳಬೇಕು ಅಂದ್ರೆ ಲಘುವಾದ ವ್ಯಾಯಾಮ ಮಾಡಬೇಕು. ಪ್ರತಿದಿನ 30 ರಿಂದ 40 ನಿಮಿಷಗಳ ಕಾಲ ವ್ಯಾಯಾಮ ಮಾಡಿದರೆ, ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಅತಿಯಾದ ತೂಕವನ್ನು ಕೂಡ ನಿಯಂತ್ರಿಸಬಹುದು ಎಂದು ಜರ್ನಲ್ ಆಫ್ ಎಜುಕೇಶನ್ ಅಂಡ್ ಹೆಲ್ತ್ ಪ್ರಮೋಷನ್ ಅಧ್ಯಯನ ತಿಳಿಸಿದೆ.
2. ಹಾರ್ಮೋನ್ ನಿಯಂತ್ರಣ:
ಋತುಚಕ್ರದ ಅವಧಿಯನ್ನು ನಿರ್ವಹಣೆ ಮಾಡಲು ಗರ್ಭನಿರೋಧಕ ಮಾತ್ರೆಗಳು ಬರ್ತ್ ಕಂಟ್ರೋಲ್ ರಿಂಗ್ ಹಾರ್ಮೋನ್ ಗರ್ಭ ನಿರೋಧಕಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಮಹಿಳೆಯರು ಹಾರ್ಮೋನ್ ಪೂರಕಗಳನ್ನ ತೆಗೆದುಕೊಳ್ಳುವುದನ್ನು ಮೊದಲೇ ನಿಲ್ಲಿಸಿದರೆ ಪಿರಿಯಡ್ಸ್ ಸ್ವಲ್ಪ ಬೇಗ ಬರಲು ಸಹಾಯಕವಾಗುತ್ತದೆ.
3. ವಿಶ್ರಾಂತಿ:
ಸಾಮಾನ್ಯವಾಗಿ ನಾವು ಎಲ್ಲದಕ್ಕೂ ಟೆನ್ಶನ್ ಮಾಡಿಕೊಳ್ಳುತ್ತೇವೆ. ಅತಿ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುತ್ತೇವೆ. ಋತುಚಕ್ರ ತಡವಾಗಿದೆ ಅಥವಾ ತನಗೆ ಬೇಕಿದ್ದ ಸಮಯಕ್ಕೆ ಬರುತ್ತಿಲ್ಲ ಎಂದಾದರೆ ಅದಕ್ಕೂ ತಲೆ ಕೆಡಿಸಿಕೊಳ್ಳುವವರು ಹೆಚ್ಚು. ಹೀಗೆ ಹೆಚ್ಚು ಒತ್ತಡಗಳನ್ನ ತೆಗೆದುಕೊಂಡರೆ ಋತುಚಕ್ರ ಇನ್ನೂ ಮುಂದಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಋತುಚಕ್ರ ಸ್ವಲ್ಪ ಬೇಗ ಬರಬೇಕು ಅಂದ್ರೆ ನೀವು ಒತ್ತಡದಿಂದ ಮುಕ್ತರಾಗಿರುವುದು ಬಹಳ ಮುಖ್ಯ. ಶಾಂತವಾಗಿರುವುದಕ್ಕೆ ಯೋಗ ಧ್ಯಾನ ಮೊದಲಾದವುಗಳನ್ನು ಆಯ್ದುಕೊಳ್ಳಿ. ಅಲ್ಲದೇ ಸ್ನೇಹಿತರ ಹಾಗೂ ಪ್ರೀತಿ ಪಾತ್ರರ ಜೊತೆಗೆ ಹೆಚ್ಚು ಸಮಯವನ್ನು ಕಳೆಯಿರಿ.
4. ವಿಟಮಿನ್ ಸಿ ಆಹಾರ ಸೇವನೆ:
ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಹಣ್ಣುಗಳು, ತರಕಾರಿ ಗಳನ್ನು ಸೇವನೆ ಮಾಡಬೇಕು. ಇವು ದೇಹದಲ್ಲಿ ಈಸ್ಟ್ರೋಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ಗರ್ಭಾಶಯದ ಒಳಪದರವನ್ನು ಸುಗಮಗೊಳಿಸುತ್ತವೆ. ಹಾಗಾಗಿ ಅವಧಿಗೂ ಮೊದಲೇ ಆರೋಗ್ಯಕರ ರೀತಿಯಲ್ಲಿ ಋತುಚಕ್ರ ಬರಲು ದೇಹದಲ್ಲಿ ಶಾಖವನ್ನು ಹೆಚ್ಚಿಸುವಂತಹ ಶಕ್ತಿ ವಿಟಮಿನ್ ಸಿ ಭರಿತ ಆಹಾರ ಪದಾರ್ಥಗಳಲ್ಲಿ ಇದೆ ಇದನ್ನು ಕೂಡ ನಿಯಮಿತವಾಗಿ ಸೇವಿಸಬೇಕು.
ಬೆಲ್ಲವನ್ನು ತಿನ್ನಿ:
ನಿಮ್ಮ ಋತು ಚಕ್ರವನ್ನು ನೈಸರ್ಗಿಕವಾಗಿ ಪ್ರಚೋದಿಸುವ ಶಕ್ತಿ ಬೆಲ್ಲಕ್ಕೆ ಇದೆ. ಇದನ್ನು ಬಹಳ ಪುರಾತನ ಕಾಲದಿಂದಲೂ ಬಳಸಿಕೊಂಡು ಬದಲಾಗಿದೆ. ಆಗತಾನೇ ಋತುಚಕ್ರ ಆರಂಭವಾಗಿರುವ ಹೆಣ್ಣು ಮಕ್ಕಳು, ಮುಂದಿನ ಕೆಲವು ಸೈಕಲ್ ಸರಿಯಾದ ರೀತಿಯಲ್ಲಿ ಆಗಲು ಬೆಲ್ಲ ಸೇವನೆ ಮಾಡುವುದು ಒಳ್ಳೆಯದು ಎಂದು ಹಿಂದಿನಿಂದಲೂ ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ ನಿಯಮಿತವಾಗಿ ಬೆಲ್ಲ ಸೇವನೆ ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಆಗುವಂತಹ ಸಮಸ್ಯೆಗಳು ಕೂಡ ನಿಯಂತ್ರಣಕ್ಕೆ ಬರುತ್ತವೆ. ಹಿಮೋಗ್ಲೋಬಿನ್ ಮತ್ತು ಕಬ್ಬಿಣವನ್ನು ದೇಹದಲ್ಲಿ ಹೆಚ್ಚು ಉತ್ಪಾದನೆಯಾಗುವಂತೆ ಮಾಡುತ್ತದೆ . ಇದರಿಂದ ಋತುಚಕ್ರವು ಸರಿಯಾದ ಸಮಯಕ್ಕೆ ಆಗುತ್ತದೆ.
ವೈದ್ಯರ ಸಲಹೆ ಪಾಲಿಸಿ:
ಕೆಲವರಿಗೆ ಸರಿಯಾಗಿ ಪೀರಿಯಡ್ಸ್ ಆಗುತ್ತೆ ಆದರೆ ಒಮ್ಮೆ ಅಥವಾ ಎರಡು ಬಾರಿ ಸಮಯವನ್ನು ಮಿಸ್ ಮಾಡಿದರೆ ನೀವು ಪ್ರಗ್ನೆಂಟ್ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಗರ್ಭಿಣಿ ಅಲ್ಲ ಎಂದಾದರೆ ನಿಮ್ಮ ಪಿರಿಯಡ್ಸ್ ಸರಿಯಾದ ಸಮಯಕ್ಕೆ ಆಗದೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ವೈದ್ಯರ ಸಲಹೆಯನ್ನು ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












