Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಥೈರಾಯ್ಡ್ ಗ್ರಂಥಿ ಸರ್ಜರಿ ಮಾಡಿದರೆ ತೆಗೆದರೆ ಪ್ರಯೋಜನಗಳೇನು, ಅಡ್ಡಪರಿಣಾಮವಿದೆಯೇ?
ನಮ್ಮ ಗಂಟಲಿನಲ್ಲಿ ಥೈರಾಯ್ಡ್ ಗ್ರಂಥಿ ಇರುತ್ತದೆ, ಅದು ಚಿಟ್ಟೆಯಾಕಾರದಲ್ಲಿರುತ್ತದೆ, ಇದು ನಮ್ಮ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಈ ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ ತೊಂದರೆಯಾದರೆ ಥೈರಾಯ್ಡ್ ಸಮಸ್ಯೆ ಉಂಟಾಗುವುದು.

ಥೈರಾಯ್ಡ್ ಸಮಸ್ಯೆ ಬಂದಾಗ ಮಾತ್ರೆ ನೀಡಿ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಬಹುದು, ಕೆಲವರಿಗೆ ಸರ್ಜಿರಿ ಮಾಡಿ ಆ ಗ್ರಂಥಿಯನ್ನು ತೆಗೆಯಲು ವೈದ್ಯರು ಸೂಚಿಸುತ್ತಾರೆ.
ಥೈರಾಯ್ಡ್ ಗ್ರಂಥಿ ತೆಗೆಯುವುದರಿಂದ ಉಂಟಾಗುವ ಪ್ರಯೋಜನಗಳೇನು, ತೆಗೆದ ಮೇಲೆ ಉಂಟಾಗುವ ಅಡ್ಡಪರಿಣಾಮಗಳೇನು ಎಂಬುವುದನ್ನು ಈ ಲೇಖನದ ಮೂಲಕ ತಿಳಿಯೋಣ:

ಮೊದಲಿಗೆ ಥೈರಾಯ್ಡ್ ಗ್ರಂಥಿಯ ಕಾರ್ಯಗಳ ಬಗ್ಗೆ ನೋಡೋಣ
ಥೈರಾಯ್ಡ್ ಹಾರ್ಮೋನ್‌ಗಳು ನಮ್ಮ ದೇಹದ ತೂಕ, ಚಯಪಚಯ ಕ್ರಿಯೆ, ಹೃದಯದ ಆರೋಗ್ಯ ಕಾಪಾಡಲು ತುಂಬಾನೇ ಅವಶ್ಯಕ. ಸ್ನಾಯುಗಳು ಹಾಗೂ ಮೂಳೆಯ ಆರೋಗ್ಯಕ್ಕೆ ಕೂಡ ತುಂಬಾನೇ ಅವಶ್ಯಕ.

ಥೈರಾಯ್ಡ್ ಗ್ರಂಥಿ ತೆಗೆಯುವುದರಿಂದ ದೊರೆಯುವ ಪ್ರಯೋಜನಗಳು
* ಥೈರಾಯ್ಡ್ ಗ್ರಂಥಿ ಹಾಗೇ ಇದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ
* ಥೈರಾಯ್ಡ್ ಗ್ರಂಥಿ ಊದಿಕೊಂಡರೆ ಆಹಾರ ನುಂಗಲು, ಉಸಿರಾಡಲು ತೊಂದರೆಯಾಗುವುದು, ಧ್ವನಿಯಲ್ಲೂ ಬದಲಾವಣೆಯಾಗುವುದು.
* ಯಾರಿಗೆ ಹೈಪರ್ ಥೈರಾಯ್ಡ್ ಇದೆಯೋ ಯಾವುದೇ ಚಿಕಿತ್ಸೆ ಪ್ರಯೋಜನವಾಗುವುದಿಲ್ಲ, ಆದ್ದರಿಂದ ಥೈರಾಯ್ಡ್ ಗ್ರಂಥಿ ತೆಗೆದರೆ ಒಳ್ಳೆಯದು

ಥೈರಾಯ್ಡ್ ಗ್ರಂಥಿ ತೆಗೆಯುವ 3 ಚಿಕಿತ್ಸೆಗಳಿಂದರೆ
ಹೆಮಿಥೈರಾಯ್ಡೋಕ್ಟೊಮಿ ಅಥವಾ ಲೋಬೆಕ್ಟೊಮಿ (Hemithyroidectomy, or lobectomy: ಇದರಲ್ಲಿ ಒಂದು ಲೊಬೆ ಅಥವಾ ಅರ್ಧ ಥೈರಾಯ್ಡ್ ಗ್ರಂಥಿ ತೆಗೆಯಯಲಾಗುವುದು. ಕ್ಯಾನ್ಸರ್ ಅಪಾಯ ಕಡಿಮೆ ಇದ್ದರೆ ಒಂದು ಭಾಗವಷ್ಟೇ ತೆಗೆಯಲಾಗುವುದು.
* ಇಸ್ತೆಮ್ಯೂಸೆಕ್ಟೊಮಿ (Isthmusectomy):ಈ ಚಿಕಿತ್ಸೆಯಲ್ಲಿ ಥೈರಾಯ್ಡ್ ಗ್ರಂಥಿಯಲ್ಲಿರುವ ಚಿಕ್ಕ ಗಡ್ಡೆಯನ್ನು ಮಾತ್ರ ತೆಗೆಯಲಾಗುವುದು.
* ಟೋಟಲ್ ಥೈರಾಯ್ಡೋಕ್ಟೊಮಿ (Total thyroidectomy): ಇದರಲ್ಲಿ ಸಂಪೂರ್ಣ ಥೈರಾಯ್ಡ್ ಗ್ರಂಥಿಯನ್ನು ತೆಗೆದು ಹಾಕಲಾಗುವುದು. ಥೈರಾಯ್ಡ್ ಕ್ಯಾನ್ಸರ್ ಆಗುವ ಸಾಧ್ಯತೆ ಇದ್ದರೆ ಅಥವಾ ಥೈರಾಯ್ಡ್ ಗ್ರೇವ್ ಆಗಿದ್ದಾಗ ಸಂಪೂರ್ಣವಾಗಿ ತೆಗೆದು ಹಾಕಲಾಗುವುದು.

ಥೈರಾಯ್ಡ್ ಗ್ರಂಥಿ ತೆಗೆದರೆ ಅಡ್ಡಪರಿಣಾಮಗಳೇನು?
* ಸೋಂಕು
* ರಕ್ತಸ್ರಾವ
* ಧ್ವನಿಪೆಟ್ಟಿಗೆಯಲ್ಲಿ ಗಾಯ
* ಪ್ಯಾರಾಥೈರಾಯ್ಡ್ ಗ್ರಂಥಿಗೆ ಹಾನಿಯಾಗಬಹುದು
ಆಹಾರದಲ್ಲಿರುವ ಕ್ಯಾಲ್ಸಿಯಂ ಹೀರಿಕೊಳ್ಳಲು ಪ್ಯಾರಾಥೈರಾಯ್ಡ್ ಗ್ರಂಥಿ ಅವಶ್ಯಕ.
ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು?
ಸರ್ಜರಿ ಆದ ಒಂದು ದಿನದಲ್ಲಿ ಎದ್ದು ಓಡಾಡಬಹುದು, ವೈದ್ಯರು ಕೆಲವು ವಾರ ವಿಶ್ರಾಂತಿ ಪಡೆಯಲು ಸೂಚಿಸುತ್ತಾರೆ.
* ಕೆಲವರಿಗೆ ಕೆಲವು ವಾರಗಳವರೆಗೆ ನೋವು ಇರುತ್ತದೆ, ನೋವು ತುಂಬಾ ಇದ್ದರೆ ವೈದ್ಯರು ನೋವು ನಿವಾರಕ ನೀಡಬಹುದು.
ಥೈರಾಯ್ಡ್ ಸರ್ಜರಿ ಆದ ಬಳಿಕ ಥೈರಾಯ್ಡ್ ಹಾರ್ಮೋನ್ ಹಾಗೂ ಕ್ಯಾಲ್ಸಿಯಂ ಅನ್ನು ನಿಯಮಿತವಾಗಿ ಪರೀಕ್ಷೆ ಮಾಡುತ್ತಾ ಇರಬೇಕು.



Click it and Unblock the Notifications
