For Quick Alerts
ALLOW NOTIFICATIONS  
For Daily Alerts

ಡವ್‌, ಟ್ರೆಸ್ಮಿ ಶ್ಯಾಂಪೂಗಳು ಸೇರಿದಂತೆ 19 ಬ್ರ್ಯಾಂಡೆಡ್ ಶ್ಯಾಂಪೂಗಳು ಕ್ಯಾನ್ಸರ್‌ಕಾರಕ!

|

ನಾವು ಕೂದಲು ಶೈನಿಯಾಗಿರಬೇಕು, ಸಾಫ್ಟ್ ಆಗಿರಬೇಕು ಎಂದು ಬಳಸುವ ಎಷ್ಟೋ ಶ್ಯಾಂಪೂಗಳು ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ ಎಂಬುವುದು ನಿಮಗೆ ಗೊತ್ತೇ? ನೀವು ಬ್ರ್ಯಾಂಡೆಡ್‌ ಎಂದು ಬಳಸುತ್ತಿರುವ ಎಷ್ಟೋ ಶ್ಯಾಂಪೂಗಳು ಕ್ಯಾನ್ಸರ್‌ಕಾರಕವಾಗಿದೆ.

ಈ ಶ್ಯಾಂಪೂಗಳಿಂದಾಗಿ ಲುಕೇಮಿಯಾ, ಬ್ಲಡ್ ಕ್ಯಾನ್ಸರ್‌ ಬರುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. Unilever Plc ಕ್ಯಾನ್ಸರ್‌ಕಾರಕ ಶ್ಯಾಂಪೂಗಳ ಹೆಸರುಗಳನ್ನು ಬಹಿರಂಗಪಡಿಸಿದೆ. ಅದರಲ್ಲಿ ಡವ್, ಟ್ರಸ್‌ಮಿ ಸೇರಿ ಸುಮಾರು 19 ಬ್ರ್ಯಾಂಡೆಡ್‌ ಶ್ಯಾಂಪೂಗಳ ಹೆಸರಿದೆ.

ಶ್ಯಾಂಪೂಗಳಲ್ಲಿರುವ ಬೆಂಜೀನ್‌ನಿಂದಾಗಿ ಕ್ಯಾನ್ಸರ್ ಬರಬಹುದು

ಶ್ಯಾಂಪೂಗಳಲ್ಲಿರುವ ಬೆಂಜೀನ್‌ನಿಂದಾಗಿ ಕ್ಯಾನ್ಸರ್ ಬರಬಹುದು

ತುಂಬಾ ಶ್ಯಾಂಪೂಗಳಲ್ಲಿ ಏರೋಸಾಲ್, ಬೆಂಜೀನ್‌ ಕ್ಯಾನ್ಸರ್‌ಕಾರಕವಾಗಿದೆ. ಈ ಶ್ಯಾಂಪೂಗಳನ್ನು ಪ್ರತಿನಿತ್ಯ ಬಳಸುವುದರಿಂದ ಇದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವುದು.

ಡವ್‌ ಶ್ಯಾಂಪೂ ಅಪಾಯಕಾರಿ

ಡವ್‌ ಶ್ಯಾಂಪೂ ಅಪಾಯಕಾರಿ

ಡವ್‌ ಡ್ರೈ ಶ್ಯಾಂಪೂ ಫ್ರೆಷ್‌ಕೋಕೋನೆಟ್, ಡವ್‌ ಡ್ರೈಶ್ಯಾಂಪೂ ಇನ್‌ವಿಸಿಬಲ್, ಡವ್‌ ಡ್ರೈ ಶ್ಯಾಂಪೂ ಡಿಟಾಕ್ಸ್ ಅಂಡ್‌ ಪ್ಯೂರಿಫೈ, ಡವ್‌ ಡ್ರೈ ಶ್ಯಾಂಪೂ ಅಲ್ಟ್ರಾ ಕ್ಲೀನ್, ಡವ್‌ ಡ್ರೈ ಶ್ಯಾಂಪೂ ಕ್ಲಾರಿಫಯಿಂಗ್‌ ಚಾರ್‌ಕೋಲ್‌, ಹೀಗೆ ಡವ್‌ನ ಅನೇಕ ಸ್ಪೆಷಾಲಿಟಿ ಶ್ಯಾಂಪೂಗಳು ಹಾಗೂ ಟ್ರೆಸ್ಸೆಮಿ ಇಂಥ ಶ್ಯಾಂಪೂಗಳಲ್ಲಿ ಬೆಂಜೀನ್‌ ಅಧಿಕ ಪತ್ತೆಯಾಗಿದೆ.

ಬೆಂಜೀನ್‌ನ ಅಪಾಯ

ಬೆಂಜೀನ್‌ ಅಧಿಕ ನಮ್ಮ ದೇಹವನ್ನು ಸೇರಿದರೆ ಇದರಿಂದ ರಕ್ತಹೀನತೆ ಲುಕೇಮಿಯಾ ಕ್ಯಾನ್ಸರ್ ಬರಬಹುದು.

 ಈ ಬಗೆಯ ಶ್ಯಾಂಪೂಗಳನ್ನು ಮಾರದಂತೆ ಸೂಚನೆ

ಈ ಬಗೆಯ ಶ್ಯಾಂಪೂಗಳನ್ನು ಮಾರದಂತೆ ಸೂಚನೆ

ಕಂಪನಿ ರೀಟೈಲರ್‌ಗಳಿಗೆ ಬೆಂಜೀನ್‌ ಅಂಶವಿರುವ ಶ್ಯಾಂಪೂಗಳ ಮಾರಾಟ ಮಾಡದಂತೆ ನೋಟೀಸ್‌ ಕಳುಹಿಸಿದೆ, ಆದರೆ ಕೆಲವೊಂದು ಶಾಪ್‌ಗಳಲ್ಲಿ, ಆನ್‌ಲೈನ್‌ ಮಾರ್ಕೆಟ್‌ನಲ್ಲಿ ಈಗಲೂ ಲಭ್ಯವಿದೆ. ಆದ್ದರಿಂದ ಗ್ರಾಹಕರೇ ನಿಮ್ಮ ಆರೋಗ್ಯಕ್ಕಾಗಿ ಬೆಂಜೀನ್‌ ಇರುವ ಶ್ಯಾಂಪೂ ಬಳಸಲೇಬೆಡಿ.

English summary

These Shampoos Recalled Over Cancer Risk: Check If Yours Is Affected

Dove and other 19 shampoos recalled over cancer risk, why it is more dangerous read on....
Story first published: Thursday, October 27, 2022, 17:11 [IST]
X
Desktop Bottom Promotion