Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕೋವಿಡ್ 19 ಬಳಿಕ ಬಂದ ಮಧುಮೇಹ ಶಾಶ್ವತವಲ್ಲ: ಅಧ್ಯಯನ
ಕೋವಿಡ್ 19 ಸೋಂಕಿನಿಂದ ಚೇತರಿಸಿದವರಿಗೆ ಮಧುಮೇಹದ ಆತಂಕ ಉಂಟಾಗಿತ್ತು. ಹೌದು, ಕೋವಿಡ್ 19 ಸೋಂಕಿನಿಂದ ಚೇತರಿಸಿದವರಲ್ಲಿ ಅನೇಕರಿಗೆ ಮಧುಮೇಹ ಸಮಸ್ಯೆ ಕಂಡು ಬಂದಿತ್ತು. ಆದರೆ ಹಾಗೆ ಉಂಟಾಗಿದ್ದರೆ ಭಯ ಪಡಬೇಕಾಗಿಲ್ಲ, ಅದರಿಂದ ಗುಣಮುಖರಾಗುವಿರಿ ಎಂದು ಎಂಜಿಹೆಚ್(Massachusetts General Hospita)ಹೇಳಿರುವುದರಿಂದ ಹೆಚ್ಚಿನವರಿಗೆ ಸಮಧಾನ ಉಂಟಾಗಿದೆ.
ಎಂಜಿಹೆಚ್ ಆಸ್ಪತ್ರೆ ಅಧ್ಯಯನ ನಡೆಸಿ ಈ ವರದಿ ನೀಡಿದೆ. ಆ ವರದಿ ಪ್ರಕಾರ ಕೋವಿಡ್ 19 ಸೋಂಕಿನ ಬಳಿಕ ಕಾಣಿಸಿಕೊಳ್ಳುವ ಮಧುಮೇಹ ಶಾಶ್ವತವಲ್ಲ ಎಂದು ಹೇಳಿದೆ.

ಕೋವಿಡ್-19 ಬಳಿಕ ಮಧುಮೇಹಕ್ಕೆ ಕಾರಣವೇನು?
ಕೋವಿಡ್ 19 ಸೋಂಕು ತಗುಲಿದಾಗ ಹೆಚ್ಚಿನವರು ಅತ್ಯಧಿಕ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಿರುತ್ತದೆ. ಈ ರೀತಿ ಬಂದ ಮಧುಮೇಹ ಶಾಶ್ವತವಾಗಿ ಉಳಿಯುವುದಿಲ್ಲ. ಸ್ವಲ್ಪ ಸಮಯದ ಬಳಿಕ ಸರಿಹೋಗುವುದು.

ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಲು ಸ್ಟಿರಾಯ್ಡ್ ಕೂಡ ಕಾರಣ
ಕೋವಿಡ್ 19 ವೈರಸ್ ತಗುಲಿದಾಗ ರೋಗಿಗಳು ಬೇಗನೆ ಚೇತರಿಸಿಕೊಳ್ಳುವಂತೆ ಮಾಡಲು ಸ್ಟಿರಾಯ್ಡ್ ನೀಡಲಾಗುತ್ತಿತ್ತು. ಇದು ಕೂಡ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಲು ಎಂದು ಕಾರಣ ಎಂಬುವುದನ್ನು ತಜ್ಞರು ಹೇಳಿದ್ದಾರೆ.

ಕೆಲವರಿಗೆ ಮಧುಮೇಹ ಇದೆ ಎಂಬುವುದು ಕೋವಿಡ್ ಚಿಕಿತ್ಸೆ ಸಮಯದಲ್ಲಿ ಗೊತ್ತಾಗಿದ್ದು
ಕೆಲವರಲ್ಲಿ ಕೋವಿಡ್ 19ನ ಬಳಿಕ ಮಧುಮೇಹ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಅದಕ್ಕಿಂತ ಮೊದಲೇ ಇತ್ತು, ಆದರೆ ಅವರು ಪರೀಕ್ಷೆ ಮಾಡಿರಲಿಲ್ಲ, ಕೋವಿಡ್ 19ಗೆ ಚಿಕಿತ್ಸೆ ನೀಡುವಾಗ ಅವರಿಗೆ ಮಧುಮೇಹ ಇರುವುದು ತಿಳಿದುಬಂತು ಎಂದು
ಡಾ. ಮಹೇಶ್ ಡಿ ಎಂ (Consultant, Endocrinology, Aster CMI Hospital) ಹೇಳಿದ್ದಾರೆ.

ಕೋವಿಡ್ 19 ನಂತರ ಬಂದ ಮಧುಮೇಹ ಕಡಿಮೆಯಾಗಬಹುದು
ಕೋವಿಡ್ 19 ನಂತರ ಮಧುಮೇಹ ಬಂದರೆ ಕೆಲವರಿಗೆ ಮೆಡಿಷನ್ ಮೂಲಕ ಇನ್ನು ಕೆಲವರಿಗೆ ಇನ್ಸುಲಿನ್ ಮೂಲಕ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಹೆಚ್ಚಿನವರಿಗೆ ಮಧುಮೇಹ ನಿಯಂತ್ರಣಕ್ಕೆ ಬಂದು ಮುಂದೆ ಚಿಕಿತ್ಸೆ ಅಗ್ಯತವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಕೆಲವರಿಗೆ ಮಧುಮೇಹ ಚಿಕಿತ್ಸೆ ಮುಂದುರೆಸಬೇಕಾಗುತ್ತದೆ. ಅದರ ಕುರಿತು ವೈದ್ಯರು ಪರಿಶೀಲಿಸಿ ಮಾಹಿತಿ ನಿಡುತ್ತಾರೆ.



Click it and Unblock the Notifications
