Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಅತಿಯಾದ ಫೈಬರ್ ಸೇವಿಸುವ ಮುನ್ನ ಈ ವಿಚಾರಗಳು ತಿಳಿದಿರಲಿ..!
ಅತಿಯಾದ್ರೆ ಅಮೃತವು ವಿಷ ಅಂತಾರಲ್ಲ ಹಾಗೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ಯಾವುದೇ ವಸ್ತುವನ್ನಾದರೂ ಸಿಕ್ಕಾಪಟ್ಟೆ ಸೇವಿಸೋದಕ್ಕೆ ಹೋಗಬೇಡಿ. ಅದೇ ರೀತಿ ಫೈಬರ್ ಅಂಶಗಳಿರುವ ವಸ್ತುಗಳು ಕೂಡ. ನಾವು ಜೀರ್ಣಕ್ರಿಯೆ ಉತ್ತಮವಾಗಿರಲಿ ಅಂತಾ ಫೈಬರ್ ಅಂಶವಿರುವ ವಸ್ತುಗಳನ್ನು ಸೇವನೆ ಮಾಡ್ತೀವಿ ಹಾಗಂತ ಸಿಕ್ಕಾಪಟ್ಟೆ ಫೈಬರ್ ಸೇವಿಸಿದ್ರೆ ಅದು ಆರೋಗ್ಯದ ಮೇಲೆ ಋನಾತ್ಮಕ ಪರಿಣಾಮವನ್ನು ಬೀರಲಿದೆ.

ಫೈಬರ್ ಅಂಶಗಳನ್ನು ಹೊಂದಿರುವ ಪದಾರ್ಥಗಳು ಯಾವುದು? ನಮ್ಮ ದೇಹಕ್ಕೆ ಎಷ್ಟು ಪ್ರಮಾಣದ ಫೈಬರ್‌ನ ಅವಶ್ಯಕತೆ ಇದೆ. ಅತೀ ಹೆಚ್ಚು ಫೈಬರ್ ಸೇವನೆ ಮಾಡಿದ್ರೆ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದನ್ನ ತಿಳಿಯೋಣ.

ಫೈಬರ್ ಅಂಶ ಹೊಂದಿರುವ ಪದಾರ್ಥಗಳು :
ಫೈಬರ್ ಅಂಶವನ್ನು ನೀವು ಸಸ್ಯಗಳಿಂದ ಬೀಜಗಳು, ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಬೀನ್ಸ್, ದ್ವಿದಳ ಧಾನ್ಯಗಳಿಂದ ಪಡೆಯಬಹುದು. ಅನೇಕ ಜನ ತಮ್ಮ ಡಯೇಟ್‌ನಲ್ಲಿ ಇದನ್ನು ಸೇರಿಸುತ್ತಾರೆ. ಇನ್ನೂ ಕೆಲವರು ಇದನ್ನು ಅತಿಯಾಗಿ ಸೇವನೆ ಮಾಡುತ್ತಾರೆ. ಇದು ಇವರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ಆರೋಗ್ಯಕ್ಕೆ ಎಷ್ಟು ಪ್ರಮಾಣದ ಫೈಬರ್‌ನ ಅಗತ್ಯವಿದೆ?
19 ರಿಂದ 20 ವರ್ಷದ ವ್ಯಕ್ತಿಗೆ ನಿತ್ಯ 38 ಗ್ರಾಂ ನಷ್ಟು ಫೈಬರ್‌ನ ಅಗತ್ಯವಿದೆ. ಕೆಲವೊಂದು ಬಾರಿ ಅವರ ವ್ಯಾಯಾಮ, ಎತ್ತರ, ಆರೋಗ್ಯದ ಮೇಲೂ ಇದು ಅವಲಂಬಿತವಾಗಿರುತ್ತದೆ.
ವರದಿಗಳ ಪ್ರಕಾರ ಸಾವಿರ ಕ್ಯಾಲೋರಿಗೆ 14 ಗ್ರಾಂ ನಷ್ಟು ಪೈಬರ್‌ನ ಸೇವಿಸಿದ ವ್ಯಕ್ತಿ ಆರೋಗ್ಯಕರ ತೂಕವನ್ನು ಪಡೆಯುತ್ತಾನಂತೆ. ಒಂದು ವೇಳೆ ನೀವು ಎರಡು ಸಾವಿರ ಕ್ಯಾಲೋರಿ ಆಹಾರವನ್ನು ಸೇವಿಸುತ್ತಿದ್ದರೆ ಅದರಲ್ಲಿ 28 ಗ್ರಾಂ ನಷ್ಟು ಫೈಬರ್‌ನ ಅಂಶವಿರಬೇಕಾಗುತ್ತದೆ.
ವಯಸ್ಕರು ನಿತ್ಯ 80 ಗ್ರಾಂಗಿಂತ ಅಧಿಕ ಆಹಾರವನ್ನು ಸೇವಿಸಬಾರದು. ಇದರಿಂದಾಗಿ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಅತಿಯಾದ ಫೈಬರ್ ಸೇವಿಸುವುದರಿಂದ ಆಗುವ ಅಡ್ಡ ಪರಿಣಾಮಗಳೇನು?
ಅತಿಸಾರ
ಫೈಬರ್ ಅಂಶವಿರುವ ಪದಾರ್ಥ ಸೇವನೆಯಿಂದ ಇದು ಮಲಬದ್ಧತೆಗೆ ಸಹಾಯ ಮಾಡಬಹುದಾದರೂ ಹೆಚ್ಚಿನ ಫೈಬರ್ ಹೊಂದಿರುವ ಆಹಾರ ಸೇವನೆ ಅತಿಸಾರಕ್ಕೆ ಕಾರಣವಾಗಬಹುದು. ನಿಮ್ಮ ದಿನನಿತ್ಯದ ಆಹಾರದಲ್ಲಿ ಹೆಚ್ಚಿನ ಫೈಬರ್ ಅಂಶವನ್ನು ಸೇರಿಸುವುದು ಖಂಡಿತ ಉತ್ತಮವಲ್ಲ.

ಕರುಳಿನಲ್ಲಿ ಬ್ಲಾಕ್ ಉಂಟಾಗುತ್ತದೆ.
ನೀವು ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಸೇವಿಸಿದಾಗ ಅದಕ್ಕೆ ತಕ್ಕಂತೆ ಸಾಕಷ್ಟು ದ್ರವ ಸೇವಿಸದಿದ್ದರೆ ಹೆಚ್ಚಿನ ಪ್ರಮಾಣದ ಫೈಬರ್ ನಿಮ್ಮ ದೇಹದಿಂದ ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಅಥವಾ ಹೊರಹಾಕಲು ಸಾಧ್ಯವಾಗದೆ ಕರುಳಿನ ಅಡಚಣೆಯನ್ನು ಉಂಟುಮಾಡಬಹುದು. ಇದು ಗಂಭೀರವಾದ ಸಮಸ್ಯೆಯಾಗಿದ್ದು, ಇದರ ಪರಿಹಾರಕ್ಕೆ ನೀವು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಮಲಬದ್ಧತೆ ಉಂಟಾಗುತ್ತದೆ
ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದ ನೀರಿನ ಅವಶ್ಯಕತೆ ಇದೆ. ಫೈಬರ್ ಅಂಶವಿರುವ ಆಹಾರವನ್ನು ಸೇವಿಸಿ ನೀರು ಕುಡಿಯದೇ ಇದ್ದರೆ ಖಂಡಿತ ಅದು ಮಲಬದ್ಧತೆಗೆ ಕಾರಣವಾಗುತ್ತದೆ. ನೀವು ಫೈಬರ್ ಸೇವನೆಯನ್ನು ಹೆಚ್ಚಿಸಿದಾಗ ಅದಕ್ಕೆ ತಕ್ಕಂತೆ ದ್ರವ ಸೇವನೆಯನ್ನು ಹೆಚ್ಚಿಸಬೇಕು. ನಿತ್ಯ ಚಲನೆ ಹಾಗೂ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯಕಾರಿ ಜೀವನವನ್ನು ಅಳವಡಿಸಿಕೊಳ್ಳಬಹುದು.

ಹೊಟ್ಟೆ ಉಬ್ಬುವುದು
ಹೆಚ್ಚಿನ ಫೈಬರ್ ಹೊಂದಿರುವ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬುವುದು ಮತ್ತು ಅತಿಸಾರದಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನೀವು ಫೈಬರ್ ಅಧಿಕವಾಗಿರುವ ಆಹಾರವನ್ನು ಸೇವಿಸಿದಾಗ ಅದು ನಿಧಾನವಾಗಿ ಜೀರ್ಣವಾಗುತ್ತದೆ, ಆದ್ದರಿಂದ ನಿಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾವು ಅದನ್ನು ಹುದುಗಿಸಲು ಸಮಯವನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಹೊಟ್ಟೆಯಲ್ಲಿ ಅನಿಲದ ಅಂಶ ಹೆಚ್ಚಾಗುತ್ತದೆ. ಈಗಾಗಲೇ ಹೊಟ್ಟೆ ಉಬ್ಬಿರುವಾಗ ನೀವು ಹೆಚ್ಚು ಫೈಬರ್ ಸೇರಿಸಿದರೆ, ಅದು ಮತ್ತಷ್ಟು ಅಸ್ವಸ್ಥತೆಯನ್ನು ಉಂಟುಮಾಡಬಹುದು.
ಯಾವುದೇ ಆಹಾರ ಪದಾರ್ಥವಾಗಲಿ ಎಲ್ಲದಕ್ಕೂ ಒಂದು ಮಿತಿಯಿದೆ. ನಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಅಗತ್ಯವಿದೆ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಸೇವನೆ ಮಾಡಬೇಕು.



Click it and Unblock the Notifications