Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕೇರಳದಲ್ಲಿ ನೋರಾವೈರಸ್ ಪತ್ತೆ: ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?
ಕೇರಳದಲ್ಲಿ ಇದೀಗ ನೋರಾವೈರಸ್ ಪತ್ತೆಯಾಗಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ನೋರಾವೈರಸ್ ಪತ್ತೆಯಾಗಿದ್ದು ಈ ರೋಗದ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಮುನ್ನೆಚ್ಚರಿಕೆವಹಿಸಿದೆ.
ನೋರಾವೈರಸ್ ಎಂಬುವುದು ಪ್ರಾಣಿಗಳಿಂದ ಹರಡುವ ರೋಗವಾಗಿದೆ. ಕಲುಷಿತ ನೀರು ಹಾಗೂ ಆಹಾರದ ಮೂಲಕ ಹರಡುವುದು. ಈ ನೋರಾವೈರಸ್ ಅನ್ನು ಸರಿಯಾದ ಕ್ರಮಗಳನ್ನು ಅನುಸರಿಸುವುದು ಹಾಗೂ ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ತಡೆಗಟ್ಟಬಹುದು.
ನೋರಾವೈರಸ್ ಯಾವ ರೀತಿ ಹರಡುತ್ತದೆ? ಈ ವೈರಸ್ ತಗುಲಿದಾಗ ಕಂಡು ಬರುವ ಲಕ್ಷಣಗಳೇನು? ಇದನ್ನು ತಡೆಗಟ್ಟಲು ಏನು ಮಾಡಬೇಕು ಎಂಬೆಲ್ಲಾ ಮಾಹಿತಿ ತಿಳಿಯೋಣ:

ನೋರಾವೈರಸ್ ಎಂದರೇನು?
ನೋರಾ ವೈರಸ್ ಹೊಟ್ಟೆಗೆ ಸಂಬಂಧಿಸಿದ (gastrointestinal) ಕಾಯಿಲೆಯಾಗಿದೆ. ನೋರಾವೈರಸ್ ಆರೋಗ್ಯವಂತ ವ್ಯಕ್ತಿಯ ಮೇಲೆ ಏನೂ ಪರಿಣಾಮ ಬೀರಲ್ಲ. ಆದರೆ ವಯಸ್ಸಾದವರಿಗೆ ಹಾಗೂ ಮಕ್ಕಳಿಗೆ ಇದು ಅಪಾಯಕಾರಿಯಾಗಿದೆ.

ನೋರಾವೈರಸ್ ಲಕ್ಷಣಗಳೇನು?
* ತುಂಬಾ ಹೊಟ್ಟೆನೋವು
* ವಾಂತಿ
* ಬೇಧಿ
* ಸುಸ್ತು
* ಮೈ ಉಷ್ಣತೆ ಹೆಚ್ಚುವುದು
* ತಲೆನೋವು
* ಮೈಕೈ ನೋವು
* ತುಂಬಾ ವಾಂತಿ-ಬೇಧಿಯಾದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಹಾಗಾದರೆ ತೊಂದರೆಯಾಗುವುದು.

ನೋರಾ ವೈರಸ್ ಹೇಗೆ ಹರಡುವುದು?
* ಸೋಂಕಿತ ವ್ಯಕ್ತಿಯ ಜೊತೆಗಿನ ನಿಕಟ ಸಂಪರ್ಕದಿಂದ ಹರಡುವುದು
* ಸೋಂಕಾಣು ಇರುವ ನೆಲವನ್ನು ಮುಟ್ಟವುದರಿಂದ ಹರಡುವುದು
* ಸೋಂಕಿತ ವ್ಯಕ್ತಿ ತಯಾರಿಸಿದ ಆಹಾರವನ್ನು ಸೇವಿಸಿದಾಗ
*ವಾಂತಿ ಮಾಡಿದಾಗ ಆ ದ್ರವದ ಹನಿ ಹಾರಿ ಅದು ಬಿದ್ದಿರುವ ಸ್ಥಳವನ್ನು ಮುಟ್ಟಿದಾಗ ಸೋಂಕು ಹರಡುವುದು.

ನೋರಾವೈರಸ್ ತಡೆಗಟ್ಟಲು ಇರುವ ಮಾರ್ಗಸೂಚಿಗಳೇನು?
* ಕೇರಳ ಸರ್ಕಾರ ಹರಡಿರುವ ಮಾರ್ಗಸೂಚಿ ಪ್ರಕಾರ ನೋರಾ ವೈರಸ್ ತಗುಲಿದ ವ್ಯಕ್ತಿ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಬೇಕು.
* ಸಾಕಷ್ಟು ನೀರು ಕುಡಿಯಬೇಕು.
*ORS ಕುಡಿಯಿರಿ
* ನೀರನ್ನು ಕುದಿಸಿ ಕುಡಿಯಬೇಕು.
* ಅನಾರೋಗ್ಯದ ಪ್ರಾಣಿಗಳನ್ನು ಆರೈಕೆ ಮಾಡುವವರು ಹೆಚ್ಚು ಸುರಕ್ಷತೆ ಕ್ರಮ ವಹಿಸಬೇಕು.
*ನೀರನ್ನು ಕ್ಲೋರಿನ್ ಬಳಸಿ ಶುದ್ಧೀಕರಿಸಬೇಕು.
* ಹಣ್ಣು ಹಾಗೂ ತರಕಾರಿಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು.
* ಸಮುದ್ರಾಹಾರಗಳನ್ನು ತಿನ್ನಬಹುದು, ಆದರೆ ಅವುಗಳನ್ನು ಚೆನ್ನಾಗಿ ಬೇಯಿಸಿದ ನಂತರವಷ್ಟೆ ಸೇವಿಸಿ.
* ಹಾಳಾದ ಅಥವಾ ಹೊರಗಡೆ ತೆಗೆದಿಟ್ಟ ಆಹಾರವನ್ನು ಸೇವಿಸಬೇಡಿ.



Click it and Unblock the Notifications
