Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರಾಷ್ಟ್ರೀಯ ಲಸಿಕೆ ದಿನ 2023: ಲಸಿಕೆ ಪಡೆಯದಿದ್ದರೆ ಏನಾಗುತ್ತೆ?
ಮಾರ್ಚ್ 16ಕ್ಕೆ ರಾಷ್ಟ್ರೀಯ ಲಸಿಕೆ ದಿನ. ಲಸಿಕೆಯ ಅವಶ್ಯಕತೆ ಕುರಿತು ಜನರಲ್ಲಿ ಅರಿವು ಮೂಡಿಸಲು ಲಸಿಕೆ ದಿನವನ್ನು ಆಚರಿಸಲಾಗುವುದು. ಕೆಲವೊಂದು ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಲಸಿಕೆಗಳು ದೇಹಕ್ಕೆನೀಡುತ್ತವೆ, ಹೀಗಾಗಿ ಲಸಿಕೆ ಪಡೆಯಬೇಕಾಗಿರುವುದು ಅವಶ್ಯಕ.

0-5 ವರ್ಷದ ಮಕ್ಕಳಿಗೆ ಸರ್ಕಾರವೇ ಕೆಲವೊಂದು ಲಸಿಕೆಯನ್ನು ಕಡ್ಡಾಯವಾಗಿ ನೀಡುತ್ತಿದ್ದಾರೆ. ಮಕ್ಕಳು ರೋಗಕ್ಕೆ ತುತ್ತಾಗಿ ಅಕಾಲಿಕ ಮರಣವನ್ನು ತಡೆಯುವ ಉದ್ದೇಶದಿಂದ ಈ ಲಸಿಕೆಯನ್ನು ನೀಡಲಾಗುವುದು. ಅದಾದ ಬಳಿಕ ಕೆಲವರಷ್ಟೇ ವಯಸ್ಸಿಗೆ ತಕ್ಕಂತೆ ಲಸಿಕೆ ಪಡೆಯುತ್ತಾರೆ, ಇನ್ನು ಕೆಲವರು ಲಸಿಕೆಯನ್ನು ಪಡೆಯುವುದೇ ಇಲ್ಲ. ಯಾರು ಲಸಿಕೆಯನ್ನು ಪಡೆದಿರುವುದಿಲ್ಲವೋ ಅವರಿಗೆ ಕೆಲವೊಂದು ಕಾಯಿಲೆಗಳು ಬಾಧಿಸುವ ಸಾಧ್ಯತೆ ಹೆಚ್ಚು. ಈ ಲಸಿಕೆಗಳು ಕಾಯಿಲೆಗಳನ್ನು ತಡೆಗಟ್ಟುತ್ತವೆ.
ಲಸಿಕೆಗಳು ಕಾಯಿಲೆಗಳನ್ನು ಹೇಗೆ ತಡಗಟ್ಟುತ್ತದೆ? ಮಕ್ಕಳಿಗೆ, ಗರ್ಭಿಣಿಯರಿಗೆ, ವಯಸ್ಸಾದವರಿಗೆ ಲಸಿಕೆ ಅವಶ್ಯಕ ಏಕೆ, ಯಾವ ವಯಸ್ಸಿನಲ್ಲಿ ಯಾವ ಲಸಿಕೆ ತೆಗೆದುಕೊಳ್ಳಬೇಕು ಎಂದು ನೋಡೋಣ ಬನ್ನಿ?
ಲಸಿಕೆಯ ಕಾರ್ಯವೇನು?
ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಲಸಿಕೆಯನ್ನು ದುರ್ಬಲ ಅಥವಾ ಸತ್ತ ವೈರಸ್ ಬಳಸಿ ತಯಾರಿಸಲಾಗುವುದು. ಇವುಗಳನ್ನು ದೇಹಕ್ಕೆ ಸೇರಿಸಲಾಗುವುದು. ಇವು ದೇಹದಲ್ಲಿ ಆ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.
ಈ ವೈರಸ್‌ಗಳು ದೇಹದ ಮೇಲೆ ದಾಳಿ ಮಾಡಿದಾಗ ನಮ್ಮ ದೇಹವು ಆ ವೈರಸ್‌ಗಳ ವಿರುದ್ಧ ಹೋರಾಡಿ ನಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ.
ಸೋಂಕು ತಗುಲುವುದಕ್ಕಿಂತ ಲಸಿಕೆ ಪಡೆಯುವುದು ಉತ್ತಮ
ಲಸಿಕೆ ಪಡೆಯದಿದ್ದರೆ ಸೋಂಕು ತಗುಲಿದಾಗ ನಮ್ಮ ದೇಹ ದುರ್ಬಲವಾಗುವುದು, ಆ ವೈರಸ್ ನಮ್ಮ ಪ್ರಾಣಕ್ಕೂ ಕಂಟಕ ತರಬಹುದು. ಅದೇ ನಾವು ಲಸಿಕೆ ತೆಗದುಕೊಂಡರೆ ನಮ್ಮ ದೇಹವು ಆ ವೈರಸ್‌ಗಳ ವಿರುದ್ಧ ಸಮರ್ಥವಾಗಿ ಹೋರಾಡುವುದು.
ಉದಾಹರಣೆಗೆ ಕೊರೊನಾ ಲಸಿಕೆಯನ್ನುತೆಗೆದುಕೊಳ್ಳಿ ಲಸಿಕೆ ಬೇಗನೆ ಬಾರದೇ ಇದ್ದಿದ್ದರೆ ಕೊರೊನಾ ಇನ್ನಷ್ಟು ಭೀಕರವಾಗಿರುತ್ತಿತ್ತು, ಲಸಿಕೆ ಬಂದ ಮೇಲೆ ಕೊರೊನಾವನ್ನು ನಿಯಂತ್ರಿಸಲು ಸಾಧ್ಯವಾಗಿದೆ.
ಮಕ್ಕಳಿಗೆ ಲಸಿಕೆ ಅವಶ್ಯಕ
ಮಗು ಹುಟ್ಟಿದಾಗಿನಿಂದ 5 ವರ್ಷದವರೆಗೆ ಮಗುವಿನ ವಯಸ್ಸಿಗೆ ತಕ್ಕಂತೆ ಲಸಿಕೆಯನ್ನು ನೀಡಲಾಗುವುದು. ಎಲ್ಲಾ ತಿಂಗಳಿನಲ್ಲಿ ಮಗುವಿಗೆ ಲಸಿಕೆ ನೀಡುವುದಿಲ್ಲ. ಯಾವ ಲಸಿಕೆಯನ್ನು ಯಾವ ತಿಂಗಳಿನಲ್ಲಿ ನೀಡಬೇಕು ಎಂಬುವುದರ ಬಗ್ಗೆ ಲಸಿಕೆ ಚಾರ್ಟ್ ನೀಡಿರುತ್ತಾರೆ, ಅದರಂತೆ ಲಸಿಕೆ ನೀಡಬೇಕಾಗುವುದು.
ಮಕ್ಕಳ ಲಸಿಕೆ ಕುರಿತು ಪೋಷಕರಲ್ಲಿ ಈ ಗೊಂದಲ ಅಧಿಕವಿರುತ್ತದೆ
* ಮಗುವಿಗೆ ಜ್ವರವಿದ್ದಾಗ ಕೊಡಬಹುದೇ?
ಲಸಿಕೆ ಕೊಡುವ ಸಮಯದಲ್ಲಿ ತುಂಬಾ ಜ್ವರವಿದ್ದರೆ ಆ ಸಮಯದಲ್ಲಿ ಲಸಿಕೆ ನೀಡುವುದಿಲ್ಲ. ವೈದ್ಯರು ನಿಮಗೆ ಜ್ವರ ಕಡಿಮೆಯಾದ ಬರಲು ಸೂಚಿಸುತ್ತಾರೆ, ಆವಾಗ ತೆಗೆದುಕೊಳ್ಳಬಹುದು.
ಗರ್ಭಿಣಿಯರಿಗೆ
ಗರ್ಭಿಣಿ ಎಂದು ಖಚಿತವಾದಾಗ ವೈದ್ಯರು ಗರ್ಭಿಣಿಯರಿಗೆ ಲಸಿಕೆ ನೀಡುತ್ತಾರೆ. ಇದು ಕೆಮ್ಮಿನಿಂದ ಹಾಗೂ ಇತರ ಬ್ಯಾಕ್ಟಿರಿಯಾ, ವೈರಸ್‌ಗಳಿಂದ ರಕ್ಷಣೆ ನೀಡುವುದು.
ಇನ್ನು ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಲಸಿಕೆಯಿದೆ. ಇದನ್ನು ತೆಗೆದುಕೊಳ್ಳುವುದರಿಂದ ಗರ್ಭಕೋಶಕ್ಕೆ ಹಾನಿಯುಂಟಾಗುವುದನ್ನು ತಡೆಗಟ್ಟಬಹುದು.
ಹೀಗೆ ನಮ್ಮನ್ನು ಹಲವು ವೈರಸ್‌ಗಳಿಂದ ರಕ್ಷಣೆ ಮಾಡುವ ಹಲವಾರು ಲಸಿಕೆ ರಕ್ಷಣೆ ನೀಡುತ್ತದೆ.
ಲಸಿಕೆಯನ್ನು ನಿಗದಿತ ಸಮಯಕ್ಕೆ ಮಕ್ಕಳಿಗೆ ಕೊಡಿಸಿ.
ದೊಡ್ಡವರು ಕೂಡ ಫ್ಲೂ ಲಸಿಕೆ ಸೇರಿದಂತೆ ಹಲವು ಲಸಿಕೆಗಳಿವೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಯಾವ ಲಸಿಕೆ ಒಳ್ಳೆಯದು ಎಂದು ನಿಮ್ಮ ವೈದ್ಯರ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
