Latest Updates
-
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ
ಅಂತರ್ಜಾಲಕ್ಕಿಂತ ವೈದ್ಯರೇಕೆ ಹೆಚ್ಚು ನಂಬಲು ಅರ್ಹರು?
ವೈದ್ಯರ ದಿನಾಚರಣೆ ಅದರಲ್ಲೂ ಈ ವರ್ಷದ (2020) ಆಚರಣೆ ಬಹಳ ಮಹತ್ವ ಪಡೆದಿದೆ. "ವೈದ್ಯೋ ನಾರಾಯಣೋ ಹರಿಃ' ಎಂಬ ಮಾತು ಅಕ್ಷರಶಃ ಸತ್ಯವಾಗಿದೆ. ಕೋವಿಡ್ ರೋಗ ವಿಶ್ವದೆಲ್ಲೆಡೆ ಮರಣಮೃದಂಗ ಬಾರಿಸುತ್ತಿರುವ ಇಂಥಾ ಸಂದರ್ಭದಲ್ಲಿ ವೈದ್ಯರು ರೋಗಿಗಳಿಗೆ ಕಾಣುವ ದೇವರಾಗಿದ್ದಾರೆ. ಅಷ್ಟೇ ಅಲ್ಲ, ನಮಗೆ ಯಾವುದೇ ಕಾಯಿಲೆ ಬರಲಿ ನಾವು ಮೊದಲು ಭೇಟಿ ಮಾಡುವುದು ವೈದ್ಯರನ್ನೇ. ನಮ್ಮೆಲ್ಲರ ಪ್ರಾಣರಕ್ಷಕರಾಗಿರುವ ವೈದ್ಯರು ಹಗಲು ರಾತ್ರಿ ಸೇವೆಸಲ್ಲಿಸುತ್ತಾರೆ. ಹೀಗಿರುವಾಗ ವೈದ್ಯರಿಗೆ ಅಭಿನಂದನೆಯನ್ನು ಸಲ್ಲಿಸಲು ವೈದ್ಯರ ದಿನ ಆಚರಿಸುವುದು ಅತ್ಯಂತ ಉಚಿತ ಕಾರ್ಯ.

ಈ ಸಾಲಿನ ವೈದ್ಯರ ದಿನಾಚರಣೆಯನ್ನು "ಕೋವಿಡ್-19ನಿಂದ ಸಾವನ್ನಪ್ಪುವವರ ಮರಣ ಪ್ರಮಾನಣವನ್ನು ಕಡಿಮೆ ಮಾಡೋಣ" ಎಂಬ ಧ್ಯೇಯದಡಿ ಆಚರಿಸಲಾಗುತ್ತಿದೆ.
ಭಾರತದಲ್ಲಿ ವೈದ್ಯರ ಸಮಯ ನಿರ್ಬಂಧವಿಲ್ಲದ ಸೇವೆಯನ್ನು ಗುರುತಿಸುವ ಸಲುವಾಗಿ ಈ ದಿನವನ್ನು ಜುಲೈ 1 ರಂದು ಆಚರಿಸಲಾಗುತ್ತದೆ. ಭಾರತದಲ್ಲಿ ಈ ದಿನದಂದು ಭಾರತದ ಪ್ರಖ್ಯಾತ ವೈದ್ಯರಾದ ಡಾ. ಬಿಧಾನ್ ಚಂದ್ರ ರೋಯ್ ಅವರನ್ನು ಸ್ಮರಿಸಲಾಗುತ್ತದೆ. ಈ ದಿನ ಅವರ ಜನ್ಮ ದಿನ ಹಾಗೂ ಮರಣ ದಿನವೂ ಹೌದು.
ಇತ್ತೀಚಿನ ದಿನಗಳಲ್ಲಿ ವೈದ್ಯರೇ ಅಲ್ಲದೇ ಅಂತರ್ಜಾಲದಲ್ಲೂ ಸಾಕಷ್ಟು ವೈದ್ಯಕೀಯ ಮಾಹಿತಿಗಳು ಲಭ್ಯವಿದೆ. ಹೆಚ್ಚಿನ ಜನರು ವೈದ್ಯರಲ್ಲಿ ಹೋಗುವ ಮುನ್ನವೇ ಅಂತರ್ಜಾಲದಲ್ಲಿ ತಮಗಿರುವ ರೋಗ ಲಕ್ಷಣಗಳ ಬಗ್ಗೆ ಅಧ್ಯಯನ ಮಾಡಿ ಹೋಗಿರುತ್ತಾರೆ. ಆದರೆ ಈ ಮಾಹಿತಿಗಳ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿಸಬಹುದು ? ವೈದ್ಯರ ದಿನದಂದು ಇದರ ಬಗ್ಗೆ ಗಮನ ಬೆಳಕು ಚೆಲ್ಲೋಣ.
ನಮಗೆ ನಂಬಿಕೆ ವೈದ್ಯರ ಮೇಲಿರಬೇಕೇ ಹೊರತು ಅಂತರ್ಜಾಲದ ಮೇಲೆ ಅಲ್ಲ. ಅಂತರ್ಜಾಲದಲ್ಲಿ ಸಿಗುವ ಎಲ್ಲಾ ಮಾಹಿತಿಗಳು ನೂರಕ್ಕೆ ನೂರು ಸತ್ಯ ಎಂದು ಹೇಳಲೂ ಸಾಧ್ಯವಿಲ್ಲ. ಹಾಗಾಗಿ ಈ ಮಾತನ್ನು ಸಾಬೀತು ಮಾಡುವ ಕೆಲವು ಕಾರಣಗಳು ಇಲ್ಲಿವೆ:

1. ವೈದ್ಯರು ರೋಗ ಲಕ್ಷಣಗಳನ್ನು ಹೆಚ್ಚು ಅರ್ಥೈಸಿಕೊಳ್ಳುವವರಾಗಿದ್ದಾರೆ
ನೀವು ಅಂತರ್ಜಾಲದಲ್ಲಿ ಹುಡುಕುವಾಗ ನಿಮಗೆ ರೋಗದ ಸಾಮೂಹಿಕ ಲಕ್ಷಣಗಳಷ್ಟೇ ತಿಳಿಯುತ್ತವೆ. ಆದರೆ ಬಹಳ ಸಂದರ್ಭಗಳಲ್ಲಿ ಕೆಲವು ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಹೀಗಾಗಿ ನಿಮ್ಮನ್ನು ನೋಡಿದ ವೈದ್ಯರಷ್ಟೇ ನಿಮ್ಮ ರೋಗದ ಬಗೆಗಿನ ಇತಿಹಾಸ ಮತ್ತು ಇತರ ಪರಿಸ್ಥಿತಿಗಳ ಸಮಗ್ರ ಅವಲೋಕನ ಮಾಡುತ್ತಾರೆ.
ವೈದ್ಯರ ದಿನಾಚರಣೆ : ನಿಮ್ಮ ವೈದ್ಯರು ಅಂತರ್ಜಾಲಕ್ಕಿಂತ ಚೆನ್ನಾಗಿ ರೋಗ ಲಕ್ಷಣಗಳನ್ನು ವಿವರಿಸಬಲ್ಲರು.

2. ಪರಿಣಿತರ ಸಲಹೆಗಿಂತ ಮಿಗಿಲಾದುದು ಏನಿದೆ?
ವೈದ್ಯರು ರೋಗಿಗೆ ಚಿಕಿತ್ಸೆ ನೀಡಲು ವರ್ಷಾನುಗಟ್ಟಲೆ ತರಬೇತಿ ಪಡೆದಿರುತ್ತಾರೆ. ವೈದ್ಯರು ನೀಡುವ ಯಾವುದೇ ಸಲಹೆ ಅಂತರ್ಜಾಲ ನೀಡುವ ಉಪಾಯಕ್ಕಿಂತ ಹೆಚ್ಚು ನಂಬಲರ್ಹವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ವೈದ್ಯರ ಬಳಿ ನೇರವಾಗಿ ಸಲಹೆ ಪಡೆಯುವ ಸಾಧ್ಯತೆ ಸಿಕ್ಕಿರುವುದು ವೈದ್ಯಕೀಯ ಚಿಕಿತ್ಸೆ ಸುಲಭವಾಗಿ ದೊರೆಯುವಂತೆ ಮಾಡಿದೆ.

3. ಅಂತರ್ಜಾಲಕ್ಕೆ ನಿಮ್ಮ ಆರೋಗ್ಯದ ಇತಿಹಾಸ ತಿಳಿದಿರುವುದಿಲ್ಲ
ಸರಿಯಾದ ಉಪಚಾರಕ್ಕೆ ರೋಗದ ಇತಿಹಾಸ, ಹಿಂದಿನ ವೈದ್ಯಕೀಯ ಚಿಕಿತ್ಸೆಯ ವರದಿಗಳು, ಕುಟುಂಬದಲ್ಲಿ ರೋಗದ ಇರುವಿಕೆ ಮತ್ತು ಇತರ ಮಾಹಿತಿಗಳು ಬಹಳ ಅಗತ್ಯ. ಅಂತರ್ಜಾದಲ್ಲಿ ಸಿಗುವ ನೆರವು ಔಷಧಿ ನೀಡುವ ಮೊದಲು ಈ ಎಲ್ಲಾ ಅಂಶಗಳ ಬಗ್ಗೆ ಗಮನ ಹರಿಸುವುದಿಲ್ಲ. ಕೇವಲ ನಿಮ್ಮ ವೈದ್ಯರಷ್ಟೇ ಎಲ್ಲಾ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿಮಗೆ ಸರಿಯಾದ ಔಷಧಿ ನೀಡುತ್ತಾರೆ.

4. ಅತಿ ಕಡಿಮೆ ಸಂವಹನ
ನಿಮ್ಮ ವೈದ್ಯರು ನಿಮ್ಮ ಮಾತನ್ನು ಕಾಳಜಿಯಿಂದ ಕೇಳುತ್ತಾರೆ ಮತ್ತು ಎಲ್ಲಾ ಚಿಕ್ಕ ವಿವರಗಳನ್ನು ಆಲಿಸುತ್ತಾರೆ. ಈ ತರಹದ ವಿವರವಾದ ಮಾತುಕತೆ ಅಂತರ್ಜಾಲದಲ್ಲಿ ಸಾಧ್ಯವಿಲ್ಲ, ಅಂತರ್ಜಾಲದಲ್ಲಿ ಏಕಮುಖ ಸಂವಹನ ಮಾತ್ರ ನಡೆಯುತ್ತದೆ ಅಲ್ಲಿ ನಿಮ್ಮ ಸಂದೇಹಗಳನ್ನು ಕೇಳಲು ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.



Click it and Unblock the Notifications











