Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಚುಂಬನ ರೋಗ: ಇದರ ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?
ಚುಂಬನ ರೋಗದ ಬಗ್ಗೆ ಕೇಳಿದ್ದೀರಾ... ಇದನ್ನು ವೈದ್ಯಕೀಯ ಭಾಷೆಯಲ್ಲಿ ಸಾಂಕ್ರಾಮಿಕ ಮಾನೋನ್ಯೂಕ್ಲಿಯೊಸಿಸ್ (Infectious mononucleosis) ಅಥವಾ ಮೋನೋ ಎಂದು ಕರೆಯಲಾಗುವುದು. ಈ ಕಾಯಿಲೆ ಕಿಸ್ ನೀಡುವುದರಿಂದ ಹರಡಬಹುದು ಅಥವಾ ಸೋಂಕಿತರು ಬಳಸಿದ ಗ್ಲಾಸ್ ಅಥವಾ ತಟ್ಟೆಯನ್ನು ಮತ್ತೊಬ್ಬರು ಬಳಸಿದರೆ ಕೂಡ ಹರಡುವುದು. ಆದರೆ ಸಾಮಾನ್ಯ ಶೀತದಷ್ಟು ಹರಡುವ ಅಂಟು ರೋಗವಲ್ಲ.
ಈ ರೀತಿಯ ಸೋಂಕು ಹದಿ ಹರೆಯದ ಪ್ರಾಯದವರಲ್ಲಿ ಹಾಗೂ ವಯಸ್ಕರಲ್ಲಿ ಕಂಡು ಬರುವುದು. ಚಿಕ್ಕ ಪ್ರಾಯದ ಮಕ್ಕಳಲ್ಲಿ ಕೆಲ ಲಕ್ಷಣಗಳು ಕಂಡು ಬಂದರೂ ಈ ಕಾಯಿಲೆ ಯಾವುದೇ ಚಿಕಿತ್ಸೆಯಿಲ್ಲದೆಯೇ ಗುಣವಾಗುವುದು.
ಮಾನೋನ್ಯೂಕ್ಲಿಯೊಸಿಸ್ ಉಂಟಾದಾಗ ಗುಲ್ಮದಂಥ ಸಮಸ್ಯೆ ಉಂಟಾದಾಗ ತುಂಬಾ ಎಚ್ಚರವಹಿಸಬೇಕು. ಗುಲ್ಮ ನಮ್ಮ ದೇಹದಲ್ಲಿ ಪ್ರಮುಖ ಕಾರ್ಯನಿರ್ವಹಿಸುವ ಒಂದು ಅಂಗವಾಗಿದೆ. ಇದು ಚಯಪಚಯ ಕ್ರಿಯೆಗೆ ಅವಶ್ಯಕ, ಯಕೃತ್‌ನಲ್ಲಿ ಬೇಡದ ವಸ್ತುಗಳ ಹೊರ ಹಾಕಲು ಫಿಲ್ಟರ್‌ನಂತೆ ಕಾರ್ಯ ನಿರ್ವಹಿಸುತ್ತದೆ.

ಚುಂಬನ ಕಾಯಿಲೆಯ ಲಕ್ಷಣಗಳು
* ತಲೆಸುತ್ತು
* ಗಂಟಲು ನೋವು ( ಗಂಟಲು ನೋವೆಂದು ಚಿಕಿತ್ಸೆ ಪಡೆದರೂ ನೋವು ಕಡಿಮೆಯಾಗಲ್ಲ)
* ಜ್ವರ
* ಕುತ್ತಿಗೆ ಮತ್ತು ಭುಜದ ಕೆಳಗಡೆ ಊತ
* ಟಾನ್ಸಿಲ್‌ನಲ್ಲಿ ಊತ
* ತಲೆನೋವು
* ಚರ್ಮದಲ್ಲಿ ಗುಳ್ಳೆಗಳು
* ಗುಲ್ಮದಲ್ಲಿ ಊತ
ಸೋಂಕು ತಗುಲಿ ರೋಗ ಲಕ್ಷಣಗಳು ಕಂಡು ಬರಲು 6 ವಾರಗಳು ಬೇಕು. ಚಿಕ್ಕ ಮಕ್ಕಳಲ್ಲಿ ಬೇಗನೆ ಕಂಡು ಬರಬಹುದು. ಈ ರೋಗ ಲಕ್ಷಣಗಳಲ್ಲಿ ಜ್ವರ, ಗಂಟಲು ಕೆರೆತ, ನೋವು ಕೆಲವು ವಾರಗಳಲ್ಲಿ ಕಡಿಮೆಯಾದರೆ , ಕುತ್ತಿಗೆ ಹಾಗೂ ಭುಜದ ಕೆಳಗಡೆ ಊತ, ನೋವು ಕೆಲವು ವಾರಗಳವರೆಗೆ ಇರುವುದು.

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?
ರೋಗ ಲಕ್ಷಣಗಳು ಒಂದು ಅಥವಾ ಎರಡು ವಾರಕ್ಕಿಂತ ಹೆಚ್ಚು ಸಮಯ ಕಂಡು ಬಂದಾಗ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.
ಚುಂಬನ ರೋಗ ಅಥವಾ ಮೋನೋಗೆ ಕಾರಣವೇನು?
ಮೋನೋ ರೋಗಕ್ಕೆ ಎಪ್ಸ್ಟೀನ್-ಬಾರ್ ಎಂಬ ವೈರಸ್ ಕಾರಣವಾಗಿದೆ. ಈ ವೈರಸ್ ಎಂಜಲು ಮೂಲಕ ಹರಡುವುದು. ಆದ್ದರಿಂದ ಇದು ಚುಂಬಿಸಿದಾಗ ಅಥವಾ ಸೋಂಕು ತಗುಲಿದವರು ಕುಡಿದ ಲೋಟದಲ್ಲಿ ಕುಡಿದಾಗ, ತಿಂದ ತಟ್ಟೆಯಲ್ಲಿ ತಿಂದಾಗ ರೋಗ ಹರಡಬಹುದು. ತುಂಬಾ ಜನರಿಗೆ ಈ ವೈರಸ್ ತಗುಲಿರುತ್ತದೆ, ಆದರೆ ತುಂಬಾ ಜನರಲ್ಲಿ ಆ ವೈರಸ್ ಮಣಿಸುವ ಆ್ಯಂಟಿಬಾಡೀಸ್ ಉತ್ಪತ್ತಿಯಾಗಿರುತ್ತದೆ, ಆದ್ದರಿಂದ ಮೋನೋ ರೋಗ ಬರುವುದಿಲ್ಲ.

ಚುಂಬನ ರೋಗದ ಅಪಾಯಗಳೇನು?
ಮೋನೋ ರೋಗ ಉಂಟಾದಾಗ ಕಿಬ್ಬೊಟ್ಟೆಯ ಸ್ವಲ್ಪ ಮೇಲ್ಭಾಗದಲ್ಲಿ ನೋವು ಕಂಡುನಲ್ಲಿ ಬರುವುದು, ಈ ರೀತಿಯ ನೋವು ಬಂದರೆ ಕೂಡಲೇ ತಜ್ಞರನ್ನು ಭೇಟಿಯಾಗಿ.
ಲಿವರ್‌ನಲ್ಲಿಈ ಸಮಸ್ಯೆ ಕಂಡು ಬರುವುದು
* ಹೆಪಟೈಟಿಸ್: ಲಿವರ್‌ನಲ್ಲಿ ಉರಿಯೂತ ಕಂಡು ಬರುವುದು.
* ಕಾಮಲೆ: ಕೆಲವೊಮ್ಮೆ ಕಾಮಲೆ ರೋಗ ಕೂಡ ಬರಬಹುದು.

ಈ ರೀತಿಯ ಸಮಸ್ಯೆಗಳೂ ಕೆಲವು ರೋಗಿಗಳಲ್ಲಿ ಕಂಡು ಬರುವುದು.
* ರಕ್ತ ಹೀನತೆ
* ಪ್ಲೇಟ್‌ಲೆಟ್ಸ್ ಕಡಿಮೆಯಾಗುವುದು
* ಹೃದಯ ಸಮಸ್ಯೆ
* ನರಗಳಲ್ಲಿ ತೊಂದರೆ
*ಟಾನ್ಸಿಲ್‌ನಲ್ಲಿ ಊತ
ತುಂಬಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ರೀತಿಯಾಗಿ ಕಂಡು ಬರುವುದು.

ತಡೆಗಟ್ಟುವುದು ಹೇಗೆ?
ಮಾನೋನ್ಯೂಕ್ಲಿಯೊಸಿಸ್ ಎಂಜಲು ಮೂಲಕ ಹರಡುವುದು. ಆದ್ದರಿಂದ ಸೋಂಕು ತಗುಲದಿವರು ಬೇರೆಯವರಿಗೆ ಚುಂಬಿಸುವುದು ಅಥವಾ ಆಹಾರ ಅಥವಾ ಕುಡಿದ ಲೋಟವನ್ನು ಶೇರ್ ಮಾಡುವುದು ಮಾಡಬಾರದು. ರೋಗದಿಂದ ಗುಣಮುಖರಾದರೂ ಕೆಲವು ತಿಂಗಳುಗಳವರೆಗೆ ಯಾರೊಂದಿಗೂ ತಟ್ಟೆ, ಲೋಟ ಹಂಚಿಕೊಳ್ಳಬೇಡಿ.
ಏಕೆಂದರೆ ರೋಗದಿಂದ ಗುಣಮುಖರಾದರೂ ಎಂಜಲಿನಲ್ಲಿ ವೈರಸ್ ಕೆಲವು ತಿಂಗಳವರೆಗೆ ಇರುತ್ತದೆ. ಮಾನೋನ್ಯೂಕ್ಲಿಯೊಸಿಸ್ ತಡೆಗಟ್ಟಲು ಯಾವುದೇ ಲಸಿಕೆಯಿಲ್ಲ.



Click it and Unblock the Notifications
