Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು!
ಶ್ವಾಸಕೋಶದ ಉರಿಯೂತ: ಕಫ ಈ ರೀತಿ ಬಂದ್ರೆ ನಿರ್ಲಕ್ಷ್ಯ ಮಾಡಬೇಡಿ
ಈಗ ಚಳಿಗಾಲ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವುದು ಸಹಜ. ಸಾಮಾನ್ಯ ಶೀತ, ಕೆಮ್ಮುಗಳ ಬಂದು ಹೋಗ್ತಾ ಇರುತ್ತದೆ, ಆದರೆ ಶ್ವಾಸಕೋಶದಲ್ಲಿ ಉರಿಯೂತ ಸಮಸ್ಯೆ ಉಂಟಾದರೆ ನಿರ್ಲಕ್ಷ್ಯ ಮಾಡಬಾರದು, ಏಕೆಂದರೆ ಇದರಿಂದ ನ್ಯೂಮೋನಿಯಾ ಅಪಾಯ ಹೆಚ್ಚು. ಹಾಗಾದರೆ ಶ್ವಾಸಕೋಶದ ಉರಿಯೂತ ಆಗಿದೆ ಎಂದು ಸೂಚಿಸುವ ಲಕ್ಷಣಗಳೇನು? ಇದರ ಅಪಾಯಗಳೇನು, ಚಿಕಿತ್ಸೆಯೇನು ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಗಂಟಲಿನ ಉರಿಯೂತಕ್ಕೆ ಕಾರಣವೇನು?
ಶ್ವಾಸಕೋಶದ ಸೋಂಕುಗಳಾದ ಬ್ರೋಂಕೈಟಿಸ್ ಅಥವಾ ನ್ಯೂಮೋನಿಯಾದಿಂದ ಶ್ವಾಸಕೋಶದ ಉರಿಯೂತ ಉಂಟಾಗುವುದು. ಈ ರೀತಿಯ ಉರಿಯೂತ ಪ್ಯಾಚ್ ರೀತಿ ಬರಬಹುದು ಅಥವಾ ಶ್ವಾಸಕೋಶದ ಅಲ್ಲಲ್ಲಿ ಕೆಟ್ಟ ಪರಿಣಾಮ ಬೀರಬಹುದು.
ಮೈಲ್ಡ್ ಸೋಂಕಾದರೆ ಇನ್‌ಫೆಕ್ಷನ್ ಡೋಸ್ ನೀಡುವ ಮೂಲಕ ಸಗುಣಪಡಿಸಬಹುದು.
ಆದರೆ ಶ್ವಾಸಕೋಶದ ಉರಿಯೂತ ತೀವ್ರವಾಗಿದ್ದರೆ ARDS ಅಂದ್ರೆ acute respiratory distress syndrome ಉಂಟಾಗುವುದು. ಇದು ಪ್ರಾಣಕ್ಕೆ ತುಂಬಾನೇ ಅಪಾಯಕಾರಿಯಾಗಿದೆ.
ಅಸ್ತಮಾ
ಅಸ್ತಮಾ ರೋಗಗಳಲ್ಲೂ ಶ್ವಾಸಕೋಶದ ಉರಿಯೂತದ ಸಮಸ್ಯೆ ಕಂಡು ಬರಬಹುದು. ಅಸ್ತಮಾ ಸೋಂಕಿನಿಂದ ಅಥವಾ ವಾತಾವರಣದಿಂದ ಬರಬಹುದು. ಅಸ್ತಮಾ ಸೋಂಕು ತಗುಲಿದರೂ ಉಸಿರಾಡಲು ತುಂಬಾನೇ ಕಷ್ಟವಾಗುವುದು.
ಎದೆಯಲ್ಲಿ ಉರಿಯೂತ
ಎದೆಯಲ್ಲಿ ಉರಿಯೂತದಲ್ಲಿ ಸೋಂಕು ಮೊದಲಿಗೆ ಶ್ವಾಸಕೋಶದ ಹೊರಭಾಗಕ್ಕೆ ಸೋಂಕು ತಗುಲಿ ನಂತರ ಶ್ವಾಸಕೋಶದ ಒಳಗಡೆಗೆ ಸೋಂಕು ಹರಡುವುದು. ಇದರಿಂದ ಎದೆನೋವು ಹಾಗೂ ಉಸಿರಾಟದ ತೊಂದರೆ ಉಂಟಾಗುವುದು.
ಶ್ವಾಸಕೋಶದ ಉರಿಯೂತದ ಲಕ್ಷಣಗಳೇನು?
* ಉಸಿರಾಟಕ್ಕೆ ತೊಂದರೆ
* ಕೆಮ್ಮು
* ತಲೆಸುತ್ತು
* ಹೊಟ್ಟೆ ಹಾಳಾಗುವುದು
* ಇದ್ದಕ್ಕಿದ್ದಂತೆ ತೂಕ ಇಳಿಕೆ
* ಕೆಮ್ಮಿದಾಗ ಗಟ್ಟಿ ಕಫ, ಕೆಲವೊಮ್ಮೆ ಕಫದಲ್ಲಿ ರಕ್ತ ಕಂಡು ಬರುವುದು
* ಕೆಮ್ಮುವಾಗ, ಉಸಿರಾಡುವಾಗ ಎದೆನೋವು
* ಆಗಾಗ ಜ್ವರ ಬರುವುದು
ಈ ತುರ್ತು ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು
* ಕಫದಲ್ಲಿ ರಕ್ತ
* ಉಸಿರಾಟದಲ್ಲಿ ತೊಂದರೆ
* 102.5°F ಜ್ವರ
* ಗೊಂದಲ
* ತೀವ್ರ ಎದೆಬಡಿತ
ಯಾರಲ್ಲಿ ಈ ಅಪಾಯ ಹೆಚ್ಚು?
* ರೋಗ ನಿರೀಧಕ ಶಕ್ತಿ ತುಂಬಾ ಕಡಿಮೆ ಇದ್ದರೆ
* ಉಸಿರಾಟದ ತೊಂದರೆ ಇರುವವರೆಗೆ (ಅಸ್ತಮಾ ಸಮಸ್ಯೆಯಿದ್ದರೆ)
* ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದರೆ
ಸೂಕ್ತ ಸಮಯದಲ್ಲಿ ಚಕಿತ್ಸೆ ದೊರೆಯದಿದ್ದರೆ ಅಪಾಯಗಳೇನು?
* ಅಂಗಾಂಗ ವೈಫಲ್ಯ
* ಉಸಿರಾಟಕ್ಕೆ ತೊಂದರೆ
* ಶ್ವಾಸಕೋಶದಲ್ಲಿ ನೀರು ತುಂಬುವುದು
ಯಾರಲ್ಲಿ ಈ ಸಮಸ್ಯೆ ತುಂಬಾ ಗಂಭೀರವಾಗುವುದು
* ಧೂಮಪಾನ ಮಾಡುವವರಿಗೆ
*ವಾಯು ಮಾಲಿನ್ಯ ತುಂಬಾ ಇದ್ದರೆ
* ರಾಸಾಯನಿಕ
* ತುಂಬಾ ಹೊಗೆ ಇದ್ದರೆ
ನಿರ್ಲಕ್ಷ್ಯ ಮಾಡಬೇಡಿ:
ಶ್ವಾಸಕೋಶದ ಉರಿಯೂತ ಅಥವಾ ತುಂಬಾ ಸಮಯದಿಂದ ಕೆಮ್ಮು, ಉಸಿರಾಟದ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡದೆ ಕುಡಲೇ ಚಿಕಿತ್ಸೆ ಪಡೆಯಿರಿ. ಧೂಮಪಾನ ಅಭ್ಯಾಸ ಬಿಡಿ, ದೂಳು, ವಾಯು ಮಾಲಿನ್ಯ ಇರುವ ಕಡೆ ಹೋಗುವಾಗ ಮಾಸ್ಕ್ ಧರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
