Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಕೇರಳದ ಶಾಲಾ ಮಕ್ಕಳಲ್ಲಿ ಕಂಡು ಬಂದ ನೋರವೈರಸ್: ಇದರ ಲಕ್ಷಣಗಳೇನು? ಈ ಕಾಯಿಲೆ ಹರಡುವುದನ್ನು ತಡೆಗಟ್ಟುವುದು ಹೇಗೆ?
ಕೇರಳದ ತಿರುವನಂತಪುರದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಬ್ಬರಲ್ಲಿ ಜೂನ್ 5ಕ್ಕೆ ನೋರೋವೈರಸ್ ಪತ್ತೆಯಾಗಿರುವುದಾಗಿ ಅಲ್ಲಿಯ ಸರ್ಕಾರ ತಿಳಿಸಿದೆ. ಸೋಂಕು ತಗುಲಿದ ಮಕ್ಕಳಲ್ಲಿ ಬೇಧಿ ಕಾಣಿಸಿಕೊಂಡು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದಾಗ ಮಕ್ಕಳಿಗೆ ನೋರವೈರಸ್ ತಗುಲಿರುವುದು ದೃಢ ಪಟ್ಟಿದೆ.
ನೋರಾವೈರಸ್ ಹೇಗೆ ಹರಡುತ್ತದೆ, ಇದರ ಲಕ್ಷಣಗಳೇನು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

ಶುಚಿತ್ವದ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ
ನೋರವೈರಸ್ ಕಾಣಿಸಿಕೊಂಡಿದೆ ಎಂದ ಮಾತ್ರಕ್ಕೆ ಜನರು ಆತಂಕ ಪಡಬೇಕಾಗಿಲ್ಲ, ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕಲುಷಿತ ಆಹಾರ ಅಥವಾ ನೀರು ಸೇವನೆಯಿಂದ ಈ ಕಾಯಿಲೆ ಹರಡುತ್ತದೆ. ಮಕ್ಕಳು ಮಧ್ಯಾಹ್ನ ಊಟ ಸೇವಿಸಿದ ಬಳಿಕ ಅವರಿಗೆ ಫುಡ್ ಪಾಯಿಸನ್ ಆಗಿ ಈ ರೀತಿಯಾಗಿದೆ.

ನೋರವೈರಸ್ ಎಂದರೇನು?
ನೋರವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆಯಾಗಿದ್ದು ಈ ಸೋಂಕು ತಗುಲಿದರೆ ವಾಂತಿ-ಬೇಧಿ ಸಮಸ್ಯೆ ಕಂಡು ಬರುವುದು.

ನೋರವೈರಸ್ ಹೇಗೆ ಹರಡುತ್ತದೆ
ಕಲುಷಿತ ನೀರು ಅಥವಾ ಆಹಾರ ಸೇವನೆ ಮೂಲಕ ನೋರವೈರಸ್ ಹರಡುತ್ತದೆ. ನೋರವೈರಸ್ ತಗುಲಿದರೆ ವಾಂತಿ ಬೇಧಿ ಉಂಟಾಗುವುದು, ಇದರಿಂದ ದೇಹದಲ್ಲಿ ನೀರಿನಂಶ ತುಂಬಾ ಕಡಿಮೆಯಾಗುವ ಸಾಧ್ಯತೆ ಇದೆ, ಆದ್ದರಿಂದ ವಾಂತಿ-ಬೇಧಿ ಕಾಣಿಸಿಕೊಂಡಾಗ ಸಾಕಷ್ಟು ನೀರು ಕುಡಿಯಲು ತಜ್ಞರು ಸಲಹೆ ನೀಡಿದ್ದಾರೆ ಹಾಗೂ ಕೂಡಲೇ ವೈದ್ಯರಿಗೆ ತೋರಿಸಬೇಕು. ಟಾಯ್ಲೆಟ್‌ಗೆ ಹೋಗಿ ಬಂದ ಮೇಲೆ ಕೈಗಳನ್ನು ತೊಳೆಯಬೇಕು.

ನೋರವೈರಸ್ ಲಕ್ಷಣಗಳು
* ವಾಂತಿ, ಬೇಧಿ ಇದರ ಪ್ರಮುಖ ಲಕ್ಷಣವಾಗಿವೆ
* ಜೊತೆಗೆ ಜ್ವರ, ತಲೆನೋವು, ಮೈಕೈ ನೋವು ಕೂಡ ಇರುಬಹುದು.

ನೋರವೈರಸ್ ತಡೆಗಟ್ಟುವುದು ಹೇಗೆ?
* ಕೈಗಳನ್ನು ಆಗಾಗ ತೊಳೆಯಬೇಕು
* ಹಣ್ಣು-ತರಕಾರಿಗಳನ್ನು ತೊಳೆದು ತಿನ್ನಿ
* ಮೀನು, ಮಾಂಸ, ತರಕಾರಿ ಆಹಾರಗಳನ್ನು ಸರಿಯಾಗಿ ಬೇಯಿಸಿ ತಿನ್ನಬೇಕು.
* ಹುಷಾರಿಲ್ಲದಿರುವಾಗ ಬೇರೆಯವರಿಗೆ ಆಹಾರ ತಯಾರಿಸಬೇಡಿ.
* ಬಳಸಿದ ಟಾಯ್ಲೆಟ್ ಚೆನ್ನಾಗಿ ಸ್ವಚ್ಛಗೊಳಿಸಿ.



Click it and Unblock the Notifications
