Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಸ್ಪೋರ್ಟ್ಸ್ ಬ್ರಾ ದಿನವಿಡೀ ಧರಿಸಬಹುದೇ? ಸ್ಪೋರ್ಟ್ಸ್ ಬ್ರಾ ಧರಿಸುವವರು ತಿಳಿಯಲೇಬೇಕಾದ ಸಂಗತಿಗಳು
ಡ್ರೆಸ್, ಟೀ ಶರ್ಟ್ ಇವೆಲ್ಲಾ ಧರಿಸುವಾಗ ನಾರ್ಮಲ್ ಬ್ರಾಗಿಂತ ಸ್ಪೋರ್ಟ್ಸ್ ಬ್ರಾ ತುಂಬಾನೇ ಕಂಫರ್ಟ್ ಅನಿಸುವುದು. ಏಕೆಂದರೆ ಸ್ಪೋರ್ಟ್ಸ್ ಬ್ರಾದಲ್ಲಿ ಮುಜುಗರ ಉಂಟಾಗುವುದಿಲ್ಲ, ಆದ್ದರಿಂದ ಹೆಚ್ಚಿನವರು ಸಾಮಾನ್ಯ ಬ್ರಾಗಿಂತ ಸ್ಪೋರ್ಟ್ಸ್ ಬ್ರಾ ಆಯ್ಕೆ ಮಾಡುತ್ತಾರೆ.

ಇನ್ನು ವಾಕಿಂಗ್, ರನ್ನಿಂಗ್, ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಈ ಬ್ರಾ ತುಂಬಾನೇ ಕಂಫರ್ಟ್ ಫೀಲ್ ನೀಡುವುದು. ಆದರೆ ಈ ಬ್ರಾವನ್ನು ದಿನವಿಡೀ ಧರಿಸುವುದು ಒಳ್ಳೆಯದೇ ಎಂದು ನೋಡುವುದಾದರೆ:
ಸ್ಪೋರ್ಟ್ಸ್ ಬ್ರಾ ತುಂಬಾ ಬಿಗಿಯಾರುತ್ತದೆ
ಸ್ಪೋರ್ಟ್ಸ್ ಬ್ರಾ ಸಾಮಾನ್ಯವಾಗಿ ಬಿಗಿಯಾಗಿರುತ್ತದೆ. ಇದನ್ನು ದಿನವಿಡೀ ಧರಿಸುವುದರಿಂದ ಬೆನ್ನಿನ ಮೂಳೆಗಳು ದುರ್ಬಲವಾಗುವುದು, ಇದರಿಂದ ಕುತ್ತಿಗೆ ಹಾಗೂ ಭುಜದ ಬಳಿ ನೋವು ಕೂಡ ಕಂಡು ಬರುವುದು. ಆದ್ದರಿಂದ ತುಂಬಾ ಬಿಗಿಯಾದ ಬ್ರಾ ದಿನವಿಡೀ ಧರಿಸುವುದು ಖಂಡಿತ ಒಳ್ಳೆಯ ಐಡಿಯಾ ಅಲ್ವೇ ಅಲ್ಲ.
ಬಿಗಿಯಾದ ಬ್ರಾದಿಂದ ತ್ವಚೆ ಸಮಸ್ಯೆ ಬರುವುದು
ಬ್ರಾ ತುಂಬಾ ಬಿಗಿಯಾಗಿದ್ದರೆ ಬಿಗಿಯಾಗಿ ಆ ಭಾಗದಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು, ಫಂಗಲ್‌ಸೋಂಕು ಮುಂತಾದ ಸಮಸ್ಯೆ ಉಂಟಾಗುವುದು. ಆದ್ದರಿಂದ ಬಿಗಿಯಾದ ಬ್ರಾ ದಿನವಿಡೀ ಧರಿಸುವುದು ಖಂಡಿತ ಒಳ್ಳೆಯ ಐಡಿಯಾ ಅಲ್ಲ.
ಇನ್ನು ಸ್ಪೋರ್ಟ್ಸ್ ಬ್ರಾ ಖರೀದಿಸುವಾಗ ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು
ಕಲರ್
ನಿಮ್ಮ ದಿನಕ್ಕೆ ಬೆಸ್ಟ್ ಸೂಟ್ ಆಗುವ ಕಲರ್ ಆಯ್ಕೆ ಮಾಡಿ. ಗ್ರೇ ಹಾಗೂ ವೈಟ್ ಕಲರ್ ಸಾಮಾನ್ಯವಾಗಿ ಎಲ್ಲಾ ಡ್ರೆಸ್‌ಗೆ ಮ್ಯಾಚ್ ಆಗುವುದು.
ಕಪ್ ಇರುವ ಬ್ರಾ
ನೀವು ಟೀ ಶರ್ಟ್ ಧರಿಸುವುದಾದರೆ ಕಪ್ ಇರುವ ಬ್ರಾ ತುಂಬಾನೇ ಕಂಫರ್ಟ್ ಅನಿಸುವುದು.
ರೆಗ್ಯೂಲರ್ ಸ್ಟ್ರಾಪ್ಸ್ ಅಥವಾ ರೇಸರ್‌ಬ್ಯಾಕ್
ವರ್ಕೌಟ್ ಮಾಡುವಾಗ ರೇಸರ್‌ಬ್ಯಾಕ್ ಕಂಫರ್ಟ್ ಅನಿಸಿದರೂ ದಿನವಿಡೀ ಧರಿಸಲು ಕಂಫರ್ಟ್ ಅನಿಸುವುದಿಲ್ಲ, ದಿನದಲ್ಲಿ ಧರಿಸಲು ರೆಗ್ಯೂಲರ್ ಸ್ಟ್ರಾಪ್ ಒಳ್ಳೆಯದು.
ಅಂಡರ್‌ವೈರ್ ಅಥವಾ ವೈರ್‌ಲೆಸ್
ಅದು ಅವರವರ ಕಂಫರ್ಟ್ ತಕ್ಕಂತೆ ಬಳಸಬಹುದು. ನೀವು ರೆಗ್ಯೂಲರ್ ಬ್ರಾ ವೈರ್ಡ್ ಬಳಸುವುದಾದರೆ ಸ್ಪೋರ್ಟ್ಸ್ ಬ್ರಾ ವೈರ್‌ಲೆಸ್ ತೆಗೆದುಕೊಂಡರೆ ಕಂಫರ್ಟ್ ಅನಿಸಲ್ಲ.
ಕಪ್
ಬ್ರಾ ಕಪ್ ಆಯ್ಕೆ ಮಾಡುವಾಗಲೂ ನಿಮಗೆ ಕಂಫರ್ಟ್ ಆಗುವಂತೆ ಆಯ್ಕೆ ಮಾಡಬೇಕು. ಫ್ರಂಟ್ ಫುಲ್ ಕವರ್ ಬೇಕೆಂದರೆ ನಿಮ್ಮ ಸೈಜ್‌ನಲ್ಲಿಯೇ ಡಿ ಅಥವಾ ಇ ಕಪ್ ಆಯ್ಕೆ ಮಾಡಿ.
ಸ್ಪೋರ್ಟ್ಸ್ ಬ್ರಾ ದಿನಾ ಧರಿಸುವುದರಿಂದ ದೊರೆಯುವ ಪ್ರಯೋಜನಗಳು
* ವರ್ಕೌಟ್ ಮಾಡುವಾಗ ತುಂಬಾನೇ ಕಂಫರ್ಟ್: ನಾರ್ಮಲ್ ಬ್ರಾ ಸ್ಪೋರ್ಟ್ಸ್ ಬ್ರಾದಷ್ಟು ಕಂಫರ್ಟ್ ಆಗುವುದಿಲ್ಲ.
* ಬೆವರನ್ನು ಹೀರುವಂಥ ಬಟ್ಟೆಯಾಗಿದೆ: ವರ್ಕೌಟ್ ಮಾಡುವಾಗ ಬೆವರಿದಾಗ ಸ್ಪೋರ್ಟ್ಸ್ ಬ್ರಾ ಮೆಟೀರಿಯಲ್ ಬೆವರನ್ನು ಹೀರಿಕೊಳ್ಳುವುದು.
* ಕ್ರೀಡಾ ಚಟುವಟಿಕೆಗೆ ಈ ಬ್ರಾ ಬೆಸ್ಟ್: ಯಾವುದೇ ಕ್ರೀಡಾ ಚಟುವಟಿಕೆ ಇರಲಿ ಸ್ಪೋರ್ಟ್ಸ್ ಬ್ರಾ ಬೆಸ್ಟ್.
*ಸ್ತನಗಳಲ್ಲಿ ನೋವು ಕಡಿಮೆ ಮಾಡುವುದು
* ಕಾಸ್ಮೆಟಿಕ್ ಹಾಗೂ ಸೊಂಟದ ಸರ್ಜರಿ ಆಗಿರುವವರಿಗೆ ಒಳ್ಳೆಯದು.
* ಸ್ತನಗಳು ಜೋತು ಬೀಳುವುದು ತಡೆಗಟ್ಟುತ್ತದೆ: ಕೆಲವರಿಗೆ ವಯಸ್ಸಾಗುತ್ತಿದ್ದಂತೆ ಸ್ತನಗಳು ಜೋತು ಬೀಳುವುದು, ಸ್ಪೋರ್ಟ್ಸ್ ಬ್ರಾ ಸ್ತನಗಳು ಜೋತು ಬೀಳುವುದನ್ನು ತಡೆಗಟ್ಟುತ್ತದೆ.
ಸ್ಪೋರ್ಟ್ಸ್ ಬ್ರಾ ಸೈಜ್ ನಾರ್ಮಲ್ ಬ್ರಾಗಿಂತ ಭಿನ್ನವಾಗಿರುವುದೇ?
ರೆಗ್ಯೂಲರ್ ಹಾಗೂ ಸ್ಪೋರ್ಟ್ಸ್ ಬ್ರಾದಲ್ಲಿ ಸೈಜ್ ಒಂದೇ ರೀತಿ ಇರುತ್ತದೆ, ಆದರೆ ಧರಿಸಿದಾಗ ಅದರ ಕಂಫರ್ಟ್ ಲೆವಲ್‌ನಲ್ಲಿ ವ್ಯತ್ಯಾಸವಿರುತ್ತದೆ.
ಸ್ಯಾರಿಗೆ ಸ್ಪೋರ್ಟ್ಸ್ ಬ್ರಾ ಧರಿಸಬಹುದೇ?
ನೀವು ಸ್ಯಾರಿ ಧರಿಸುವುದಾದರೆ ನಾರ್ಮಲ್ ಬ್ರಾ ಹೆಚ್ಚು ಕಂಫರ್ಟ್. ಬ್ರಾ ಬಿಗಿಯಾಗಿದ್ದು, ಬ್ಲೌಸ್ ಕೂಡ ಬಿಗಿಯಾಗಿದ್ದಾಗ ಉಸಿರು ಕಟ್ಟಿದ ಅನುಭವ ಉಂಟಾಗುವುದು.ಆದ್ದರಿಂದ ಸ್ಯಾರಿಗೆ ರೆಗ್ಯೂಲರ್ ಬ್ರಾ ಧರಿಸಿ.
ಸ್ಪೋರ್ಟ್ಸ್ ಬ್ರಾ ಧರಿಸಿ ಮಲಗಬಹುದೇ?
ಸ್ಪೋರ್ಟ್ಸ್ ಮಾತ್ರವಲ್ಲ, ನಾರ್ಮಲ್ ಬ್ರಾ ಕೂಡ ರಾತ್ರಿ ಮಲಗುವಾಗ ಬಳಸಬಾರದು. ಬ್ರಾ ಧರಿಸಿ ಮಲಗಿದರೆ ರಕ್ತ ಸಂಚಾರಕ್ಕೆ ತೊಂದರೆಯಾಗುವುದರಿಂದ ಮಲಗುವಾಗ ಬ್ರಾ ಧರಿಸಬೇಡಿ.
ಸ್ಪೋರ್ಟ್ಸ್ ಬ್ರಾ ಎಷ್ಟು ಸಮಯ ಬಳಸಬಾರದು?
ನೀವು ಪ್ರತೀ 6 ತಿಂಗಳಿಗೆ ನಿಮ್ಮ ಹಳೆಯ ಬ್ರಾ ಎಸೆದು ಹೊಸ ಬ್ರಾ ಖರೀದಿಸಿ, ಹಳೆಯ ಬ್ರಾ ಧರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



