Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆರೋಗ್ಯಕರ ಜೀವನಕ್ಕೆ ಈ ಪರೀಕ್ಷೆಗಳು ಕಡ್ಡಾಯ
ಆರೋಗ್ಯಕರ ಜೀವನ ನಡೆಸುವುದು ಅದೃಷ್ಟವೇ ಸರಿ!. ಆಧುನಿಕತೆಗೆ ನಾವು ಒಗ್ಗಿಕೊಳ್ಳುತ್ತಲೇ ಕೆಲವು ವಯೋ ಅಸಹಜ ಕಾಯಿಲೆಗಳು ಸಹ ಹೆಚ್ಚಾಗುತ್ತಿದ್ದರೆ, 40ರ ಗಡಿ ದಾಟುತ್ತಿದ್ದಂತೆ ಕೆಲವು ವಯೋ ಸಹಜ ಕಾಯಿಲೆಗಳು ಬರುತ್ತದೆ. ಇಷ್ಟೇ ಅಲ್ಲದೆ ನಮಗೆ ಅರಿವಿಲ್ಲದಂತೆ ಕೆಲವು ಗಂಭೀರ ಕಾಯಿಲೆಗಳು ದೇಹದೊಳಕ್ಕೆ ಹೊಕ್ಕು ಜೀವವನ್ನೆ ಬಲಿ ಪಡೆಯುತ್ತದೆ.

ಆದ್ದರಿಂದ ನಿಯಮಿತವಾಗಿ ಆರೋಗ್ಯ ಪರೀಕ್ಷೆಗಳನ್ನು ಮಾಡಿಸುವ ಮೂಲಕ ಕಾಯಿಲೆಗಳು, ದೈಹಿಕ ಸ್ವಾಸ್ಥ್ಯದ ಬಗ್ಗೆ ತಿಳಿಯುವ ಜತೆಗೆ ನಮ್ಮ ಆಯುಷ್ಯವನ್ನು ಹೆಚ್ಚಿಕೊಳ್ಳಬಹುದು. ಹಾಗಿದ್ದರೆ ನಿಮ್ಮ ದೇಹಾರೋಗ್ಯ ಸುಸ್ಥಿತಿಯಲ್ಲಿಡಲು ಎಂಥಹ ಪರೀಕ್ಷೆಗಳು ದೇಹಕ್ಕೆ ಅಗತ್ಯ, ನಿಗದಿಯಂತೆ ಯಾವ ಸಂದರ್ಭದಲ್ಲಿ ಯಾವ ಪರೀಕ್ಷೆ ಮಾಡಿಸಬೇಕು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ರಕ್ತದೊತ್ತಡ ಪರೀಕ್ಷೆ
ರಕ್ತದೊತ್ತಡ (ಬಿಪಿ) ಸಮಸ್ಯೆ ಇತ್ತೀಚೆಗೆ ಸಾಮಾನ್ಯವಾಗಿದೆ. ಇಂದಿನ ಜೀವನಶೈಲಿಗೆ ಪ್ರತಿ ಆರು ತಿಂಗಳಿಗೊಮ್ಮೆ ರಕ್ತಪರೀಕ್ಷಿಸುವುದು ಕಡ್ಡಾಯ. ನಿಮ್ಮ ರಕ್ತದೊತ್ತಡ 120-139/80-89 ಹೆಚ್ ಜಿ ಇರಬೇಕು, ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಖಂಡಿತವಾಗಿಯೂ ನಿಮಗೆ ಚಿಕಿತ್ಸೆ ಅಗತ್ಯವಿದೆ. ಬಿಪಿ ಹೊರತುಪಡಿಸಿ ಮಧುಮೇಹ, ಬೊಜ್ಜಿನ ಸಮಸ್ಯೆ ಅಥವಾ ಹೃದಯ ಸಮಸ್ಯೆ ಇದ್ದರೂ ಸಹ ನಿಯಮಿತ ರಕ್ತಪರೀಕ್ಷೆ ಕಡ್ಡಾಯ.

ಪ್ಯಾಪ್ ಪರೀಕ್ಷೆ
ಗರ್ಭವತಿಯಾಗಬಯಸುವವರು ಈ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಆಗಾಗ್ಗೆ ಅಥವಾ ಕನಿಷ್ಠ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಪರೀಕ್ಷೆ ಅತ್ಯಗತ್ಯ. ಗರ್ಭಕಂಠದ ಜೀವಕೋಶಗಳಲ್ಲಿ ಕಂಡುಬರುವ ಮಾರಣಾಂತಿಕ ಕ್ಯಾನ್ಸರ್ ಅನ್ನು ಈ ಪರೀಕ್ಷೆ ಮೂಲಕ ಪತ್ತೆ ಮಾಡಲಾಗುತ್ತದೆ. ಗರ್ಭಿಣಿಯಾಗುವ ಮುನ್ನ ತಪ್ಪದೇ ಈ ಪರೀಕ್ಷಿಕೊಳ್ಳಿ.

ಬೊಜ್ಜಿನ ಪರೀಕ್ಷೆ
ಅನಿಯಮಿತ ಹಾಗೂ ಅನಾರೋಗ್ಯಕರ ಆಹಾರ ಅಭ್ಯಾಸದಿಂದಾಗಿ ಬೊಜ್ಜಿನ ಸಮಸ್ಯೆ ಯುವಜನತೆಯನ್ನು ಅತಿಯಾಗಿ ಕಾಡುತ್ತಿರುವ ಕಾಯಿಲೆಯಾಗಿದೆ. ಬೊಜ್ಜಿನ ಸಮಸ್ಯೆ ಹೃದಯ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ದಾರಿಕೊಡುತ್ತದೆ. ಆದ್ದರಿಂದ ನಿಮ್ಮ ಆಹಾರ ಕ್ರಮ ಅನುಸರಿಸಿ ನೀವೇ ಮುಂಜಾಗ್ರತೆಯಿಂದ ಬೊಜ್ಜಿನ ಪರೀಕ್ಷೆಗೆ ಒಳಗಾಗಿ.

ಮೂಳೆಯ ಪರೀಕ್ಷೆ
ಮಹಿಳೆಯರು ಕಡ್ಡಾಯವಾಗಿ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಲೇಬೇಕು. ಆಸ್ಟಿಯೋಪುರೋಸಿಸ್ ಮತ್ತು ಸಂಧಿವಾತದಂಥ ಸಮಸ್ಯೆಯನ್ನು ತಪ್ಪಿಸಲು ಈ ಪರೀಕ್ಷೆ ಅತ್ಯಗತ್ಯ. ಪೌಷ್ಟಿಕಾಂಶ, ಖನಿಜಾಂಶದ ಕೊರತೆಯಿಂದ ಮೂಳೆ ಸವೆದು ಗಂಭೀರ ಸಮಸ್ಯೆಗೆ ಗುರಿಯಾಗುತ್ತದೆ. ಮೂಳೆಯ ಖನಿಜಾಂಶ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸುವುದರಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು.

ಕೊಲೊರೆಕ್ಟಲ್ ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆ
ಗುದನಾಳದಲ್ಲಿ ಅನವಶ್ಯಕವಾಗಿ ಬೆಳೆಯುವ ಮಾಂಸಖಂಡದಿಂದ ಬರುವ ಕ್ಯಾನ್ಸರ್ ಗೆ ಕೊಲೊರೆಕ್ಟಲ್ ಕ್ಯಾನ್ಸರ್ ಎನ್ನುವರು. ಈ ಪರೀಕ್ಷೆಯಿಂದ ಗುದನಾಳದ ಮಾಂಸಖಂಡದ ಬೆಳವಣಿಗೆಯನ್ನು ಪತ್ತೆಮಾಡಿ, ಟ್ಯೂಮರ್ ಆಗುವ ಮೊದಲೇ ಅದನ್ನು ತೆಗೆಸಬಹುದು. ಆರಂಭಿಕ ಹಂತದಲ್ಲೇ ಮಾಡುವುದರಿಂದ ಗಂಭೀರ ಪರಿಣಾಮವನ್ನು ಎದುರಿಸುವುದನ್ನು ತಪ್ಪಿಸಬಹುದು.

ತ್ವಚೆ ಪರೀಕ್ಷೆ
ತ್ವಚೆಯ ಪರೀಕ್ಷೆಯನ್ನು ನೀವೇ ನಿತ್ಯ ಮಾಡಿಕೊಳ್ಳಬಹುದು. ನಿತ್ಯ ಸ್ನಾನ ಮಾಡುವಾಗ ನಿಮ್ಮ ದೇಹದ ಯಾವುದೇ ಭಾಗದಲ್ಲಿ ಅಸಾಮಾನ್ಯವೆಂಬಂತೆ ಮಚ್ಚೆ, ಗುಳ್ಳೆಗಳು ಕಂಡುಬಂದರೆ ಕೂಡಲೇ ಚರ್ಮ ತಜ್ಞರ ಬಳಿ ಪರೀಕ್ಷಿಸಿಕೊಳ್ಳಿ.

ಹಲ್ಲಿನ ಪರೀಕ್ಷೆ
ಪ್ರತಿ 6ರಿಂದ 12ತಿಂಗಳಿಗೊಮ್ಮೆ ಪ್ರತಿಯೊಬ್ಬರು ಹಲ್ಲಿನ ಪರೀಕ್ಷೆ ಮಾಡಿಸುವುದು ಉತ್ತಮ. ಹಲ್ಲು ನಮ್ಮ ಇಡೀ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವ ಭಾಗವಾಗಿದೆ. ಹಲ್ಲುಗಳು, ಒಸಡು, ಬಾಯಿಯ ಲಾಲಾರಸ, ದುಗ್ಧರಸಗಳ ನಿಯಮಿತ ಪರೀಕ್ಷೆ ನಿಮ್ಮ ಹಲ್ಲು ಮತ್ತು ಒಸಡಿನ ರಕ್ಷಣೆ ಜತೆಗೆ ಇಡೀ ದೇಹಾರೋಗ್ಯಕ್ಕೂ ಸಹಾಯಕ.



Click it and Unblock the Notifications
