Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಳ್ಳಗಿರುವರು ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು!
ನಮ್ಮ ಎತ್ತರವು ಟೈಪ್ 2 ಮಧುಮೇಹವನ್ನು ಉಂಟುಮಾಡುವ ಅಪಾಯವನ್ನು ನಿರ್ಧರಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಹಾಗೆಯೇ ಅನೇಕ ಅಧ್ಯಯನಗಳು ಕಡಿಮೆ ಎತ್ತರ ಇರುವವರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಬರುವುದು ಎಂದು ಹೇಳಿದೆ. ನಿಜ, ನಮ್ಮ ದೇಹದ ಆರೋಗ್ಯವು ನಾವು ಸೇವಿಸುವ ಆಹಾರ, ವ್ಯಾಯಾಮ, ಜೀವನ ಶೈಲಿ ಹಾಗೂ ನಮ್ಮ ದೇಹದ ಎತ್ತರವನ್ನು ಸಹ ಅವಲಂಭಿಸಿರುತ್ತದೆ. ನಾವು ಸೂಕ್ತ ವ್ಯಾಯಾಮ ಹಾಗೂ ಜೀವನ ಶೈಲಿಯನ್ನು ಹೊಂದುವುದರ ಮೂಲಕ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.
ಮಧುಮೇಹ ಎನ್ನುವುದು ಚಯಾಪಚಯ ಕಾಯಿಲೆಯಾಗಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಸಂಸ್ಕರಿಸುವುದರ ಮೂಲಕ ದೇಹದ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುವುದು. ನಾವು ಸೇವಿಸುವ ಆಹಾರಗಳು ಗ್ಲೂಕೋಸ್ ಆಗಿ ಬದಲಾಗುತ್ತದೆ. ಅದು ದೇಹದ ಶಕ್ತಿಯಾಗಿ ಬದಲಾಗುವುದು. ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಎನ್ನುವ ಹಾರ್ಮೋನ್ ಅನ್ನು ಬಿಡುಗಡೆ ಮಾಡುವುದು. ಅದು ಜೀವ ಕೋಶಗಳಿಂದ ಗ್ಲೂಕೋಸ್‍ಅನ್ನು ಹೀರಿಕೊಳ್ಳಲು ಸಹಾಯ ಮಾಡುವುದು. ಮಧುಮೇಹದ ಸಮಸ್ಯೆ ಇದ್ದರೆ ನಿಮ್ಮ ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಆಗ ನಿಮ್ಮ ರಕ್ತದಲ್ಲಿ ಹೆಚ್ಚುವರಿ ಗ್ಲೂಕೋಸ್ ಉಳಿದುಕೊಳ್ಳುತ್ತದೆ.

ಡಬ್ಲುಎಚ್ಒ ಪ್ರಕಾರ ವಿಶ್ವದಾದ್ಯಂತ ಸುಮಾರು 422 ಮಿಲಿಯನ್ ಜನರಿಗೆ ಮಧುಮೇಹವಿದೆ. ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಗರಿಷ್ಠ ಸಂಖ್ಯೆಯ ಮಧುಮೇಹಿಗಳು ಇದ್ದಾರೆ. ಜರ್ಮನಿಯ ಜರ್ಮನ್ ಇನ್ಸಿ ಟಿಟ್ಯೂಟ್ ಆಫ್ ಹ್ಯೂಮನ್ ನ್ಯೂಟ್ರಿಷನ್ ನ ಹೊಸ ಸಂಶೋಧನೆಯ ಪ್ರಕಾರ, ಕಡಿಮೆ ಎತ್ತರ ಇರುವ ಜನರು ಟೈಪ್-2 ಮಧುಮೇಹಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚೆಂದು ಹೇಳಿದೆ.

ದೇಹದ ನಿಲುವು ಕಡಿಮೆ ಇದ್ದರೆ
ಪುರುಷ ಹಾಗೂ ಮಹಿಳೆಯ ದೇಹದ ನಿಲುವು ಉತ್ತಮವಾಗಿರಬೇಕು. ಇಲ್ಲವಾದರೆ ಕೆಲವು ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಾಡುತ್ತವೆ ಎಂದು ಹೇಳಲಾಗುವುದು. ಕಡಿಮೆ ಎತ್ತರ ಇರುವ ವ್ಯಕ್ತಿಗಳಲ್ಲಿ ಹೃದಯ, ಚಯಾಪಚಯ ಅಪಾಯಕಾರಿಯಿಂದ ಕೂಡಿರುತ್ತವೆ. ಯಕೃತ್ತಿನಲ್ಲಿ ಕೊಬ್ಬಿನಂಶ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚು. ದೇಹದ ತೂಕ ಹೆಚ್ಚುವುದು, ಸೊಂಟದ ಸುತ್ತಳತೆ ಹೆಚ್ಚುವುದು ಜೊತೆಗೆ ರಕ್ತದೊತ್ತಡವು ಹೆಚ್ಚಾಗುವುದು. ಅದರಲ್ಲೂ ಮಧ್ಯ ವಯಸ್ಸನ್ನು ದಾಟಿದ ನಂತರ ಹೆಚ್ಚಿನ ಸಮಸ್ಯೆ ಎದುರಾಗುವುದು ಎಂದು ಹೇಳಲಾಗುವುದು.

ಸೊಂಟದ ಸುತ್ತಳತೆಯೊಂದಿಗೆ ಮಧುಮೇಹ
ವ್ಯಕ್ತಿಯ ಎತ್ತರವು ಅವನ ಆರೋಗ್ಯಕ್ಕೆ ಅತ್ಯುತ್ತಮವಾದ ಅವಿನಾಭಾವ ಸಂಬಂಧವನ್ನು ಪಡೆದುಕೊಂಡಿದೆ. ವ್ಯಕ್ತಿಯ ಎತ್ತರ ಕಡಿಮೆ ಇದ್ದಾಗ ಒಂದು ವಯಸ್ಸನ್ನು ದಾಟುವ ಹೊತ್ತಿಗೆ ಸೊಂಟದ ಭಾಗದಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಯಾಗುವುದು. ಅಲ್ಲದೆ ಸರಿಯಾದ ಚಯಾಪಚಯ ಕ್ರಿಯೆ ನೆರವೇರದೆ ಹೋಗುವುದು. ಆಗ ಟೈಪ್-2 ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಪುರುಷರಿಗೆ ಎತ್ತರದ ಸಮಸ್ಯೆಯು ಸ್ವಲ್ಪ ಮಟ್ಟಿಗೆ ಲೈಂಗಿಕ ವ್ಯತ್ಯಾಸ ಅಥವಾ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಕಡಿಮೆ ಎತ್ತರ ಇರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಲಿನ ಉದ್ದವು ಕಡಿಮೆ ಇರುವುದು. ಇದು ಮಧುಮೇಹದ ಅಪಾಯಕ್ಕೆ ಕಾರಣವಾಗುವುದು.

ಮೊದಲೇ ಪರೀಕ್ಷೆಗೆ ಒಳಗಾಗುವುದು ಸೂಕ್ತ
ಪುರುಷರು ಮತ್ತು ಮಹಿಳೆಯ ಇಬ್ಬರಲ್ಲೂ ಎತ್ತರದ ಸಮಸ್ಯೆಯು ಟೈಪ್-2 ಮಧುಮೇಹಕ್ಕೆ ಕಾರಣವಾಗುವುದು. ಯಕೃತ್ತಿನಲ್ಲಿ ಕೊಬ್ಬಿನಂಶ ಶೇಖರಣೆಯಾಗುವುದು. ರಕ್ತನಾಳದಲ್ಲಿ ಅಪಾಯಕಾರಿ ಅಂಶವು ಸಂಗ್ರಹವಾಗುತ್ತದೆ. ನಿರ್ದಿಷ್ಟವಾಗಿ ಹೇಳಬೇಕು ಎಂದರೆ ರಕ್ತದಲ್ಲಿ ಕೊಬ್ಬು ಮತ್ತು ಸಕ್ಕರೆಯ ಮಟ್ಟ ಹೆಚ್ಚುವುದು. ಇದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚುವುದು. ಶಾಶ್ವತವಾಗಿ ಮಧುಮೇಹ ಸಮಸ್ಯೆಯನ್ನು ಎದುರಿಸಬೇಕಾಗುವುದು.

ಶ್ವಾಸಕೋಶ ಸಮಸ್ಯೆ ತರುವುದು
ಕುಳ್ಳಗಿರುವವರಲ್ಲಿ ಶ್ವಾಸಕೋಶದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಲಂಡನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ ಕಡಿಮೆ ಎತ್ತರ ಹೊಂದಿರುವ ವ್ಯಕ್ತಿಗಳಲ್ಲಿ ಶ್ವಾಸಕೋಶದ ಸಮಸ್ಯೆ ಸಾಮಾನ್ಯವಾಗಿ ಬರುವುದು. ಅಂತಹವರು ನಿಯಮಿತವಾದ ವ್ಯಾಯಾಮ ಹಾಗೂ ಉತ್ತಮ ಜೀವನ ಶೈಲಿಯನ್ನು ಕೈಗೊಳ್ಳಬೇಕು. ಧೂಮಪಾನ ಹವ್ಯಾಸವನ್ನು ಹೊಂದಿದ್ದರೆ ಮೊದಲು ಅದನ್ನು ತಪ್ಪಿಸಬೇಕು. ಆರೋಗ್ಯಕರ ಆಹಾರ ಸೇವನೆಯು ಪ್ರಮುಖವಾಗುತ್ತದೆ ಎಂದು ಹೇಳಿದೆ.

ಹೃದಯ ಕಾಯಿಲೆ ಕಾಣಿಸಿಕೊಳ್ಳಬಹುದು
ನಿರ್ದಿಷ್ಟ ನಿಲುವನ್ನು ಹೊಂದಿರದ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುವುದು. ಉದಾಹರಣೆಗೆ 5 ಅಡಿ 6ಇಂಚು ಎತ್ತರದ ವ್ಯಕ್ತಿಗೆ ಹೋಲಿಸಿದರೆ, ಸರಾಸರಿ 5 ಅಡಿ ಎತ್ತರದ ವ್ಯಕ್ತಿಗಳಲ್ಲಿ ಹೃದಯದ ಸಮಸ್ಯೆ ಶೇ.32ರಷ್ಟು ಜನರಲ್ಲಿ ಇರುತ್ತದೆ. ಅವರು ಕಡಿಮೆ ಎತ್ತರವನ್ನು ಹೊಂದುವುದರಿಂದ ರಕ್ತದ ಒತ್ತಡ ಹಾಗೂ ಕೊಬ್ಬಿನ ಶೇಖರಣೆ ಬಹುಬೇಗ ಉಂಟಾಗುವುದು. ಹಾಗಾಗಿ ಸೂಕ್ತ ವ್ಯಾಯಾಮ ಹಾಗೂ ಆಹಾರಗಳ ಸೇವನೆಯು ವ್ಯಕ್ತಿಯನ್ನು ಹೆಚ್ಚು ಆರೋಗ್ಯವಾಗಿ ಇಡುವುದು.

ಗರ್ಭಾವಸ್ಥೆಯಲ್ಲಿ ತೊಂದರೆ
ಎತ್ತರದ ಸಮಸ್ಯೆಯು ಮಹಿಳೆಯರಿಗೆ ಪ್ರಸವದ ಸಮಯದಲ್ಲಿ ತೊಂದರೆಯನ್ನು ಉಂಟುಮಾಡಬಹುದು. ಮಗುವಿನ ಬೆಳವಣಿಗೆಯಲ್ಲಿ ನ್ಯೂನತೆ ಉಂಟಾಗಬಹುದು. ಅಕಾಲಿಕ ಪ್ರಸವವನ್ನು ಅನುಭವಿಸುವ ಸಾಧ್ಯತೆಗಳು ಇರುತ್ತವೆ. ಕೆಲವೊಮ್ಮೆ ಸಾಮಾನ್ಯವಾದ ಪ್ರಸವ ಉಂಟಾಗಲು ಕಷ್ಟವಾಗುವುದು. ಮಗುವಿನಲ್ಲಿ ಕಾಮಲೆ, ದೃಷ್ಟಿ ನಷ್ಟ, ಬೌದ್ಧಿಕ ವಿಳಂಬ ಉಂಟಾಗುವುದು. ಜನನದ ನಂತರ ಉತ್ತಮ ಪೌಷ್ಟಿಕಾಂಶಗಳನ್ನು ಒದಗಿಸುವ ಮೂಲಕ ಮಗುವಿನ ಆರೋಗ್ಯ ಸುಧಾರಣೆ ಮಾಡಬಹುದು.

ಬೋಳು ತಲೆ ಹೊಂದಬಹುದು
ಕುಳ್ಳಗಿರುವ ಪುರುಷರಲ್ಲಿ ಅಕಾಲಿಕವಾಗಿ ಕೂದಲುದುರುವುದು ಹಾಗೂ ಬೋಳು ತಲೆಯನ್ನು ಹೊಂದುವ ಸಾಧ್ಯತೆಗಳು ಹೆಚ್ಚು. ಹಲವು ಸಂಶೋಧನೆಗಳ ಪ್ರಕಾರ ಈ ಸಮಸ್ಯೆಗಳು ಅವರ ಆನುವಂಶಿಕ ಸಂಗತಿ ಹಾಗೂ ಎತ್ತರವನ್ನು ಅವಲಂಬಿಸಿದೆ ಎನ್ನಲಾಗಿದೆ.

ಸಂಧಿವಾತ ಕಾಣಿಸಿಕೊಳ್ಳುವುದು
ಎತ್ತರ ಕಡಿಮೆ ಇರುವವರಲ್ಲಿ ಸಂಧಿವಾತ ಹಾಗೂ ಮೂಳೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ದೇಹದ ಅಧಿಕ ಭಾರವನ್ನು ಮೂಳೆಗಳು ಹೊರಲು ಕಷ್ಟಪಡುವರು. ಅಧಿಕ ಭಾರಗಳು ಮೂಳೆಗಳ ಮೇಲೆ ಸಾಕಷ್ಟು ಒತ್ತಡವನ್ನು ಉಂಟುಮಾಡುತ್ತವೆ. ಒಂದು ಅಧ್ಯಯನದ ಪ್ರಕಾರ ಶೇ.80ರಷ್ಟು ಜನರಲ್ಲಿ ಅವರ ಎತ್ತರದ ಸಂಗತಿಯು ಆನುವಂಶಿಕವಾಗಿ ಇರುತ್ತದೆ.



Click it and Unblock the Notifications