Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮನೆಯೊಳಗೆ ಚಪ್ಪಲಿ ಹಾಕಿದರೆ ಆರೋಗ್ಯಕ್ಕೆ ಒಳ್ಳೆಯದು, ಹೇಗೆ?
ಭಾರತದಲ್ಲಿ ಕೆಲ ಸಂಪ್ರದಾಯಸ್ಥ ಮನೆಗೆ ಹೋದರೆ ಒಳಗಡೆ ಚಪ್ಪಲಿ ಧರಿಸುವುದಿಲ್ಲ, ಬರೀಗಾಲಿನಲ್ಲಿ ಓಡಾಡುತ್ತಾರೆ. ಇನ್ನು ಕೆಲವರು ಸ್ವಚ್ಛತೆಯ ದೃಷ್ಟಿಯಿಂದ ಒಳಗಡೆ ಚಪ್ಪಲಿ ಧರಿಸುವುದಿಲ್ಲ, ಇವೆಲ್ಲಾ ಒಂದು ಲೆಕ್ಕದಲ್ಲಿ ಒಳ್ಳೆಯದೇ. ಚಪ್ಪಲಿಯನ್ನು ಹಾಕಿ ಒಳಗಡೆ, ಹೊರಗಡೆ ಓಡಾಡಿದರೆ ಹೊರಗಡೆಯ ಕೊಳೆ ಮನೆಯೊಳಗೆ ಬರಬಹುದು.

ಆದರೆ ಮನೆಯೊಳಗೇ ಚಪ್ಪಲಿ ಹಾಕಿ ಓಡಾಡಿದರೆ ಪ್ರಯೋಜನಗಳು ಇವೆ. ಮನೆಯೊಳಗೆ ಧರಿಸುವ ಚಪ್ಪಲಿ ಯಾವುದೇ ಕಾರಣಕ್ಕೆ ಮನೆಯಿಂದ ಹೊರಗೆ ಅಂಗಳದಲ್ಲಿ ಓಡಾಡುವಾಗಲೂ ಧರಿಸಬೇಡಿ, ಇದರಿಂದ ಹೊರಗಿನ ಕೊಳೆ ಒಳಗೆ ಬಾರದಂತೆ ತಡೆಯಬಹುದು.
ಆದರೆ ಮನೆಯೊಳಗೆ ಚಪ್ಪಲಿ ಧರಿಸಿ ಓಡಾಡುವುದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ನೀವು ಊಹಿಸರಲಿಕ್ಕೂ ಇಲ್ಲ... ಪಾದದಲ್ಲಿ ದೂಳು, ಕೊಳೆ ಆಗುವುದನ್ನು ಅಷ್ಟೇ ನೀವು ತಡೆಯಬಹುದು ಅಂದುಕೊಂಡಿದ್ದರೆ ಅದಕ್ಕೂ ಮೀರಿದ ಪ್ರಯೋಜನಗಳಿವೆ ಗೊತ್ತಾ? ಬನ್ನಿ ಅವುಗಳೇನು ಎಂದು ತಿಳಿಯೋಣ:

ಕಾಯಿಲೆಯನ್ನು ತಡೆಗಟ್ಟುತ್ತದೆ
ಕೆಲವರಿಗೆ ವರ್ಷ ಪೂರ್ತಿ ಶೀತದ ಸಮಸ್ಯೆ ಇರುತ್ತದೆ. ವಾತಾವರಣದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ, ಸ್ವಲ್ಪ ತಣ್ಣನೆಯ ಆಹಾರ ತಿಂದರೂ ಶೀತ ಉಂಟಾಗುತ್ತದೆ. ಈ ರೀತಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಉಂಟಾಗಿರುತ್ತದೆ. ಇಂಥವರು ಮನೆಯೊಳಗೆ ಕೂಡ ಚಪ್ಪಲಿ ಧರಿಸುವುದರಿಂದ ಸ್ವಲ್ಪ ಪ್ರಯೋಜನ ಪಡೆಯಬಹುದು. ಚಪ್ಪಲಿ ಧರಿಸದಿದ್ದರೆ ಕಾಲಿನ ಮೂಲಕ ತಂಪು ಶರೀರ ಸೇರುತ್ತದೆ, ಚಪ್ಪಲಿ ಧರಿಸಿದರೆ ಪಾದಗಳು ಬೆಚ್ಚಗೆ ಇರುತ್ತವೆ, ಅಲ್ಲದೆ ರಕ್ತ ಸಂಚಾರ ಸಹಜವಾಗಿ ನಡೆಯಲು ಕೂಡ ಸಹಾಯ ಮಾಡುತ್ತದೆ.

ಬ್ಯಾಕ್ಟಿರಿಯಾ ಹಾಗೂ ಫಂಗಲ್ ಸೋಂಕಿನಿಂದ ರಕ್ಷಣೆ ನೀಡುತ್ತದೆ
ನಾವು ಮನೆಯೊಳಗೆ ಎಷ್ಟೇ ಸ್ವಚ್ಛ ಇಟ್ಟರೂ ನೆಲ ಬ್ಯಾಕ್ಟಿರಿಯಾ ಮುಕ್ತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಚಪ್ಪಲಿ ಧರಿಸುವುದರಿಂದ ಬ್ಯಾಕ್ಟಿರಿಯಾಗಳಿಂದ ರಕ್ಷಣೆ ನೀಡುತ್ತದೆ.

ದೇಹದ ಸಮತೋಲನ ಕಾಪಾಡುತ್ತೆ
ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರು ಮನೆಯೊಳಗೆ ಫ್ಲ್ಯಾಟ್ ಚಪ್ಪಲಿ ಧರಿಸುವುದರಿಂದ ಬೀಳುವುದನ್ನು ತಪ್ಪಿಸಬಹುದು. ಚಿಕ್ಕ ಮಕ್ಕಳು ಸ್ವಲ್ಪ ದೊಡ್ಡದಾಗುವವರೆಗೆ ಅವರ ಪಾದ ಸಮತಟ್ಟಾಗಿ ಇರಲ್ಲ, ಇದರಿಂದ ಅವರು ಬೀಳುವುದು ಜಾಸ್ತಿ. ಇನ್ನು ವಯಸ್ಸಾದ ಮೇಲೆ ಕೂಡ ನಡೆಯುವಾಗ ದೇಹದ ಮೇಲೆ ನಿಯಂತ್ರಣ ತಪ್ಪುವುದು. ಚಪ್ಪಲಿ ಧರಿಸುವುದರಿಂದ ನಡೆಯುವಾಗ ದೇಹ ನಿಯಂತ್ರಣ ತಪ್ಪುವುದಿಲ್ಲ.

ಪಾದಗಳ ಊತ ಕಡಿಮೆ ಮಾಡುತ್ತೆ
ಪಾದಗಳು ಊದಲು ಪ್ರಮುಖ ಕಾರಣ ರಕ್ತ ಸಂಚಾರ ಸರಿಯಾಗಿ ಆಗದೇ ಇರುವುದು. ಮಧುಮೇಹಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅವರು ಫ್ಲಿಪ್ ಫ್ಲೋಪ್ಸ್ ಚಪ್ಪಲಿ ಧರಿಸುವುದರಿಂದ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ಉಂಟಾಗುತ್ತದೆ. ಅಲ್ಲದೆ ಪಾದ ನೋವು, ಊತ ಮುಂತಾದ ಸಮಸ್ಯೆ ಕಡಿಮೆ ಮಾಡಲೆಂದೇ ಕೆಲವೊಂದು ಚಪ್ಪಲಿ ಇರುತ್ತವೆ. ಅವುಗಳನ್ನು ಧರಿಸುವುದು ಸೂಕ್ತ.



Click it and Unblock the Notifications