Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಲ್ಕೋಹಾಲ್ ಹೊಕ್ಕುಳಿಗೆ ಹಚ್ಚಿದರೆ ಶೀತ ಕಡಿಮೆಯಾಗುವುದೇ?
ಶೀತದಂಥ ಸಾಮಾನ್ಯ ಸಮಸ್ಯೆ ಕಾಡಿದಾಗ ಕೆಲವೊಂದು ಮನೆಮದ್ದುಗಳಿಂದ ಗುಣ ಪಡಿಸಬಹುದಾಗಿದೆ. ಉದಾಹರಣೆಗೆ ಶೀತ, ಕೆಮ್ಮು ಆದಾಗ ಶುಂಠಿ ಕಷಾಯ ಅಥವಾ ಶುಂಠಿ ಟೀ, ತುಳಸಿ ರಸ ಹೀಗೆ ಮನೆಮದ್ದುಗಳು ಮಾಡಿದರೆ ಬೇಗನೆ ಕಡಿಮೆಯಾಗುವುದು.
ಕೆಮ್ಮು ತುಂಬಾ ಜಾಸ್ತಿಯಿದ್ದರೆ ಆಲ್ಕೋಹಾಲ್ ಬಳಸಿ ಮನೆಮದ್ದು ಮಾಡಬಹುದೆಂದು ಹೇಳುವುದನ್ನು ಒಳ್ಳೆಯದು. ಹೌದು ಅನೇಕ ಕೆಮ್ಮಿನ ಔಷಧಿಗಳಲ್ಲೂ ಆಲ್ಕೋಹಾಲ್ ಅಂಶವಿರುತ್ತದೆ. ಇಲ್ಲಿ ನಾವು ಆಲ್ಕೋಹಾಲ್ ಬಳಸಿ ಶೀತ ಹೋಗಲಾಡಿಸುವ ಮನೆಮದ್ದು ಮಾಡುವುದು ಹೇಗೆ ಎಂದು ಹೇಳಿದ್ದೇವೆ.

ಕಾಯಿಲೆ ಬಿದ್ದಾಗ ಮದ್ಯ ಕುಡಿಯಬಾರದು, ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಆದರೆ ಇಲ್ಲಿ ಇದನ್ನು ದೇಹದ ಹೊರಭಾಗಕ್ಕೆ ಹಚ್ಚುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದಿಲ್ಲ, ಶೀತವೂ ಕಡಿಮೆಯಾಗುವುದು. ಆಲ್ಕೋಹಾಲ್(ಮದ್ಯ) ಬಳಸಿ ಶೀತ ಕಡಿಮೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಹತ್ತಿಯ ಉಂಡೆ
ಎರಡು ಚಮಚ ಮದ್ಯಕ್ಕೆ ಒಂದು ಚಮಚ ನೀರು ಹಾಕಿ ಮಿಶ್ರ ಮಾಡಿ, ಅದಕ್ಕೆ ಹತ್ತಿಯ ಚಿಕ್ಕ ಉಂಡೆ ಮಾಡಿ ಅದ್ದಿ, ಆ ಹತ್ತಿಯ ಉಂಡೆಯನ್ನು ಹೊಕ್ಕುಳ ಮೇಲೆ ಇಟ್ಟು ಆರಾಮವಾಗಿ ಮಲಗಿ. 20 ನಿಮಿಷದ ಬಳಿಕ ಹತ್ತಿಯ ಉಂಡೆಯನ್ನು ತೆಗೆಯಿರಿ.
ಹೀಗೆ ಮಾಡಲು ರಬ್ಬಿಂಗ್ ಆಲ್ಕೋಹಾಲ್ ಅಥವಾ ಐಸೋಪ್ರೊಪೈಲ್ ಆಲ್ಕೋಹಾಲ್ ಬಳಸಬಹುದು.
ಸೂಚನೆ: ಹೊಕ್ಕುಳ ಬಳಿ ಗಾಯ ಅಥವಾ ಹುಣ್ಣು ಆಗಿದ್ದರೆ ಈ ಮನೆಮದ್ದು ಮಾಡಬೇಡಿ.

ವಿಚಿತ್ರ ಅನಿಸಿದರೂ ಈ ಮದ್ದು ಪ್ರಯೋಜನಕಾರಿ
ಹೊಕ್ಕುಳ ಮೇಲೆ ಮದ್ಯದಲ್ಲಿ ಅದ್ದಿದ ಹತ್ತಿಯ ಉಂಡೆ ಇಡುವುದರಿಂದ ಶೀತ ಕಡಿಮೆಯಾಗಬಹುದೆಂದು ಹೇಳಿದರೆ ನಿಮಗೆ ವಿಚಿತ್ರ ಅನಿಸಬಹುದು ಆದರೆ ಹೊಕ್ಕುಳ ಮೇಲೆ ಮದ್ಯದಲ್ಲಿಅದ್ದಿದ ಹತ್ತಿಯ ಉಂಡೆ ಇಡುವುದರಿಂದ ಶೀತ ಹಾಗೂ ಸಾಮಾನ್ಯ ಜ್ವರ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ಇತ್ತೀಚೆಗೆ ನಡೆಸಿದ ಸರ್ವೆಯೊಂದು ಕಡಿಮೆ ಆದಾಯದ ಕುಟುಂಬದಲ್ಲಿ ಜ್ವರ, ಶೀತಕ್ಕೆ ಈ ಮನೆಮದ್ದು ಹಿಂದಿನಿಂದಲೂ ಮಾಡುತ್ತಾ ಬರುತ್ತಿದ್ದಾರೆ ಎಂಬುವುದು ತಿಳಿದು ಬಂದಿದೆ.

ಈ ಮನೆಮದ್ದು ಬೇರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಬಳಸಬಹುದು?
ಹೊಕ್ಕುಳ ಮೇಲೆ ಮದ್ಯದಲ್ಲಿ ಅದ್ದಿದ ಹತ್ತಿಯ ಉಂಡೆ ಇಡುವುದರಿಂದ ಶೀತ ಕಡಿಮೆಯಾಗುವುದು ಮಾತ್ರವಲ್ಲ, ಮುಟ್ಟಿನ ನೋವು ಕಡಿಮೆ ಮಾಡಲು, ಮಲಬದ್ಧತೆ ಹೋಗಲಾಡಿಸಲು, ಕೆಮ್ಮು, ತುಟಿ ಒಣಗುವುದನ್ನು ತಡೆಗಟ್ಟಲು ಬಳಸಬಹುದಾಗಿದೆ.
ಈ ಮನೆಮದ್ದು ಹೇಗೆ ಕೆಲಸ ಮಾಡುತ್ತದೆ?
ಮದ್ಯವನ್ನು ಹೊಕ್ಕುಳ ಮೇಲೆ ಹಚ್ಚಿದಾಗ ಅದು ದೇಹದ ಉಷ್ಣೆಯನ್ನು ಕಡಿಮೆ ಮಾಡುತ್ತದೆ. ಅದ್ದರಿಂದಲೇ ಜ್ವರ ಬಂದಾಗ ಮೈ ಉಷ್ಣತೆ ಕಡಿಮೆ ಮಾಡಲು ಸಹಕಾರಿ ಹಾಗೂ ಇದರಿಂದ ಶೀತ ಕೂಡ ತಡೆಗಟ್ಟಬಹುದು. ಐಸೋಪ್ರೊಪೈಲ್ ಆಲ್ಕೋ ಹಾಲ್ ಹಚ್ಚುವುದರಿಂದ ದೇಹದಲ್ಲಿ ಹೊಸ ಚೈತನ್ಯ ಮಾಡುವುದು.

ಇದರಿಂದ ಏನಾದರೂ ಅಡ್ಡಪರಿಣಾಮವಿದೆಯೇ?
* ಜ್ವರ ಬಂದಾಗ ಮೈ ಉಷ್ಣತೆ ಕಡಿಮೆಯಾಗಲು ಈ ಮನೆಮದ್ದು ಮಾಡುತ್ತಿದ್ದರೆ ಡೆಂಗ್ಯೂ, ಚಿಕನ್ ಗುನ್ಯಾ ಮುಂತಾದ ರೋಗ ಬಂದಾಗ ಪ್ರಾರಂಭದಲ್ಲಿಯೇ ಪತ್ತೆ ಹಚ್ಚದೆ ಹೋದರೆ ಅಪಾಯ. ಅದೇ ಆಸ್ಪತ್ರೆಗೆ ಹೋದರೆ ಸಾಮಾನ್ಯ ಜ್ವರವೇ? ಅಲ್ಲವೇ ಎಂಬುವುದನ್ನು ಬೇಗನೆ ಪತ್ತೆಹಚ್ಚುತ್ತಾರೆ.
* ಇನ್ನು ಸೂಕ್ಷ್ಮ ತ್ವಚೆಯವರಿಗೆ ಮದ್ಯ ಹಚ್ಚಿವುದರಿಂದ ಉರಿ ಉಂಟಾಗುವುದು.

ಮಕ್ಕಳಿಗೆ ಈ ಮನೆಮದ್ದು ಮಾಡಬಹುದಾ?
ಮಕ್ಕಳಿಗೆ ಜ್ವರ, ಶೀತ ಉಂಟಾದಾಗ ಈ ಮನೆಮದ್ದು ಮಾಡಲೇಬೇಡಿ. ಮಕ್ಕಳ ಹೊಕ್ಕುಳಿಗೆ ಏನೂ ಹಾಕಬಾರದು. ಮಕ್ಕಳ ಹೊಟ್ಟೆ ಅಥವಾ ಹೊಕ್ಕುಳ ಮೇಲೆ ಮದ್ಯ ಸವರಿದರೆ ಮಕ್ಕಳು ಕೋಮಾಕ್ಕೆ ಜಾರಬಹುದು ಆದ್ದರಿಂದ ಮಕ್ಕಳಿಗೆ ಈ ಮನೆಮದ್ದು ಮಾಡುವ ಸಾಹಸ ಮಾಡಬೇಡಿ.
ಸೂಚನೆ: ಈ ಮನೆಮದ್ದು ಮಾಡುವುದಾದರೆ ಶೀತ ತಕ್ಷಣ ಕಡಿಮೆಯಾಗುವುದು. ಹಾಗಂತ ಇದನ್ನು ಆಗಾಗ ಮಾಡಬೇಡಿ, ಇದರಿಂದ ಅಡ್ಡಪರಿಣಾಮ ಉಂಟಾಗಬಹುದು. ಸಾಮಾನ್ಯ ಶೀತವಾದರೆ ಈ ಮನೆಮದ್ದಿನಿಂದ ಗುಣವಾಗುತ್ತದೆ, ಅದೇ ಬೇರೆ ರೋಗದ ಲಕ್ಷಣವಾಗಿದ್ದರೆ ಈ ಮನೆಮದ್ದು ಮಾಡುತ್ತಿದ್ದರೆ ರೋಗ ಉಲ್ಭಣವಾಗುವ ಸಾಧ್ಯತೆ ಇದೆ.

ಅತೀ ಹೆಚ್ಚು ಕೇಳ್ಪಡುವ ಪ್ರಶ್ನೆಗಳಿವು?
ಪ್ರಶ್ನೆ: ಶರೀರಕ್ಕೆ ಮದ್ಯ ಹಚ್ಚುವುದರಿಂದ ತೊಂದರೆ ಉಂಟಾಗುತ್ತದೆಯೇ?
ಉತ್ತರ: ಸ್ವಲ್ಪ ಪ್ರಮಾಣದ ಮದ್ಯವನ್ನು ತ್ವಚೆಗೆ ಹಚ್ಚುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಹೆಚ್ಚಿನ ಪ್ರಮಾಣದ ಮದ್ಯ ಹಚ್ಚುವುದು, ಈ ಮನೆಮದ್ದು ತುಂಬಾ ದಿನಗಳವರೆಗೆ ಮಾಡುವುದು ತ್ವಚೆ ಹಾಗೂ ಶರೀರದ ಮೇಲೆ ಅಡ್ಡಪರಿಣಾಮ ಉಂಟಾಗಹುದು.
ಪ್ರಶ್ನೆ: ಐಸೋಪ್ರೊಪೈಲ್ ಆಲ್ಕೋಹಾಲ್ ಹಾಗೂ ರಬ್ಬಿಂಗ್ ಹಾಲ್ಕೋ ನಡುವಿನ ವ್ಯತ್ಯಾಸವೇನು?
ಉತ್ತರ: ರಬ್ಬಿಂಗ್ ಆಲ್ಕೋಹಾಲ್ ಆ್ಯಂಟಿಸೆಪ್ಟಿಕ್ ಗುಣ ಹೊಂದಿದೆ. ಇದನ್ನು ಕುಡಿಯಲು ಸಾಧ್ಯವಿಲ್ಲ.
ಪ್ರಶ್ನೆ: ರಬ್ಬಿಂಗ್ ಆಲ್ಕೋಹಾಲ್ ಮೊಡವೆಗೆ ಒಳ್ಳೆಯದಾ?
ಉತ್ತರ: ಹೌದು, ಇದನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುವುದು ಹಾಗೂ ಮುಖದಲ್ಲಿ ಬೇಗನೆ ನೆರಿಗೆ ಬೀಳುವುದಿಲ್ಲ.



Click it and Unblock the Notifications
