Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಏನಿದು ಕುಸುಮ ರೋಗ, ಪುರುಷರನ್ನೇ ಇದು ಕಾಡುವುದೇಕೆ?
ಏಪ್ರಿಲ್ 17ನ್ನು ವಿಶ್ವ ಹಿಮೋಫಿಲಿಯಾ ದಿನವನ್ನಾಗಿ ಆಚರಿಸಲಾಗುವುದು. 1989ರಿಂದ ಇದು ಆಚರಣೆಯಲ್ಲಿದೆ. ಇದನ್ನು ಕನ್ನಡದಲ್ಲಿ ಕುಸುಮ ರೋಗವೆಂದು ಕರೆಯುತ್ತಾರೆ. ಇದನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ, ಆದರೆ ಚಿಕಿತ್ಸೆ ಮೂಲಕ ರಕ್ತಸ್ರಾವವನ್ನು ಕಡಿಮೆ ಮಾಡಬಹುದು.

ಹಿಮೋಫಿಲಿಯಾ ಎಂದರೇನು?
ನಮ್ಮ ದೇಹಕ್ಕೆ ಗಾಯವಾದಾಗ ರಕ್ತ ಬರುವುದು ಸಹಜ, ಆದರೆ ರಕ್ತ ಬೇಗನೆ ಹೆಪ್ಪುಗಟ್ಟುವ ಗುಣವೂ ಇರುವುದರಿಂದ ಚಿಕ್ಕ-ಪುಟ್ಟ ಗಾಯಾವಾದಾಗ ಭಯ ಪಡಬೇಕಾಗಿಲ್ಲ. ಆದರೆ ಹಿಮೋಫಿಲಿಯಾ ರೋಗ ಇರುವವರಲ್ಲಿ ರಕ್ತ ಹೆಪ್ಪುಗಟ್ಟುವುದಿಲ್ಲ. ಆದ್ದರಿಂದ ಒಂದು ಚಿಕ್ಕ ಗಾಯವಾದರೂ ತುಂಬಾ ರಕ್ತಸ್ರಾವ ಉಂಟಾಗಿ ಸಾವು ಕೂಡ ಸಂಭವಿಸಬಹುದು. ಈ ರೋಗ ಹತ್ತಿ ಸಾವಿರ ಜನರಲ್ಲಿ ಒಬ್ಬರಿಗೆ ಕಂಡು ಬರುತ್ತದೆ. ಅದರಲ್ಲೂ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅನುಗುಣವಾಗಿ ಹಿಮೋಫಿಲಿಯಾ ಎ, ಬಿ, ಸಿ ಎಂದು ವಿಂಗಡಿಸಲಾಗಿದೆ. ಹಿಮೋಫಿಲಿಯಾ ಎ ಮತ್ತು ಬಿ ಪುರುಷರಲ್ಲಿ ಮಾತ್ರ ಕಂಡು ಬರುತ್ತದೆ. ಹಿಮೋಫಿಲಿಯಾ ಸಿ ಅಪರೂಪದಲ್ಲಿ ಕಂಡು ಬರುತ್ತದೆ.

ವಂಶವಾಹಿನಿಯಾಗಿ ಬರುವುದು
ಹಿಮೋಫಿಲಿಯಾ ರೋಗ ವಂಶವಾಹಿನಿಯಾಗಿ ಬರುವುದು ವಂಶವಾಹಿನಿಯಲ್ಲಿ ತಾಯಿಂದ ಮಗನಿಗೆ ಬಳುವಳಿಯಾಗಿ ಬರುವ ರೋಗ ಇದಾಗಿದೆ. X ಎಂಬ ವರ್ಣತಂತುಗಳಲ್ಲಿ ಈ ರೋಗ ಸಾಗಿಸಲ್ಪಡುವುದರಿಂದ ಈ ರೋಗ ಪುರುಷರಿಗೆ ಹೆಚ್ಚಾಗಿ ಬರುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುವುದು ಬಲು ಅಪರೂಪ.
ಈ ರೋಗದ ಲಕ್ಷಣಗಳು
- ಗಂಟಲು, ಕೀಲು, ಮಾಂಸಖಂಡಗಳಲ್ಲಿ ರಕ್ತಸ್ರಾವ.
- ಮೂಗಿನಲ್ಲಿ, ಹಲ್ಲಿನ ವಸಡಿನಲ್ಲಿ ರಕ್ತಸ್ರಾವ
- ಸಂಧುನೋವು, ಊತ, ಕೆಲವರಿಗೆ ಮಲ ಮತ್ತು ಮೂತ್ರದಲ್ಲಿ ರಕ್ತಸ್ರಾವವಾಗುವುದು
- ಮಿದುಳಿನಲ್ಲಿ ರಕ್ತಸ್ರಾವ (ಮೆದುಳಿನಲ್ಲಿ ರಕ್ತಸ್ರಾವವಾದರೆ ತುಂಬಾ ಅಪಾಯಕಾರಿ)
- ನಿಮ್ಮ ತಟ್ಟೆಯಲ್ಲಿ ಹಣ್ಣುಗಳು ಹಾಗೂ ತರಕಾರಿಗಳು ಅಧಿಕವಿರಲಿ, ಅದರಲ್ಲೂ ಬ್ರೊಕೋಲಿ, ಸಿಹಿ ಗೆಣಸು ಹೆಚ್ಚು ಬಳಸಬೇಕು.
- ಪ್ರೊಟೀನ್ ಆಹಾರಗಳಾದ ಮೀನು, ಚಿಕನ್, ಟರ್ಕಿ ಕೋಳಿ, ಮೊಟ್ಟೆ, ಬೀನ್ಸ್, ನಟ್ಸ್, ಟೋಫು ಇವುಗಳನ್ನು ತಿನ್ನಬೇಕು.
- ಧಾನ್ಯಗಳನ್ನು ತಿನ್ನಬೇಕು.
- ಕೊಬ್ಬು ಕಡಿಮೆ ಇರುವ ಹಾಲು ಕುಡಿಯಿರಿ. ನೀರನ್ನು ಚೆನ್ನಾಗಿ ಕುಡಿಯಬೇಕು.
- ಊಟದ ತಟ್ಟೆಯಲ್ಲಿ ಬಣ್ಣ-ಬಣ್ಣದ ಆಹಾರಗಳಿರಲಿ, ಅಂದರೆ ಸೊಪ್ಪುಗಳು, ತರಕಾರಿಗಳಿರಲಿ.
- ಬೇಯಿಸಿದ ಮಾಂಸಾಹಾರ ಸೇವಿಸಿ, ಕರಿದ ಮಾಂಸಾಹಾರ ದೂರವಿಡಿ.
- ಬೆಣ್ಣೆ ಹಣ್ಣು, ಆಲೀವ್ಸ್, ವಾಲ್‌ನಟ್ಸ್, ಸೋಯಾಬೀನ್ ಇವುಗಳನ್ನು ಸೇವಿಸಿ.
- ಕ್ಯಾಲ್ಸಿಯಂ ಹಾಗೂ ಕಬ್ಬಿಣದಂಶ ಅಧಿಕವಿರುವ ಆಹಾರ ಸೇವಿಸಿ
- ಕೊಬ್ಬು ರಹಿತ ಹಾಲು
- ಕಡಿಮೆ ಕೊಬ್ಬಿನ ಚೀಸ್'
- ಗ್ರೀಕ್ ಯೋಗರ್ಟ್
- ಸೋಯಾ ಹಾಲು ಮತ್ತು ಆರೇಂಜ್ ಜ್ಯೂಸ್
- ಬೀನ್ಸ್
- ಪಾಲಾಕ್
- ಬಾದಾಮಿ
- ಕೆಂಪು ಮಾಂಸ
- ಲಿವರ್
- ಬೀನ್ಸ್
- ಬಟಾಣಿ
- ಕೋಳಿ ಮಾಂಸ
- ಒಣದ್ರಾಕ್ಷಿ, ಏಪ್ರಿಕಾಟ್
- ತಂಪು ಪಾನೀಯಗಳು
- ಸಕ್ಕರೆ ಹಾಕಿದ ಜ್ಯೂಸ್‌ಗಳು
- ಗ್ರೇವಿ, ಸಾಸ್
- ಬೆಣ್ಣೆ
- ಕೆನೆ ಇರುವ ಹಾಲಿನ ಉತ್ಪನ್ನಗಳು
- ಕ್ಯಾಂಡಿ
- ಟ್ರಾನ್ಸ್‌ಫ್ಯಾಟ್ ಇರುವ ಆಹಾರಗಳು
- ಬೆಳ್ಳುಳ್ಳಿ
- ಶುಂಠಿ

ಆಹಾರಕ್ರಮ ಹಾಗೂ ಮೈತೂಕದ ಕಡೆ ಗಮನ ನೀಡಬೇಕು
ಹಿಮೋಫಿಲಿಯಾ ಇರುವವರು ಆಹಾರಕ್ರಮ ಹಾಗೂ ಮೈತೂಕದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಮೈತೂಕ ಹೆಚ್ಚಾದರೆ ಇದರಿಂದ ಕಾಲು ಸಂಧುಗಳ ಮೇಲೆ ಹೆಚ್ಚಿನ ಒತ್ತಡ ಹಾಕುವುದರಿಂದ ರಕ್ತಸ್ರಾವ ಕಡಿಮೆ ಮಾಡಲು VII ರಿಪ್ಲೇಸ್‌ಮೆಂಟ್ ಥೆರಪಿ ಮಾಡಿಸಬೇಕಾಗುತ್ತದೆ. ಆರೋಗ್ಯಕರ ಆಹಾರಕ್ರಮದಿಂದ ಸಂಧುಗಳ ಆರೋಗ್ಯ ಹೆಚ್ಚಿಸಬಹುದು. ಮಕ್ಕಳಲ್ಲಿ ಹಿಮೋಫಿಲಿಯಾ ಇದ್ದರೆ ಅವರ ಬೆಳವಣಿಗೆ ದೃಷ್ಟಿಯಿಂದ ಆಹಾರಕ್ರಮದ ಕಡೆ ಹೆಚ್ಚಿನ ಗಮನ ನೀಡಬೇಕು.
ಇಲ್ಲಿ ಹಿಮೋಫಿಲಿಯಾ ಇರುವವರು ಯಾವ ಆಹಾರಕ್ರಮ ಪಾಲಿಸಬೇಕು ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

ತಿನ್ನಬೇಕಾದ ಆಹಾರಗಳು

ಕ್ಯಾಲ್ಸಿಯಂ ಅಧಿಕವಿರುವ ಆಹಾರ

ಕಬ್ಬಿಣದಂಶ ಅಧಿಕವಿರುವ ಆಹಾರ
ವಿಟಮಿನ್ ಸಿ ಇರುವ ಆಹಾರಗಳು
ಕಿತ್ತಳೆ
ಟೊಮೆಟೊ
ಕೆಂಪು ಹಾಗೂ ಹಸಿರು ದುಂಡು ಮೆಣಸು
ಕರ್ಬೂಜು, ಕಲ್ಲಂಗಡಿ
ಸ್ಟ್ರಾಬೆರ್ರಿ

ಈ ಆಹಾರಗಳನ್ನು ಸೇವಿಸಿಬೇಡಿ

ಸಲಹೆ
ಹಿಮೋಫಿಲಿಯಾ ಸಮಸ್ಯೆ ಇರುವವರು ಆಹಾರಕ್ರಮದ ಕಡೆ ತುಂಬಾ ಗಮನ ನೀಡಬೇಕು. ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು, ಆಹಾರದಲ್ಲಿ ಇರಬೇಕಾದ ಅಂಶಗಳ ಕಡೆ ಗಮನ ನೀಡಬೇಕು. ಸ್ಯಾಚುರೇಟಡ್ ಹಾಗೂ ಟ್ರಾನ್ಸ್ ಕೊಬ್ಬಿನಂಶ ಕಡಿಮೆ ತೆಗೆದುಕೊಳ್ಳಬೇಕು. ಮಹಿಳೆಯಾಗಿದ್ದರೆ ದಿನದಲ್ಲಿ 6 ಚಮಚಕ್ಕಿಂತ ಅಧಿಕ ಪುರುಷರು 9 ಚಮಚಕ್ಕಿಂತ ಅಧಿಕ ಸಕ್ಕರೆಯಂಶ ತೆಗೆದುಕೊಳ್ಳಬೇಕು.



Click it and Unblock the Notifications
