Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ಸ್ಟೈರೀನ್ ವಿಷಾನಿಲ ಸೋರಿಕೆಯಾದಾಗ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು
ಆಂಧ್ರದ ವಿಶಾಖಪಟ್ಟಣದಲ್ಲಿ ನಡೆದ ಗ್ಯಾಸ್ ದುರಂತ ಕಂಡು ಕಲ್ಲು ಮನಸ್ಸುಗಳು ಕೂಡ ಕರಗಿವೆ. ಅಷ್ಟೊಂದು ಭಯಾನಕವಾಗಿತ್ತು ಅಲ್ಲಿಯ ದೃಶ್ಯ ನೋಡಲು. ಪ್ರಾಣಿಗಳು ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದ್ದೆವು. 11 ಜನರು ಪ್ರಾಣ ಕಳೆದುಕೊಂಡರು. ಅಲ್ಲಿಯ ನಿವಾಸಿಗಳು ಪ್ರಾಣ ಉಳಿಸಲು ಓಡಿ ಬಂದರೂ ಆ ಗ್ಯಾಸ್ ಸೇವಿಸಿದರ ಪರಿಣಾಮ ರಸ್ತೆಯಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ಇದೀಗ 5000ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲಿಯ ಎಲ್‌ಜಿ ಫಾಲಿಮರ್ ಫ್ಯಾಕ್ಟರಿಯಲ್ಲಿ ಸೋರಿಕೆಯಾದ ಪಾಲಿಸ್ಟೈರೀನ್ ಎಂಬ ಗ್ಯಾಸ್ ಸೋರಿಕೆಯಾಗಿ ಇಂಥದೊಂದು ಅನಾಹುತ ಸಂಭವಿಸಿದೆ. ಎಲ್‌ಜಿ ಪಾಲಿಮರ್ ಎಂಬ ಕೈಗಾರಿಕೆಯು ಪಾಲಿಸ್ಟೈರೀನ್ ಎಂಬ ಒಂದು ಬಗೆಯ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಬಳಸಲಾಗುವುದು.

ಸ್ಟೈರೀನ್ ಎಂದರೇನು?
ಸ್ಟೈರೀನ್ ಅನ್ನು ವೀನೈಬೆಂಜೀನ್, ಈಥೈಲ್‌ಬೆಂಜೀನ್, ಫೀನೈಲ್ಈಥೇಲಿನ್ ಎಂದು ಕೂಡ ಕರೆಯುತ್ತಾರೆ. ಇದೊಂದು ಬಣ್ಣರಹಿತ ದ್ರಾವಣವಾಗಿದ್ದು ಅದು ಬೇಗನೆ ಆವಿಯಾಗುತ್ತಿದೆ. ಈ ರಾಸಾಯನಿಕ ಆವಿಯಾದಾಗ ಒಂದು ರೀತಿಯ ಸಿಹಿ ವಸ್ತುವಿನ ವಾಸನೆಯಿಂದ ಕೂಡಿರುತ್ತದೆ. ಇದು ಬೇರೆ ರಾಸಾಯನಿಕದ ಜೊತೆ ಮಿಶ್ರವಾದ ಕೆಟ್ಟ ವಾಸನೆ ಬೀರುವುದು.
ಸ್ಟೈರೀನ್ ಅನ್ನು ರಬ್ಬರ್, ಪ್ಲಾಸ್ಟಿಕ್, ಫೈಬರ್‌ಗ್ಲಾಸ್, ಪೈಪ್ಸ್, ಅಟೋಬೊಬೈಲ್‌ನ ಬಿಡಿ ಭಾಗಗಳು, ಕಾರ್ಪೆಟ್, ಆಹಾರದ ಡಬ್ಬಗಳ ತಯಾರಿಯಲ್ಲಿ ಬಳಸಲಾಗುವುದು.

ಸ್ಟೈರೀನ್ ಅನಿಲ ದೇಹದ ಮೇಲೆ ಬೀರುವ ಪರಿಣಾಮಗಳು
ಸ್ಟೈರೀನ್‌ಗೆ ಬೇಗನೆ ಬೆಂಕಿ ಹತ್ತಿಕೊಳ್ಳುತ್ತದೆ, ಇದರ ವಿಷಾನಿಲ ಸೇವಿಸಿದಾಗ ಕಣ್ಣುಗಳಲ್ಲಿ ಉರಿ ಉಂಟಾಗುವುಉದ, ಉಸಿರಾಟದಲ್ಲಿ ತೊಂದರೆ ಉಂಟಾಗುವುದು, ತಲೆ ಸುತ್ತು, ವಾಂತಿ, ಹೊಟ್ಟೆ ನೋವು, ತಲೆನೋವು ಹಾಗೂ ಮತ್ತಿತರ ಗಂಭೀರ ಸಮಸ್ಯೆಗಳು ಉಂಟಾಗುವುದು.
ಕೆಲವೊಮ್ಮೆ ಆಕಸ್ಮಿಕವಾಗಿ ಸ್ಟೈರೀನ್ ಅನಿಲ ಕುಡಿಯುವ ನೀರಿನಲ್ಲಿಯೂ ಸೇರಿಕೊಂಡು ಬರಬಹುದು, ಆಗ ಅಂಥ ನೀರನ್ನು ಕುಡಿದರೆ ಗಂಟಲು, ಮೂಗು, ಕಣ್ಣುಗಳಲ್ಲಿ ಉರಿ, ತ್ವಚೆಯಲ್ಲಿ ತುರಿಕೆ ಉಂಟಾಗಬಹುದು.
ಆಕಸ್ಮಿಕವಾಗಿ ಅನಿಲ ದುರಂತ ಕೈಗಾರಿಕಾ ಕಂಪನಿಗಳಲ್ಲಿ ಮಾತ್ರವಲ್ಲ, ಮನೆಯಲ್ಲೂ ಉಂಟಾಗಬಹುದು. ಅಡುಗೆ ಅನಿಲ ಅಥವಾ ಗೀಸರ್ ಗ್ಯಾಸ್ ಸೋರಿಕೆಯಾದರೂ ಅಪಾಯ ಉಂಟಾಗುವುದು.
ಗ್ಯಾಸ್ ಸೋರಿಕೆಯಾದಾಗ ಗ್ಯಾಸ್ ಬಳಿ ಗಾಳಿ ಹೊರಸುಸುವ ಶಬ್ದ ಉಂಟಾಗುತ್ತದೆ, ಟ್ಯಾಪ್ ನೀರಿನಲ್ಲಿ ಗಾಳಿ ಸೇರಿಕೊಂಡಿದ್ದರೆ ನೀರಿನಲ್ಲಿ ಗುಳ್ಳೆಗಳು ಬರುತ್ತವೆ. ವಿಷಾನಿಲ ಸೋರಿಕೆಯಾದಾಗ ರಂಜಕ ಅಥವಾ ಕೆಟ್ಟು ಹೋದ ಮೊಟ್ಟೆಯ ವಾಸನೆ ಬೀರುವುದು.

ಸ್ಟೈರೀನ್ ಗ್ಯಾಸ್‌ನಿಂದ ಆರೋಗ್ಯದ ಮೇಲೆ ಬೀರುವ ಕೆಟ್ಟ ಪರಿಣಾಮಗಳು
- *ತಲೆನೋವು
- ತಲೆಸುತ್ತು
- ಸುಸ್ತು
- ವಾಂತಿ
- ಉಸಿರಾಟದಲ್ಲಿ ತೊಂದರೆ
- ಉಸಿರಾಡಲು ತೊಂದರೆ ಉಂಟಾಗಿ ಸಾವು ಸಂಭವಿಸಬಹುದು
- ಪ್ರಜ್ಞೆ ಕಳೆದುಕೊಳ್ಳುವುದು
- ಜ್ಞಾಪಕ ಶಕ್ತಿಗೆ ತೊಂದರೆ
- ವಿಪರೀತ ತಲೆನೋವು

ಮನೆಯಲ್ಲಿ ಅಥವಾ ಸಮೀಪದ ಕೈಗಾರಿಕೆಯಲ್ಲಿ ಗ್ಯಾಸ್ ಸೋರಿಕೆಯಾದರೆ ಏನು ಮಾಡಬೇಕು?
ವಿಷಾನಿಲ ಸೋರಿಕೆಯಾದಾಗ ಅದರ ವಾಸನೆ ಮೂಗಿಗೆ ಬಡೆದ ತಕ್ಷಣ ಮನೆಯ ದೀಪಗಳನ್ನು ಆರಿಸಿ, ಕಿಟಕಿ, ಬಾಗಿಲು ತೆರೆದು ಇಟ್ಟು, ಆ ಸ್ಥಳದಿಂದ ದೂರಕ್ಕೆ ಹೋಗಬೇಕು, ಗ್ಯಾಸ್ ಸೋರಿಕೆಯಾಗುವಾಗ ಅಲ್ಲಿ ನಿಂತು ಅಗ್ನಿಶಾಮಕ ದಳ ಅಥವಾ ಪೊಲೀಸರಿಗೆ ಅಥವಾ ಸ್ನೇಹಿತರಿಗೆ ಫೋನ್ ಮಾಡಬೇಡಿ. ಇದರಿಂದ ಬೆಂಕಿ ಹತ್ತಿಕೊಳ್ಳುವ ಅಪಾಯವಿದೆ.
ಪರಿಸ್ಥಿತಿ ಹತೋಟಿಗೆ ಬಂದರೂ ವಿಷಾನಿಲ ಸೇವನೆಯಿಂದ ಸ್ವಲ್ಪ ಆರೋಗ್ಯ ಸಮಸ್ಯೆ ಕಾಡಬಹುದು, ಏನಾದರೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.



Click it and Unblock the Notifications
