Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಮಹಿಳೆಯರು ಅಶ್ವಗಂಧ ಸೇವಿಸಿದರೆ ಮೈ ಬೊಜ್ಜು, ಒತ್ತಡ, ಲೈಂಗಿಕ ಸಮಸ್ಯೆಗಳಿಗೆ ಸಿಗುವುದು ಪರಿಹಾರ
ಅಶ್ವಗಂಧವನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸಲಾಗುವುದು. ಮಹಿಳೆಯರಿಗೆ ಇದೊಂದು ಮ್ಯಾಜಿಕಲ್ ಹರ್ಬ್ ಆಗಿದೆ, ಏಕೆಂದರೆ ಇದನ್ನು ಸೇವಿಸುವುದರಿಂದ ಸ್ತ್ರೀಯರಿಗೆ ಹಲವು ರೀತಿಯ ಪ್ರಯೋಜನಗಳಿವೆ.
ಎಲ್ಲಾ ವಯಸ್ಸಿನ ಮಹಿಳೆಯರಿಗೂ ಈ ಅಶ್ವಗಂಧ ಪ್ರಯೋಜನಕಾರಿಯಾಗಿದೆ. ಇದನ್ನು ದಿನನಿತ್ಯ ಸೇವಿಸುತ್ತಿದ್ದರೆ ತುಂಬಾನೇ ಪ್ರಯೋಜನ ಪಡೆಯಬಹುದು. ಇದರ ಸೇವನೆ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.
ಅಶ್ವಗಂಧ ಪ್ರತಿದಿನ ಸೇವಿಸಿದರೆ ಆಕರ್ಷಕ ಮೈ ಮಾಟ ಹೊಂದಿರುವುದು ಮಾತ್ರವಲ್ಲ ಇನ್ನು ಹಲವು ಪ್ರಯೋಜನಗಳಿಗೆ, ಅಶ್ವಗಂಧದ ಸೇವನೆ ಹೇಗೆ ಸಹಕಾರಿಯಾಗಿದೆ ಎಂದು ನೋಡೋಣ:

1. ಅಶ್ವಗಂಧ ತೂಕ ಇಳಿಕೆಗೆ ಸಹಕಾರಿ
ತೂಕ ಹೆಚ್ಚಾಗುತ್ತಿದೆಯೇ ಹಾಗಾದರೆ ಅಶ್ವಗಂಧ ನಿಮಗೆ ಸಹಾಯ ಮಾಡುವುದು, ಜರ್ನಲ್ ಆಫ್ ಎವಿಡೆನ್ಸ್ ಬೇಸ್ಡ್ ಇಂಟ್ರಾಗೇಟಿವ್ ಮೆಡಿಸಿನ್‌ನಲ್ಲಿ ಈ ಗಿಡ ಮೂಲಿಕೆ ಮಾನಸಿಕ ಒತ್ತಡ ಕಡಿಮೆ ಮಾಡುವುದು ಹಾಗೂ ಆಗಾಗ ತಿನ್ನಬೇಕೆಂಬ ಮಾನಸಿಕ ಸಮಸ್ಯೆ ತಡೆಗ್ಟಟುತ್ತದೆ ಎಂದು ಹೇಳಿದೆ.

2. ಲೈಂಗಿಕ ಸಮಸ್ಯೆ ಹೋಗಲಾಡಿಸುತ್ತೆ
ಅಶ್ವಗಂಧ ತಿನ್ನುವುದರಿಂದ ಮಾನಸಿಕ ಆರೋಗ್ಯ ಹೆಚ್ಚಿಸುತ್ತದೆ, ಇದು ರಕ್ತ ಸಂಚಾರ ಸರಾಗವಾಗಿ ನಡೆಯಲು ಸಹಕಾರಿ ಹಾಗೂ ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತದೆ.

3. ನಿಮ್ಮ ಕೂದಲಿನ ಸಮಸ್ಯೆಗೆ ಉತ್ತಮ ಪರಿಹಾರ
ಅಶ್ವಗಂಧವನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು. ಒತ್ತಡದಿಂದ ನಿಮ್ಮ ಕೂದಲು ಉದುರುತ್ತಿದ್ದರೆ ತಕ್ಷಣ ಪರಿಹಾರ ಸಿಗುವುದು.
ಅಲ್ಲದೆ ಅಕಾಲಿಕ ನೆರೆ ತಡೆಗಟ್ಟುತ್ತದೆ.

4. ಬ್ಯಾಕ್ಟಿರಿಯಾಗಳನ್ನು ತಡೆಗಟ್ಟುತ್ತೆ
ಹಲವು ಮಹಿಳೆಯರಿಗೆ ಜನನೇಂದ್ರೀಯದಲ್ಲಿ ಸೋಂಕು ಉಂಟಾಗಿ ತುರಿಕೆ ಕಂಡು ಬರುವುದು. ಯೀಸ್ಟ್ ಸೋಂಕು ತಡೆಗಟ್ಟುವಲ್ಲಿ ಅಶ್ವಗಂಧ ಪರಿಣಾಮಕಾರಿಯಾಗಿದೆ. ನಿಮ್ಮ ಖಾಸಗಿ ಭಾಗದಲ್ಲಿ ಆಗಾಗ ತುರಿಕೆ ಕಂಡು ಬರುತ್ತಿದ್ದರೆ ಈ ಅಶ್ವಗಂಧ ಸೇವಿಸುವುದರಿಂದ ಪರಿಹಾರ ಕಾಣಬಹುದು.

5. ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುತ್ತದೆ
ಮಹಿಳೆಯರಲ್ಲಿ ಮದುಮೇಹ ಸಮಸ್ಯೆ ಹೆಚ್ಚಾಗುತ್ತಿದೆ. ಹಾರ್ಮೋನ್‌ಗಳ ಅಸಮತೋಲನ, ಪಿಸಿಒಡಿ, ಮುಟ್ಟಿನಲ್ಲಿ ತೊಂದರೆ ಈ ರೀತಿ ಹಲವು ಸಮಸ್ಯೆಗಳು ಮಹಿಳೆಯರನ್ನು ಕಾಡುವುದು. ಅಶ್ವಗಂಧ ಸೇವಿಸುವುದರಿಂದ ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚಚಾಗುವುದನ್ನು ತಡೆಗಟ್ಟುತ್ತದೆ ಅಲ್ಲದೆ ಸಿಹಿ ತಿನ್ನಬೇಕೆಂಬ ಬಯಕೆಯನ್ನು ಕೂಡ ತಡೆಗಟ್ಟುತ್ತದೆ.

6. ಮೆನೋಪಾಸ್ ಸಮಸ್ಯೆ ಹೋಗಲಾಡಿಸುತ್ತದೆ
ಮಹಿಳೆಯರಿಗೆ 40ರ ಪ್ರಾಯ ದಾಟಿದ ಮೇಲೆ ಮೆನೋಪಾಸ್ ಪ್ರಾರಂಭವಾಗುವುದು. ಕೆಲವರಿಗೆ ಬೇಗನೆ ಉಂಟಾದರೆ ಇನ್ನು ಕೆಲವರಿಗೆ 50 ಆಸುಪಾಸಿನಲ್ಲಿ ಮೆನೋಪಾಸ್ ಉಂಟಾಗುವುದು. ಮೆನೋಪಾಸ್ ಎಂಬುವುದು ಮುಟ್ಟು ನಿಲ್ಲುವ ಪ್ರಕ್ರಿಯೆಯಾಗಿದೆ. ಈ ಸಮಯದಲ್ಲಿ ಹಾಟ್ ಫ್ಲ್ಯಾಷ್, ಮೂಡ್ ಸ್ವಿಂಗ್ ಈ ರೀತಿಯ ಸಮಸ್ಯೆ ಕಂಡು ಬರುವುದು. ಇವೆಲ್ಲಾ ತಡೆಗಟ್ಟುವಲ್ಲಿ ಅಶ್ವಗಂಧ ಪರಿಣಾಮಕಾರಿಯಾಗಿದೆ.
ಅಶ್ವಗಂಧದಿಂದ ಅಡ್ಡಪರಿಣಾಮವಿದೆಯೇ?
ಆಯುರ್ವೇದ ಔಷಧಿಯಿಮದ ಅಡ್ಡಪರಿಣಾಮ ಇರುವುದಿಲ್ಲ, ನೀವು ಮಿತಿಯಲ್ಲಿ ತಿಂದರೆ ಏನೂ ತೊಂದರೆಯಿಲ್ಲ. ಎದೆ ಹಾಲುಣಿಸುವ ತಾಯಿಯಾಗಿದ್ದರೆ, ಗರ್ಭಿಣಿಯಾಗಿದ್ದರೆ ಅಥವಾ ಇತ್ತೀಚೆಗೆ ಸರ್ಜರಿ ಆಗಿದ್ದರೆ, ಅಸ್ತಮಾ, ಉಸಿರಾಟದ ತೊಂದರೆಯಿದ್ದರೆ ಅಶ್ವಗಂಧ ಸೇವಿಸಬೇಡಿ. ಇದನ್ನು ತೆಗೆದುಕೊಳ್ಳುವಾಗ ನಿಮ್ಮ ವೈದ್ಯರ ಸಲಹೆ ಪಡೆಯಿರಿ.



Click it and Unblock the Notifications
