Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಆಗಾಗ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದೀರಾ? ನಿರ್ಲಕ್ಷ್ಯ ಮಾಡಬೇಡಿ
ನಮ್ಮ ದೇಹದಲ್ಲಿರುವ ಬೇಡದ ನೀರನ್ನು ಮೂತ್ರದ ಮೂಲಕ ಹೊರ ಹಾಕಲಾಗುವುದು. ಮೂತ್ರವು ಬ್ಲೇಡರ್‌ನಲ್ಲಿ ಸಂಗ್ರಹವಾಗುವುದು, ಅದು ಭರ್ತಿಯಾದಾಗ ಮೂತ್ರ ನಾಳಗಳ ಮೂಲಕ ಹೊರ ಹಾಕಲಾಗುವುದು. ಪ್ರತಿದಿನ 7-8 ಬಾರಿ ಮೂತ್ರ ವಿಸರ್ಜನೆ ಹೋಗುವುದು ಸಾಮಾನ್ಯ ಹಾಗೂ ಇದು ಆರೋಗ್ಯಕ್ಕೂ ಒಳ್ಳೆಯದು. ರಾತ್ರಿ ಹೊತ್ತಿನಲ್ಲಿ ಸ್ವಲ್ಪ ನೀರು ಅಧಿಕ ಕುಡಿದರೆ ಇನ್ನುಂದೆರಡು ಸಾರಿ ಅಧಿಕ ಹೋಗಬೇಕಾಗುವುದು. ಅದೇ ರಾತ್ರಿ ಪದೇ-ಪದೇ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೆ ಅದು ಒಳ್ಳೆಯ ಸೂಚನೆಯಲ್ಲ, ಇದರಿಂದ ನಿದ್ದೆ ಹಾಳಾಗುವುದು ಮಾತ್ರವಲ್ಲ, ಇದು ಏನೋ ಆರೋಗ್ಯ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣವೂ ಹೌದು.
ಆಗಾಗ ಮೂತ್ರವಿಸರ್ಜನೆಗೆ ಕಾರಣವೇನು? ಯಾವಾಗ ವೈದ್ಯರನ್ನು ಕಾಣಬೇಕು ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಈ ಕಾರಣಗಳಿಂದ ಆಗಾಗ ಮೂತ್ರವಿಸರ್ಜನೆ ಮಾಡಬೇಕೆನಿಸುವುದು
* ತುಂಬಾ ಟೀ, ಕಾಫಿ ಕುಡಿಯುವುದು, ಮದ್ಯಪಾನ ಮಾಡುವುದು, ಇದರಿಂದ ಕಿಡ್ನಿ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
* ದಿನದಲ್ಲಿ 8 ಲೋಟಕ್ಕಿಂತ ಅಧಿಕ ನೀರು ಕುಡಿಯುವುದು , ಇದರಿಂದ ಕೂಡ ಕಿಡ್ನಿ ಅಧಿಕ ಕೆಲಸ ಮಾಡಬೇಕಾಗುತ್ತದೆ
* ಗರ್ಭಿಣಿಯರು ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು ಸಾಮಾನ್ಯ, ಯೂಟ್ರಸ್ ಬ್ಲೇಡರ್ ಮೇಲೆ ಒತ್ತಡ ಹಾಕುವುದರಿಂದ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು

ಈ ಕಾಯಿಲೆಗಳಿದ್ದರೆ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು
* ಕಿಡ್ನಿ ಕಾಯಿಲೆ ಅಥವಾ ಸೋಂಕು ಇದ್ದಾಗ
* ರಾತ್ರಿ ಹೊತ್ತಿನಲ್ಲಿ ಮೂತ್ರ ವಿಸರ್ಜನೆಗೆ ಆಗಾಗ ಹೋಗುತ್ತಿದ್ದರೆ ಅದು ಟೈಪ್ 1 ಅಥವಾ ಟೈಪ್2 ಮಧುಮೇಹ ಲಕ್ಷಣವಿರಬಹುದು
*ಓವರ್ ಆ್ಯಕ್ಟಿವ್ ಬ್ಲೇಡರ್ ಸಿಂಡ್ರೋಮ್ ಉಂಟಾಗಿದ್ದರೆ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು.
* ಪುರುಷರಲ್ಲಿ ಪ್ರೊಸ್ಟ್ರೇಟ್ ದೊಡ್ಡದಾಗಿದ್ದರೆ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು.
* ಜನನೇಂದ್ರೀಯದಲ್ಲಿ ಉರಿ, ಸೋಂಕು ಇದ್ದರೆ
*ಪೆಲ್ವಿಸ್‌ನಲ್ಲಿ ಸಮಸ್ಯೆಯಿದ್ದಾಗ
* ಹೈಪರ್ ಟೆನ್ಷನ್ ಇದ್ದಾಗ ಅದಕ್ಕೆ ತೆಗೆದುಕೊಳ್ಳುವ ಔಷಧಿ
* ಕಿಡ್ನಿ ಸ್ಟೋನ್
* ಪೆಲ್ವಿಕ್ ಏರಿಯಾ ಅಥವಾ ಬ್ಲೇಡರ್‌ನಲ್ಲಿ ಗಡ್ಡೆ
* ಬ್ಲೇಡರ್ ವಾಲ್‌ನಲ್ಲಿ ಉರಿಯೂತ ಇದ್ದಾಗ ನೋವು ಜೊತೆಗೆ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು
* ಲೈಂಗಿಕ ಸೋಂಕು
* ನರ ಸಮಸ್ಯೆ ಅಥವಾ ಪಾರ್ಶ್ವವಾಯು ಉಂಟಾದಾಗ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು
* ಕಿಡ್ನಿ, ಗರ್ಭಕೋಶ ಅಥವಾ ಬ್ಲೇಡರ್‌ಗೆ ಕ್ಯಾನ್ಸರ್ ಉಂಟಾಗಿದ್ದರೆ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು
* ರೇಡಿಯೇಷನ್ ಥೆರಪಿ
* ವಯಸ್ಸಾದಾಗ

ಮೂತ್ರ ವಿಸರ್ಜನೆ ಜೊತೆಗೆ ಈ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಕಾಣಿ
* ಮೂತ್ರ ವಿಸರ್ಜನೆ ಮಾಡುವಾಗ ನೋವಾಗುವುದು
* ಕಿಬ್ಬೊಟ್ಟೆಯಲ್ಲಿ ನೋವು
* ಮೂತ್ರ ವಿಸರ್ಜನೆ ಮಾಡಬೇಕೆನಿಸಿದರೂ ಮೂತ್ರ ವಿಸರ್ಜನೆಗೆ ಕಷ್ಟವಾಗುವುದು
* ಮೂತ್ರದಲ್ಲಿ ರಕ್ತ ಕಂಡು ಬಂದರೆ
* ಮೂತ್ರ ಕೆಟ್ಟ ವಾಸನೆ ಬೀರುತ್ತಿದ್ದರೆ
* ಜ್ವರ
* ಚಳಿ ಅನಿಸುವುದು
* ತಲೆಸುತ್ತು
* ವಾಂತಿ
* ಬಿಳುಪು ಹೋಗುವುದು ಅಥವಾ ಪುರುಷರಲ್ಲಿ ಶಿಶ್ನ ವಿಸರ್ಜನೆ
* ತುಂಬಾ ಬಾಯಾರಿಕೆ

ಸಮಸ್ಯೆಯನ್ನು ಹೇಗೆ ಕಂಡು ಹಿಡಿಯುವುದು?
ನಿಮ್ಮನ್ನು ಪರೀಕ್ಷೆ ಮಾಡಿದ ಮೇಲೆ ವೈದ್ಯರು ಈ ಪರೀಕ್ಷೆ ಮಾಡಿಸಲು ಸೂಚಿಸಬಹುದು
* ಮೂತ್ರ ಪರೀಕ್ಷೆ
* ಅಲ್ಟ್ರಾಸೌಂಡ್, CT ಸ್ಕ್ಯಾನ್ , MRI, ಯುರೊಡೈನಾಮಿಕ್ಸ್, ಸಿಸ್ಟೊಸ್ಕೋಪಿ ಮುಂತಾದ ಪರೀಕ್ಷೆ ಮಾಡಿಸಲು ಸಲಹೆ ನೀಡಬಹುದು.
ಕೊನೆಯದಾಗಿ
ಕಾಯಿಲೆ ಬಂದು ಕಷ್ಟಪಡುವುದಕ್ಕಿಂತ ಕಾಯಿಲೆ ಬರುವುದನ್ನು ತಡೆಗಗಟ್ಟುವುದು ಒಳ್ಳೆಯದು. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ, ದಿನದಲ್ಲಿ 8 ಲೋಟ ನೀರು ಕುಡಿಯಿರಿ, ಮಲಗುವಾಗ ತುಂಬಾ ನೀರು ಕುಡಿಯಬೇಡಿ.
* ಕೆಗಲ್ ವ್ಯಾಯಾಮ ಮಾಡಿ, ಇದರಿಂದ ಸ್ನಾಯುಗಳು ಬಲವಾಗುವುದು.



Click it and Unblock the Notifications
