Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಮ್ಮು ನಿವಾರಣೆಗೆ ಈ 10 ಸುವಾಸನೆಯ ಎಣ್ಣೆ ಪರಿಣಾಮಕಾರಿ
ಅನೇಕ ಆರೋಗ್ಯ ಸಮಸ್ಯೆ ಹೋಗಲಾಡಿಸುವಲ್ಲಿ ಸುಗಂಧ ವಾಸನೆ ಬೀರುವ ಎಣ್ಣೆಗಳು ತುಂಬಾ ಪ್ರಯೋಜನಕಾರಿಯಾಗಿವೆ ಎಂಬುವುದು ನಿಮಗೆ ಗೊತ್ತು. ಸುಗಂಧ ವಾಸನೆ ಬೀರುವ ಎಣ್ಣೆ ಬಳಸಿ ಮಸಾಜ್ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು, ತಲೆನೋವು ಕಡಿಮೆಯಾಗುವುದು. ಇನ್ನು ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುವಲ್ಲಿಯೂ ಸುವಾಸನೆ ಬೀರುವ ಎಣ್ಣೆಗಳು ಪರಿಣಾಮಕಾರಿ. ಅಷ್ಟೇ ಅಲ್ಲ ಇದನ್ನು ಕೆಮ್ಮು ನಿವಾರಣೆಗೆ ಕುಡ ಬಳಸಲಾಗುವುದು.

ಸುವಾಸನೆ ಎಣ್ಣೆಗಳನ್ನು ಮೈಗೆ ಹಚ್ಚುವುದು ಅಥವಾ ಅದನ್ನು ಬಿಸಿ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳುವುದು ಮಾಡಬಹುದು. ಸುವಾಸನೆ ಎಣ್ಣೆಗಳನ್ನು ಬಳಸುವಾಗ ತುಂಬಾ ಎಚ್ಚರಿಕೆಯಿಂದ ಬಳಸಬೇಕು. ತುಂಬಾ ಕೆಮ್ಮು ಇದ್ದರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
ಕೆಮ್ಮುಗೆ ಬಳಸುವ ಸುವಾಸನೆಭರಿತ ಎಣ್ಣೆಗಳು

1. ನೀಲಗಿರಿ ಸುವಾಸನೆಯ ಎಣ್ಣೆ
ನೀಲಗಿರಿ ಎಣ್ಣೆಗೆ ಕೆಮ್ಮು ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಾದ
ಫಾರಂಜಿಟಿಸ್, ಬ್ರಾಂಕೈಟಿಸ್ ಮತ್ತು ಸೈನುಟಿಸ್ ಕಡಿಮೆ ಮಾಡುವ ಗುಣವಿದೆ ಎಂದು ಅಧ್ಯಯನಗಳು ಹೇಳಿವೆ. ಇದು ದೇಹವು ಕೆಮ್ಮಿಗೆ ಕಾರಣವಾದ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವಂತೆ ಮಾಡುವುದು.
ಇದನ್ನು ಕ್ಷಯರೋಗಕ್ಕೆ ಆ್ಯಂಟಿ ಡ್ರಗ್ ಆಗಿ ಬಳಸುವ ಕುರಿತು ಅಧ್ಯಯನಗಳು ನಡೆಯುತ್ತಿವೆ. ಫಾರ್ಮೆಸಿಯಲ್ಲಿ ದೊರೆಯುವ ಕೆಮ್ಮಿನ ಡ್ರಾಪ್ಸ್, ವೇಫರ್ ರಬ್ಸ್‌ನಲ್ಲಿ ಬಳಸಲಾಗುವುದು. ಇದು ರಾತ್ರಿ ಹೊತ್ತು ಕೆಮ್ಮು ತಡೆಯುವಲ್ಲಿ ಸಹಕಾರಿಯಾಗಿದೆ ನೀಲಗಿರಿ ಎಣ್ಣೆ ಬಳಸಿ ಮಾಡಿದ ರಬ್ಸ್ ಬಳಸುವುದು ಒಳ್ಳೆಯದು.

2. ಚಕ್ಕೆಯ ಎಣ್ಣೆ
ಚಕ್ಕೆಯನ್ನು ಅಡುಗೆಯಲ್ಲಿ ಬಳಸುತ್ತೇವೆ. ಇದು ಬ್ರಾಂಕೈಟಿಸ್ ಕಡಿಮೆ ಮಾಡುವಲ್ಲಿ ಸಹಕಾರಿ. ಅತಿ ಕಡಿಮೆ ಅವಧಿಯಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಚಕ್ಕೆ ಎಣ್ಣೆ ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ. ಚಕ್ಕೆ ಎಣ್ಣೆ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ. ಇದನ್ನು ಕುದಿಯುವ ನೀರಿಗೆ ಎರಡು ಹನಿ ಹಾಕಿ ಹಬೆ ತೆಗೆದುಕೊಂಡರೆ ಒಳ್ಳೆಯದು.

3. ರೋಸ್‌ಮೆರಿ ಎಣ್ಣೆ
ಇದು ಅಂಗಡಿಗಳಲ್ಲಿ ದೊರೆಯುತ್ತದೆ, ಉಸಿರಾಟಕ್ಕೆ ಸಂಬಂಧಿಸಿ ಸಮಸ್ಯೆ ಹೋಗಲಾಡಿಸುವಲ್ಲಿ ಇದು ಪರಿಣಾಮಕಾರಿ. ಇದನ್ನು ಅಸ್ತಮಾ ಚಿಕಿತ್ಸೆಯಲ್ಲೂ ಬಳಸಲಾಗುವುದು. ಇದನ್ನು ಮೈಗೆ ಹಚ್ಚಿದರೆ ಒಳ್ಳೆಯದು.

4. ನಕ್ಷತ್ರಮೊಗ್ಗಿನ ಎಣ್ಣೆ
ನಟ್‌ಮಗ್ ಅಂದರೆ ಆಹಾರದಲ್ಲಿ ಬಳಸುವ ನಕ್ಷತ್ರ ಮೊಗ್ಗಿನ ಎಣ್ಣೆ ಕೂಡ ಉಸಿರಾಟದ ತೊಂದರೆ ನಿವಾರಿಸುವಲ್ಲಿ ಸಹಕಾರಿ. ಇದನ್ನು ಇನ್‌ಹೇಲ್ ಮಾಡುವ ಮೂಲಕ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುವುದು. ಇದು ಮೂಗು ಕಟ್ಟಿದ ಸಮಸ್ಯೆಗೂ ಒಳ್ಳೆಯದು.

5, ಸೈಪ್ರೆಸ್(cypress oil) ಎಣ್ಣೆ
ಸೈಪ್ರೆಸ್ ಎಂಬ ಸುವಾಸನೆಯ ಎಣ್ಣೆ ದೊರೆಯುತ್ತದೆ. ಇದು ಕೂಡ ಕೆಮ್ಮು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿ. ಇದು ಉಸಿರಾಟದ ತೊಂದರೆ ನಿವಾರಣೆ ಮಾಡುತ್ತದೆ. ಒಂದು ಬೌಲ್‌ನಲ್ಲಿ ಬಿಸಿ ನೀರು ಹಾಕಿ ಅದಕ್ಕೆ 5-6 ಹನಿ ಸೈಪ್ರೆಸ್ ಎಣ್ಣೆ ಹಾಕಿ ಹಬೆ ತೆಗೆದುಕೊಂಡರೆ ಸಾಕು.

6. ಬರ್ಗಮೋಟ್ ಅಥವಾ ಒಂದು ಬಗೆಯ ಸಿಟ್ರಸ್ ಹಣ್ಣಿನ ಎಣ್ಣೆ
ಇದು ಕೂಡ ಕೆಮ್ಮು ಕಡಿಮೆ ಮಾಡುವಲ್ಲಿ ಸಹಕಾರಿ. ಇದನ್ನು ಮೆಡಿಟೇರಿಯನ್ ಪ್ರದೇಶದಲ್ಲಿ ಹೆಚ್ಚಾಗಿ ತಯಾರಿಸಲಾಗುವುದು.

7. ಥೈಮೆ ಸುವಾಸನೆ ಎಣ್ಣೆ
ಇದರಲ್ಲಿ ಆ್ಯಂಟಿಮೈಕ್ರೋಬಯಲ್ ಅಂಶ ಉಸಿರಾಟದ ತೊಂದರೆ ನಿವಾರಿಸುವಲ್ಲಿ ಸಹಕಾರಿ. ಇದು ಅಲ್ಪಾವಧಿಯಲ್ಲಿ ಉಸಿರಾಟದ ಸಮಸ್ಯೆ ನಿವಾರಣೆಗೆ ಸಹಕಾರಿ. ಇದನ್ನು ಕೂಡ ಬಿಸಿ ನೀರಿನಲ್ಲಿ ಹಾಕಿ ಹಬೆ ತೆಗೆದುಕೊಳ್ಳಬಹುದು.

8. ಗೆರೇನಿಯಮ್ ಸುವಾಸನೆ ಎಣ್ಣೆ
ಉಸಿರಾಟದ ತೊಂದರೆ ನಿವಾರಣೆಯಲ್ಲಿ ಇದನ್ನು ಬಳಸುವುದರ ಕುರಿತು ಹಲವಾರು ಅಧ್ಯಯನಗಳು ನಡೆಯುತ್ತಿವೆ. ಸಾಮಾನ್ಯ ಕೆಮ್ಮು ಕಡಿಮೆ ಮಾಡುವಲ್ಲಿ ಇದು ತುಂಬಾ ಸಹಕಾರಿ ಎಂದು ಅಧ್ಯಯನಗಳು ಹೇಳಿಗೆ. ಇದನ್ನು ಸ್ನಾನ ಮಾಡುವ ನೀರಿನಲ್ಲಿ ಹಾಕಿ ಬಳಸುವುದು ಒಳ್ಳೆಯದು.

9. ಪುದೀನಾ ಎಣ್ಣೆ
ಇದರಲ್ಲಿ ಮೆಂಥೋಲ್ ಅಂಶವಿದೆ. ಹಲವಾರು ಜನರು ಮೂಗು ಕಟ್ಟಿದಾಗ ಇದನ್ನು ಮನೆಮದ್ದಾಗಿ ಬಳಸುತ್ತಾರೆ. ಇದನ್ನು ಇನ್‌ಹೇಲ್ ಮಾಡುವುದು ಒಳ್ಳೆಯದು. ಒಂದು ಬೌಲ್ ಬಿಸಿ ನೀರಿಗೆ 6-8 ಹನಿ ಪುದೀನಾ ಎಣ್ಣೆ ಹಾಕಿ ಹಬೆ ತೆಗೆದುಕೊಳ್ಳುವುದು ಒಳ್ಳೆಯದು.

10. ಲ್ಯಾವೆಂಡರ್ ಎಣ್ಣೆ
ಅತಿಯಾದ ಕೆಮ್ಮು ಅಸ್ತಮಾ ರೋಗದ ಲಕ್ಷಣ ಕೂಡ ಆಗಿರಬಹುದು. ಅಸ್ತಮಾ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಲ್ಯಾವೆಂಡರ್ ಎಣ್ಣೆ ಸಹಕಾರಿ. ಇದನ್ನು ಬಿಸಿ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳುವುದು ಒಳ್ಳೆಯದು. ಇನ್ನು ಬಿಸಿ ನೀರಿನ ಸ್ನಾನದಲ್ಲಿ ಬಳಸುವುದು ಒಳ್ಳೆಯದು.

ಸುವಾಸನೆ ಎಣ್ಣೆಗಳನ್ನು ಹೇಗೆ ಬಳಸಬಹುದು
- ಇದನ್ನು ಇತರ ಎಣ್ಣೆ ಜೊತೆ ಮಿಶ್ರ ಮಾಡಿ ಮೈಗೆ ಹಚ್ಚಬಹುದು
- ಬಿಸಿ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳಬಹುದು.
- ಡಿಫ್ಯೂಸರ್ ಅಥವಾ ಸ್ಪ್ರೇಯಲ್ಲಿ ಹಾಕಿ ಬಳಸಬಹುದು
- ಸ್ನಾನದ ನೀರಿನಲ್ಲಿ ಹಾಕಿ ಬಳಸಬಹುದು.
- ಇತರ ಆರೋಗ್ಯ ಸಮಸ್ಯೆಯಿದ್ದರೆ ಈ ಎಣ್ಣೆ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.
- ಎದೆ ಹಾಲುಣಿಸುವವರು ಹಾಗೂ ಇತರ ಔಷಧ ತೆಗೆದುಕೊಳ್ಳುತ್ತಿದ್ದರೆ ಇವುಗಳನ್ನು ಬಳಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
- ಆಗಾಗ ಕೆಮ್ಮು ಬರುತ್ತಿದ್ದರೆ ಇವುಗಳನ್ನು ಬಳಸಬೇಡಿ, ಬದಲಿಗೆ ವೈದ್ಯರನ್ನು ಭೇಟಿ ಮಾಡಿ,ಸಾಮಾನ್ಯ ಕೆಮ್ಮು ಆದರೆ ಮಾತ್ರ ಬಳಸಿ.
- ಕೆಲವೊಂದು ಸುವಾಸನೆಭರಿತ ಎಣ್ಣೆ ಅಲರ್ಜಿ ಉಂಟು ಮಾಡಬಹುದು, ಅವುಗಳನ್ನು ಬಳಸಬೇಡಿ.
- ಮಕ್ಕಳಿಗೆ ಬಳಸುವಾಗ ಸುರಕ್ಷಿತವಾದ ಎಣ್ಣೆಯನ್ನು ಮಾತ್ರ ಬಳಸಿ.




Click it and Unblock the Notifications









