Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಾಸ್ಕ್ ತಯಾರಿಸುವಾಗ ಹಾಗೂ ಧರಿಸುವಾಗ ಈ ತಪ್ಪುಗಳನ್ನ ಮಾಡದಿರಿ
ಭಾರತವು ಕೊರೊನಾವೈರಸ್ ಸೋಂಕು ತಡೆಗಟ್ಟಲು ಹಂತ-ಹಂತವಾಗಿ ಪ್ರಯತ್ನಿಸುತ್ತಿದೆ. ಕೋವಿಡ್ 19 ಎಂಬ ಸಾಂಕ್ರಾಮಿಕ ಪಿಡುಗು ಇಟಲಿಯಲ್ಲಿ ರಣಕೇಕೆ ಹಾಕಿ, ಇಟಲಿ, ಸ್ಪೇನ್ ಅನ್ನು ನರಕವಾಗಿಸಿ ಭಾರತಕ್ಕೆ ಕಾಲಿಟ್ಟಾಗ ಎಚ್ಚೆತ್ತುಕೊಂಡ ನಮ್ಮ ಪ್ರಧಾನಿ ಮೋದಿಯವರು ಮೊದಲಿಗೆ ಒಂದು ದಿನದ ಜನತಾ ಕರ್ಫ್ಯೂ ಮಾಡುವಂತೆ ಸೂಚಿಸಿದರು. ಅದಾದ ಬೆನ್ನಲ್ಲೇ ದೇಶವು 21 ದಿನಗಳ ಲಾಕ್‌ಡೌನ್‌ನಲ್ಲಿ ಇರಬೇಕೆಂಬ ಕಟ್ಟು ನಿಟ್ಟಿನ ಆದೇಶ ಹೊರಡಿಸಿದರು.

ಕೊರೊನಾವೈರಸ್ ವಿರುದ್ಧ ವೈದ್ಯರು, ನರ್ಸ್‌ಗಳು ಹಾಗೂ ಇತರ ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಪೊಲೀಸ್ ಇಲಾಖೆ ಇವರೆಲ್ಲಾ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿದ್ದಾರೆ. ಈಗಾಗಲೇ ಕೆಲವೊಂದು ನರ್ಸ್, ವೈದ್ಯರು ಹಾಗೂ ಪೊಲೀಸರಿಗೆ ಸೋಂಕು ತಗುಲಿದೆ. ಜನರ ಹಿತಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿರುವ ಇವರ ಸೇವೆಯನ್ನು ಅಭಿನಂದಿಸಿಲು ಜನತಾ ಕರ್ಫ್ಯೂ ದಿನ ಚಪ್ಪಾಳೆ ತಟ್ಟಲು ಹೇಳಿದರು.
ಲಾಕ್‌ಡೌನ್‌ನಲ್ಲಿರುವಾಗ ಜನರಲ್ಲಿ ಮನೋಬಲ ತುಂಬುವ ಸಲುವಾಗಿ ಏಪ್ರಿಲ್ 5ರಂದು ರಾತ್ರಿ 9 ಗಂಟೆ 9 ನಿಮಿಷದವರೆಗೆ ದೀಪ ಹಚ್ಚಲು ಸೂಚಿಸಿದರು. ಕೊರೊನಾವೈರಸ್ ವಿರುದ್ಧ ಹೋರಾಟದಲ್ಲಿ ಜನರು ಕೈ ಜೋಡಿಸಿದ್ದಾರೆ. ಇದೀಗ ಮೋದಿಯವರು ಜನರಿಗೆ ಮತ್ತೊಂದು ಕೆಲಸ ನೀಡಿದ್ದಾರೆ. ಅದುವೇ ನೀವೇ ಮಾಸ್ಕ್ ತಯಾರಿಸಿ, ಅದನ್ನು 5 ಜನರಿಗೆ ಗಿಫ್ಟ್ ನೀಡಿ ಎಂದಿದ್ದಾರೆ.

ಮೋದಿ ಮಾಸ್ಕ್ ತಯಾರಿಸಿ ಎಂದಿರುವ ಹಿಂದಿದೆ ಅದ್ಭುತ ಯೋಚನೆ
ಹೌದು ನಿಮಗೆ ಈಗಾಗಲೇ ಗೊತ್ತಿದೆ, ಎಲ್ಲರೂ ಮಾಸ್ಕ್‌ಗೆ ಮುಗಿ ಬಿದ್ದ ಕಾರಣ ಸರ್ಜಿಕಲ್ ಮಾಸ್ಕ್ ಕೊರತೆ ಉಂಟಾಗುವಂತಾಗಿದೆ. ಆಸ್ಪತ್ರೆಯಲ್ಲಿ ಸೋಂಕಿತರ ಸೇವೆ ಮಾಡುವವರಿಗೆ ಸರ್ಜಿಕಲ್ ಮಾಸ್ಕ್ ಅತ್ಯಾವಶ್ಯಕ, ಅವರಿಗೆ ಯಾವುದೇ ಕಾರಣಕ್ಕೂ ಕೊರತೆ ಉಂಟಾಗಬಾರದು.
ವಿಶ್ವ ಸಂಸ್ಥೆ ಹೇಳಿದೆ ಆರೋಗ್ಯವಂತರು ಮಾಸ್ಕ್ ಧರಿಸಬೇಕಾಗಿಲ್ಲ ಎಂದು. ಆದರೆ ಹೊರಗಡೆ ಹೋಗುವಾಗ ಯಾರು ಸೋಕಿತರು ಇದ್ದಾರೆ ಎಂದು ಗೊತ್ತಾಗುವುದಿಲ್ಲ, ಅವರಿಂದ ಸೋಂಕು ಹರಡದಿರಲಿ ಎಂದು ಇಲ್ಲಿ ಮಾಸ್ಕ್ ಧರಿಸುವಂತೆ ಸೂಚಿಸುತ್ತಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಯಾರೂ ಹೊರಗೆ ಹೋಗಬಾರದು.ದಿನಸಿ ಮುಂತಾದ ಅನಿವಾರ್ಯ ವಸ್ತುಗಳನ್ನು ತರಲು ಹೋಗುವಾಗಷ್ಟೇ ಮಾಸ್ಕ್ ಧರಿಸಿದರೆ ಸಾಕು. ಅದಕ್ಕೆ ಸಾಧಾರಣ ಬಟ್ಟೆಯ ಮಾಸ್ಕ್ ಸಾಕು.
ನೀವು ಮನೆಯಲ್ಲಿಯೇ ಮಾಸ್ಕ್ ತಯಾರಿಸುವಾಗ ಈ ತಪ್ಪುಗಳನ್ನು ಮಾಡದಿರಿ

1. ಅಳತೆ ಸರಿಯಿಲ್ಲದ ಮಾಸ್ಕ್ ತಯಾರಿಸಬೇಡಿ.
ಮಾಸ್ಕ್ ಮೂಗು ಹಾಗೂ ಬಾಯಿ ಹಾಗೂ ಕೆನ್ನೆಯ ಭಾಗ ಮುಚ್ಚುವಂತೆ ಇರಬೇಕು. ಹಾಗೂ ಮಾಸ್ಕ್ ತುಂಬಾ ಸಡಿಲವಾಗಿಯೂ ಇರಬಾರದು. ಆದರಿಂದ ಮಾಸ್ಕ್ ಕಿವಿಗೆ ಹಾಕಿದಾಗ ಮೂಗಿನಿಂದ ಸಡಿಲವಾಗಿ ಜಾರುವಂತೆ ಇರುವಮತೆ ಸ್ಟಿಚ್ ಮಾಡಬೇಡಿ.

2. ಮಾಸ್ಕ್ ಧರಿಸಿದ ಮೇಲೆ ಆಗಾಗ ತೆಗೆಯುತ್ತಾ ಇರುವುದು
ಈ ತಪ್ಪನ್ನು ಹಲವಾರು ಜನರು ಮಾಡುತ್ತಾರೆ. ಮಾಸ್ಕ್ ಧರಿಸಿದ ತಕ್ಷಣ ಬ್ಯಾಕ್ಟಿರಿಯಾ, ಸೋಂಕು ತಡೆಗಟ್ಟಲು ಸಾಧ್ಯವಿಲ್ಲ. ಅದು ತಡೆಗಟ್ಟಬೇಕು ಎಂದರೆ ನೀವು ಆಗಾಗ ಮಾಸ್ಕ್ ತೆಗೆಯುವುದು, ಮುಖ ಮುಟ್ಟುವುದು ಮಾಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಕೈಯಲ್ಲಿದ್ದ ಸೋಂಕಾಣುಗಳು ತಗುಲಬಹುದು ಹಾಗೂ ಇದರಿಂದಾಗಿ ಸೋಂಕು ಹರಡುವುದು.

3. ಮಾಸ್ಕ್ ಧರಿಸುವ ಮುನ್ನ ಕೈಗಳನ್ನು ಸ್ವಚ್ಛ ಮಾಡಿ
ಮಾಸ್ಕ್ ಧರಿಸುವ ಮುನ್ನ ಕೈಗಳನ್ನು ಸ್ವಚ್ಛ ಮಾಡಿರಬೇಕು. ನಂತರ ಮಾಸ್ಕ್ ಧರಿಸಬೇಕು. ಮಾಸ್ಕ್ ಒಮ್ಮೆ ಧರಿಸಿದ ಮೇಲೆ ಯಾರಾದರೂ ಸಿಕ್ಕರೆ ಅದನ್ನು ತೆಗೆದು ಮಾತನಾಡಿಸುವುದು ಮಾಡಬೇಡಿ. ಅವರು ಎಷ್ಟೇ ಸ್ನೇಹಿತರಾಗಿದ್ದರೂ ಅಂತರ ಕಾಯ್ದುಕೊಳ್ಳಿ.

4. ಮಾಸ್ಕ್ ತೆಗೆಯುವಾಗ ಈ ತಪ್ಪು ಮಾಡದಿರಿ
ಮಾಸ್ಕ್ ಧರಿಸಿ ಮನೆಗೆ ಬಂದ ಮೇಲೆ ಹಿಂಭಾಗದಿಂದ ತೆಗೆದು ಕಸದ ಬುಟ್ಟಿಗೆ ಹಾಕಬೇಕು. ಒಗೆಯುವ ಮಾಸ್ಕ್ ಆದರೆ ಸೋಪ್ ನೀರಿನಲ್ಲಿ ಹಾಕಬೇಕು. ತಂದು ಟೇಬಲ್ ಮೇಲೆ ಹಾಗೇ ಇಡುವುದು ಮಾಡಬೇಡಿ. ಕೆಲವರು ವಾಶ್ ಮಾಡಿ ಬಳಸುವ ಮಾಸ್ಕ್ ಧರಿಸುತ್ತಿದ್ದಾರೆ, ಅಂಥವರು ಅದರ ಸ್ವಚ್ಛತೆ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಮನೆಗೆ ಬಂದ ತಕ್ಷಣ ತೊಳೆಯಬೇಕು. ಇಲ್ಲದಿದ್ದರೆ ಆ ಮೂಲಕವೂ ಸೋಂಕು ಹರಡಬಹುದು ಎಚ್ಚರ.



Click it and Unblock the Notifications
