Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅತಿಯಾದ ಬಿಳುಪು ಹೋಗುತ್ತಿದೆಯೇ? ಜನನಾಂಗ ಸ್ವಚ್ಛತೆಯ ತಪ್ಪುಗಳಿಂದಲೇ ಉಂಟಾಗುತ್ತಿರಬಹುದು
ಮಹಿಳೆಯರಲ್ಲಿ ಇರುವ ಇತರ ಅಂಗಗಳಂತೆ ಯೋನಿ ಕೂಡ ಬಹಳ ಮುಖ್ಯವಾದ ಅಂಗವೇ. ಅದರ ಬಗ್ಗೆ ಯಾರೂ ಹೆಚ್ಚಾಗಿ ಯೋಚಿಸುವುದಿಲ್ಲ. ಅಥವಾ ಯೋನಿಯ ಸ್ವಚ್ಛತೆಯ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಯೋನಿ ಎನ್ನುವುದು ಕೊಳಕು ಎನ್ನುವ ಭಾವನೆಯೇ ಹಲವರಲ್ಲಿದೆ.

ಆದರೆ ಅದರ ನೈರ್ಮನ್ಯದ ಬಗ್ಗೆ ಗಮನ ಕೊಡದೇ ಹೋದರೆ ಆಗುವ ತೊಂದರೆಗಳು ಸಾಕಷ್ಟು. ಯೋನಿಯಲ್ಲಿ ಡಿಸ್ಚಾರ್ಜ್ ಅಥವಾ ಯೋನಿಯಲ್ಲಿ ಬಿಳಿ ಲೋಳೆಯ ಅಂಶ ಹೊರಗೆ ಬರುವುದು ಆಶ್ಚರ್ಯ ಪಡಬೇಕಾದ ವಿಷಯಗಳೇನು ಅಲ್ಲ. ಇದು ಬಹಳ ಸಾಮಾನ್ಯವಾಗಿ ವಿಚಾರ.
ಈ ಯೋನಿ ಬಿಡುಗಡೆ ಅಥವಾ ಡಿಸ್ಚಾರ್ಜ್ ಬೇರೆ ಬೇರೆ ಬಣ್ಣಗಳಲ್ಲಿಯೂ ಇರಬಹುದು ದೇಹದಲ್ಲಿ ಇರುವಂತಹ ಕೆಲವು ಹಾರ್ಮೋನ್ ಗಳ ಬದಲಾವಣೆಯಿಂದ ದೇಹಕ್ಕೆ ಅಗತ್ಯವಾದ ರೀತಿಯಲ್ಲಿ ಯೋನಿ ಡಿಸ್ಚಾರ್ಜ್ ಆಗುತ್ತದೆ ಆದರೆ ಅದರ ಬಗ್ಗೆ ಇರುವ ತಪ್ಪು ಕಲ್ಪನೆಗಳೆ ಹೆಚ್ಚು.
ಹೈಜಿನ್ ಮತ್ತು ಯೋನಿ ಡಿಸ್ಚಾರ್ಜ್
ಯೋನಿ ಡಿಸ್ಚಾರ್ಜ್ ಎನ್ನುವುದು ಬಹಳ ಸಾಮಾನ್ಯವಾದ ವಿಷಯ. ಮುಟ್ಟಿನ ಸಮಯದಲ್ಲಿ ಲೈಂಗಿಕ ಸಂಭೋಗದ ಸಮಯದಲ್ಲಿ ಅಥವಾ ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುವ ಕಾರಣಗಳಿಂದ ಯೋನಿ ಡಿಸ್ಚಾರ್ಜ್ ಆಗುತ್ತದೆ ಇದರ ಜೊತೆಗೆ ದೇಹದಲ್ಲಿ ಕೆಲವೊಮ್ಮೆ ಹಾರ್ಮೋನಲ್ ಬದಲಾವಣೆಗಳು ಕೂಡ ಯೋನಿ ಡಿಸ್ಚಾರ್ಜ್ಗೆ ಕಾರಣವಾಗುತ್ತದೆ.
ಯೂನಿಯ ಡಿಸ್ಚಾರ್ಜ್ ನಲ್ಲಿ ನಾವು ಸೇವಿಸುವ ಆಹಾರ ಹಾಗೂ ಕುಡಿಯುವ ನೀರು ಕೂಡ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯುಕ್ತ ಆಹಾರವನ್ನು ಸೇವಿಸುವುದು, ಸಂಸ್ಕರಿಸಿದ ಆಹಾರ ಮೊದಲಾದವು ಉತ್ತಮ ಬ್ಯಾಕ್ಟೀರಿಯವನ್ನು ಕೂಡ ದುರ್ಬಲಗೊಳಿಸುತ್ತವೆ ಹಾಗಾಗಿ ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಈ ಬಗ್ಗೆ ಡಾಕ್ಟರ್ ಮೇಶ್ವ ಸಲಹೆಯನ್ನು ನೀಡುತ್ತಾರೆ.
ಡಾಕ್ಟರ್ ಮೇಶ್ವ ಹೇಳುವಂತೆ, ಯೋನಿಯಲ್ಲಿ ಸೂಕ್ಷ್ಮಜೀವಿಗಳು ಸಂಗ್ರಹವಾಗುವುದು ಬಹಳ ಸುಲಭ ಹಾಗಾಗಿ ಎಲ್ಲ ರೀತಿಯ ಸೋಂಕುಗಳನ್ನು ತಪ್ಪಿಸಲು ಅದನ್ನು ಸ್ವಚ್ಛವಾಗಿ ಹಾಗೂ ಶುಷ್ಕವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ವೈದ್ಯರು ಹೇಳುವಂತೆ ನಿಮಗೆ ಮಧುಮೇಹ ಇದ್ದರೆ, ಅಸುರಕ್ಷಿತ ಲೈಂಗಿಕ ಕ್ರಿಯೆ ಮಾಡಿದರೆ, ಬಹು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರೆ ಶಿಲೀಂದ್ರ ಹಾಗೂ ಬ್ಯಾಕ್ಟೇರಿಯಾದ ಸೋಂಕಿನಿಂದ ಅಪಾಯ ಉಂಟಾಗಬಹುದು.
ಯೋನಿ ಸ್ವಚ್ಛವಾಗಿಲ್ಲದೆ ಇದ್ರೆ ಏನಾಗಬಹುದು ಗೊತ್ತಾ?
ಯೂನಿಯಲ್ಲಿ ವಾಸಿಸುವ ಬ್ಯಾಕ್ಟೀರಿಯಗಳಲ್ಲಿ ಒಳ್ಳೆಯದು ಕೆಟ್ಟದು ಎರಡು ಇರುತ್ತದೆ ಇವೆರಡು ಸಮತೋಲನದಲ್ಲಿ ಇದ್ದರೆ ಸರಿ ಇಲ್ಲವಾದರೆ ಸಮಸ್ಯೆಗಳು ಉಂಟಾಗಬಹುದು. ಕೆಟ್ಟ ಬ್ಯಾಟರಿಯ ಹೆಚ್ಚಾದರೆ ಮೂತ್ರನಾಳದ ಸೋಂಕು, ಮೂತ್ರದ ಸೆಪ್ಸಿಸ್, ತೀವ್ರವಾದ ತುರಿಕೆ ಉರಿಯುವುದು ಹೇಗೆ ಮೊದಲಾದ ಗಂಭೀರ ಸಮಸ್ಯೆ ಉಂಟಾಗಬಹುದು. ಜೊತೆಗೆ ಇದು ದೀರ್ಘಕಾಲದ ಉರಿಯುತದ ಕಾಯಿಲೆಯನ್ನು ಕೂಡ ಉಂಟು ಮಾಡಬಹುದು. ಹೀಗಾದಾಗ ಗರ್ಭಾಶಯದ ಮೇಲೆ ಪರಿಣಾಮ ಬೀರಿ ಬಂಜೆತನಕ್ಕೂ ಕಾರಣವಾಗಬಹುದು.
ವೈದ್ಯರನ್ನು ಸಂಪರ್ಕಿಸಿ;
ಇನ್ನು ಡಾಕ್ಟರ್ ಪಾಟೀಲ್ ಅವರು ಹೇಳುವವರ ಪ್ರಕಾರ, ಪಿರಿಯಡ್ಸ್ ನಲ್ಲಿ ಯೋನಿ ಡಿಸ್ಚಾರ್ಜ್ ಆಗುವ ಆಧಾರದ ಮೇಲೆ ಪ್ರತಿ ದಿನ ಯೋನಿ ಡಿಸ್ಚಾರ್ಜ್ ಇರುವುದಿಲ್ಲ ಮಧ್ಯ ಅವಧಿಯಲ್ಲಿ ಮಾತ್ರ ಯೋನಿ ಡಿಸ್ಚಾರ್ಜ್ ಸಂಭವಿಸಬಹುದು. ಅಂದರೆ ತಿಂಗಳ ಆರಂಭದಿಂದ ಕೊನೆಯವರೆಗೆ ಮಧ್ಯಭಾಗದಲ್ಲಿ ಸಾಮಾನ್ಯ ಬಿಳಿ ವಿಸರ್ಜನೆ ಆದರೆ ಅದು ಆರೋಗ್ಯಕರ ಎಂದು ಪರಿಗಣಿಸಲ್ಪಡುತ್ತದೆ. ಆದರೂ ನೀವು ಕೆಲವು ಸಂದರ್ಭದಲ್ಲಿ ವೈದ್ಯರನ್ನ ಸಂಪರ್ಕಿಸಬೇಕಾಗುತ್ತದೆ.
ಈ ರೀತಿ ಆದರೆ ಕೂಡಲೇ ವೈದ್ಯರನ್ನ ಸಂಪರ್ಕಿಸಿ.
ಮಹಿಳೆಯರಲ್ಲಿ ಬಿಳಿ ಡಿಸ್ಚಾರ್ಜ್ ಸಾಮಾನ್ಯವಾಗಿದೆ. ಆದರೆ ಹಸಿರು, ಹಳದಿ, ದಪ್ಪ ಅಥವಾ ಚ್ಯೀಸಿ ಯೋನಿ ಡಿಸ್ಚಾರ್ಜ್ ಆಗಿದ್ದರೆ ಕೂಡಲೇ ವೈದ್ಯರನ್ನ ಸಂಪರ್ಕಿಸಬೇಕು. ಪೀರಿಯಡ್ಸ್ ಹೊರತುಪಡಿಸಿ ಉಳಿದ ಸಮಯದಲ್ಲಿ ರಕ್ತಸ್ರಾವವಾದರೆ, ಅಥವಾ ಸ್ಪಾಟಿಂಗ್ ಆದರೆ, ಯೋನಿ ಡಿಸ್ಚಾರ್ಜ್ ಜೊತೆಗೆ ತೀವ್ರವಾದ ವಾಸನೆ ಬಂದರೆ, ಕೆಂಪು ತುರಿಕೆ ಉರಿಯುವುದು ಅಥವಾ ಕಿರಿಕಿರಿಯ ಅನುಭವ ಉಂಟಾದರೆ ಕೂಡಲೇ ವೈದ್ಯರನ್ನ ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ನೀವಾಗಿಯೇ ಔಷಧಿ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ ಮೊದಲು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ ಎಂದು ಡಾಕ್ಟರ್ ಪಟೇಲ್ ತಿಳಿಸುತ್ತಾರೆ.
ನೆನಪಿಡಿ:
•ಅತಿಯಾದ ಮೃದುವಾಗಿರುವ ಒಳಉಡುಪನ್ನು ಮಾತ್ರ ಧರಿಸಿ. ಯೋನಿಗೆ ತೊಂದರೆ ಆಗುವಂಥ ಬಟ್ಟೆಯನ್ನು ಧರಿಸಬೇಡಿ ದಿನಕ್ಕೆ ಎರಡು ಬಾರಿಯಾದರೂ ಅದನ್ನು ಬದಲಾಯಿಸಬೇಕು ಜೊತೆಗೆ ಯಾವಾಗಲೂ ಡ್ರೈ ಆಗಿರಬೇಕು.
•ಮೂತ್ರ ವಿಸರ್ಜನೆ ಅಥವಾ ಸ್ನಾನವಾದ ನಂತರ ಯೋನಿಯನ್ನು ಮೃದುವಾದ ಬಟ್ಟೆಯಿಂದ ಒರೆಸಿಕೊಳ್ಳಬೇಕು ಆ ಭಾಗ ಡ್ರೈ ಆಗಿರುವಂತೆ ನೋಡಿಕೊಳ್ಳಬೇಕು.
•ಇನ್ನು ಪಿರಿಯಡ್ಸ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಟ್ಯಾಂಪೋನ್ ಗಳು ಅಥವಾ ಕಪ್ ಗಳನ್ನು ಬಳಸುತ್ತಿದ್ದರೆ, ಯೋನಿ ಸ್ವಚ್ಛತೆಯ ಜೊತೆಗೆ ಕಪ್ ಗಳನ್ನ ಬ್ಯಾಕ್ಟೀರಿಯ ಸೋಂಕು ತಾಗದಂತೆ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
•ಇನ್ನು ಯೋನಿ ಸ್ವಚ್ಛತೆಗಾಗಿ ಬಳಸುವ ಉತ್ಪನ್ನದ ಪಿ ಹೆಚ್ ಮಟ್ಟ ಸರಿಯಾಗಿ ಇದೆಯೇ ಇಲ್ಲವೇ ಎಂಬುದನ್ನು ಸ್ತ್ರೀರೋಗ ತಜ್ಞರ ಜೊತೆ ಮಾತನಾಡಿ ತಿಳಿದುಕೊಳ್ಳಿ. ಮಾರುಕಟ್ಟೆಯಲ್ಲಿ ಸಿಗುವ ಯಾವುದಾದರೂ ಒಂದು ಯೋನಿ ಸ್ವಚ್ಛತೆಯ ವಸ್ತುವನ್ನು ಬಳಸಬೇಡಿ.
ಈ ರೀತಿಯಾಗಿ ವೈದ್ಯರ ಸಲಹೆಯ ಜೊತೆಗೆ ಮಹಿಳೆಯರು ಯೋನಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದರೆ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ನೆನಪಿನಲ್ಲಿಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
