Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ನಮ್ಮ ದೇಹಕ್ಕೆ ಮಾಲಿಕ್ ಆಮ್ಲ ಎಷ್ಟು ಅವಶ್ಯಕ ಗೊತ್ತಾ?
ನಮ್ಮ ದೇಹದಲ್ಲಿ ಶಕ್ತಿ ವರ್ಧಿಸಲು ಮಾಲಿಕ್ ಆಮ್ಲ ಬಹುಮುಖ್ಯ. ಅಲ್ಲದೆ ತ್ವಚೆ ಹಾಗೂ ಕೂದಲಿನ ಆರೈಕೆಗೂ ಮಾಲಿಕ್ ಆಮ್ಲದ ಅವಶ್ಯಕತೆಯಿದೆ. ಆದ್ದರಿಂದ ಸೌಂದರ್ಯವರ್ಧಕಗಳಲ್ಲಿ ಮಾಲಿಕ್ ಆಮ್ಲವನ್ನು ಬಳಸಲಾಗುತ್ತದೆ. ಮೊಡವೆ, ಒಣತ್ವಚೆ, ನೆರಿಗೆ ಮುಂತಾದ ಸಮಸ್ಯೆಯನ್ನು ತಡೆಯುವಲ್ಲಿ ಮಾಲಿಕ್ ಆಮ್ಲ ಪ್ರಮುಖ ಪಾತ್ರವಹಿಸುತ್ತದೆ. ನಮ್ಮ ದೇಹದಲ್ಲಿ ಕೂಡ ಮಾಲಿಕ್ ಆಮ್ಲ ಉತ್ಪತ್ತಿಯಾಗುತ್ತದೆ.

ಹುಳಿ ಹಾಗೂ ಕಹಿ ರುಚಿಯ ಹಣ್ಣಿನಲ್ಲಿ ಮಾಲಿಕ್ ಆಮ್ಲ ಸಿಗುತ್ತದೆ. ಈ ಹಣ್ಣು ಹಾಗೂ ತರಕಾರಿಗಳನ್ನು ತಿನ್ನುವ ಮೂಲಕ ದೇಹಕ್ಕೆ ಅಗ್ಯತವಾದ ಮಾಲಿಕ್ ಆಮ್ಲ ಪೂರೈಸಬಹುದು. ಇನ್ನು ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಮಾಲಿಕ್ ಆಮ್ಲ ಸಪ್ಲಿಮೆಂಟ್ ತೆಗೆದುಕೊಳ್ಳಲು ಸೂಚಿಸುತ್ತಾರೆ.
ಈ ಲೇಖನದಲ್ಲಿ ಮಾಲಿಕ್ ಆಮ್ಲ ಯಾವೆಲ್ಲಾ ಆಹಾರಗಳಲ್ಲಿ ಸಿಗುತ್ತದೆ, ಎಲ್ಲಿ ಬಳಸಲಾಗುತ್ತದೆ ಹಾಗೂ ಎಷ್ಟು ಅವಶ್ಯಕ ಎಂದು ಹೇಳಲಾಗಿದೆ ನೋಡಿ:

ಮಾಲಿಕ್ ಆಮ್ಲ ಎಲ್ಲಿ ಬಳಸಲಾಗುತ್ತದೆ?
ಇದನ್ನು ವಿವಿಧ ಆಹಾರಗಳಲ್ಲಿ ಹಾಗೂ ಸೌಂದರ್ಯವರ್ಧಕಗಳನ್ನು ತಯಾರಿಸುವಾಗ ಬಳಸಲಾಗುವುದು. ಇದನ್ನು ಈ ರೀತಿ ಬಳಸಲಾಗುತ್ತದೆ.
*ಪಿಗ್ಮೆಂಟೇಷನ್(ಮುಖದಲ್ಲಿ ಕಪ್ಪು ಕಲೆ ಬೀಳುವುದು), ಮೊಡವೆ, ಅಕಾಲಿಕ ನೆರಿಗೆಯನ್ನು ತಡೆಗಟ್ಟುವ ಕ್ರೀಮ್‌ಗಳಲ್ಲಿ ಬಳಸಲಾಗುತ್ತದೆ.
* ಆಹಾರದ ಬಣ್ಣ ಬದಲಾಗದಿರಲು ಇದನ್ನು ಬಳಸಲಾಗುವುದು.
* ಇದನ್ನು ಬೇರೆ-ಬೇರೆ ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುವುದು.
* ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಸಪ್ಲಿಮೆಂಟ್ ಆಗಿ ಬಳಸಲಾಗುವುದು.

ಫೈಬ್ರೊಮ್ಯಾಲ್ಗಿಯ ಸಮಸ್ಯೆ (ಸ್ನಾಯು ಸೆಳೆತ, ಖಿನ್ನತೆ, ತಲೆಸುತ್ತು, ನೋವು)
ಫೈಬ್ರೊಮ್ಯಾಲ್ಗಿಯ ಎನ್ನುವುದು ದೇಹದಲ್ಲಿ ಸ್ನಾಯುಗಳ ಸೆಳೆತ ಉಂಟಾಗಿ ಅದರ ಜತೆಗೆ ತಲೆಸುತ್ತು, ನಿದ್ದೆಗೆ ತೊಂದರೆ, ಮರೆವು, ಖಿನ್ನತೆ ಮುಂತಾದ ಲಕ್ಷಣಗಳಿರುವ ಕಾಯಿಲೆಯಾಗಿದೆ. ಈ ಸಮಸ್ಯೆ ಇದ್ದಕ್ಕಿದ್ದಂತೆ ಕಾಡುವ ಬದಲು ನಿಧಾನಕ್ಕೆ ಶುರುವಾಗಿ ಕೊನೆಗೆ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಶಸ್ತ್ರ ಚಿಕಿತ್ಸೆ, ಸೋಂಕು, ಮಾನಸಿಕ ಒತ್ತಡ ಇವುಗಳಿಂದ ಈ ಸಮಸ್ಯೆ ಬರಬಹುದು. ಫೈಬ್ರೊಮ್ಯಾಲ್ಗಿಯ ಇರುವವರಿಗೆ ವಿಪರೀತ ತಲೆನೋವು, ಸಂಧಿಗಳಲ್ಲಿ ನೋವು, ಮಲವಿಸರ್ಜನೆಗೆ ತೊಂದರೆ, ಅಧಿಕ ಮಾನಸಿಕ ಒತ್ತಡ, ಖಿನ್ನತೆ ಉಂಟಾಗಬಹುದು.
ಈ ಕಾಯಿಲೆಯ ಚಿಕಿತ್ಸೆಯಲ್ಲಿ ಮಾಲಿಕ್ ಆಮ್ಲವನ್ನು ಸಪ್ಲಿಮೆಂಟ್ ಆಗಿ ನೀಡಲಾಗುವುದು.

ದೀರ್ಘಕಾಲದ ತಲೆಸುತ್ತು( CFS Problem)
ಪ್ರತಿದಿನ ಮಾಲಿಕ್ ಆಮ್ಲ ಸಪ್ಲಿಮೆಂಟ್ ತೆಗೆದುಕೊಳ್ಳುವುದರಿಂದ ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ದೀರ್ಘಕಾಲದಿಂದ ಆಗಾಗ ತಲೆಸುತ್ತು ಬರುತ್ತಿದ್ದರೆ ಆರೋಗ್ಯ ಸಮಸ್ಯೆ ಹೋಗಲಾಡಿಸಲು ಮಾಲಿಕ್ ಆಮ್ಲ ಸಪ್ಲಿಮೆಂಟ್ ನೀಡಲಾಗುವುದು. ಇದು ತಲೆಸುತ್ತು ಕಡಿಮೆ ಮಾಡಿ, ಆರೋಗ್ಯವನ್ನು ವೃದ್ಧಿಸುತ್ತದೆ. ಇದು ದೇಹದಲ್ಲಿ ಶಕ್ತಿ ಉತ್ಪಾದನೆಗೆ ಸಹಕಾರಿಯಾಗಿರುವುದರಿಂದ ಸುಸ್ತು ಇಲ್ಲವಾಗಿಸುತ್ತದೆ.

ಬಾಯಿಯ ಆರೋಗ್ಯ ಹೆಚ್ಚಿಸುತ್ತದೆ
ಬಾಯಿಯ ಆರೋಗ್ಯಕ್ಕೆ ಮಾಲಿಕ್ ಆಮ್ಲ ಅವಶ್ಯಕ. ಇದು ಬಾಯಿ ಒಣಗುವುದನ್ನು ತಡೆಗಟ್ಟುತ್ತದೆ. ಬಾಯಲ್ಲಿ ಎಂಜಲು ಉತ್ಪತ್ತಿಗೆ ಸಹಕಾರಿ, ಬಾಯಲ್ಲಿ ಎಂಜಲು ಉತ್ಪತ್ತಿಯಾಗುತ್ತಿದ್ದರೆ ಅದು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ನಾಶ ಪಡಿಸಿ ಬಾಯಿ ಸ್ವಾಸ್ಥ್ಯ ಹೆಚ್ಚಿಸುತ್ತದೆ.
ಇನ್ನು ಟೂತ್‌ಪೇಸ್ಟ್ ಹಾಗೂ ಮೌತ್‌ವಾಶ್‌ಗಳಲ್ಲಿ ಇದನ್ನು ಬಳಸುತ್ತಾರೆ. ಇದು ಬಾಯಿಯ ಸ್ವಾಸ್ಥ್ಯ ಹಾಗೂ ಹಲ್ಲುಗಳು ಬಿಳುಪನ್ನು ಹೆಚ್ಚಿಸುತ್ತದೆ.

ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು
ಮಾಲಿಕ್ ಆಮ್ಲಕ್ಕೆ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವ ಗುಣವಿರುವುದರಿಂದ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು. ಇದು ಗಾಲಸ್ಟೋನ್ ಹೋಗಲಾಡಿಸುವಲ್ಲಿಯೂ ಸಹಕಾರಿ, ಇದು ಕಲ್ಲುಗಳನ್ನು ಮೂತ್ರದ ಮೂಲಕ ಹೊರ ಹಾಕುವುದರಿಂದ ಕಿಡ್ನಿಯ ಆರೋಗ್ಯಕ್ಕೂ ಒಳ್ಳೆಯದು.

ತೂಕ ಇಳಿಕೆಗೆ ಸಹಕಾರಿ
ದೇಹದಲ್ಲಿ ಕೊಬ್ಬು ಕರಗಿಸುವಲ್ಲಿ ಮಾಲಿಕ್ ಆಮ್ಲ ಸಹಕಾರಿ ಎಂಬುವುದು ಹಲವಾರು ಸಂಶೋಧನೆಗಳು ಹೇಳಿವೆ. ಮಾಲಿಕ್ ಆಮ್ಲ ಸಪ್ಲಿಮೆಂಟ್ ಅನ್ನು ನಿಗದಿತ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ದೇಹದಲ್ಲಿರುವ ಕೊಬ್ಬನ್ನು ಕರಗಿಸುವಲ್ಲಿ ಸಹಕಾರಿ. ಹಾಗೂ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.

ನೋವು ನಿವಾರಕವಾಗಿ ಕೆಲಸ ಮಾಡುತ್ತದೆ
ಮಾಲಿಕ್ ಆಮ್ಲದ ಸಪ್ಲಿಮೆಂಟ್ ಸ್ನಾಯುಗಳ ನೋವು ಕಡಿಮೆ ಮಾಡುವಲ್ಲಿ ಸಹಕಾರಿ. ಮಾಲಿಕ್ ಆಮ್ಲದ ಸಪ್ಲಿಮೆಂಟ್ ತೆಗೆದುಕೊಂಡು, ಇನ್ನೊಂದು ಸಪ್ಲಿಮೆಂಟ್ ತೆಗೆದುಕೊಳ್ಳುವುದಾದರೆ ಕನಿಷ್ಠ 48 ಗಂಟೆಗಳ ಅಂತವಿರಬೇಕು. ಈ ಸಪ್ಲಿಮೆಂಟ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯದೆ ತೆಗದುಕೊಳ್ಳಬೇಡಿ.

ತ್ವಚೆ ಆರೋಗ್ಯಕ್ಕೆ ಒಳ್ಳೆಯದು
ಅನೇಕ ತ್ವಚೆ ಸಮಸ್ಯೆ ಹೋಗಲಾಡಿಸಲು ಮಾಲಿಕ್ ಆಮ್ಲವನ್ನು ಬಳಸುತ್ತಾರೆ. ಇದು ತ್ವಚೆಯಲ್ಲಿ ತೇವಾಂಶ ಕಾಪಾಡಿ ಆರೋಗ್ಯವನ್ನು ಹೆಚ್ಚಿಸುತ್ತದೆ. ಪಿಗ್ಮೆಂಟೇಷನ್, ಮೊಡವೆ ಮುಂತಾದ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ. ಆದ್ದರಿಂದ ಇದನ್ನು ಅನೇಕ ಸೌಂದರ್ಯ ವರ್ಧಕ ಕ್ರೀಮ್‌ಗಳಲ್ಲಿ ಬಳಸುತ್ತಾರೆ. ಇನ್ನು ತಲೆಹೊಟ್ಟು ಬಾರದಂತೆ ತಡೆಗಟ್ಟುವಲ್ಲಿಯೂ ಮಾಲಿಕ್ ಆಮ್ಲ ಪ್ರಯೋಜನಕಾರಿಯಾಗಿದೆ.

ಮಾಲಿಕ್ ಆಮ್ಲದ ಸಪ್ಲಿಮೆಂಟ್ ಅಡ್ಡಪರಿಣಾಮಗಳು
ತಲೆನೋವು
ಭೇದಿ
ವಾಂತಿ
ಅಲರ್ಜಿ
ಕೆಲವೊಂದು ಕ್ರೀಮ್ ಹಚ್ಚಿದಾಗ ತುರಿಕೆ ಕಂಡು ಬಂದರೆ ಮಾಲಿಕ್ ಆಮ್ಲ ಕಾರಣವಾಗಿರುತ್ತದೆ. ಮಾಲಿಕ್ ಆಮ್ಲ ಸಪ್ಲಿಮೆಂಟ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಕಡ್ಡಾಯವಾಗಿ ಪಡೆಯಲು ಮರೆಯಬೇಡಿ.
ಇನ್ನು ಮಾಲಿಕ್ ಆಮ್ಲ ಇರುವ ಹಣ್ಣು , ತರಕಾರಿಗಳನ್ನು ಆಹಾರಕ್ರಮದಲ್ಲಿ ಸೇರಿಸಿದರೆ ಸಾಕು ದೇಹಕ್ಕೆ ಅಗ್ಯತವಾದ ಮಾಲಿಕ್ ಆಮ್ಲ ದೊರೆಯುವುದರಿಂದ ಆರೋಗ್ಯ ಹಾಗೂ ಸೌಂದರ್ಯ ಕಾಪಾಡಬಹುದು.



Click it and Unblock the Notifications











