Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕ್ಯಾನ್ಸರ್, ಹೃದಯಾಘಾತ ತಪ್ಪಿಸಬೇಕೆ? ದಿನಾ 11 ನಿಮಿಷ ಈ ರೀತಿ ವಾಕ್ ಮಾಡಿದರೆ ಸಾಕು
ಈ ಆಧುನಿಕ ಯುಗದಲ್ಲಿ ಯಾರಿಗೆ ಯಾವಾಗ ಸಾವು ಎದುರಾಗುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹಾರ್ಟ್ ಅಟ್ಯಾಕ್‌ನಿಂದಾಗಿ ಜನ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲಾ ನಮ್ಮ ಜೀವನ ಶೈಲಿ ಕೂಡ ಒಂದು ರೀತಿ ಕಾರಣ ಅಂದ್ರೆ ತಪ್ಪಾಗೋದಿಲ್ಲ.

ಅಧ್ಯಯನಗಳ ಪ್ರಕಾರ ನಾವು ದಿನ ನಿತ್ಯ ಚುರುಕು ನಡಿಗೆಯನ್ನು ಅಭ್ಯಾಸ ಮಾಡಿದ್ರೆ ಸಾವಿನ ಅಪಾಯ ಕಡಿಮೆಯಾಗುತ್ತಂತೆ. ಅಷ್ಟಕ್ಕು ನಮ್ಮ ದಿನನಿತ್ಯದ ನಡಿಗೆ ಹೇಗಿರಬೇಕು? ಸಾವಿನ ಅಪಾಯದಿಂದ ತಪ್ಪಿಸಿಕೊಳ್ಳಬೇಕಾದರೆ ಯಾವ ರೀತಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಮಾಹಿತಿ ಕೊಡ್ತಾ ಹೋಗ್ತೀವಿ.
11 ನಿಮಿಷದ ಚುರುಕಾದ ನಡಿಗೆ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತಾ?
ಆರೋಗ್ಯವಾಗಿರಬೇಕು ತಮ್ಮವರೊಂದಿಗೆ ಬದುಕಿ ಬಾಳಬೇಕು ಅನ್ನುವ ಆಸೆ ಯಾರಿಗಿಲ್ಲ ಹೇಳಿ. ಪ್ರತಿನಿತ್ಯದ ಚುರುಕಾದ ನಡಿಗೆಯು ಸಾವಿನ ಅಪಾಯವನ್ನು ಕಡಿಮೆ ಮಾಡಲಿದೆ ಎಂದು ಅಧ್ಯಯಯನಗಳು ಸಾಭೀತು ಪಡಿಸಿದೆ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಅಧ್ಯಯನವು ಈ ವರದಿಯನ್ನು ಸಲ್ಲಿಸಿದ್ದು, ನಿತ್ಯ ಕನಿಷ್ಠ 11 ನಿಮಿಷಗಳ ಕಾಲವಾದರೂ ಅಥವಾ ವಾರದಲ್ಲಿ 75 ನಿಮಿಷವಾದರೂ ನಾವು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲೇಬೇಕು. ಇದರಿಂದಾಗಿ ಹೃದ್ರೋಗ, ಪಾರ್ಶ್ವವಾಯು ಮತ್ತು ಹಲವಾರು ಕ್ಯಾನ್ಸರ್‌ಗಳಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದಂತೆ.
ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆ ಎಂದರೇನು?
ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಗಳು ಯಾವುದೆಂದರೆ ಚುರುಕಾದ ನಡಿಗೆ, ಬೈಕು ಸವಾರಿ, ಹೈಕಿಂಗ್, ನೃತ್ಯ ಮತ್ತು ಟೆನಿಸ್ ಅಥವಾ ಬ್ಯಾಡ್ಮಿಂಟನ್ ಆಡುವುದು ಮುಂತಾದವುಗಳು. ಈ ಚಟುವಟಿಕೆಗಳಲ್ಲಿ ಮೇಲಿನ ಯಾವುದಾದರೂ ಒಂದು ಚಟುವಟಿಕೆ ಮಾಡುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಗಳು ಒಬ್ಬ ವ್ಯಕ್ತಿಯ ಹೃದಯ ಬಡಿತವನ್ನು ಹೆಚ್ಚು ಮಾಡುತ್ತದೆ. ಮತ್ತು ಅವರು ವೇಗವಾಗಿ ಉಸಿರಾಡಲು ಸಹಾಯ ಮಾಡುತ್ತದೆ.
ಹೌದು, ಈ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸಬಹುದು ಮತ್ತು ಒಬ್ಬ ವ್ಯಕ್ತಿ ಇಂತಹ ಚಟುವಟಿಕೆಗಳನ್ನು ಮಾಡುವಾಗಲು ಕೂಡ ಮಾತನಾಡಲು ಸಾಧ್ಯವಾಗುತ್ತದೆ. 2019 ರಲ್ಲಿ ಹೃದ್ರೋಗ ಮತ್ತು ಪಾರ್ಶ್ವವಾಯು ರೋಗಗಳು 17.9 ಮಿಲಿಯನ್ ಸಾವುಗಳಿಗೆ ಕಾರಣವಾಗಿವೆ. ಇನ್ನೂ 2017 ರಲ್ಲಿ 9.6 ಮಿಲಿಯನ್ ಸಾವುಗಳಿಗೆ ಕ್ಯಾನ್ಸರ್ ರೋಗವು ಕಾರಣವಾಗಿದೆ ಎಂದು ಅಧ್ಯಯನಗಳು ಸಾಭೀತುಪಡಿಸಿದೆ. ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆ ತೊಡಗಿಕೊಳ್ಳುವುದರಿಂದ ಈ ಅಪಾಯದಿಂದ ತಪ್ಪಿಸಿಕೊಳ್ಳಬಹುದು.
ವಾರಕ್ಕೆ ಕನಿಷ್ಠ 75 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಎಷ್ಟು ಮುಖ್ಯ?
ಮಧ್ಯಮ-ತೀವ್ರತೆಯ ದೈಹಿಕ ಚಟುವಟಿಕೆಯನ್ನು ವಾರಕ್ಕೆ 150 ನಿಮಿಷಗಳಿಗಿಂತ ಹೆಚ್ಚು ಬಾರಿ ಯಾರು ನಿರ್ವಹಿಸುತ್ತಾರೋ ಅವರಲ್ಲಿ ಆರಂಭಿಕ ಮರಣದ ಅಪಾಯವನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಾಗಿದ್ಯಂತೆ. ಅಧ್ಯಯನಗಳು ಕೂಡ ಇದನ್ನು ಸಾಭೀತು ಪಡಿಸಿದೆ. ಇನ್ನೂ ಪ್ರತಿ ವಾರ ಒಟ್ಟು 75 ನಿಮಿಷಗಳ ಮಧ್ಯಮ-ತೀವ್ರತೆಯ ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ಆರಂಭಿಕ ಸಾವಿನ ಅಪಾಯವನ್ನು ಶೇಕಡ 23 ಪ್ರತಿಶತದಷ್ಟು ಕಡಿಮೆಗೊಳಿಸಬಹುದಂತೆ.
ವಾರಕ್ಕೆ 75 ನಿಮಿಷಗಳ ಕಾಲ ಮಧ್ಯಮ-ತೀವ್ರತೆಯ ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ಹೃದಯರಕ್ತನಾಳದ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಶೇಕಡಾ 17 ಪ್ರತಿಶತ ಮತ್ತು ಕ್ಯಾನ್ಸರ್ ಅನ್ನು ಶೇಕಡಾ 7 ರಷ್ಟು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಎಂದು ಅಧ್ಯಯನವು ದೃಢಪಡಿಸಿದೆ.
ಕ್ಯಾನ್ಸರ್‌ಗೂ ಪರಿಹಾರವಿದ್ಯಾ?
ಹೌದು, ವಾರಕ್ಕೆ ನಿಮ್ಮ 75 ನಿಮಿಷಗಳ ವ್ಯಾಯಾಮವು ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳು, ಗ್ಯಾಸ್ಟ್ರಿಕ್ ಮತ್ತು ಹೃದಯದ ಕ್ಯಾನ್ಸರ್‌ಗಳು, ಮೈಲೋಯ್ಡ್ ಲ್ಯುಕೇಮಿಯಾ ಮತ್ತು ಮೈಲೋಮಾದಂತಹ ನಿರ್ದಿಷ್ಟ ಕ್ಯಾನ್ಸರ್‌ಗಳ ಅಪಾಯವನ್ನು ಶೇಕಡಾ 14 ರಿಂದ 26 ರಷ್ಟು ಕಡಿತಗೊಳಿಸುತ್ತದೆ. ಇದಿಷ್ಟೇ ಅಲ್ಲ, ಇದರ ಜೊತೆಗೆ ಶ್ವಾಸಕೋಶ, ಎಂಡೊಮೆಟ್ರಿಯಲ್, ಸ್ತನಗಳು, ಮತ್ತು ಯಕೃತ್ತಿನ ಕ್ಯಾನ್ಸರ್‌ನಂತಹ ಇತರ ಕ್ಯಾನ್ಸರ್‌ಗಳ ಅಪಾಯವನ್ನು ಕೂಡ 3ರಿಂದ 11 ಪ್ರತಿಶತದಷ್ಟು ಕಡಿಮೆ ಮಾಡುತ್ತಂತೆ.
ನಾವು ಪ್ರತಿನಿತ್ಯ ಹನ್ನೊಂದು ನಿಮಿಷವನ್ನು ವ್ಯಾಯಾಮಕ್ಕಾಗಿ ಉಪಯೋಗಿಸಿದರೆ ಅದು ನಮ್ಮ ಸಾವಿನ ಅಪಾಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತೆ ಅಂದ್ರೆ ಖುಷಿಯ ವಿಚಾರವೇ ಸರಿ. ಹೀಗಾಗಿ ವಾರದಲ್ಲಿ 75 ನಿಮಿಷಗಳನ್ನು ವ್ಯಾಯಮಕ್ಕಾಗಿ ಉಪಯೋಗಿಸುವುದರಿಂದ ಯಾವುದೇ ರೀತಿಯ ನಷ್ಟವಾಗುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



