Latest Updates
-
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ?
ಕೋವಿಡ್ 19: ಮನೆಯ 'ಔಷಧ ಕಿಟ್' ನಲ್ಲಿ ಇವುಗಳಿದ್ದರೆ ತುಂಬಾ ಸಹಕಾರಿ
ಕೊರೊನಾವೈರಸ್‌ನಿಂದ ನಮ್ಮೆಲ್ಲರ ಜೀವನದ ಚಿತ್ರಣವೇ ಬದಲಾಗಿದೆ. ಇದುವರೆಗೆ ಕೊರೊನಾವೈರಸ್‌ಗೆ ಸೂಕ್ತ ಔಷಧಿ ಸಿಕಿಲ್ಲ. ಈಗ ಭಾರತದಲ್ಲಿ ಪ್ಲಾಸ್ಮಾ ಥೆರಪಿ ಒಮದು ಆಶಾ ಕಿರಣವಾಗಿ ಮೂಡಿ ಬಂದಿದೆ. ಕೊರೊನಾ ಬಂದಾಗಿನಿಂದ ಇತರ ಆರೋಗ್ಯ ಸಮಸ್ಯೆ ಬಂದರೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಮೊದಲೆಲ್ಲಾ ಸಾಮಾನ್ಯ ಜ್ವರ, ಕೆಮ್ಮು ಬಂದಾಗ ಜನರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಕಷಾಯ ಮಾಡಿ ಕುಡಿಯುವುದು, ಪಕ್ಕದ ಕ್ಲಿನಿಕ್‌ಗೆ ಹೋಗಿ ಔಷಧ ತಂದರೆ ಗುಣಮುಖವಾಗುತ್ತಿತ್ತು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೆಮ್ಮು, ಜ್ವರ ಬಂದಿದೆ ಎಂದರೆ ಎಲ್ಲರೂ ಭಯ ಪಡುತ್ತಾರೆ. ಅದಕ್ಕೆ ಔಷಧ ಕೊಡಲು ಯಾರೂ ಸಿದ್ಧವಿರುವುದಿಲ್ಲ, ಮೊದಲಿಗೆ ಹೋಗಿ ಕೋವಿಡ್ 19 ಪರೀಕ್ಷೆ ಮಾಡಿಸುವಂತೆ ಸಲಹೆ ನೀಡುತ್ತಾರೆ. ನೀವು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು, ಮನೆಯಲ್ಲಿಯೇ ಇದ್ದಿದ್ದರೆ ನಿಮಗೆ ಸಾಮಾನ್ಯ ಜ್ವರ ಬಂದಾಗ ಇದು ಸಾಮಾನ್ಯ ಜ್ವರ ಎಂಬ ನಂಬಿಕೆ ನಿಮ್ಮಲ್ಲಿರುತ್ತದೆ. ಆದರೆ ಔಷಧಿ ತೆಗೆದುಕೊಳ್ಳಬೇಕೆಂದು ಆಸ್ಪತ್ರೆಗೆ ಹೋದರೆ ಕೋವಿಡ್ ಪರೀಕ್ಷೆ ಮಾಡಿಸಲು ಸೂಚಿಸುತ್ತಾರೆ. ಅದೇ ಪ್ರಥಮ ಚಿಕಿತ್ಸೆ ಕಿಟ್‌ಗಳು ನಿಮ್ಮಲ್ಲಿದ್ದರೆ ಸಣ್ಣ ಪುಟ್ಟ ರೋಗಗಳನ್ನೂ ಸುಲಭವಾಗಿ ಹೋಗಲಾಡಿಸಬಹುದು.
ಕೋವಿಡ್ 19 ಹಾವಳಿ ಇರುವ ಈ ಸಂದರ್ಭದಲ್ಲಿ ಮನೆಯಲ್ಲಿ ಈ ಔಷಧಿ ಕಿಟ್‌ಗಳ ಸ್ಟಾಕ್ ಇರುವುದು ಒಳ್ಳೆಯದು:

ಮೆಡಿಸಿನ್ ಕಿಟ್
ತಲೆನೋವು, ಜ್ವರ, ಶೀತಕ್ಕೆ ನಿಮ್ಮಲ್ಲಿ ಮದ್ದಗಳಿದ್ದರೆ ಅವುಗಳ ಎಕ್ಸ್‌ಪೆರಿ ಡೇಟ್ ಇದ್ದರೆ ಅವುಗಳನ್ನು ಬಿಸಾಡಬೇಡಿ.ಆದರೆ ಔಷಧಿಯ ಮುಚ್ಚಳ ಸರಿಯಾಗಿ ಹಾಕಿಡಿ. ಮಾತ್ರೆಗಳನ್ನು ಸರಿಯಾಗಿ ಒಂದು ಬಾಕ್ಸ್‌ನಲ್ಲಿ ಹಾಕಿಡಿ. ತುಂಬಾ ಉಷ್ಣತೆ ಇರುವ ಕಡೆ ಇರಬೇಡಿ. ಹಾಗೂ ಔಷಧಿಗಳನ್ನು ಮಕ್ಕಳಿಗೆ ಸಿಗದಂತೆ ಇಡಿ.
ಇನ್ನು ಔಷಧಿಗಳನ್ನು ತುಂಬಾ ತೇವ ಇರುವ ಕಡೆ ಅಥವಾ ಉಷ್ಣಾಂಶ ಇರುವ ಕಡೆ ಇಡಬೇಡಿ.

ಥರ್ಮೋಮೀಟರ್ ಇರಲಿ
ಮನೆಯಲ್ಲಿ ಜ್ವರದ ಪ್ರಮಾಣ ತಿಳಿಯಲು ಥರ್ಮೋ ಮೀಟರ್ ಇರಲಿ. ಇದು ಮನೆಯಲ್ಲಿದ್ದರೆ ಜ್ವರ ಹೆಚ್ಚಾಗಿದೆಯೇ, ಕಡಿಮೆಯಾಗಿದೆಯೇ ಎಂದು ಪರೀಕ್ಷಿಸಬಹುದು. ಒಂದು ವೇಳೆ ಜ್ವರ ಔಷಧಿ ತೆಗೆದುಕೊಂಡರೂ ಕಡಿಮೆಯಾಗದಿದ್ದರೆ, ಮೈ ಉಷ್ಣತೆ 100 ಡಿಗ್ರಿ ದಾಟಿದರೆ ಕೂಡಲೇ ವೈದ್ಯರಿಗೆ ಕರೆ ಮಾಡಿ ಸಲಹೆ ಕೇಳಿ. ಇನ್ನು ಜ್ವರ ಜೊತೆಗೆ ಕೆಮ್ಮು ಇದ್ದರೆ ಕೋವಿಡ್ 19 ಪರೀಕ್ಷೆ ಮಾಡಿಸಿ.

ಪಲ್ಸ್ ಆಕ್ಸಿಮೀಟರ್
ಕೆಲವರು ರೋಗಿಗಳಿಗೆ ನ್ಯೂಮೋನಿಯಾ ಉಂಟಾದರೆ ಇದರಿಂದ ದೇಹದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗುವುದು. ಪಲ್ಸ್ ಆಕ್ಸಿಮೀಟರ್ ಇದ್ದರೆ ಮನೆಯಲ್ಲಿಯೇ ಪರೀಕ್ಷೆ ಮಾಡಬಹುದು. ಪರಿಸ್ಥಿತಿ ಗಂಭೀರವಾಗುತ್ತಿದ್ದರೆ ಕೂಡಲೇ ವೈದ್ಯರಗೆ ತಿಳಿಸಬಹುದು. ಇದರ ನಾರ್ಮಲ್ ರೀಡಿಂಗ್ 95-100 ಪರ್ಸೆಮಟ್ ಒಳಗೆ ಇರುತ್ತದೆ. 90ರ ಒಳಗಿದ್ದರೆ ಆಮ್ಲಜನಕ ಪ್ರಮಾಣ ಕಡಿಮೆ ಇದೆ ಎಂಬುವುದರ ಸೂಚನೆಯಾಗಿದೆ. ಆಕ್ಸಿಮೀಟರ್ ಸಿಗದಿದ್ದರೆ ಆರ್ಡರ್ ಮಾಡಿ ಸ್ವಲ್ಪ ದಿನಗಳಲ್ಲಿ ದೊರೆಯುವ ಸಾಧ್ಯತೆ ಇದೆ.

ಜ್ವರ ಕಮ್ಮಿ ಮಾಡುವ ಹಾಗೂ ನೋವು ನಿವಾರಕ ಮಾತ್ರೆಗಳು
ತಲೆನೋವು, ಸಾಮಾನ್ಯ ಜ್ವರ, ಕೆಮ್ಮು ಇವುಗಳು ಬಂದಾಗ ಪ್ಯಾರಾಸಿಟಮೋಲ್, ಡೋಲೋ 650 ತೆಗೆದುಕೊಳ್ಳಬಹುದು. ಆದರ ಈ ಮಾತ್ರೆ ತೆಗೆದುಕೊಳ್ಳುವ ಮುನ್ನ ನಿಮ್ಮ ವೈದ್ಯರಿಗೆ ಕರೆ ಮಾಡಿ ಸಲಹೆ ಕೇಳಿರಿ. ಈ ಮಾತ್ರೆಗಳನ್ನು ತೆಗೆದುಕೊಂಡಾಗ ಜ್ವರ ಕಡಿಮೆಯಾದರೆ ನಿಮಗೆ ಸಾಮಾನ್ಯ ಜ್ವರವಾಗಿರುತ್ತದೆ. ಆದರೆ ಈ ಮಾತ್ರೆಗಳಲ್ಲಿ ಕಡಿಮೆಯಾಗದಿದ್ದರೆ ವೈದ್ಯರಿಗೆ ಕರೆ ಮಾಡಿ ಮುಂದೇನು ಮಾಡಬೇಕೆಂಬ ಸಲಹೆ ಕೇಳಿ. ಅವರು ಹೇಳಿದ ಮಾರ್ಗಸೂಚಿ ಪಾಲಿಸಿ.

ಮನೆಮದ್ದುಗಳು
ಇನ್ನು ಈ ಸಮಯದಲ್ಲಿ ಸಣ್ಣ ಪುಟ್ಟ ಸಮಸ್ಯಗಳಿಗೆ ಮನೆಮದ್ದು ಮಾಡಿ. ಅಜ್ಜಿಕಾಲದ ಮದ್ದು ಇವುಗಳನ್ನು ಹಿರಿಯರ ಬಳಿ ಕೇಳಿ ಯಾವುದನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕೆಂದು ಕೇಳಿ ಬಳಸಿ. ಗಿಡಮೂಲಿಕಗಳು, ಶುಂಠಿ, ಜೇನು, ತುಳಸಿ ಇವೆಲ್ಲಾ ಮನೆಮದ್ದುಗಳಾಗಿ ಪರಿಣಾಮಕಾರಿಯಾಗಿವೆ.

ಇತರ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ
ಮಧುಮೇಹ, ಬಿಪಿ, ಥೈರಾಯ್ಡ್ ಹೀಗೆ ಇನ್ನಿತರ ಸಮಸ್ಯೆಗಳಿಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಔಷಧಿ ತಿಂಗಳಿಗೆ ಆಗುವಷ್ಟು ಸ್ಟಾಕ್ ಇರಲಿ ಹಾಗೂ ಡೋಸೇಜ್ ಬಗ್ಗೆ ವೈದ್ಯರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ. ಇನ್ನು ಈ ಔಷಧಿ ಜೊತೆ ಬೇರೆ ಔಷಧಿ ಅಥವಾ ಮನೆಮದ್ದು ತೆಗೆದುಕೊಳ್ಳುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
ಕೆಲವೊಮ್ಮೆ ಒಂದು ಸಮಸ್ಯೆಗೆ ಮದ್ದು ತೆಗೆದುಕೊಳ್ಳುತ್ತಿರುವಾಗ ಮತ್ತೊಂದು ಕಾಯಿಲೆಗೆ ಮದ್ದು ತೆಗೆದುಕೊಳ್ಳುವುದು ಅಥವಾ ಮನೆಮದ್ದು ಮಾಡುವುದು ಮಾಡಿದರೆ ಅಡ್ಡ ಪರಿಣಾಮ ಬೀರುವುದು.



Click it and Unblock the Notifications