Latest Updates
-
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಕರುಳಿನ ಕ್ಯಾನ್ಸರ್: ಪದೇ ಪದೇ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆ ನಿರ್ಲಕ್ಷ್ಯ ಮಾಡಲೇಬೇಡಿ
ಕರುಳಿನ ಕ್ಯಾನ್ಸರ್ ತುಂಬಾ ಜನರಿಗೆ ಕೊನೆಯ ಹಂತದಲ್ಲಿ ತಿಳಿದುಬರುತ್ತದೆ, ಪ್ರಾರಂಭದಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಎಂದು ತಪ್ಪಾಗಿ ಗ್ರಹಿಸಿ ಕೊನೆಗೆ ಅದು ಕ್ಯಾನ್ಸರ್ ಎಂದು ಗೊತ್ತಾಗಿರುವ ತುಂಬಾ ಉದಾಹರಣೆಗಳಿವೆ.
ಅದ್ದರಿಂದ ಪದೇ ಪದೇ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬುವ ಸಮಸ್ಯೆ ಕಂಡು ಬರುವುದಾದರೆ ನಿರ್ಲಕ್ಷ್ಯ ಮಾಡಲೇಬೇಡಿ, ವೈದ್ಯರ ಬಳಿ ಹೋಗಿ ಕರುಳಿನ ಆರೋಗ್ಯ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು.

ಕರುಳಿನ ಕ್ಯಾನ್ಸರ್ ಲಕ್ಷಣಗಳೇನು? ಯಾವಾಗ ವೈದ್ಯರನ್ನು ಕಾಣಬೇಕು, ಇದರ ಲಕ್ಷಣಗಳೇನು ಎಂಬೆಲ್ಲಾ ಮಾಹಿತಿ ತಿಳಿಯೋಣ:
ಕರುಳಿನ ಕ್ಯಾನ್ಸರ್ ಲಕ್ಷಣಗಳು
* ಆಗಾಗ ಹೊಟ್ಟೆಯ ಆರೋಗ್ಯದಲ್ಲಿ ಬದಲಾವಣೆಯಾಗುವುದು ಅಂದರೆ ಬೇಧಿ ಅಥವಾ ಮಲಬದ್ಧತೆ ಸಮಸ್ಯೆ ಉಂಟಾಗುವುದು. ಈ ರೀತಿ ಪದೇ ಪದೇ ಉಂಟಾಗುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
* ಗುದಧ್ವಾರದಲ್ಲಿ ರಕ್ತಸ್ರಾವ
* ಹೊಟ್ಟೆಯಲ್ಲಿ ಅಸ್ವಸ್ಥತೆ ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ
* ಗ್ಯಾಸ್ ಸಂಪೂರ್ಣ ಹೊರ ಹೋದಂತೆ ಅನಿಸದೇ ಇರುವುದು
* ಸುಸ್ತು, ತಲೆಸುತ್ತು
* ಇದ್ದಕ್ಕಿದ್ದಂತೆ ತೂಕ ಇಳಿಕೆ
ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ತೋರಿಸುವುದು ಒಳ್ಳೆಯದು.
ಸೂಚನೆ: ಗ್ಯಾಸ್ಟ್ರಿಕ್ ಅಂತ ಕೆಲವರು ಸ್ವ ಚಿಕಿತ್ಸೆ ಮಾಡುತ್ತಾರೆ, ವೈದ್ಯರ ಬಳಿ ಹೋಗುವುದೇ ಇಲ್ಲ, ತಾವೇ ಗ್ಯಾಸ್ಟ್ರಿಕ್ ಮಾತ್ರೆ ತೆಗೆದು ಸುಮ್ಮನಾಗುತ್ತಾರೆ, ಆ ತಪ್ಪುಗಳನ್ನು ಮಾಡಲೇಬೇಡಿ, ಪದೇ ಪದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದ್ದರೆ ಒಳ್ಳೆಯ ವೈದ್ಯರಿಗೆ ತೋರಿಸಿ.
ಕರುಳಿನ ಕ್ಯಾನ್ಸರ್ ಕಾರಣಗಳೇನು?
ಕರುಳಿನ ಕ್ಯಾನ್ಸರ್‌ಗೆ ನಿರ್ದಿಷ್ಟವಾದ ಕಾರಣಗಳಿಲ್ಲ, ಈ ಕಾರಣಗಳಿಂದಾಗಿ ಕರುಳಿನ ಕ್ಯಾನ್ಸರ್ ಉಂಟಾಗುವುದು.
ಆರೋಗ್ಯಕರ ಕಣಗಳು ಸರಿಯಾದ ರೀತಿಯಲ್ಲಿ ವಿಭಾಗವಾಗಿ ದೇಹದ ಅಂಗಾಂಗಗಳು ಕಾರ್ಯನಿರ್ವಹಿಸುವಂತೆ ಮಾಡುತ್ತದೆ, ಆದರೆ ಡಿಎನ್‌ಎಗೆ ಹಾನಿಯುಂಟಾದಾಗ ಅದು ಕ್ಯಾನ್ಸರ್‌ಕಣಗಳಾಗುವುದು.
ಯಾರಿಗೆ ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚು?
ವಯಸ್ಸಾದವರಿಗೆ: ಯಾವುದೇ ವಯಸ್ಸಿನಲ್ಲಿ ಕ್ಯಾನ್ಸರ್ ಬರಬಹುದು, ಆದರೆ ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುವುದು.
ಆಫ್ರಿಕನ್-ಅಮೆರಿಕನ್‌ರಿಗೆ ಹೆಚ್ಚಾಗಿ ಕಂಡು ಬರುವುದು.
ಕರುಳಿನ ಪಾಲಿಪ್ಸ್ ಇರುವವರಿಗೆ ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚು
* ವಂಶವಾಹಿಯಾಗಿಯೂ ಬರುವ ಸಾಧ್ಯತೆ ಇದೆ.
* ಕಡಿಮೆ ನಾರಿನಂಶ ಹಾಗೂ ಅಧಿಕ ಕೊಬ್ಬಿನಂಶದ ಆಹಾರ ಸೇವನೆ
* ಮಧುಮೇಹಿಗಳಿಗೆ
* ಒಬೆಸಿಟಿ ಸಮಸ್ಯೆ ಇರುವವರಿಗೆ
* ಧೂಮಪಾನಿಗಳಿಗೆ
* ಅತಿಯಾದ ಮದ್ಯಪಾನಿಗಳಿಗೆ'
* ಕ್ಯಾನ್ಸರ್‌ಗೆ ಕೀಮೋಥೆರಪಿ ಮಾಡಿಸಿದವರಿಗೆ
ಕರುಳಿನ ಕ್ಯಾನ್ಸರ್ ತಡೆಗಟ್ಟಲು ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿ
* ತುಂಬಾ ಬಗೆಯ ಹಣ್ಣುಗಳನ್ನು ಸೇವಿಸಿ
ಆಯಾ ಸೀಸನ್‌ನಲ್ಲಿ ದೊರೆಯುವ ಹಣ್ಣುಗಳನ್ನು ಸೇವಿಸಿ, ದಿನದಲ್ಲಿ 4-5 ಬಗೆಯ ಹಣ್ಣುಗಳನ್ನು ಸೇವಿಸಿ. ಹಣ್ಣುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಅಲ್ಲದೆ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು ದೊರೆಯುತ್ತದೆ.
* ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ
ನಾರು ಪದಾರ್ಥಗಳು ಜೀರ್ಣಕ್ರಿಯೆಗೆ ಒಳ್ಳೆಯದು. ಜೀರ್ಣಕ್ರಿಯೆ ಚೆನ್ನಾಗಿ ನಡೆದರೆ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ. ನಾರಿನ ಪದಾರ್ಥಗಳು ಕಡಿಮೆಯಾದರೆ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಬೇಡದ ಕಶ್ಮಲಗಳು ದೇಹದಲ್ಲಿ ಉಳಿದುಕೊಳ್ಳುತ್ತದೆ, ಇದರಿಂದ ಕೂಡ ಕ್ಯಾನ್ಸರ್‌ಕಣಗಳು ಉಂಟಾಗುವುದು. ಸೊಪ್ಪು ಹಾಗೂ ತರಕಾರಿ ನಿಮ್ಮ ಆಹಾರಕ್ರಮದಲ್ಲಿ ಹೆಚ್ಚಾಗಿ ಬಳಸಿ.
* ಮದ್ಯಪಾನ ಮಿತಿಯಲ್ಲಿರಲಿ
ಅತಿಯಾದ ಮದ್ಯಪಾನದಿಂದ ಕರುಳಿನ ಆರೋಗ್ಯ ಹಾಳಾಗುವುದು, ಇದರಿಂದ ಕರುಳಿನಲ್ಲಿರುವ ಜೀವ ಕಣಗಳಿಗೆ ಹಾನಿಯುಂಟಾಗಿ ಕ್ಯಾನ್ಸರ್ ಗಡ್ಡೆಗಳಾಗುವುದು. ಮದ್ಯಪಾನ ಮಿತಿಯಲ್ಲಿ ಮಾಡಿ.
* ಧೂಮಪಾನ ಮಾಡಬೇಡಿ: ಧೂಮಪಾನದಿಂದ ಶ್ವಾಸಕೋಶದ ಕ್ಯಾನ್ಸರ್ ಮಾತ್ರವಲ್ಲ ಕರುಳಿನ ಕ್ಯಾನ್ಸರ್ ಉಂಟಾಗುವುದು.
* ವ್ಯಾಯಾಮ ಮಾಡಿ
ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ, ಅರ್ಧ ಗಂಟೆ ನಡೆಯಿರಿ. ಇದರಿಂದ ಇಡೀ ದೇಹದ ಆರೋಗ್ಯಕ್ಕೆ ಒಳ್ಳೆಯದು. ನೀವು ತೋಟದಲ್ಲಿ ಕೆಲಸ ಮಾಡುವವರಾದರೆ ಅಥವಾ ದೈಹಿಕ ಶ್ರಮದ ಕೆಲಸ ಮಾಡುವವರಾದರೆ ನಿಮ್ಮ ದೇಹಕ್ಕೆ ವ್ಯಾಯಾಮ ಸಿಗುತ್ತದೆ, ಆದರೆ ಒಂದೇ ಕಡೆ ಕೂತು ಮಾಡುವ ಕೆಲಸ ಅಥವಾ ಆಫೀಸ್ ವರ್ಕ್ ಆದರೆ ವ್ಯಾಯಾಮ ಮಾಡಲೇಬೇಕು.
* ಆರೋಗ್ಯಕರ ಮೈ ತೂಕ ಹೊಂದಿ
ನೀವು ಆರೋಗ್ಯಕರ ಮೈ ತೂಕ ಹೊಂದುವತ್ತ ಗಮನ ನೀಡಿ. ಆರೋಗ್ಯಕರ ಆಹಾರಕ್ರಮ ಹಾಗೂ ವ್ಯಾಯಾಮ ಆರೋಗ್ಯಕರ ಮೈ ತೂಕ ನೀಡುವುದು. ಇದರಿಂದ ಅನೇಕ ಬಗೆಯ ಕಾಯಿಲೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
