Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೈವ್ಸ್: ತುಂಬಾ ದಿನದಿಂದ ತ್ವಚೆ ಅಲರ್ಜಿ ಇದೆಯೇ? ಇದರಿಂದ ತೊಂದರೆಯಾಗುವುದೇ?
ಕೆಲವರಿಗೆ ತ್ವಚೆ ಅಲರ್ಜಿ ಸಮಸ್ಯೆ ಎಷ್ಟೇ ದಿನಗಳಾದರೂ ಕಡಿಮೆಯಾಗಿರುವುದಿಲ್ಲ. ತಿಂಗಳುಗಟ್ಟಲೆ ಅಲರ್ಜಿ ಸಮಸ್ಯೆ ಹಾಗೆಯೇ ಇರುತ್ತದೆ, ಅಲರ್ಜಿ ಸಮಸ್ಯೆ 6 ವಾರಗಳಿಗಿಂತ ಅಧಿಕ ವಾರಗಳಿದ್ದರೆ ಅದಕ್ಕೆ ಹೈವ್ಸ್ (Hives) ಎಂದು ಕರೆಯಲಾಗುವುದು. ಸಾಕಷ್ಟು ಬಾರಿ ಈ ಸಮಸ್ಯೆಗೆ ಕಾರಣವೇನು ಎಂಬುವುದು ನಿಖರವಾಗಿ ಹಹೇಳಲು ಸಾಧ್ಯವಾಗುವುದಿಲ್ಲ.
ಈ ಅಲರ್ಜಿ ಸಮಸ್ಯೆ ಬರುವುದು, ಹೋಗುವುದು ಇರುತ್ತೆ. ಈ ಅಲರ್ಜಿ ಸಮಸ್ಯೆಯಲ್ಲಿ ದೇಹದ ಯಾವುದೇ ಭಾಗದಲ್ಲಿ ತುರಿಕೆ ಬರಬಹುದು, ಮೈಮೇಲೆ ಬೊಬ್ಬೆಗಳು ಏಳುವುದು, ಈ ರೀತಿಯ ತುರಿಕೆ ಪ್ರತಿದಿನ ಕಂಡು ಬರುತ್ತದೆ. ರೀತಿ ಅಲರ್ಜಿ ಸಮಸ್ಯೆಯ ಲಕ್ಷಣಗಳೇನು, ಇದಕ್ಕೆ ಚಿಕಿತ್ಸೆಯೇನು ಎಂದು ನೋಡೋಣ ಬನ್ನಿ:

ಲಕ್ಷಣಗಳು
* ಮೈಮೇಲೆ ಬೊಬ್ಬೆಗಳು ಏಳುವುದು
* ಗುಳ್ಳೆಗಳು ಕೆಂಪು ಅಥವಾ ತ್ವಚೆ ಬಣ್ಣದಲ್ಲಿರಬಹುದು
* ಗುಳ್ಳೆಗಳ ಗಾತ್ರ ಭಿನ್ನವಾಗಿರಬಹುದು
*ಕಣ್ಣು, ಕೆನ್ನೆ, ತುಟಿ ಭಾಗದಲ್ಲಿ ಊತ, ನೋವು
* ಬಿಸಿಲು ತಡೆಯಲು ಸಾಧ್ಯವಾಗಲ್ಲ, ವ್ಯಾಯಾಮ ಮಾಡಿದಾಗ ಅಥವಾ ಅತ್ಯಧಿಕ ಮಾನಸಿಕ ಒತ್ತಡ ಉಂಟಾದಾಗ ತುರಿಕೆ ಹೆಚ್ಚಾಗುವುದು
* ಈ ಸಮಸ್ಯೆ 4 ವಾರಗಳಿಗಿಂತ ಅಧಿಕವಿರುತ್ತದೆ.

ಯಾವಾಗ ವೈದ್ಯರಿಗೆ ತೋರಿಸಬೇಕು?
ಅಲರ್ಜಿ ಸಮಸ್ಯೆ ಒಂದು ತಿಂಗಳಿಗಿಂತ ಅಧಿಕ ಸಮಯವಿದ್ದಾಗ ವೈದ್ಯರಿಗೆ ತೋರಿಸಿ.
ಯಾವಾಗ ತುರ್ತು ಚಿಕಿತ್ಸೆ ಪಡೆಯಬೇಕು?
ಈ ರೀತಿಯ ಅಲರ್ಜಿ ನಿಮಗೆ ಇದ್ದಕ್ಕಿದ್ದಂತೆ ದೊಡ್ಡ ಸಮಸ್ಯೆ ಉಂಟು ಮಾಡಲ್ಲ, ಆದರೆ ಅಲರ್ಜಿ ತುಂಬಾ ಹೆಚ್ಚಾಗಿ ಸುಸ್ತು, ತಲೆಸುತ್ತು, ನಾಲಗೆ, ತುಟಿ, ಬಾಯಿ, ಗಂಟಲಿನ ಭಾಗದಲ್ಲಿ ಊತ ಕಂಡು ಬಂದರೆ ವೈದ್ಯರಿಗೆ ತೋರಿಸಿ.

ಹೈವ್ಸ್‌ಗೆ ನಿಖರ ಕಾರಣ
ಹೈವ್ಸ್ ಯಾವ ಕಾರಣಕ್ಕೆ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಈ ಕಾರಣಗಳಿಂದ ಉಂಟಾಗುತ್ತದೆ.
* ಸೆಕೆ ಅಥವಾ ಅತಿಯಾದ ತಂಪು
* ಸೂರ್ಯನ ಬಿಸಿಲು ಮೈ ಮೇಲೆ ಬಿದ್ದಾಗ
*ಅತ್ಯಧಿಕ ವ್ಯಾಯಾಮ
*ಬಿಗಿಯಾದ ಉಡುಪು
* ಥೈರಾಯ್ಡ್ , ಸೋಂಕು, ಅಲರ್ಜಿ, ಕ್ಯಾನ್ಸರ್‌ನಿಂದ ಕೂಡ ಬರಬಹುದು
ತಡೆಗಟ್ಟುವುದು ಹೇಗೆ?
* ನಿಮಗೆ ಯಾವ ಕಾರಣದಿಂದ ಉಂಟಾಗುತ್ತಿದೆ ಎಂದು ತಿಳಿದರೆ ಅದನ್ನು ತಡೆಗಟ್ಟಿ
* ಪ್ರತಿದಿನ ಸ್ನಾನ ಮಾಡಿ ಬಟ್ಟೆ ಬದಲಾಯಿಸಿ, ಪ್ರಾಣಿಗಳನ್ನು ಮುಟ್ಟಬೇಡಿ.



Click it and Unblock the Notifications
