Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ?
ಮಹಿಳೆಯರಿಗೆ ತಿಂಗಳ ಆ ದಿನಗಳು ತುಂಬಾನೇ ಕಿರಿಕಿರಿ ಅನಿಸುವುದು, ಕಿಬ್ಬೊಟ್ಟೆ ನೋವು, ಹೊಟ್ಟೆ ಉಬ್ಬಿದಂತೆ ಅನಿಸುವುದು, ಮೂಡ್ ಬದಲಾವಣೆ, ಕೆಲವೊಮ್ಮೆ ಅಧಿಕ ರಕ್ತಸ್ರಾವ ಇವೆಲ್ಲಾ ತುಂಬಾನೇ ಕಿರಿಕಿರಿ ಅನಿಸುವುದು. ಈ ಸಮಯದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು. ಉದಾಹರಣೆಗೆ ಮೊಟ್ಟೆ, ಹುಳಿ. ಹುಳಿ ರಕ್ತಸ್ರಾವ ಹೆಚ್ಚಿಸುತ್ತದೆ, ಮೊಟ್ಟೆ ತಿಂದರೆ ಕೆಟ್ಟ ವಾಸನೆ ಬೀರುವುದು, ಇನ್ನು ಕೆಲವೊಂದು ಆಹಾರಗಳು ಹೊಟ್ಟೆ ನೋವು ಕಡಿಮೆ ಮಾಡುವುದು ಉದಾಹರಣೆಗೆ ಜೀರಿಗೆ ನೀರು, ಎಳನೀರು. ಹೊಟ್ಟೆ ನೋವು ಇದ್ದರೆ ಇವುಗಳನ್ನು ಸೇವಿಸಿದರೆ ಸಾಕು ಕಡಿಮೆಯಾಗುವುದು.
ಹಾಗಾಗಿ ಮುಟ್ಟಿನ ಸಮಯದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದು ತಿನ್ನಬಾರದು ಎಂದು ತಿಳಿದುಕೊಂಡರೆ ಒಳ್ಳೆಯದು. ನಾವಿಲ್ಲಿ ಮುಟ್ಟಿನ ಸಮಯದಲ್ಲಿ ಮೊಸರು ಸೇವನೆ ಮಾಡಬಹುದೇ, ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ?
ಮುಟ್ಟಿನ ಮಸಯದಲ್ಲಿ ನೀವು ಮೊಸರನ್ನು ತಿನ್ನಬಹುದು. ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಿದ್ದು ಇದು ನಿಮ್ಮ ದೇಹವನ್ನು ಬಲಪಡಿಸುತ್ತೆ, ಅಲ್ಲದೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಮುಟ್ಟಿನ ಸಮಯದಲ್ಲಿ ಮೊಸರು ತಿಂದರೆ ಸ್ನಾಯು ಸೆಳೆತ ಕಡಿಮೆಯಾಗುವುದು ಹಾಗೂ ಒತ್ತಡ, ಆತಂಕ ಕಡಿಮೆಯಾಗುವುದು.
ಹುಳಿ ಪದಾರ್ಥಗಳನ್ನು ಮುಟ್ಟಿನ ಸಮಯದಲ್ಲಿ ತಿನ್ನಬಾರದು ಎಂದು ಹೇಳಲಾಗುವುದು, ಆದರೆ ಮೊಸರು ಸೇವನೆ ಮಾಡಬಹುದು, ಇದು ಹೊಟ್ಟೆಯ ಆರೋಗ್ಯಕ್ಕೆ ಒಳ್ಲೆಯದು, ಮುಟ್ಟಿನ ಸಮಯದಲ್ಲಿ ಹೊಟ್ಟೆ ಉಬ್ಬುವುದು, ಮಲಬದ್ಧತೆ ಸಮಸ್ಯೆ ಉಂಟಾಗುತ್ತಿದ್ದರೆ ಮೊಸರು ಸೇವಿಸಿ.
ಮೊಸರು ಸೇವಿಸಲು ಇಷ್ಟಪಡದಿದ್ದರೆ ಲಸ್ಸಿ ಮಾಡಿ ಅಥವಾ ಮಜ್ಜಿಗೆ ಮಾಡಿ ಕುಡಿಯಬಹುದು.

ರಾತ್ರಿ ಹೊತ್ತಿನಲ್ಲಿ ಮೊಸರು ಸೇವಿಸಬಾರದು ಏಕೆ?
ಮೊಸರನ್ನು ಹಗಲು ಹೊತ್ತಿನಲ್ಲಿ ಯಾವಾಗ ಬೇಕಾದರೂ ಸೇವಿಸಬಹುದು, ಆದರೆ ರಾತ್ರಿ ಹೊತ್ತಿನಲ್ಲಿ ಸೇವಿಸಬೇಡಿ. ರಾತ್ರಿ ಹೊತ್ತಿನಲ್ಲಿ ಸೇವಿಸಿದರೆ ಕಫದ ಸಮಸ್ಯೆ ಹೆಚ್ಚುವುದು. ಅಸ್ತಮಾ ಇರುವವರು ನೊಸರು ಸೇವಿಸಬೇಡಿ.
ರಾತ್ರಿ ಹೊತ್ತಿನಲ್ಲಿ ಮೊಸರು ಸೇವಿಸುವುದಾದರೆ ಹೇಗೆ ಸೇವಿಸಬೇಕೆ?
ಏನೂ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ರಾತ್ರಿ ಹೊತ್ತಿನಲ್ಲಿ ಮೊಸರು ಸೇವಿಸಬಹುದು, ಸೇವಿಸುವುದಾದರೆ ಅದರಲ್ಲಿ ಸ್ವಲ್ಪ ಮೆಂತೆ ಪುಡಿ, ಕಾಳು ಮೆಣಸಿನ ಪುಡಿ ಸೇರಿಸಿ ಸೇವಿಸಿ.

ಮುಟ್ಟಿನ ಸಮಯದಲ್ಲಿ ಯಾವ ಬಗೆಯ ಆಹಾರ ಸೇವನೆ ಒಳ್ಳೆಯದಲ್ಲ?
* ತುಂಬಾ ಖಾರ ಪದಾರ್ಥಗಳಿಂದ ದೂರವಿರಿ
* ತುಂಬಾ ಉಪ್ಪಿನ ಪದಾರ್ಥಗಳನ್ನು ಸೇವಿಸಬೇಡಿ
* ಕಾಫಿ ಕುಡಿಯಬೇಡಿ
* ಸಂಸ್ಕರಿಸಿದ ಆಹಾರ, ಕೊಬ್ಬಿನಂಶ ಇರುವ ಆಹಾರಗಳನ್ನು ದೂರವಿಡಿ
* ಮದ್ಯ ಸೇವಿಸಬೇಡಿ



Click it and Unblock the Notifications
