Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆನ್‌ಲೈನ್‌ನಲ್ಲಿ ವಯಾಗ್ರ ಖರೀದಿಸುತ್ತೀರಾ? ಹಾಗಾದರೆ ಈ ಸಂಗತಿಗಳು ತಿಳಿದಿರಲಿ
ಲೈಂಗಿಕ ತೃಪ್ತಿ ಎಂಬುವುದು ನೈಸರ್ಗಿಕವಾದ ಬಯಕೆಯಾಗಿದೆ. ಅದು ದೇಹದ ಅವಶ್ಯಕತೆಯೂ ಹೌದು, ಪುರುಷ-ಮಹಿಳೆ ವೈವಾಹಿಕ ಬಂಧಕ್ಕೆ ಒಳಗಾದ ಆ ಬಂಧ ಮತ್ತಷ್ಟು ಗಟ್ಟಿಯಾಗಲು ಲೈಂಗಿಕ ತೃಪ್ತಿ ಅವಶ್ಯಕ. ಯಾರಲ್ಲಿ ಲೈಂಗಿಕ ಅತೃಪ್ತಿ ಇರುತ್ತದೋ ಅವರು ತಮ್ಮ ದೈಹಿಕ ಬಯಕೆಗಾಗಿ ಅಡ್ಡದಾರಿ ಹಿಡಿಯುವ ಸಾಧ್ಯತೆ ಹೆಚ್ಚು.

ಲೈಂಗಿಕ ತೃಪ್ತಿ ನೀಡಲು ಅನೇಕ ಸಾಧನಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ, ಅದರಲ್ಲೊಂದು ವಯಾಗ್ರ. ಕೆಲ ಪುರುಷರಿಗೆ ಶೀಘ್ರ ಸ್ಖಲನ ಸಮಸ್ಯೆ ಇರುತ್ತದೆ, ಅವರಿಗೆ ವಯಾಗ್ರ ವರದಾನವಾಗಿದೆ. ತಾವೂ ಲೈಂಗಿಕ ಸುಖ ಅನುಭವಿಸಬಹುದು, ಸಂಗಾತಿಗೂ ಲೈಂಗಿಕ ತೃಪ್ತಿ ದೊರೆಯುವುದು. ಈ ಕಾರಣಕ್ಕೆ ತುಂಬಾ ಜನ ವಯಾಗ್ರ ಮೊರೆ ಹೋಗುತ್ತಾರೆ.
ಕೆಲವರು ವಯಾಗ್ರ ಆನ್‌ಲೈನ್ ಮೂಲಕ ತರಿಸುತ್ತಾರೆ. ಆದರೆ ವಯಾಗ್ರ ನಿಮಗೆ ಬೇಕಾದಂತೆ ಸೇವಿಸುವ ಮಾತ್ರೆಯಲ್ಲ, ಸ್ವಲ್ಪ ಹೆಚ್ಚು ಕಡಿಮೆಯಾದರೆ ತುಂಬಾನೇ ತೊಂದರೆಯಾಗುತ್ತೆ. ನೀವು ವಯಾಗ್ರವನ್ನು ಆನ್‌ಲೈನ್‌ನಲ್ಲಿ ತರಿಸುತ್ತಿದ್ದರೆ ಈ ಲೇಖನ ನಿಮಗಾಗಿ:

ವಯಾಗ್ರ ಎಂದರೇನು? ಹೇಗೆ ಕಾರ್ಯನಿರ್ವಹಿಸುತ್ತದೆ?
ವಯಾಗ್ರ ಎಂಬುವುದು ಶೀಘ್ರ ಸ್ಖಲನ ತಡೆಗಟ್ಟುವ ಔಷಧಿಯಾಗಿದೆ. ವಯಾಗ್ರದಲ್ಲಿ sildenafil ಅಂಶವಿದೆ. ಇದು phosphodiesterase type 5 ಸೇರಿದ ಔಷಧಿಯಾಗಿ ವಯಾಗ್ರ ಎಂಬುವುದು ಪ್ರಸಿದ್ಧ ಬ್ರ್ಯಾಂಡ್ ಆಗಿದೆ. ಇದನ್ನು ಸೇವಿಸಿದಾಗ ಶಿಶ್ನಕ್ಕೆ ರಕ್ತ ಸಂಚಾರ ಹೆಚ್ಚುವುದು. ಇದರಿಂದ ಲೈಂಗಿಕವಾಗಿ ಉದ್ರೇಕಗೊಳ್ಳಲು, ಶೀಘ್ರ ಸ್ಖಲನ ತಡೆಗಟ್ಟಲು ಸಹಕಾರಿಯಾಗಿದೆ.
ವಯಾಗ್ರವನ್ನು 18 ವರ್ಷ ಮೇಲ್ಪಟ್ಟವರು ಮಾತ್ರ ಬಳಸಬಹುದು. ಇದನ್ನು
ಫಿಜರ್ (Pfizer) ಕಂಪನಿ ತಯಾರಿಸುತ್ತದೆ.

ವಯಾಗ್ರವನ್ನು ಆನ್‌ಲೈನ್‌ನಲ್ಲಿ ಖರೀದಿಸುವಾಗ ಈ ಅಂಶಗಳು ನೆನಪಿರಲಿ
* ವಯಾಗ್ರವನ್ನು ವೈದ್ಯರ ಸಲಹೆ ಪಡೆಯದೆ ಖರೀದಿಸಲೇಬಾರದು.
* ಏಕೆಂದರೆ ವಯಾಗ್ರದಲ್ಲೂ ಡೋಸ್ ಇರುತ್ತದೆ. ನಿಮ್ಮ ಸಮಸ್ಯೆ ವೈದ್ಯರ ಬಳಿ ಹೇಳಿದರೆಅವರು ನಿಮಗೆ ಯಾವ ಡೋಸ್ ಸೂಕ್ತ ಎಂಬುವುದು ಸೂಚಿಸುತ್ತಾರೆ.
* ವಯಾಗ್ರವನ್ನು ಆನ್‌ಲೈನ್‌ನಲ್ಲಿ ಖರೀದಿಸುವಾಗ ಪ್ರಸಿದ್ಧವಾದ, ನಂಬಿಕೆಗೆ ಅರ್ಹವಾದ ಫಾರ್ಮಸಿ ಸೈನ್‌ನಲ್ಲಿ ಖರೀದಿಸಬೇಕು.

ವಯಾಗ್ರದಲ್ಲಿ ಈ ಬಗೆಗಳಿವೆ
ವಯಾಗ್ರದಲ್ಲಿ 4 ಪ್ರಮುಖ PDE5 ಔಷಧಿಗಳಿವೆ
* ಸ್ಟೆಂದ್ರಾ (Stendra (avanafil)
* ಲೆವಿತ್ರಾ (Levitra (vardenafil)
* ಸಿಯಾಲಿಸ್ (Cialis (tadalafil)
*ವಯಾಗ್ರ (Viagra (sildenafil))
ಆನ್‌ಲೈನ್ ವಯಾಗ್ರ ಖರೀದಿಸುವಾಗ ಈ ನಾಲ್ಕು ಔಷಧಗಳಲ್ಲಿ ನಿಮಗೆ ಯಾವುದು ಸೂಕ್ತ ಎಂದು ತಿಳಿದುಕೊಳ್ಳುವುದು ಒಳ್ಳೆಯದು.

ಇಂಥ ಆನ್‌ಲೈನ್ ಸೈಟ್‌ನಲ್ಲಿಯೇ ವಯಾಗ್ರ ಖರೀದಿಸಿ
* ಪ್ರಸಿದ್ಧ ಫಾರ್ಮಸಿ ಆನ್‌ಲೈನ್ ಸೈಟ್
* ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳುವ ಸೈಟ್‌ನಲ್ಲಿಯೇ ಖರೀದಿಸಿ
* FDA ಅನುಮತಿ ನೀಡಿರುವ ಔಷಧಿಯನ್ನೇ ಬಳಸಿ.
* ಲೈಸನ್ಸ್ ಹೊಂದಿರುವ ಫಾರ್ಮಸಿಯಾಗಿದ್ದು ನೀವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವಂಥ ಸೈಟ್ ಆಗಿರಬೇಕು.
ಅಂಥ ಆನ್‌ಲೈನ್ ಸೈಟ್‌ಗಳೇ ನಂಬಿಕೆ ಅರ್ಹವಾಗಿದೆ.

ವಯಾಗ್ರದ ಅಡ್ಡಪರಿಣಾಮಗಳು ಮತ್ತು ಅಪಾಯ
* ತಲೆನೋವು
* ಅಜೀರ್ಣ
* ಮೂಗು ಕಟ್ಟುವುದು
* ಬೆನ್ನು ನೋವು
* ಸ್ನಾಯುಗಳಲ್ಲಿ ನೋವು
* ವಾಂತಿ
* ತಲೆಸುತ್ತು
* ಗುಳ್ಳೆಗಳಯ ಹೇಳುವುದು

ಅಪಾಯಕಾರಿ ಲಕ್ಷಣಗಳು
* ಇದ್ದಕ್ಕಿದ್ದಂತೆ ಕಣ್ಣು ಮಂಜಾಗುವುದು ಅಥವಾ ದೃಷ್ಟಿದೋಷ ಉಂಟಾಗುವುದು
* ಕಿವಿ ಕೇಳದಿರುವುದು
* ಅಲರ್ಜಿ
* ಪ್ರಿಯಾಪಿಸಮ್ (ಸ್ಖಲನವಾಗಲು ತುಂಬಾ ಹೊತ್ತು ತೆಗೆದುಕೊಳ್ಳುವುದು ಹಾಗೂ ನೋವುಂಟಾಗುವುದು)
* ಕಡಿಮೆ ರಕ್ತದೊತ್ತಡ
* ಹೃದಯ ಬಡಿತ ಹೆಚ್ಚುವುದು

ಯಾವಾಗ ಕೂಡಲೇ ವೈದ್ಯರನ್ನು ಕಾಣಬೇಕು?
* ಅಲರ್ಜಿ ಉಂಟಾದಾಗ (ತ್ವಚೆ, ನಾಲಗೆ, ಮುಖ, ನಾಲಗೆ ಹೀಗೆ ದೇಹದ ಭಾಗಗಳಲ್ಲಿ ಅಲರ್ಜಿ ಉಂಟಾಗುವುದು)
* ಉಸಿರಾಟದಲ್ಲಿ ತೊಂದರೆ
* ಎದೆನೋವು
* ಹೃದಯ ಬಡಿತ ಹೆಚ್ಚುವುದು
*ಕೇಳಿಸದಿರುವುದು
* ಕಾಣಿಸದಿರುವುದು
* ತಲೆಸುತ್ತು
ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಕಾಣಿ, ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು.

ವಯಾಗ್ರದ ಪವರ್ ಎಷ್ಟು ಹೊತ್ತು ಇರುತ್ತದೆ?
* ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.
* ವಯಾಗ್ರ ತೆಗೆದುಕೊಂಡ 30 ನಿಮಿಷದ ನಂತರ ಪರಿಣಾಮಕಾರಿಯಾಗಿದೆ. ಕೆಲವರು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾರೆ.
* ವಯಾಗ್ರದ ಪವರ್ 4-5 ಗಂಟೆ ಇರುತ್ತದೆ. ಸ್ಖಲನ ತುಂಬಾ ನಿಧಾನವಾದರೆ ವಯಾಗ್ರ ತೆಗೆದುಕೊಂಡು ನಾಲ್ಕು ಗಂಟೆಗಳು ಕಳೆದ ಮೇಲೆ ಶಿಶ್ನ ಭಾಗದಲ್ಲಿ ನೋವು ಸ್ಖಲನವಾಗದಿರುವುದು ಈ ರೀತಿಯ ತೊಂದರೆಗಳು ಕಾಣಿಸಿದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು.
ಕೊನೆಯದಾಗಿ: ಲೈಂಗಿಕ ತೃಪ್ತಿಗಾಗಿ ವಯಾಗ್ರ ತೆಗೆದುಕೊಳ್ಳುವುದಾದರೆ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ತೆಗೆದುಕೊಳ್ಳಿ. ಡೋಸ್ ಹೆಚ್ಚಾದರೆ ಅಪಾಯವಾಗಬಹುದು, ಯಾವುದೇ ಅಡ್ಡಪರಿಣಾಮ ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಬೇಡಿ.



Click it and Unblock the Notifications
